FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, February 27, 2016

SCOUT RALLY

ಸ್ಕೌಟ್ ರಾಲಿ 
ಮಂಜೇಶ್ವರ ಲೋಕಲ್ ಅಸೋಸಿಯೇಶನ್ ನ ನೇತ್ರತ್ವದಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ   ಎರಡು ದಿನಗಳ ಸ್ಕೌಟ್ಸ್ ಮತ್ತು ಗೈಡ್ಸ್ ರಾಲಿಯು  ಕಯ್ಯಾರ್  ಡಾನ್ ಬೋಸ್ಕೋ ಎ.ಯು.ಪಿ.ಶಾಲೆಯಲ್ಲಿ ಫೆಬ್ರವರಿ 26 & 27 ರಂದು ನಡೆಯಿತು. ಇದರಲ್ಲಿ ನಮ್ಮ ಶಾಲೆಯ ಏಳು ಸ್ಕೌಟ್ಸ್ ಮತ್ತು ಒಂಬತ್ತು ಗೈಡ್ಸ್ ಭಾಗವಹಿಸಿದರು.

                             Mass Drill by Our Troop
 Kit Distributed by Peter  Rodrigues Secretary Local Association

                             ನಮ್ಮ ಶಾಲೆಯ ಟೆಂಟ್ 
                          S.J.A.U.P.S.KALIYOOR

                       S.V.V.A.U.P.S.KODLAMOGAR
                           HEDDARI A.U.P.S.BAYAR
                         A.U.P.SCHOOL ANEKAL

                               HINDU A.U.P.S.CHIPPAR
                                  S.S.A.U.P.S.CHEVAR
                          A.U.P.SCHOOL BAKRABAIL

                                       D.B.A.U.P.S.KAYYAR







Wednesday, February 24, 2016

NAVONMESHA CAMP

ಮಂಜೇಶ್ವರ ಉಪಜಿಲ್ಲಾ ಸಂಸ್ಕ್ರತ  ಅಕಾಡೆಮಿಕ್ ಕೌನ್ಸಿಲ್ ನ ನೇತ್ರತ್ವದಲ್ಲಿ ಮೂರು ದಿನಗಳ ಸಂಸ್ಕ್ರತ ಶಿಬಿರವು ಮೀಯಪದವು ಶಾಲೆಯಲ್ಲಿ ಜರಗಿತು. ನಮ್ಮ ಶಾಲೆಯ ಹನ್ನೆರಡು ಮಕ್ಕಳು  ಭಾಗವಹಿಸಿದ್ದರು . ಈ ಶಿಬಿರದ ಕೆಲವು ಭಾವಚಿತ್ರಗಳು 















WINGS PROGRAMME

SSA KASARAGOD ಮತ್ತು  BRC MANJESHWAR ಇದರ ನೇತ್ರತ್ವದಲ್ಲಿ  MANJESHWAR BRC LEVEL WINGS  PROGRAMME ದಿನಾಂಕ 24-02-2016 ನೆ ಬುಧವಾರ  BRC Manjeshwara ದಲ್ಲಿ ಜರಗಿತು. ಇದರಲ್ಲಿ SCIENCE SEMINAR( 4  Members), SIMPLE EXPERIMENT (2 Members) AND DR.APJ ABDUL KALAM QUIZ (1 Member)  ಸ್ಪರ್ಧೆಗಳು ಇದ್ದುವು.  ನಮ್ಮ ಶಾಲೆಯು ಸೆಮಿನಾರ್ ಮತ್ತು ಕ್ವಿಜ್ ನಲ್ಲಿ ಪ್ರಥಮ ಸ್ಥಾನವನ್ನೂ ಸರಳ ಪ್ರಯೋಗದಲ್ಲಿ ದ್ವಿತೀಯ ಸ್ಥಾನವನ್ನೂ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. 






  DR APJ ABDUL KALAM QUIZ - SATHWIK KRISHNA - FIRST
                                 SIMLE EXPERIMENT - SECOND
                              SEMINAR - FIRST

MAP Maths Programme

SSA Kasaragod  ಮತ್ತು BRC Manjeshwar ಇದರ ನೇತ್ರತ್ವದಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ MAP Maths ಕಾರ್ಯಕ್ರಮವು ದಿನಾಂಕ 22-02-2016  ನೆ ಸೋಮವಾರ BRC Manjeshvara ದಲ್ಲಿ ಜರಗಿತು. ಇದರಲ್ಲಿ  ಗಣಿತ ನಾಟಕ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ತಂಡವು ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ 




 

Friday, February 19, 2016

HELO HELO


ಒಂದನೇ ತರಗತಿಯ ಮಕ್ಕಳು ಆಟದ ಫೋನ್ ತಯಾರಿಸಿ ಮಾತನಾಡುತ್ತಿದ್ದಾರೆ

HEALTH AWARENESS CLASS

              ವಿಜಯ ಗ್ರಾಮೀಣ ಅಭಿವ್ರದ್ಧಿ ಪ್ರತಿಷ್ಠಾನ (ರಿ ) ಮಂಗಳೂರು ಮತ್ತು ಗ್ರಾಮಾಭಿವ್ರದ್ಧಿ ಸಮಿತಿ ಇವರ ಸಹಯೋಗದೊಂದಿಗೆ ಭಾರತೀಯ ವೈದ್ಯಕೀಯ  ಸಂಘ ಮಂಗಳೂರು ಘಟಕದ ನೇತ್ರತ್ವದಲ್ಲಿ ನಮ್ಮ ಶಾಲೆಯಲ್ಲಿ ಆರೋಗ್ಯ ಅರಿವು ಕಾರ್ಯಕ್ರಮವು  ದಿನಾಂಕ 19-02-2016 ನೇ ಶುಕ್ರವಾರ ಬೆಳಿಗ್ಗೆ ನಡೆಯಿತು. IMS ಮಂಗಳೂರು ಘಟಕದ  ಸದಸ್ಯರಾದ ಯೆನೆಪೋಯ ಕಾಲೇಜಿನ ನಿವ್ರತ್ತ ಪ್ರೊಫೆಸರ್ ಡಾ. ಬಿ. ರಾಮಚಂದ್ರ ಭಟ್ ಅವರು ತರಗತಿಯನ್ನು ನಡೆಸಿಕೊಟ್ಟರು. ದೈನಂದಿನ ಜೀವನದಲ್ಲಿ ನಾವು ಅನುಸರಿಸಬೇಕಾದ ಆರೋಗ್ಯ ಅಭ್ಯಾಸಗಳು , ಆಹಾರಾಭ್ಯಾಸಗಳು , ಟಿ. ವಿ. ಮೊಬೈಲ್ ಗಳ ಮಿತಿಮೀರಿದ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮನದಟ್ಟಾಗುವಂತೆ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯರು  ಸ್ವಾಗತಿಸಿ ವಂದಿಸಿದರು.

GAALIPATA POEM AND PICTURE

ನಾಲ್ಕನೇ ತರಗತಿಯ ಮಕ್ಕಳು ಗಾಳಿಪಟಕ್ಕೆ ಸಂಬಂಧಿಸಿ ರಚಿಸಿದ ಕವನಗಳು ಹಾಗೂ ಡ್ರಾಯಿಂಗ್ 
                                                     ನಮ್ರತಾ ಯಮ್ .ಯಸ್