FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, August 22, 2015

ONAM CELEBERATION

                         ಎರಡನೆ ತರಗತಿ ಮಕ್ಕಳು ರಚಿಸಿದ ಪೂಕಳ 
                                                ಏಳು ಸಿ ತರಗತಿಯವರು ರಚಿಸಿದ ಪೂಕಳ 
                          ಏಳು ಎ ತರಗತಿಯವರು ರಚಿಸಿದ ಪೂಕಳ 
                    ಏಳು ಬಿ ತರಗತಿಯವರು ರಚಿಸಿದ ಪೂಕಳ 
                    ಐದನೇ ತರಗತಿಯ ಮಕ್ಕಳು ರಚಿಸಿದ ಪೂಕಳ 
                            ಆರನೆ ತರಗತಿಯ ಮಕ್ಕಳು ರಚಿಸಿದ ಪೂಕಳ 
                        ಆರನೇ ತರಗತಿಯ ಮಕ್ಕಳು ರಚಿಸಿದ ಪೂಕಳ 
                            ಮೂರನೆ ತರಗತಿ ಮಕ್ಕಳು ತಯಾರಿಸಿದ ಪೂಕಳ 

                   ಮಕ್ಕಳಿಗೆ ಬಡಿಸಲು ಸಿದ್ದವಾಗಿರುವ ಓಣಂ ವಿಭವಗಳು 
                        ಓಣಂ ಸದ್ಯವನ್ನು ಉಣ್ಣುತ್ತಿರುವ ಮಕ್ಕಳು 
                                                    ಸಂಗೀತ ಕುರ್ಚಿ ಆಟ 
                                   ಬಾಸ್ಕೆಟಿಗೆ ಚೆಂಡೆಸೆಯುವ ಆಟ 
                                       ಹುಡುಗರ ಹಗ್ಗ ಜಗ್ಗಾಟ 

                         ಕೇರಳ ಶೈಲಿಯಲ್ಲಿ ಸೀರೆಯುಟ್ಟ ಅಧ್ಯಾಪಿಕೆಯರು 

                         ಹುಡುಗಿಯರ ಹಗ್ಗ ಜಗ್ಗಾಟ 
ನಮ್ಮ ಶಾಲೆಯಲ್ಲಿ ಕೇರಳದ ರಾಷ್ಟ್ರೀಯ ಹಬ್ಬವಾದ ಓಣಂ  ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಎಲ್ಲಾ ತರಗತಿಗಳಲ್ಲಿ ಹೂವಿನ ರಂಗೋಲಿ ಪೂಕಳಮ್ ಹಾಕಿ ಅಲಂಕರಿಸಲಾಯಿತು. ಮಧ್ಯಾಹ್ನ ಅನ್ನ ಸಾಂಬಾರು ಪಲ್ಯ ಉಪ್ಪಿನಕಾಯಿ ಮಜ್ಜಿಗೆ ಹಾಗೂ ಪಾಯಸದೊಂದಿಗೆ ಓಣಂ  ಸದ್ಯವನ್ನು ಮಕ್ಕಳೊಂದಿಗೆ ಅಧ್ಯಾಪಕರು ಸವಿದರು. ಬಳಿಕ  ಹುಡುಗರಿಗೂ ಹುಡುಗಿಯರಿಗೂ ಹಗ್ಗ  ಜಗ್ಗಾಟ , ಹುಡುಗಿಯರಿಗೆ ಸಂಗೀತ ಕುರ್ಚಿ, ಎಲ್.ಪಿ. ಮಕ್ಕಳಿಗೆ ಬಿಸಿ ಚೆಂಡಾಟ ಬಾಸ್ಕೆಟ್ ಗೆ ಬಾಲ್  ಎಸೆಯುವುದು ಮೊದಲಾದ ಮನೋರಂಜನಾ ಆಟಗಳನ್ನು ಆಡಿಸಲಾಯಿತು.

Wednesday, August 19, 2015

LAB ACTIVITY

 ತರಗತಿ ಪ್ರಯೋಗ ಶಾಲೆಯಲ್ಲಿ ತಟಸ್ಥೀಕರಣ ಕ್ರಿಯೆಯ ಪ್ರಯೋಗದಲ್ಲಿ ನಿರತರಾಗಿರುವ ಏಳನೇ ತರಗತಿಯ ಮಕ್ಕಳು.

MATHS QUIZ



ಇಂದು ನಮ್ಮ ಶಾಲೆಯಲ್ಲಿ ಶಾಲಾ ಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಎಲ್. ಪಿ. ವಿಭಾಗದಲ್ಲಿ ರೇವತಿ ಟೀಚರ್ ಹಾಗೂ ಯು.ಪಿ. ವಿಭಾಗದಲ್ಲಿ ಪ್ರೇಮಲತ ಟೀಚರ್ ಇದನ್ನು ನಡೆಸಿಕೊಟ್ಟರು. ಇದರಲ್ಲಿ ಎಲ್.ಪಿ. ವಿಭಾಗದಲ್ಲಿ ನಾಲ್ಕನೇ ತರಗತಿಯ ಜೋವಿನ್ ಡೆಲ್ ರಾಯ್ ಪ್ರಥಮ, ಮನೀಶ್ ಯಸ್. ಡಿ. ದ್ವಿತೀಯ ಹಾಗೂ ಮನೀಶ್ ಕುಮಾರ್ ಬಿ. ಅರ್. ತ್ರತೀಯ ಸ್ಥಾನ ಪಡೆದರು. ಯು. ಪಿ. ವಿಭಾಗದಲ್ಲಿ ಆರನೇ ತರಗತಿಯ ಸಿಂಜಿತಾ ಪ್ರಥಮ, ಸಾತ್ವಿಕ ಕ್ರಷ್ಣ ದ್ವಿತೀಯ ಹಾಗೂ ಜೆಲೆಸ್ಪಿ ರಾಯ್ ತ್ರತೀಯ ಸ್ಥಾನವನ್ನು ಗಳಿಸಿದರು.

BIRTHDAY

ನಮ್ಮ ಶಾಲೆಯ ಐದನೇ ತರಗತಿಯ ರಮೀಝಾ ತನ್ನ ಹುಟ್ಟುಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಶಾಲಾ ಅಸೆಂಬ್ಲಿಯಲ್ಲಿ ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು

Saturday, August 15, 2015

INDEPENDANCE DAY CELEBERATION

ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ 

 ನಮ್ಮ  ಶಾಲೆಯಲ್ಲಿ ದೇಶದ 69 ನೆ ಸ್ವಾತಂತ್ರ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಎಲ್ಲಾ ಮಕ್ಕಳೂ ಅಧ್ಯಾಪಕರು ಹಾಗೂ ರಕ್ಷಕರೂ  ಸೇರಿ ಘೋಷಣೆಗಳನ್ನು ಕೂಗುತ್ತಾ ಶಾಲೆಯ ಪರಿಸರದಲ್ಲಿ ಪ್ರಭಾತ ಫೇರಿ ನಡೆಸಿದೆವು. ಬಳಿಕ  ಅಸೆಂಬ್ಲಿ ಸೇರಿದೆವು. ಶಾಲಾ ಮುಖ್ಯೋಪಾಧ್ಯಾಯರು ಧ್ವಜಾರೋಹಣ ಗೈದರು. ಮಕ್ಕಳು ಧ್ವಜಗೀತೆ ಹಾಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಪುತ್ತಿಗೆ ಪಂಚಾಯತು ವಾರ್ಡು ಸದಸ್ಯೆ ಕುಮಾರಿ ವಸಂತಿ ಅವರು ಉದ್ಘಾಟಿಸಿದರು. ಪಿ.ಟಿ.ಎ. ಅಧ್ಯಕ್ಷರಾದ ಶ್ರೀ ಜೋನ್ ಡಿ  ಸೋಜ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಮೇನೇಜರ್ ಶ್ರೀಮತಿ ವಿಜಯಶ್ರೀ  ಸ್ವಾತಂತ್ರ್ಯೋತ್ಸವದ ಶುಭಾಶಯ  ಹೇಳಿದರು. ಉಪಜಿಲ್ಲಾ ಮಟ್ಟದ ಸ್ವಾತಂತ್ರ್ಯ ರಸಪ್ರಶ್ನೆಯಲ್ಲಿ ಪ್ರಥಮ ಬಹುಮಾನ ಪಡೆದ ಮಕ್ಕಳಿಗೆ ವಾರ್ಡು ಸದಸ್ಯೆ ಟ್ರೋಫಿಯನ್ನು ವಿತರಿಸಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜಯಿಯಾದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಮಕ್ಕಳಿಂದ ಭಾಷಣ ದೇಶಭಕ್ತಿಗೀತೆ ಮೊದಲಾದ ಕಾರ್ಯಕ್ರಮಗಳು ನಡೆದುವು. ಶಾಲಾ ಅಧ್ಯಾಪಕ ಶ್ರೀ ರಾಮಮೋಹನ ಮಾಸ್ತರು ಸ್ವಾತಂತ್ರ್ಯ ಹೋರಾಟದ ಕತೆಯನ್ನು ಮಕ್ಕಳಿಗೆ ಮನಮುಟ್ಟುವಂತೆ ಹೇಳಿದರು. ಆರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಾಪಕ ಶಂಕರನಾರಾಯಣ  ಭಟ್ ವಂದಿಸಿದರು . ಶ್ರೀನಿವಾಸ ಮಾಸ್ಟರು  ಕಾರ್ಯಕ್ರಮ ನಿರೂಪಿಸಿದರು. ಜೈ ಬ್ರಹ್ಮ ಮೊಗೇರ ಸಂಘ ಕಕ್ವೆ ಕನಿಯಾಲತ್ತಡ್ಕ ಇವರು ಮಿಠಾಯಿಯನ್ನೂ ರಕ್ಷಕರಾದ ಅಬ್ದುಲ್ ರಹಿಮಾನ್ ಸುಬ್ಬಯಕಟ್ಟೆ ಲಾಡನ್ನೂ ವಿತರಿಸಿದರು. ಜನ ಗಣ ಮನ ದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು 
                   ಮೂರನೆ ತರಗತಿ ಮಕ್ಕಳಿಂದ ದೇಶಭಕ್ತಿ ಗೀತೆ 
                             ಏಳನೇ ತರಗತಿ ಮಕ್ಕಳಿಂದ ದೇಶಭಕ್ತಿ ಗೀತೆ 
                                    ಪ್ರಭಾತ ಫೇರಿ
                    ಶಾಲಾ ಮುಖ್ಯೋಪಾಧ್ಯಾಯರಿಂದ ಧ್ವಜಾರೋಹಣ 
         ವಾರ್ಡು ಸದಸ್ಯೆ ಕುಮಾರಿ ವಸಂತಿ ಅವರಿಂದ ಉದ್ಘಾಟನಾ ಭಾಷಣ
 ಉಪಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಟ್ರೋಫಿ ವಿತರಣೆ 
         ಸ್ವಾತಂತ್ರ್ಯ ಕತೆಯನ್ನು ಹೇಳುತ್ತಿರುವ ರಾಮಮೋಹನ ಮಾಸ್ಟರ್ 

                    ಶಾಲಾ ವಿದ್ಯಾರ್ಥಿ ನಾಯಕನಿಂದ ಭಾಷಣ 
                ಎರಡನೆ ತರಗತಿ ಪುಟಾಣಿ ಮನೋಜ್ಞ ಳಿಂದ  ಭಾಷಣ 
                       ಶಾಲಾ ಮೆನೇಜರ್ ಅವರಿಂದ ಶುಭ ಹಾರೈಕೆ 
                               ಪಿ.ಟಿ.ಎ. ಅಧ್ಯಕ್ಷರಿಂದ  ಭಾಷಣ 
                                 ಧನ್ಯವಾದ ಸಮರ್ಪಣೆ 
                           ಪ್ರಭಾತ ಫೇರಿಯ ರಸನಿಮಿಷಗಳು

                       ಶಾಲಾ ಅಸೆಂಬ್ಲಿಯಲ್ಲಿ ಧ್ವಜಗೀತೆಯ ಗಾಯನ
                  ಸಮಾರಂಭವನ್ನು  ವೀಕ್ಷಿಸುತ್ತಿರುವ ಪುಟಾಣಿ ಮಕ್ಕಳು

Friday, August 14, 2015

HAPPY INDEPENDANCE DAY

ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು 
ಬ್ಲಾಗಿನ ಎಲ್ಲಾ ವೀಕ್ಷಕರಿಗೂ 69 ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.

Wednesday, August 12, 2015

INDEPENDANCE QUIZ WINNERS

GHSS HOSDURG ನಲ್ಲಿ ಜರಗಿದ ಕಾಸರಗೋಡು  ಜಿಲ್ಲಾ ಮಟ್ಟದ ಸ್ವಾತಂತ್ರ್ಯ ರಸಪ್ರಶ್ನೆಯಲ್ಲಿ ನಮ್ಮ ಶಾಲೆಯ ಸಾತ್ವಿಕ್ ಕ್ರಷ್ಣ ಮತ್ತು ಜೆಲೆಸ್ಪಿ ರಾಯ್ ಅವರ ತಂಡವು ಉತ್ತಮವಾಗಿ ಸ್ಪರ್ಧಿಸಿ ತ್ರತೀಯ ಸ್ಥಾನವನ್ನು ಗಳಿಸಿದ್ದಾರೆ. ಮೂರು ತಂಡಗಳು ಸಮಾನ ಅಂಕ ಗಳಿಸಿದ ಕಾರಣ ಟೈ ಬ್ರೇಕರ್ ಅಳವಡಿಸಬೇಕಾಗಿ ಬಂತು . ಕೆಲವು ಮಲಯಾಳಿ ಅಧ್ಯಾಪಕರ ಕೈವಾಡದಿಂದ  ಕನ್ನಡಿಗರಾದ ನಮ್ಮ ಮಕ್ಕಳು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು . ವಿಜೇತರಿಗೆ ಶಾಲಾ ಪರವಾಗಿ ಅಭಿನಂದನೆಗಳು

Early Disbursement of August Salary 2015



Tuesday, August 11, 2015

FESTIVAL ADVANCE


ಕೇರಳ ರಾಜ್ಯ ಸರಕಾರೀ ನೌಕರರು ಹಾಗೂ ಅಧ್ಯಾಪಕರಿಗೆ ಓಣಂ ಹಬ್ಬದ ಸಲುವಾಗಿ ಪರಮಾವಧಿ ರೂ. 10000/ Festival Advance ನ್ನು ಕೊಡಲು ಸರಕಾರ ತೀರ್ಮಾನಿಸಿ ಆದೇಶ ಹೊರಡಿಸಿದೆ. ಅಗೊಸ್ತು ತಿಂಗಳ 20 ನೆ ತಾರೀಕಿನಿಂದ ಇದನ್ನು ಪಡೆಯಬಹುದು . ಇದನ್ನು ಮುಂದೆ ಐದು ಕಂತುಗಳಲ್ಲಿ ಮರುಪಾವತಿಸಬೇಕು. 
 ಇದೇ ರೀತಿ G.O.(P) 337/15 dt:7.8.2015 ರ ಆದೇಶದಂತೆ ರಾಜ್ಯ ಸರಕಾರೀ ನೌಕರರು ಹಾಗೂ ಅಧ್ಯಾಪಕರಿಗೆ ಉತ್ಸವಭತ್ತೆ / ಬೋನಸನ್ನು ಪ್ರಕಟಿಸಿದ್ದಾರೆ. ಇದರ ಪ್ರಕಾರ 31.3.2015 ಕ್ಕೆ ಅನ್ವಯವಾಗುವಂತೆ ರೂ. 18870/ ಕ್ಕಿಂತ ಕಡಿಮೆ ಸಂಬಳ ಪಡೆಯುವ ನೌಕರರಿಗೆ ರೂ. 3500/ ಬೋನಸ್ ಹಾಗು ಅದಕ್ಕಿಂತ ಹೆಚ್ಚು ಸಂಬಳ ಪಡೆಯುವವರಿಗೆ ರೂ 2200/ ಉತ್ಸವ ಭತ್ತೆ ಯು ದೊರಕಲಿದೆ.