FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, December 4, 2014

STUDENTS ELIGIBLE FOR HIGHER LEVEL

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಸ್ಪರ್ಧಿಸಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಗಳಿಸಿದ ನಮ್ಮ ಶಾಲೆಯ ಮಕ್ಕಳು 


 PRANAVA KUMAR N . (Sanskrit - Prashnothari)



APOORVA EDAKANA (Sanskrit - Ganalapanam, Akshrashlokam - General , Kannada Kavitha Rachana)




SHREE CHARANA  K (Sanskrit - Padyamchollal)










SANSKRIT - NADAKAM : SANDHYA K, AKSHATHA K.A, APOORVA EDAKANA, ADHITHYA E.H, SATHWIK N, THANMAYA P, MURALIKRISHNA BHAT N, SATHWIK KRISHNA N, PRADEEP S.D, PRANAVA KUMAR N.)

STUDENTS PERFORMANCE IN SUB DIST KALOTSAVAM 2014


Manjeshwar Sub Dist - Kannada Kavitha Rachana

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಯು. ಪಿ. ವಿಭಾಗದ ಕನ್ನಡ ಕವಿತಾ ರಚನೆಯಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆ. ಇದನ್ನು ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಅಪೂರ್ವ ಎಡಕಾನ ರಚಿಸಿದ್ದಾಳೆ. ಅವಳಿಗೆ ಅಭಿನಂದನೆಗಳು.
ತಾಯಿಯ ಮಮತೆ
ಜಗವನು ತೋರಿಸಿಕೊಟ್ಟ 
ದಿವ್ಯ ರೂಪವೇ ತಾಯಿ 
ಸಾಕಿ ಸಲಹಿದ ಮಾತೆಯನ್ನು 
ಮರಣದವರೆಗೂ ಕಾಯಿ ।।
     ಬಾಲ್ಯದಿಂದಲೇ ಒಳ್ಳೆಯ ನಡತೆಯ 
     ಕಲಿಸಿಕೊಟ್ಟ ಮಾತೆ 
     ಹೊಲದಿ ಕೆಲಸ ಮಾಡಿಕೊಂಡೆ 
     ಹೊಟ್ಟೆ ತುಂಬಿಸಿದ ದಾತೆ ।।
ಮಗುವು ಮಲಗುವ ತನಕವೂ 
ಜೋಗುಳ ಹಾಡಿಹಾಡಿ 
ನಿದ್ದೆಯು  ಬಾರದೆ ಇದ್ದರೆ ಪಾಪುಗೆ 
ಸೋಲನು ಹಾಲನು ನೀಡಿ ।।
       ಮಗುವು ಒಮ್ಮೆ ಬಿದ್ದರೆ 
       ಹರಿಯುವುದು ದುಃಖದ ಕೋಡಿ 
       ಅಳುವು ನಿಲ್ಲುವುದು ಕೊಟ್ಟರೆ 
       ಒಂದು ಪರಿಮಳ ಹೂವಿನ ಜೋಡಿ ।।
ಸಿಹಿಮುತ್ತನು ಗಲ್ಲಕೆ ನೀಡುತ 
ವಾತ್ಸಲ್ಯಮಯಿ ಕರುಣೆ 
ಮಕ್ಕಳ ಬಗ್ಗೆ ಗಮನವ ಇಟ್ಟು 
ದೇವರಿಗೆಂದೂ ಶರಣೆ ।।
          ತಾಯಿಯೆ  ಮೊದಲ ಗುರುವೆಂದು 
          ಸಾಧಿಸಿ ತೋರಿಸಿದಳೀಕೆ 
          ಒಂದು ಅಂಕವೂ ಕಡಿಮೆಯಾದರೆ 
          ತಾಯಿಯ ಪ್ರಶ್ನೆ ಯಾಕೆ ? ।।
ಇಂತಹ ಪ್ರೀತಿಯ ತಾಯಿಯು 
ಲಭಿಸುವುದು ಬಹು ದೊಡ್ಡ ಅದ್ರಷ್ಟ 
ವಾತ್ಸಲ್ಯಮಯಿ ತಾಯಿಯು ಇಲ್ಲದಿರೆ 
ಅವನೊಬ್ಬ ಬಲು ನತದ್ರಷ್ಟ ।।
                               



                                                                            APOORVA EDAKANA    
                                                                               VII C STANDARD

Wednesday, December 3, 2014

SAMSKRITOTSAVAM CHAMPIONS

ಇಂದು ಮುಕ್ತಾಯಗೊಂಡ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಯು. ಪಿ.ವಿಭಾಗದ ಸಂಸ್ಕ್ರತೊತ್ಸವದಲ್ಲಿ 84 ಅಂಕಗಳನ್ನು ಪಡೆದು ನಮ್ಮ ಶಾಲೆಯು ಸತತ ಮೂರನೇ ವರ್ಷ ಪ್ರಥಮ ಸ್ಥಾನವನ್ನು ಪಡೆಯಿತು.

SUB DIST KALOTSAVAM PHOTOS

ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ಕೆಲವು ಫೋಟೋಗಳು

RECEIVING INDIVIDUAL TROPHY

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ವಿಜೇತರಾದ ಮಕ್ಕಳು ವೈಯಕ್ತಿಕ ಟ್ರೋಫಿಯನ್ನು ಸ್ವೀಕರಿಸುತ್ತಿರುವುದು

SUB DIST SANSKRIT DRAMA

ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕ್ರತೋತ್ಸವದ  ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಮ್ಮ ಶಾಲೆಯ ನಾಟಕದ ಕೆಲವು ದ್ರಶ್ಯಗಳು