FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Monday, November 10, 2014

Birthday Celeberation

ಇಂದು ನಮ್ಮ ಶಾಲೆಯ ಏಳನೇ ತರಗತಿಯ ನಿತಿನ್ ಕುಮಾರನು ಹುಟ್ಟು ಹಬ್ಬವನ್ನು ಆಚರಿಸಿದನು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ನಿತಿನ್ ಕುಮಾರನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವನ ರಕ್ಷಕರಿಗೆ ಅಭಿನಂದನೆಗಳು.

Saturday, November 8, 2014

NOVEMBER 8 - X RAY DAY

ಅಫಘಾತಕ್ಕೆ ಈಡಾಗಿ  ಅಥವಾ ಬಿದ್ದು ಕೈಗೋ ಕಾಲಿಗೋ ಅಥವಾ ದೇಹದ ಇನ್ಯಾವುದೇ ಬಾಗಕ್ಕೆ ಏಟಾದರೆ ಚಿಕಿತ್ಸೆಗೆ ಮೊದಲು ಎಕ್ಸರೇ ತೆಗೆಯುವಂತೆ ವೈದ್ಯರು ಸಲಹೆ ನೀಡುವುದು ಇಂದು ಸಾಮಾನ್ಯವಾಗಿದೆ  ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಎಕ್ಸರೇ ಯನ್ನು ವಿಲಿಯಂ ಕೊನಾರ್ಡ್ ರೋಂಟ್ ಜನ್ ಎಂಬವರು 1895 ನವೆಂಬರ್ 8 ರಂದು ಆವಿಷ್ಕರಿಸಿದರು . ಇದು ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. ಈ ದಿನವನ್ನು ಎಕ್ಸರೇ ದಿನ ಎಂದು ಆಚರಿಸಲಾಗುತ್ತಿದೆ . 2011 ರಿಂದ ಈ ದಿನವನ್ನು ಅಂತರಾಷ್ಟ್ರೀಯ ರೇಡಿಯಾಲಜಿ ದಿನ ಎಂದು ಆಚರಿಸಲಾಗುತ್ತಿದೆ.

Manjeshwar Sub Dist Sanskrit Camp



ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕ್ರತ ಶಿಬಿರವು ಪೈವಳಿಕೆ ಸರಕಾರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನವೆಂಬರ್ 7 ರಂದು ಆರಂಭಗೊಂಡಿದೆ. ಉಪಜಿಲ್ಲೆಯ 19  ಶಾಲೆಗಳಿಂದ  128 ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ನಮ್ಮ ಶಾಲೆಯಿಂದ 9 ಮಕ್ಕಳು ಶಿಬಿರದ ಚಟುವಟಿಕೆಗಳಲ್ಲಿ  ಸಕ್ರಿಯವಾಗಿ ಭಾಗವಹಿಸಿದ್ದಾರೆ. ಶಿಬಿರವು ನಾಳೆ (ನವೆಂಬರ್ 9 ) ನಮಾರೋಪಗೊಳ್ಳಲಿದೆ .

Friday, November 7, 2014

PUBLIC HOLIDAYS IN 2015

Public Holidays in 2015:
(As per G.O.(P) No.304/2014/GAD Dated,Thiruvananthapuram, 31st Oct.2014 of General Administration (Co-Ordination) Department)
  • Mannam Jayanthi                            - Friday         - 2.1.2015
  • Milad-I-Sherif*                                 -Saturday    -  3.1.2015
  • Republic Day                                    - Monday       - 26.1.2015
  • Shivarathri                                        - Tuesday      - 17.2.2015
  • Maundy Thursday                            - Thursday    - 2.4.2015
  • Good Friday                                        - Friday           - 3.4.2015
  • Dr.B.R.Ambedkar Jayanthi           - Tuesday       - 14.4.2015
  • Vishu                                                    - Wednesday - 15.4.2015
  • May Day                                              - Friday          - 1.5.2015
  • Id-Ul-Fitr*(Ramzan)                        - Saturday     - 18.7.2015
  • Karkaadakavaavu                            - Friday         - 14.8.2015
  • IndependanceDay                            - Saturday    - 15.8.2015
  • First Onam                                           - Thursday    - 27.8.2015
  • Thiru Onam/Ayyankaali Jayanthi - Friday          -28.8.2015
  • Third Onam                                          - Saturday   - 29.8.2015
  • ShreeKrishna Jayanthi                      - Saturday  - 5.9.2015
  • Sree narayanaGuru Samaadhi Day- Monday   - 21.9.2015
  • Id-ul-Ad'ha (Bakrid)                            - Thursday  - 24.9.2015
  • Gandhi Jayanthi                                   - Friday        - 2.10.2015
  • Mahanavami                                        - Thursday  - 22.10.2015
  • Vijayadashami                                    - Friday          - 23.10.2015
  • Muharram*                                         - Saturday   - 24.10.2015
  • Deepavali                                             - Tuesday     - 10.11.2015
  • Milad i-Sherif*                                    - Thursday   - 24.12.2015
  • Christmas                                             - Friday         - 25.12.2015

C V RAMAN Birthday

ನವೆಂಬರ್ 7 - ಸರ್ ಸಿ.ವಿ. ರಾಮನ್ ಜನ್ಮ ದಿನ :
ಇಂದು ಭಾರತದ ಪ್ರಸಿದ್ಧ ಭೌತ ವಿಜ್ಞಾನಿ ಸರ್. ಸಿ. ವಿ. ರಾಮನ್ ಅವರ ಜನ್ಮದಿನ . 'ಚಂದ್ರಶೇಖರ ವೆಂಕಟಾರಾಮನ್', ನವೆಂಬರ್ 7, 1888 ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು. ಅವರ ತಂದೆ, ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿಯವರ ಹೆಸರು, 'ಪಾರ್ವತಿ ಅಮ್ಮಾಳ್'. ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು.ರಾಮನ್ ಪರಿಣಾಮ ಎಂಬ ತತ್ತ್ವವು ವಿಜ್ಞಾನಕ್ಕೆ ಸರ್ ಸಿ. ವಿ. ರಾಮನ್ ರ ಒಂದು ದೊಡ್ಡ ಕೊಡುಗೆಯಾಗಿದೆ. “ಆಕಾಶದ ನೀಲಿ ಬಣ್ಣ ಅವರನ್ನು ಸ್ಥಬ್ಧರನ್ನಾಗಿ ಮಾಡಿತ್ತು'. ಅದು ಹೇಗೆ ಸಾಧ್ಯ  ? ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ ಅವರು ಬಹಳ ಸಮಯವನ್ನು ವ್ಯಯಿಸಿದರು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನತುಂಬ ಅಲೆದಾಡುತ್ತಿದ್ದರು. ಆಕಾಶದ ನೀಲಿ ಬಣ್ಣ ರಾಮನ್ ರ ಕುತೂಹಲ ಕೆರಳಿಸಿ ಪ್ರಯೋಗಕ್ಕೆ ತೊಡಗಿಸಿತು. ಹಾಗೇ ಬಗೆಬಗೆಯ ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯ ಚಕಿತರಾಗುತ್ತಿದ್ದರು. ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷ್ಯದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು, ಎನ್ನುವ ವಿಚಾರ ಬೆಳಕಿಗೆ ಬಂತು. ಇದನ್ನೇ “ರಾಮನ್ ಪರಿಣಾಮ ” ಎಂದು ಕರೆಯಲಾಗುತ್ತದೆ. 'ಡಾ.ಸರ್.ಸಿ.ವಿ.ರಾಮನ್',ಎಂದೇ ತಮ್ಮ ಆಪ್ತಗೆಳೆಯರು ಹಾಗೂ ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ,'ಚಂದ್ರಶೇಖರ ವೆಂಕಟರಾಮನ್ ರವರು, ನೋಬೆಲ್ ಪ್ರಶಸ್ತಿ ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು 1930 ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು.

Declaration of Completion of School blog- Paper Report


World Cancer Awarenes Day

ನವೆಂಬರ್ 7 -  ವಿಶ್ವ ಕ್ಯಾನ್ಸರ್ ಜನಜಾಗ್ರತಿ ದಿನ :

ಕ್ಯಾನ್ಸರ್ ಎನ್ನುವುದು ವಿಶ್ವದ ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ ಎರಡನೆ ಅಗ್ರಸ್ಥಾನವನ್ನು ಅಲಂಕರಿಸಿದೆ. (ಮೊದಲನೆಯದು ಹ್ರದಯಾಘಾತ) ಕ್ಯಾನ್ಸರ್ ರೋಗವನ್ನು ಕನ್ನಡದಲ್ಲಿ ಅರ್ಬುದ ರೋಗ ಎಂದು ಕರೆಯುತ್ತಾರೆ . ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಕ್ಯಾನ್ಸರ್ ನಿಂದಾಗಿ  ಸಾಯುತ್ತಿದ್ದಾರೆ . ಬಾಯಿ, ಗಂಟಲು, ಶ್ವಾಸಕೋಶ, ಕರುಳಿನ ಕ್ಯಾನ್ಸರ್ ಮತ್ತು ಪ್ರೋಸ್ಪೆಟ್ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ . ಸ್ತನ ಕ್ಯಾನ್ಸರ್ , ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ, ಧೂಮಪಾನ ಮತ್ತು ಮದ್ಯಪಾನ, ಅನುವಂಶಿಯ  ಕಾರಣಗಳು, ಆರಾಮದಾಯಕ ಜೀವನ ಶೈಲಿ , ಅನಾರೋಗ್ಯಪೂರ್ಣ ಆಹಾರ ಪದ್ಧತಿ , ಅತಿಯಾದ ಗರ್ಭನಿರೋಧಕ ಮಾತ್ರೆ ಬಳಕೆ, ವಾತಾವರಣದ ವೈಪರೀತ್ಯ, ವಾಯುಮಾಲಿನ್ಯ, ಅನಾರೋಗ್ಯಕರವಾದ ಲೈಂಗಿಕ ಜೀವನ ಮತ್ತು ಅನೈತಿಕ ಸಂಬಂಧಗಳು  ಮೊದಲಾದ ಕಾರಣಗಳಿಂದ ಕ್ಯಾನ್ಸರ್ ರೋಗ ಬರುವುದು . ಈ ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು . ಮುಂದುವರಿದ ದೇಶಗಳಲ್ಲಿ ಒಂದು ಮತ್ತು ಎರಡನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ  ಭಾರತದಂತಹ ಮುಂದುವರಿಯುತ್ತಿರುವ ದೇಶಗಳಲ್ಲಿ ಜನರು ಬಡತನ ಮೂಢನಂಬಿಕೆ , ಅನಕ್ಷರತೆ ಅಜ್ಞಾನ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲುಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರನ್ನು ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ . ಈ ನಿಟ್ಟಿನಲ್ಲಿ ನವೆಂಬರ್ 7 ರಂದು ಕ್ಯಾನ್ಸರ್ ಜಾಗ್ರತಿ ದಿನ  ಎಂದು ಆಚರಿಸಿ ಜನರಲ್ಲಿ ಕ್ಯಾನ್ಸರ್ ಬಗೆಗಿನ ಮೂಢ ನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕಿ ಹೆಚ್ಚಿನ ತಿಳುವಳಿಕೆ ಮತ್ತು ಅರಿವು ನೀಡುವ ಕಾರ್ಯ ನಡೆಸಲಾಗುತ್ತದೆ.