FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, December 31, 2014

Happy New Year


Birthday

ಇಂದು ನಮ್ಮ ಶಾಲೆಯ ಏಳನೇ ತರಗತಿಯ ಸಂಧ್ಯಾ ಕೆ ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಶಾಲೆಯ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು

Monday, December 22, 2014

DECEMBER 22 - SRINIVASA RAMANUJAN BIRTHDAY

ಇಂದು ಭಾರತದ ಪ್ರಸಿದ್ಧ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ. ಪ್ರತಿ ವರ್ಷವೂ ಅವರ ಜನ್ಮ ದಿನವನ್ನು ಗಣಿತ ಶಾಸ್ತ್ರ ದಿನವಾಗಿ ಆಚರಿಸಲಾಗುವುದು. ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅಯ್ಯಂಗಾರ್ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು 1887ರ ಡಿಸೆಂಬರ್ 22 ರಂದು ತಮಿಳುನಾಡಿನ ಈರೋಡಿನಲ್ಲಿದ್ದ ತಮ್ಮ ತಾತನ ಮನೆಯಲ್ಲಿ ಜನ್ಮ ತಳೆದರು. ರಾಮಾನುಜನ್ನರ ತಂದೆ ಬಟ್ಟೆ ಅಂಗಡಿಯಲ್ಲಿ ಒಬ್ಬ ಗುಮಾಸ್ತರಾಗಿದ್ದರು. ತಾಯಿ ಅಪಾರ ದೈವ ಶ್ರದ್ಧಾಭಕ್ತಿಗಳಿದ್ದ ಮಹಿಳೆ.ಬಾಲ್ಯದಲ್ಲಿ ರಾಮಾನುಜನ್ನರು ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು. ಐದನೆಯ ವಯಸ್ಸಿಗೆ ಶಾಲೆಗೆ ಸೇರಿದ ಅವರಿಗೆ ಪ್ರತಿಯೊಂದರಲ್ಲೂ ಕಲಿಕೆಯ ಕುತೂಹಲವಿತ್ತು. ರಾಮಾನುಜನ್  ಅವರಿಗೆ ಗಣಿತದ ಹೊರತಾಗಿ ಇನ್ನ್ಯಾವುದೇ ವಿಷಯಗಳ ಕುರಿತಾಗಿ ಕಿಂಚಿತ್ತೂ ಆಸಕ್ತಿ ಹುಟ್ಟಲಿಲ್ಲ. ಗಣಿತ ಕ್ಷೇತ್ರದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ. ಅದರಲ್ಲಿ ಮುಖ್ಯವಾದುದು :
  • ಅವಿಭಾಜ್ಯ ಸಂಖ್ಯೆಗಳ ಬಗ್ಗೆ ಸಂಶೋಧನೆ
  • ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ
  • ರಾಮಾನುಜನ್ ಊಹೆ
  • ರಾಮಾನುಜನ್-ಪೀಟರ್ಸನ್ ಊಹೆ                                                                                                            1729  ಎಂಬ ಸಂಖ್ಯೆಯನ್ನು ರಾಮಾನುಜನ್ ಸಂಖ್ಯೆ ಎಂದೇ ಕರೆಯಲಾಗುತ್ತದೆ . ಯಾಕೆಂದರೆ ಈ ಸಂಖ್ಯೆಯನ್ನು ಎರಡು ವ್ಯತ್ಯಸ್ತ ರೀತಿಯಲ್ಲಿ ಎರಡು ಬೇರೆ ಬೇರೆ ಸಂಖ್ಯೆಗಳ ಮೂರನೇ ಘಾತಗಳ ಮೊತ್ತವಾಗಿ ಬರೆಯಬಹುದಾದ ಏಕೈಕ ಸಂಖ್ಯೆಯಾಗಿದೆ ಎಂದು ಅವರು ಕಂಡುಹಿಡಿದರು.                                                                                 

Friday, December 19, 2014

MASS DRILL PRACTICE HELD TODAY IN OUR SCHOOL

ಇಂದು ನಮ್ಮ ಶಾಲಾ ಮಕ್ಕಳಿಗೆ ಮಾಸ್ ಡ್ರಿಲ್ ತರಬೇತಿಯನ್ನು ನೀಡಲಾಯಿತು . ನಮ್ಮ ಶಾಲಾ ಸ್ಕೌಟ್ ಅಧ್ಯಾಪಕರಾದ ಶ್ರೀ ರಾಮಮೋಹನ್ ಅವರು ನೇತೃತ್ವವನ್ನು ನೀಡಿದರು .

Wednesday, December 17, 2014

CONGRATULATIONS

SCERT ಮತ್ತು ಕೇರಳ ವಿದ್ಯಾಭ್ಯಾಸ ಇಲಾಖೆಯ ನೇತ್ರತ್ವದಲ್ಲಿ  ಆರನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತ ಮಕ್ಕಳಿಗೆ  ಗಣಿತದಲ್ಲಿ ಹೆಚ್ಚಿನ ತರಬೇತಿ ನೀಡುವ ಯೋಜನೆಯೇ   NuMATS . ಇದರ ಉಪಜಿಲ್ಲಾ ಮಟ್ಟದಲ್ಲಿ  ನಡೆದ ಆಯ್ಕೆ ಪರೀಕ್ಷೆಯಲ್ಲಿ ನಮ್ಮ  ಶಾಲೆಯ ಸಾತ್ವಿಕ್ ಕ್ರಷ್ಣ ಯನ್  ಉತ್ತೀರ್ಣನಾಗಿ ಜನರಲ್ ವಿಭಾಗದಿಂದ ಜಿಲ್ಲಾ ಮಟ್ಟದ NuMATS ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಗಳಿಸಿರುತ್ತಾನೆ. ಅವನಿಗೆ ಶಾಲಾ ವತಿಯಿಂದ ಅಭಿನಂದನೆಗಳು.

PESHAVAR ATTACK

ಪೇಶಾವರ ಧಾಳಿ- ಸಂತಾಪ  ಮೌನಾಚರಣೆ
ಪಾಕಿಸ್ತಾನದ ಪೇಶಾವರದಲ್ಲಿ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಂಭವಿಸಿದ ಭಯೋತ್ಪಾದಕರ ಧಾಳಿಯಲ್ಲಿ  ಬಲಿಯಾದ ಶಾಲಾ ಮಕ್ಕಳು   ಹಾಗೂ ನಾಗರಿಕರಿಗೆ ನಮ್ಮ ಶಾಲೆಯ ಅಸೆಂಬ್ಲಿಯಲ್ಲಿ ಸಂತಾಪವನ್ನು ಸೂಚಿಸಲಾಯಿತು. ಅನಂತರ ಧಾಳಿಯಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ಎರಡು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಮಂಗಳವಾರ ಮಧ್ಯಾಹ್ನ ನಡೆದ ಭಯೋತ್ಪಾದಕರ ಧಾಳಿಯಲ್ಲಿ ಸುಮಾರು 140ಕ್ಕೂ ಅಧಿಕ ಮಕ್ಕಳು ಬಲಿಯಾಗಿದ್ದರು .

Tuesday, December 16, 2014

Monday, December 15, 2014

II Term Evaluation Dec 2014


Second Term Evaluation started on 12th December 2014. Here are  Some clickz.....

Friday, December 5, 2014

SCIENCE EXPRESS IN KASARAGOD



           ಮಕ್ಕಳಲ್ಲಿ ಅಧ್ಯಾಪಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ವಿಜ್ಞಾನ ಪ್ರದರ್ಶನದೊಂದಿಗೆ ಭಾರತದಾದ್ಯಂತ ಸಂಚರಿಸುವ ಸೈನ್ಸ್  ಎಕ್ಸ್ ಪ್ರೆಸ್ ಬಯೋಡೈವರ್ಸಿಟಿ ಸ್ಪೆಶಲ್ ಟ್ರೈನ್ (SEBS) ಕಾಸರಗೋಡಿಗೆ ತಲುಪಿದೆ. 2007 ರಲ್ಲಿ ಆರಂಭಿಸಿದ ಈ ರೈಲುಗಾಡಿ ಹದಿನಾರು ಹವಾನಿಯಂತ್ರಿತ ಬೋಗಿಗಳೊಂದಿಗೆ ಭಾರತದ ನಾನಾ ಕಡೆ ಸಂಚರಿಸಿದೆ. ರೈಲುಗಾಡಿಯ ಹದಿನಾರು ಬೋಗಿಗಳ  ಪೈಕಿ ಎಂಟರಲ್ಲಿ ಭಾರತದ ಅತ್ಯಪೂರ್ವವಾದ ಜೀವ ವೈವಿಧ್ಯಗಳನ್ನು ಪರಿಚಯಿಸುತ್ತದೆ . ವಿವಿಧ ಸೂಕ್ಷ್ಮ ಜೀವಿಗಳು, ಹಿಮಾಲಯ ಸಾನುಗಳು , ಭಾರತದ ಅರಣ್ಯ ಮತ್ತು ಕ್ರಷಿ ಪ್ರದೇಶಗಳು, ಪಶ್ಚಿಮ ಘಟ್ಟ , ಡೆಕ್ಕನ್ ಪೀಠಭೂಮಿ , ಕರಾವಳಿ ಪ್ರದೇಶ, ಗಂಗಾ ನದೀತೀರ ಪ್ರದೇಶ, ಅತ್ಯಪೂರ್ವವಾದ ಅಪಾಯಕಾರಿ ಕ್ರಿಮ್ಸನ್ ಚಿಟ್ಟೆಗಳು,ಐದು ವಿಧದ ಕಡಲಾಮೆಗಳು ಮತ್ತು ಅವುಗಳ ಮಾದರಿಗಳು,ಈಶಾನ್ಯ ಭಾಗದ ಜನಜೀವನ ಇತ್ಯಾದಿಗಳನ್ನು ಅಳವಡಿಸಿದ್ದಾರೆ . ಕೇರಳ,ಲಕ್ಷದ್ವೀಪ ಅಂಡಮಾನ್ ನಿಕೋಬಾರ್, ತಮಿಳಿನಾಡು ಗುಜರಾತ್,ಪಶ್ಚಿಮ ಬಂಗಾಳ ಮುಂತಾದ ತೀರ ಪ್ರದೇಶಗಳಲ್ಲಿ ಕಂಡು ಬರುವ ವಿವಿಧ ಜೀವ ಜಂತುಗಳನ್ನು ಬಟನ್ ಒತ್ತುವ ಮೂಲಕ ಮಕ್ಕಳಿಗೆ ಸುಲಭದಲ್ಲಿ ತಿಳಿದುಕೊಳ್ಳಲು  ಸಾಧ್ಯವಾಗುವಂತೆ ವ್ಯವಸ್ಥೆಗೊಳಿಸಲಾಗಿದೆ . 
           ಭಾರತದ ನಾನಾ ರಾಜ್ಯಗಳ ಜಾನುವಾರುಗಳ ಚಿತ್ರಗಳು , ನಾಯಿ,ಕೋಳಿ ,ಆಡು ಸಾಕಣೆ,ಆದಿವಾಸಿ ಜೀವನಗಳನ್ನು ಪ್ರತಿಬಿಂಬಿಸುವ ಚಿತ್ರಗಳು ಆಕರ್ಷಣಿಯವಾಗಿದೆ. ಕರಾವಳಿ ದ್ವೀಪಗಳಲ್ಲಿ ಕಂಡುಬರುವ ವಿವಿಧ ತರದ ಚಿಪ್ಪುಗಳು,ಕೇರಳದಲ್ಲಿ ಮಾತ್ರ ಕಂಡುಬರುವ ಅಪರೂಪದ ಜೈಂಟ್ ರಾಬರ್ ಕ್ರ್ಯಾಬ್ ಗಳ ಚಿತ್ರ,ಮೀನು,ಏಡಿ,ಆಮೆಗಳನ್ನು ಹಿಡಿಯಲು ಉಪಯೋಗಿಸುವ ಬಲೆಗಳ ಚಿತ್ರಗಳು ಇವೆ. ವಿವಿಧ ಮಾದರಿಯಲ್ಲಿ ಮಳೆ ನೀರು ಸಂಗ್ರಹಿಸುವ ವಿಧಾನ,ಅದನ್ನು ಶುದ್ದೀಕರಿಸುವ ವಿಧಾನ , ಇಕೋ ಫ್ರೆಂಡ್ಲಿ ಮನೆ ನಿರ್ಮಾಣ ಮಾದರಿ, ಎನೆರ್ಜಿ ಎಫಿಸೆನ್ಸಿ ಮನೆ, ತ್ಯಾಜ್ಯ ವಿಲೇವಾರಿ ಘಟಕ , ಪೆಟ್ರೋಲಿಯಂ ಘಟಕ, ಇಂಧನ ಉಪಯೋಗ , ಮೊದಲಾದವುಗಳನ್ನು ಮನದಟ್ಟು ಮಾಡುವ ಮಾಡೆಲ್ ಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ . 2007 ರಲ್ಲಿ ಆರಂಭಗೊಂಡ ಈ ಪ್ರದರ್ಶನ ಮೇಳ ಈ ತನಕ ಭಾರತದ ಒಟ್ಟಾರೆ 11500 KM ದೂರ ಸಂಚರಿಸಿದೆ.

PRIZE DISTRIBUTION BY HM

ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ವಿಜೇತರಾದ ಮಕ್ಕಳಿಗೆ ಶಾಲಾ ಮುಖ್ಯೋಪಾಧ್ಯಾಯರು ಅಸೆಂಬ್ಲಿಯಲ್ಲಿ ಟ್ರೋಫಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿದರು.

Thursday, December 4, 2014

LITTLE CHAMPIONS OF OUR SCHOOL

ಉಪಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಂಕ ಗಳಿಸಿದ ಮಕ್ಕಳು
            MURALI KRISHNA BHAT (SIDDAROOPOCHARANAM - A GRADE)
 PRANAVA KUMAR N (PRASHNOTHARI ,PRABHASHANAM, GANALAPANAM - A GRADE, HINDI PADYAMCHOLLAL - B GRADE)
 SATHWIK KRISHNA N ( SANSKRIT PADYAMCHOLLAL , KANNADA RECITATION - A GRADE, ENGLISH RECITATION - B GRADE)
SATHWIK N ( MONO ACT - A GRADE, KATHAPRASANGAM - B GRADE )
 ADHITHYA E H ( SAMASYAPOORANAM, GADYAPARAYANAM - A GRADE, UPANYASARACHANA - B GRADE, KANNADA ELOCUTION - C GRADE)
 APOORVA EDAKANA ( KANNADA KAVITHARACHANA, AKSHARASHLOKA, GANALAPANAM, LALITHAGANAM SIDDAROOPOCHARANAM ,  AKSHARASHLOKAM - A GRADE, SHASTREEYA SANGEETHAM,- B GRADE)
 SHREECHARANA K ( SANSKRIT PADYAMCHOLLAL - A GRADE)
 THANMAYA P ( SANSKRIT KATHARACHANA - B GRADE)
 AKSHATHA K A ( SANSKRIT KAVITHARACHANA - A GRADE)
 SANSKRIT NADAKAM TEAM - A GRADE
 VANDEMATHARALAPANAM TEAM - A GRADE
 SANSKRIT SANGHA GANAM TEAM - A GRADE
 SANGHA GANAM GENERAL TEAM - A GRADE
 MISSRIYA K ( URDU PADYAMCHOLLAL - A GRADE, MAPPILAPATTU - B GRADE)
 SANGHA GANAM L.P TEAM - A GRADE
 DESHABHAKTHIGANAM U.P-B GRADE
 SUMEDHA K (LALITHAGANAM  L.P - C GRADE)
 KEERTHANA N ( RECITATION KANNADA , NADODINRUTHAM - C GRADE)
MANOJNA C H ( STORY TELLING KANNADA - A GRADE. MONO ACT - B GRADE)

STUDENTS ELIGIBLE FOR HIGHER LEVEL

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಸ್ಪರ್ಧಿಸಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಗಳಿಸಿದ ನಮ್ಮ ಶಾಲೆಯ ಮಕ್ಕಳು 


 PRANAVA KUMAR N . (Sanskrit - Prashnothari)



APOORVA EDAKANA (Sanskrit - Ganalapanam, Akshrashlokam - General , Kannada Kavitha Rachana)




SHREE CHARANA  K (Sanskrit - Padyamchollal)










SANSKRIT - NADAKAM : SANDHYA K, AKSHATHA K.A, APOORVA EDAKANA, ADHITHYA E.H, SATHWIK N, THANMAYA P, MURALIKRISHNA BHAT N, SATHWIK KRISHNA N, PRADEEP S.D, PRANAVA KUMAR N.)

STUDENTS PERFORMANCE IN SUB DIST KALOTSAVAM 2014


Manjeshwar Sub Dist - Kannada Kavitha Rachana

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಯು. ಪಿ. ವಿಭಾಗದ ಕನ್ನಡ ಕವಿತಾ ರಚನೆಯಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆ. ಇದನ್ನು ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಅಪೂರ್ವ ಎಡಕಾನ ರಚಿಸಿದ್ದಾಳೆ. ಅವಳಿಗೆ ಅಭಿನಂದನೆಗಳು.
ತಾಯಿಯ ಮಮತೆ
ಜಗವನು ತೋರಿಸಿಕೊಟ್ಟ 
ದಿವ್ಯ ರೂಪವೇ ತಾಯಿ 
ಸಾಕಿ ಸಲಹಿದ ಮಾತೆಯನ್ನು 
ಮರಣದವರೆಗೂ ಕಾಯಿ ।।
     ಬಾಲ್ಯದಿಂದಲೇ ಒಳ್ಳೆಯ ನಡತೆಯ 
     ಕಲಿಸಿಕೊಟ್ಟ ಮಾತೆ 
     ಹೊಲದಿ ಕೆಲಸ ಮಾಡಿಕೊಂಡೆ 
     ಹೊಟ್ಟೆ ತುಂಬಿಸಿದ ದಾತೆ ।।
ಮಗುವು ಮಲಗುವ ತನಕವೂ 
ಜೋಗುಳ ಹಾಡಿಹಾಡಿ 
ನಿದ್ದೆಯು  ಬಾರದೆ ಇದ್ದರೆ ಪಾಪುಗೆ 
ಸೋಲನು ಹಾಲನು ನೀಡಿ ।।
       ಮಗುವು ಒಮ್ಮೆ ಬಿದ್ದರೆ 
       ಹರಿಯುವುದು ದುಃಖದ ಕೋಡಿ 
       ಅಳುವು ನಿಲ್ಲುವುದು ಕೊಟ್ಟರೆ 
       ಒಂದು ಪರಿಮಳ ಹೂವಿನ ಜೋಡಿ ।।
ಸಿಹಿಮುತ್ತನು ಗಲ್ಲಕೆ ನೀಡುತ 
ವಾತ್ಸಲ್ಯಮಯಿ ಕರುಣೆ 
ಮಕ್ಕಳ ಬಗ್ಗೆ ಗಮನವ ಇಟ್ಟು 
ದೇವರಿಗೆಂದೂ ಶರಣೆ ।।
          ತಾಯಿಯೆ  ಮೊದಲ ಗುರುವೆಂದು 
          ಸಾಧಿಸಿ ತೋರಿಸಿದಳೀಕೆ 
          ಒಂದು ಅಂಕವೂ ಕಡಿಮೆಯಾದರೆ 
          ತಾಯಿಯ ಪ್ರಶ್ನೆ ಯಾಕೆ ? ।।
ಇಂತಹ ಪ್ರೀತಿಯ ತಾಯಿಯು 
ಲಭಿಸುವುದು ಬಹು ದೊಡ್ಡ ಅದ್ರಷ್ಟ 
ವಾತ್ಸಲ್ಯಮಯಿ ತಾಯಿಯು ಇಲ್ಲದಿರೆ 
ಅವನೊಬ್ಬ ಬಲು ನತದ್ರಷ್ಟ ।।
                               



                                                                            APOORVA EDAKANA    
                                                                               VII C STANDARD

Wednesday, December 3, 2014

SAMSKRITOTSAVAM CHAMPIONS

ಇಂದು ಮುಕ್ತಾಯಗೊಂಡ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಯು. ಪಿ.ವಿಭಾಗದ ಸಂಸ್ಕ್ರತೊತ್ಸವದಲ್ಲಿ 84 ಅಂಕಗಳನ್ನು ಪಡೆದು ನಮ್ಮ ಶಾಲೆಯು ಸತತ ಮೂರನೇ ವರ್ಷ ಪ್ರಥಮ ಸ್ಥಾನವನ್ನು ಪಡೆಯಿತು.

SUB DIST KALOTSAVAM PHOTOS

ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ಕೆಲವು ಫೋಟೋಗಳು

RECEIVING INDIVIDUAL TROPHY

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ವಿಜೇತರಾದ ಮಕ್ಕಳು ವೈಯಕ್ತಿಕ ಟ್ರೋಫಿಯನ್ನು ಸ್ವೀಕರಿಸುತ್ತಿರುವುದು

SUB DIST SANSKRIT DRAMA

ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕ್ರತೋತ್ಸವದ  ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಮ್ಮ ಶಾಲೆಯ ನಾಟಕದ ಕೆಲವು ದ್ರಶ್ಯಗಳು

Friday, November 28, 2014

STATE SHASTHROLSAVAM 2014-15

STATE  SHASTHROLSAVAM RESULT CLICK HERE

Sakshara Post Test

ಸಾಕ್ಷರ ಯೋಜನೆಯಂತೆ ಇಂದು ಪೋಸ್ಟ್ ಟೆಸ್ಟ್ ನಡೆಸಲಾಯಿತು

Birthday Celeberation


ಇಂದು ನಮ್ಮ ಶಾಲೆಯ ಏಳನೇ ತರಗತಿಯ ತುಳಸಿ ಕುಮಾರಿ  ಮತ್ತು ಪಲ್ಲವಿ ಹುಟ್ಟು ಹಬ್ಬವನ್ನು ಆಚರಿಸಿದರು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದೊಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದರು . ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ರಕ್ಷಕರಿಗೆ ಅಭಿನಂದನೆಗಳು .