ಮಧ್ಯಾಹ್ನ 12.15 ಕ್ಕೆ ಅಲ್ಲಿಗೆ ತಲುಪಿದೆವು. ಅಲ್ಲಿ ನಮಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದ್ದರು. ಊಟ ಮುಗಿಸಿದ ಬಳಿಕ ಮಕ್ಕಳನ್ನು ಐದು ಗುಂಪುಗಳಾಗಿ ಮಾಡಿ ಪ್ರತಿಯೊಂದು ಗುಂಪಿಗೂ ಒಬ್ಬೊಬ್ಬ ಸಿಬಂದಿಯನ್ನು ಒದಗಿಸಿ ಕಾರ್ಖಾನೆಯ ಸಂಪೂರ್ಣ ಪರಿಚಯ ಮಾಡಿಸಿ ಕೊಟ್ಟರು. ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿದ ಭತ್ತವನ್ನು ಬೇಯಿಸಿ ಒಣಗಿಸಿ ಅಕ್ಕಿ ಮಾಡುವ ವಿಧಾನವನ್ನು ಮಕ್ಕಳು ತಿಳಿದುಕೊಂಡರು. ಇಲ್ಲಿ ಎಲ್ಲಾ ಕೆಲಸಗಳನ್ನು ಯಂತ್ರಗಳೇ ನಿರ್ವಹಿಸುತ್ತವೆ. ಅಲ್ಲಿಂದ ನಮ್ಮ ಪ್ರಯಾಣವು ಕಾರಿಂಜ ಬೆಟ್ಟದ ಕಡೆಗೆ ಸಾಗಿತು. 3.30 ಕ್ಕೆ ಕಾರಿಂಜ ಬೆಟ್ಟದ ಬಳಿಗೆ ತಲುಪಿದೆವು. ಪ್ರಕ್ರತಿ ರಮಣೀಯವಾದ ಸುಂದರ ದ್ರಶ್ಯಗಳನ್ನು ನೋಡುತ್ತಾ ಕೊತಿಗಳೊಂದಿಗೆ ಕೀಟಲೆ ಮಾಡುತ್ತಾ ಬೆಟ್ಟದ ತುದಿಯನ್ನು ತಲುಪಿದೆವು. ಅಲ್ಲಿ ಸ್ವಲ್ಪ ಹೊತ್ತು ದಣಿವಾರಿಸಿದೆವು . ಅಲ್ಲಿಂದ ಪುನಃ ಕೆಳಗಿಳಿದು ಶಾಲೆಯ ಕಡೆಗೆ ಹಿಂತಿರುಗಿದೆವು. ರಾತ್ರಿ 8.30 ಕ್ಕೆ ಶಾಲೆಗೇ ಬಂದು ತಲುಪಿದೆವು. ಎಲ್ಲ ಮಕ್ಕಳೂ ಸುರಕ್ಷಿತವಾಗಿ ತಮ್ಮ ರಕ್ಷಕರೊಂದಿಗೆ ಪ್ರವಾಸದ ಸಿಹಿ ಕಹಿ ಅನುಭವಗಳನ್ನು ಮೆಲುಕು ಹಾಕುತ್ತಾ ಮನೆಗೆ ತೆರಳಿದರು.
FLASH NEWS
NUDIMUTHU
Saturday, February 28, 2015
EDUCATIONAL TOUR

Thursday, February 26, 2015
Monday, February 23, 2015
Wednesday, February 18, 2015
BIRTHDAY
ನಮ್ಮ ಶಾಲೆಯ ಆರನೆ ತರಗತಿಯ ಪ್ರಕೃತಿ ಕೆ ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಕಥೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ರಕ್ಷಕರಿಗೆ ಅಭಿನಂದನೆಗಳು .
ನಮ್ಮ ಶಾಲೆಯ ಏಳನೇ ತರಗತಿಯ ವರ್ಷಿತಾ ಎಸ್. ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಎರಡು ಕಥೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ರಕ್ಷಕರಿಗೆ ಅಭಿನಂದನೆಗಳು .

MID DAY MEAL
ಮಕ್ಕಳಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡಿಸಲು ಮತ್ತು ಸ್ವಾವಲಂಬನೆಯನ್ನು ಬೆಳೆಸಲು ಕೃಷಿ ಇಲಾಖೆಯವರು ನೀಡಿದ ತರಕಾರಿ ಬೀಜದಿಂದ ಮನೆಯಲ್ಲಿ ಬೆಳೆಸಿದ ಪಡುವಲ ಕಾಯಿಯನ್ನು ನಮ್ಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಹರಿಪ್ರಸಾದ್ ರೈ ಮಧ್ಯಾಹ್ನದ ಬಿಸಿಯೂಟದ ಯೋಜನೆಗಾಗಿ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದನು. ಅವನಿಗೆ ಹಾಗೂ ಅವನ ಮನೆಯವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ.
Saturday, February 14, 2015
Friday, February 13, 2015
PEC LEVEL SCIENCE SEMINAR
Science Talent Enrichment Programme (STEP) ನ ಭಾಗವಾಗಿ ದಿನಾಂಕ 10.2.2015 ರಂದು GHSS PaivalikeNagar ದಲ್ಲಿ ನಡೆದ ಪೈವಳಿಕೆ PEC ಮಟ್ಟದ ವಿಜ್ಞಾನ ಸೆಮಿನಾರಿನಲ್ಲಿ ನಮ್ಮ ಶಾಲೆಯ ಮಕ್ಕಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ. 5 ಮತ್ತು 6 ನೆ ತರಗತಿಯ ಮಕ್ಕಳು ಪ್ರಥಮ ಸ್ಥಾನವನ್ನೂ 7 ನೆ ತರಗತಿಯ ಮಕ್ಕಳು ದ್ವಿತೀಯ ಸ್ಥಾನವನ್ನೂ ಪಡೆದು ಉಪಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಗಳಿಸಿದ್ದಾರೆ. Paivalike PEC ಯಿಂದ ನೀಡಿದ ಟ್ರೋಫಿ ಮತ್ತು ಪ್ರಮಾಣ ಪತ್ರಗಳನ್ನು ಶಾಲಾ ಮುಖ್ಯೋಪಾಧ್ಯಾಯರು ಅಸೆಂಬ್ಲಿಯಲ್ಲಿ ಮಕ್ಕಳಿಗೆ ವಿತರಿಸಿ ಶುಭಹಾರೈಸಿದರು.
Thursday, February 12, 2015
NO OF PERIODS ENHANCED
ಮು೦ದಿನ ಅಧ್ಯಯನ ವರ್ಷದಿ೦ದ ಶಾಲೆಗಳಲ್ಲಿ ಪಿರೀಡುಗಳ ಸ೦ಖ್ಯೆಯನ್ನು ೮ ಆಗಿ ಹೆಚ್ಚಿಸಲು ಕೇರಳ ವಿದ್ಯಾಭ್ಯಾಸ ಸಚಿವ ಶ್ರೀ ಅಬ್ದುಲ್ ರಬ್ ಅವರ ಅಧ್ಯಕ್ಷತೆಯಲ್ಲಿ ಸೇರಿದ ಕರಿಕ್ಕುಲ೦ ಕಮಿಟಿ ತೀರ್ಮಾನಿಸಿದೆ. ಕಲೆ, ಕ್ರೀಡೆ ಹಾಗೂ ವೃತ್ತಿ ಪರಿಚಯಗಳ ಕಲಿಕೆಗೆ ಸ೦ದರ್ಭ ಒದಗಿಸಲು ಪಿರೀಡುಗಳ ಸ೦ಖ್ಯೆಯನ್ನು ಹೆಚ್ಚಿಸಲಾಗಿದೆ. ೧ ರಿ೦ದ ೧೦ ನೇ ತರಗತಿ ವರೆಗೆ ಇದು ಅನ್ವಯಿಸುತ್ತದೆ. ಶುಕ್ರವಾರ ೯. ೩೦ ರಿ೦ದ ೪. ೩೦ ರ ವರೆಗೂ ಉಳಿದ ದಿವಸಗಳಲ್ಲಿ ೧೦ ರಿ೦ದ ೪ ಗ೦ಟೆ ವರೆಗೆ ತರಗತಿಗಳು ನಡೆಯಲಿದೆ. ಸಮಯದ ಕ್ರಮೀಕರಣ ಈ ರೀತಿಯಲ್ಲಿದೆ (ನಿಮಿಷಗಳಲ್ಲಿ). ಸೋಮ, ಮ೦ಗಳ, ಬುಧ, ಗುರುವಾರಗಳಲ್ಲಿ ೪೦, ೪೦, (೧೦ ನಿಮಿಷ ವಿರಾಮ) ೪೦, ೩೫ (೧ ಗ೦ಟೆ ವಿರಾಮ) ೩೫, ೩೫ (೫ ನಿಮಿಷ ವಿರಾಮ) ೩೦, ೩೦ ಶುಕ್ರವಾರ ೪೦, ೪೦, (೧೦ ನಿಮಿಷ ವಿರಾಮ) ೩೫, ೩೫ (೨ ಗ೦ಟೆ ವಿರಾಮ) ೩೫, ೩೫ (೫ ನಿಮಿಷ ವಿರಾಮ) ೩೫, ೩೦ .
Friday, February 6, 2015
Thursday, February 5, 2015
ANNUAL EVALUATION
ಈ ಶೈಕ್ಷಣಿಕ ವರ್ಷದ ವಾರ್ಷಿಕ ಮೌಲ್ಯಮಾಪನವು ಮಾರ್ಚಿ ತಿಂಗಳ 23 ನೇ ತಾರೀಕಿಗೆ ಪ್ರಾರಂಭಗೊಂಡು 30 ರಂದು ಕೊನೆಗೊಳ್ಳಲಿದೆ .
LSS USS EXAM POSTPONED
ಈ ತಿಂಗಳ 21 ರಂದು ನಡೆಯಬೇಕಾಗಿದ್ದ LSS / USS ಪರೀಕ್ಷೆಗಳು ಮಾರ್ಚ್ ತಿಂಗಳ 28 ನೇ ತಾರೀಕಿನಂದು ನಡೆಯಲಿದೆ.
OBITUARY
Tuesday, February 3, 2015
Subscribe to:
Posts (Atom)