FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, July 27, 2016

RAMAYANA QUIZ WINNER

ಮಂಜೇಶ್ವರ ಬಿ. ಆರ್. ಸಿ. ಯಲ್ಲಿ ಜುಲಾಯಿ 25 ರಂದು ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ರಾಮಾಯಣ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಸಿಂಜಿತಾ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ . ಅವಳಿಗೆ ಶಾಲಾ ಪರವಾಗಿ ಅಭಿನಂದನೆಗಳು

BIRTHDAY

ಹುಟ್ಟುಹಬ್ಬ ಆಚರಣೆ
 ನಮ್ಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ನಿಶ್ಮಿತಾ ಜುಲಾಯಿ ತಿಂಗಳ 21 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದಳು . ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು . 
ನಮ್ಮ ಶಾಲೆಯ ಎರಡನೇ  ತರಗತಿಯ ವಿದ್ಯಾರ್ಥಿ ಪವನ್ ರಾಮ್ ಜುಲಾಯಿ ತಿಂಗಳ 26 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದನು  . ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು . ಅವನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವನ  ಹೆತ್ತವರಿಗೆ ಅಭಿನಂದನೆಗಳು .

Thursday, July 21, 2016

CHANDRADIN

ಚಾಂದ್ರ ದಿನ 

ಚಾಂದ್ರದಿನ ಕ್ಕೆ ಸಂಬಂಧಿಸಿ ಏಳನೇ ತರಗತಿಯ ಮಕ್ಕಳು ಭಿತ್ತಿಪತ್ರಿಕೆಯನ್ನು ತಯಾರಿಸಿದರು .

ಮಕ್ಕಳಿಗೆ ಚಾಂದ್ರಯಾನ್ ೧ ,  ಬಾಹ್ಯಾಕಾಶ ಯಾತ್ರೆ ಹಾಗೂ  ಉಪಗ್ರಹ ಉಡ್ಡಯನದ ವೀಡಿಯೊ ಪ್ರದರ್ಶನವನ್ನು ಏರ್ಪಡಿಸಲಾಯಿತು. 

Wednesday, July 20, 2016

TULU Camp

ತುಳು  ನಿನಾದ - ದ್ವಿದಿನ ಶಿಬಿರ 

ಎಸ್. ಎಸ್.  ಎ ಕಾಸರಗೋಡು , ಬಿ. ಆರ್. ಸಿ.  ಮಂಜೇಶ್ವರ  ಇದರ ಸಹಭಾಗಿತ್ವದಲ್ಲಿ ಬಿ. ಪಿ. ಪಿ. ಎ. ಎಲ್ . ಪಿ. ಶಾಲೆ ಪೆರ್ಮುದೆ ಇಲ್ಲಿ  ಜರಗಿದ ಎರಡು ದಿನಗಳ  ತುಳು ಶಿಬಿರ "ತುಳು ನಿನಾದ " ದಲ್ಲಿ ನಮ್ಮ ಶಾಲೆಯ  ಮಕ್ಕಳು  ಭಾಗವಹಿಸಿ ಪ್ರಮಾಣಪತ್ರವನ್ನು  ಪಡೆದಿರುತ್ತಾರೆ 

RAMAYANA QUIZ

ರಾಮಾಯಣ ರಸಪ್ರಶ್ನೆ 
ರಾಮಾಯಣ ಮಾಸಾಚರಣೆಯ ಪ್ರಯುಕ್ತ ಶಾಲಾ ಸಂಸ್ಕ್ರತ ಸಂಘದ ನೇತೃತ್ವದಲ್ಲಿ  ರಾಮಾಯಣದ ಕುರಿತು  ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ಶಾಲಾ ಸಂಸ್ಕ್ರತ ಅಧ್ಯಾಪಕ ಕೃಷ್ಣ ಪ್ರಸಾದ್ ಅವರು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿದರು .  ಅದರಲ್ಲಿ ಏಳನೇ ತರಗತಿಯ ಸಿಂಜಿತಾ ಪ್ರಥಮ ಸ್ಥಾನವನ್ನು, ಶಾರದಾ ಸುರಭಿ ದ್ವಿತೀಯ ಸ್ಥಾನವನ್ನು ಪಡೆದರು

VEGETABLE SEED DISTRIBUTION

ತರಕಾರಿ ಬೀಜ ವಿತರಣೆ 
ಕೇರಳ ಸರಕಾರದ ಕೃಷಿ ಇಲಾಖೆಯು "ಎಲ್ಲಾ ಮಕ್ಕಳಿಗೆ ತರಕಾರಿ ಬೀಜ ಎಲ್ಲಾ ಶಾಲೆಗಳಲ್ಲಿ ತರಕಾರಿ ತೋಟ " ಎಂಬ ಧೋರಣೆಯೊಂದಿಗೆ ಪ್ರತಿವರ್ಷವೂ ತರಕಾರಿ ಬೀಜಗಳನ್ನು ವಿತರಿಸುತ್ತಾ ಬಂದಿದೆ. ಅದರಂತೆ ಈ ವರ್ಷ ಪುತ್ತಿಗೆ ಕೃಷಿ ಭವನದಿಂದ  ಒದಗಿಸಿದ ತರಕಾರಿ ಬೀಜವನ್ನು ನಮ್ಮ ಶಾಲೆಯ ಪಿ.ಟಿ. ಎ   ಸದಸ್ಯರೂ  ಉತ್ತಮ ಕೃಷಿಕರೂ ಆಗಿರುವ ಕರುವಜೆ ಕೃಷ್ಣ ಭಟ್ ಅವರು ಶಾಲಾ  ಎಸೆಂಬಲಿ ಯಲ್ಲಿ ಮಕ್ಕಳಿಗೆ ವಿತರಿಸಿದರು. 

Tuesday, July 19, 2016

HEALTH CHECK UP

ಆರೋಗ್ಯ ತಪಾಸಣೆ 
ಪುತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ನರ್ಸ್ ಗಳು  ಶಾಲೆಗೆ ಆಗಮಿಸಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಐದನೇ ತರಗತಿಯ ಮಕ್ಕಳಿಗೆ ಟಿ.ಟಿ. ಚುಚ್ಚುಮದ್ದು ನೀಡಿದರು. 







 


ATIKALANJA

ಆಟಿಕಳಂಜ 
ಕುಣಿಯುತ ಬರುವನು ಆಟಿಕಳಂಜ 
ಕೆಂಬಣ್ಣದ ಕುಪ್ಪಸವನು ತೊಟ್ಟು



 

Saturday, July 16, 2016

YAKSHAGANA CLASS

ಯಕ್ಷಗಾನ ತರಗತಿಯ ಉದ್ಘಾಟನೆ 





ಯಕ್ಷಗಾನದಲ್ಲಿ  ಆಸಕ್ತಿ ಇರುವ ಮಕ್ಕಳಿಗೆ  ಕಲಿಯಲು ಅನುಕೂಲವಾಗುವಂತೆ ಯಕ್ಷಗಾನ ತರಗತಿಯನ್ನು ಆರಂಭಿಸಲಾಯಿತು.
ಚಂದ್ರಹಾಸ ಬಿ. ಸಿ. ರೋಡು ಅವರು ಮಕ್ಕಳಿಗೆ ಯಕ್ಷಗಾನದ ನಾಟ್ಯವನ್ನು ಹೇಳಿಕೊಟ್ಟರು

PTA GENERAL BODY MEETING

ರಕ್ಷಕ ಶಿಕ್ಷಕ ಸಂಘದ ಮಹಾಸಭೆ 

 ಶಾಲಾ  ಮೇನೇಜರ್ ಶ್ರೀಮತಿ  ವಿಜಯಶ್ರೀ ಅವರು  ದೀಪ ಬೆಳಗಿಸಿ ಉದ್ಘಾಟಿಸಿದರು 
 PTA ಅಧ್ಯಕ್ಷ ಜೋನ್ ಡಿ ಸೋಜ ಅವರಿಂದ ಅಧ್ಯಕ್ಷೀಯ ಭಾಷಣ
 ವರದಿ ವಾಚನ - ಶ್ರೀ  ರಾಮಮೋಹನ ಮಾಸ್ಟರ್ 

 ರಕ್ಷಕರು - ಮಕ್ಕಳೊಳಗಿನ ಸಂಬಂಧ  ಸಂವಾದ ನಡೆಸಿಕೊಟ್ಟವರು ಪ್ರೇಮಲತಾ ಟೀಚರ್ 
 ಮುಖ್ಯೋಪಾಧ್ಯಾಯರಿಂದ ಪ್ರಾಸ್ತಾವಿಕ ನುಡಿ 
 ಶಾಲಾ ಮೆನೇಜರ್ ವಿಜಯಶ್ರೀ ಅವರಿಂದ ಉದ್ಘಾಟನಾ ಭಾಷಣ 
 LSS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಜೊವಿನ್ ಡೆಲ್ ರಾಯ್ ಅವನಿಗೆ ಪಾರಿತೋಷಕ ನೀಡುತ್ತಿರುವುದು
ಧರ್ಮತ್ತಡ್ಕ Family Welfare Center ನ Junior Public Health Nurse ಶ್ರೀಮತಿ ಜಯ ಕುಮಾರಿ ಅವರಿಂದ ವ್ಯಕ್ತಿ ಶುಚಿತ್ವ ಪರಿಸರ ಶುಚಿತ್ವ ಮಳೆಗಾಲದ ರೋಗಗಳ ಕುರಿತು  ರಕ್ಷಕರಿಗೆ ತರಗತಿ 

  ನಮ್ಮ ಶಾಲೆಯ PTA ಮಹಾಸಭೆ 15-07-2016 ನೇ ಶುಕ್ರವಾರ ಜರಗಿತು. ಗಾಯತ್ರಿ ಟೀಚರ ಪ್ರಾರ್ಥನೆಯೊಂದಿಗೆ ಸಭೆಯು ಆರಂಭವಾಯಿತು.  ಶಿಕ್ಷಕಿ ರೇವತಿ ಟೀಚರ್ ಎಲ್ಲರನ್ನು ಸ್ವಾಗತಿಸಿದರು . ರಾಮಮೋಹನ್ ಮಾಸ್ಟರ್ ಗತವರ್ಷದ ವರದಿ ವಾಚಿಸಿದರು . ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಮಾತುಗಳನ್ನಾಡಿದರು . ಮೆನೇಜರ್ ಶ್ರೀಮತಿ ವಿಜಯಶ್ರೀ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಪಿಟಿಎ ಅಧ್ಯಕ್ಷ ಜೋನ್ ಡಿ ಸೋಜ ಸಭೆಯ ಅಧ್ಯಕ್ಷತೆ ವಹಿಸಿದರು. ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು . ಅಧ್ಯಕ್ಷರಾಗಿ ಜೋನ್ ಡಿ ಸೋಜ ಪುನರಾಯ್ಕೆಯಾದರು . ನಾರಾಯಣ ನಾಯ್ಕ ಚೇರಾಲು ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು . ಉಳಿದಂತೆ ಎಂಟು ಮಂದಿ ರಕ್ಷಕರು ಹಾಗೂ ಎಂಟು ಮಂದಿ ಅಧ್ಯಾಪಕರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರೂಪೀಕರಿಸಲಾಯಿತು . MPTA ಅಧ್ಯಕ್ಷೆಯಾಗಿ  ಶ್ರೀಮತಿ ಭಾರತಿ   ಕೊಯಂಗಾನ ಹಾಗೂ ಉಪಾಧ್ಯಕ್ಷೆಯಾಗಿ  ನೆಸೀಮಾ ಕನಿಯಾಲತ್ತಡ್ಕ ಆಯ್ಕೆಯಾದರು. ಧರ್ಮತ್ತಡ್ಕ Family Welfare Center ನ JPHN ಶ್ರೀಮತಿ  ಜಯಾ ಕುಮಾರಿ  ಅವರು ಆರೋಗ್ಯದ ಬಗ್ಗೆ ತರಗತಿ ನಡೆಸಿಕೊಟ್ಟರು . ಮಕ್ಕಳು  ರಕ್ಷಕರು  ಹಾಗೂ ಅಧ್ಯಾಪಕರು  ಇವರೊಳಗಿನ ಪರಸ್ಪರ ಸಂಬಂಧದ   ಕುರಿತು  ಪ್ರೇಮಲತಾ ಟೀಚರ್ ಅವರು ರಕ್ಷಕರೊಂದಿಗೆ ಸಂವಾದ ನಡೆಸಿದರು . LSS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಜೊವಿನ್ ಡೆಲ್ ರಾಯ್ ಅವನಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು . ಕಮಲಾಕ್ಷಿ ಟೀಚರ್ ವಂದನಾರ್ಪಣೆಗೈದರು . ಶ್ರೀನಿವಾಸ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು .

Wednesday, July 13, 2016

Sub Dist Science Seminar

  Science Seminar

                                                 Topic  

"PULSES FOR SUSTAINABLE FOOD SECURITY: PROSPECTS AND CHALLENGES."

Sub-Dist competition will be held on 26/07/2016-10am [Tuesday] at BRC  Manjshwara at Mulinja

      School level competition should be conducted before 25/07/2017
             
conditions: 
1. Only one student can participate from each school [high school only]
2. 6mnts presentation. 3. 2 mnts interaction. 4. 5 charts/slides.
5. Inform in advance if using Powerpoint Presentation (to Science Club       Secretary).
6. For more details contact Smt.Sunitha,Science Club Secretary.
                              Mob: 09448566277

PTA General Body Meeting

ಆಮಂತ್ರಣ ಪತ್ರಿಕೆ

Friday, July 8, 2016

RURAL GAME

ಹುಲಿ ದನ ಆಟ 

ಹಳ್ಳಿಯ ಸೊಬಗು ಪಾಠ ಕ್ಕೆ ಸಂಬಂಧಿಸಿ ಎರಡನೇ ತರಗತಿಯ ಮಕ್ಕಳು ಗ್ರಾಮೀಣ ಆಟ  ಹುಲಿ ದನ ಆಟವನ್ನು ಆಡಿ ಅನುಭವವನ್ನು ಪಡೆದರು.

Tuesday, July 5, 2016

EID UL FITRE

ಎಲ್ಲಾ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು

VEGETABLE GARDEN












ನಮ್ಮ ಶಾಲೆಯ ಇಕೋ ಕ್ಲಬ್ ನ ನೇತೃತ್ವದಲ್ಲಿ ಪುತ್ತಿಗೆ ಕೃಷಿ ಭವನದ ಸಹಾಯದೊಂದಿಗೆ ಶಾಲಾ ತರಕಾರಿ ತೋಟವನ್ನು ನಿರ್ಮಿಸಲಾಯಿತು. ಇಕೋ ಕ್ಲಬ್ ನ ಸಂಚಾಲಕ ಶ್ರೀ ರಾಮ ಮೋಹನ ಮಾಸ್ಟರ್ ಇವರ ನೇತೃತ್ವದಲ್ಲಿ ಇಕೋ ಕ್ಲಬ್ ನ ಸದಸ್ಯರು ತರಕಾರಿ ತೋಟವನ್ನು ನಿರ್ಮಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಬೆಂಡೆ ಗಿಡ ನೆಡುವ ಮೂಲಕ  ತರಕಾರಿ ಕೃಷಿಯನ್ನು ಉದ್ಘಾಟಿಸಿದರು. ಬೆಂಡೆ ಅಲ್ಲದೆ ಬಸಳೆ, ಅಲಸಂಡೆ, ಪಡುವಲ , ಚೀನಿಕಾಯಿ ,ಕುಂಬಳ ಕಾಯಿ , ತೊಂಡೆ ಇತ್ಯಾದಿ ತರಕಾರಿಗಳ ಗಿಡಗಳನ್ನೂ  ನೆಡಲಾಯಿತು .