FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, June 10, 2015

BIRTHDAY CELEBERATION



ಇಂದು ನಮ್ಮ ಶಾಲೆಯ ಆರನೇ ತರಗತಿಯ ಸುರಭಿಯು ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಶಾಲೆಯ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು

Tuesday, June 9, 2015

BIRTHDAY CELEBERATION



ನಮ್ಮ ಶಾಲೆಯ 7 C   ತರಗತಿಯ ಸಾತ್ವಿಕ್ ಕೃಷ್ಣ ಯನ್  ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿದನು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಇಂಗ್ಲಿಷ್ - ಇಂಗ್ಲಿಷ್-ಕನ್ನಡ ನಿಘಂಟು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ಅವನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು.

Monday, June 8, 2015

100 ವರ್ಷ ಪೂರೈಸಿದ ಕವಿ ಕಯ್ಯಾರ ಕಿಞ್ಞಣ್ಣ ರೈ

        100 ವರ್ಷ ಪೂರೈಸಿದ ಕವಿ ಕಯ್ಯಾರ ಕಿಞ್ಞಣ್ಣ ರೈ

ಗಡಿನಾಡ ಕನ್ನಡದ ಖ್ಯಾತ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ 100 ವರ್ಷ ಪೂರೈಸಿದ ಸುಸಂದರ್ಭದಲ್ಲಿ ಹುಟ್ಟು ಹಬ್ಬದ ಶುಭಾಶಯಗಳು .ನಮ್ಮ ಶಾಲಾ ಅಸೆಂಬ್ಲಿಯಲ್ಲಿ ಕನ್ನಡ ಅಧ್ಯಾಪಕ ಶ್ರೀನಿವಾಸ ಕೆ. ಯಚ್ ಅವರು ಕವಿ ಕಯ್ಯಾರರ ಸಾಹಿತ್ಯ ಸಾಧನೆಯ ಬಗ್ಗೆ ತಿಳಿಸಿದರು . ಅವರು ಇನ್ನೂ ಹಲವು ವರ್ಷಗಳ ಕಾಲ ಬದುಕಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುವಂತಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.

Saturday, June 6, 2015

CLICK HERE FOR THE ACTIVITY BOOKS (MAL)FOR HEALTH & PHYSICAL EDUCATION OF U.P SECTION.

Friday, June 5, 2015

WORLD ENVIRONMENTAL DAY

  ವಿಶ್ವ ಪರಿಸರ ದಿನಾಚರಣೆ 
                                     

ಪ್ರತಿ ವರ್ಷದಂತೆ ಈ ವರ್ಷವೂ ಜೂನ್ 5 ರಂದು ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು . ಕೇರಳ ರಾಜ್ಯ ಅರಣ್ಯ ಇಲಾಖೆಯ ವತಿಯಿಂದ ನೀಡಿದ ಗಿಡಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಶಾಲಾ ಪರಿಸರದಲ್ಲಿ ಮಕ್ಕಳು ಪ್ರತಿ ತರಗತಿಗೊಂದರಂತೆ ಗಿಡಗಳನ್ನು ನೆಟ್ಟರು . ಕ್ಲಾಸ್ ಅಧ್ಯಾಪಕರು ನೇತೃತ್ವ ನೀಡಿದರು . ಶಾಲಾ ಅಸೆಂಬ್ಲಿಯಲ್ಲಿ ಇಕೋ ಕ್ಲಬ್ ಸಂಚಾಲಕರಾದ ಶ್ರೀ ರಾಮಮೋಹನ್ ಅವರು ದಿನದ ಮಹತ್ವದ ಬಗ್ಗೆ ತಿಳಿಸಿದರು . ಪ್ರತಿ ತರಗತಿಯಲ್ಲೂ ಘೋಷಣ ವಾಕ್ಯಗಳು,ಪ್ಲಕಾರ್ಡುಗಳು ,ಭಾಷಣ,ಪರಿಸರಗೀತೆ ಗಾಯನ ಇತ್ಯಾದಿ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಯಿತು .
                               ಶಾಲಾ ಪ್ರವೇಶೋತ್ಸವ 2015-16
 2015-16 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ನಮ್ಮ ಶಾಲೆಯಲ್ಲಿ ವೈಭವದಿಂದ ನಡೆಯಿತು . ಹೊಸದಾಗಿ ಸೇರಿದ ಮಕ್ಕಳನ್ನು ಪುಗ್ಗೆ ನೀಡಿ ಸ್ವಾಗತಿಸಲಾಯಿತು .  ಪಿ. ಟಿ . ಎ ಅಧ್ಯಕ್ಷ ವೆಂಕಟರಾಜ ನೀರಾಮೂಲೆ ಅವರ ಅಧ್ಯಕ್ಷತೆಯಲ್ಲಿ ವಾರ್ಡ್ ಸದಸ್ಯೆ  ಕುಮಾರಿ ವಸಂತಿ ಅವರು ಪ್ರವೇಶೋತ್ಸವವನ್ನು ಉದ್ಘಾಟಿಸಿದರು . ಶಾಲಾ ಮುಖ್ಯೋಪಾಧ್ಯಾಯ ಶ್ರೀ ಯನ್ ಮಹಾಲಿಂಗ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು . ಹೊಸದಾಗಿ ಸೇರಿದ ಮಕ್ಕಳಿಗೆ ಶಾಲಾ ಮೇನೇಜರ್ ಶ್ರೀಮತಿ ವಿಜಯಶ್ರೀ ಅವರು ಕಲಿಕೋಪಕರಣಗಳ ಕಿಟ್ ವಿತರಿಸಿದರು. ಅಧ್ಯಾಪಿಕೆ ಗಾಯತ್ರಿ ಕಡಂಬಾರ್ ಅವರು ಧನ್ಯವಾದ ಸಮರ್ಪಿಸಿದರು. ಅಧ್ಯಾಪಕ ಶ್ರೀನಿವಾಸ ಕೆ. ಯಚ್. ಕಾರ್ಯಕ್ರಮ ನಿರೂಪಿಸಿದರು.ಬಳಿಕ ಎಲ್ಲ ಮಕ್ಕಳಿಗೂ ಸಿಹಿತಿಂಡಿ ವಿತರಿಸಲಾಯಿತು. ಅನಂತರ ಮಕ್ಕಳಿಂದ ವಿವಿಧ ಚಟುವಟಿಕೆಗಳು ನಡೆಯಿತು .
   

ಶ್ರದ್ಧಾಂಜಲಿ ಸಭೆ

                                                           ಶ್ರದ್ಧಾಂಜಲಿ ಸಭೆ

ನಮ್ಮ ಶಾಲಾ ವ್ಯವಸ್ಥಾಪಕರಾಗಿದ್ದ ಶ್ರೀ ಯನ್ ಸುಬ್ಬಣ್ಣ ಭಟ್ ಅವರ ನಿಧಾನಕ್ಕೆ ಸಂತಾಪ ಸೂಚಕವಾಗಿ ಶಾಲೆಯಲ್ಲಿ 1.6.2015 ನೇ ಸೋಮವಾರದಂದು ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು . ಶಾಲಾ ಮುಖ್ಯೋಪಾಧ್ಯಾಯ ಶ್ರೀ ಯನ್ ಮಹಾಲಿಂಗ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು . ವಾರ್ಡ್ ಸದಸ್ಯೆ ಕುಮಾರಿ ವಸಂತಿ ,ಪಿ. ಟಿ . ಎ ಅಧ್ಯಕ್ಷ ವೆಂಕಟರಾಜ ನೀರಾಮೂಲೆ ,ಶಾಲಾ ಅಧ್ಯಾಪಕರಾದ ರಾಮಮೋಹನ್ ಸಿ. ಯಚ್ ,ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಮಾತನಾಡಿದರು . ಶಾಲಾ ಮೇನೇಜರ್ ಶ್ರೀಮತಿ ವಿಜಯಶ್ರೀ ಅವರು ಉಪಸ್ಥಿತರಿದ್ದರು  ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು . ಅಧ್ಯಾಪಕ ಶ್ರೀನಿವಾಸ ಕೆ. ಯಚ್. ಕಾರ್ಯಕ್ರಮ ನಿರೂಪಿಸಿದರು . ಮೃತರ ಗೌರವಾರ್ಥ ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು .