FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Sunday, July 14, 2019

VISIT TO PUBLIC LIBRARY

ಸಾರ್ವಜನಿಕ ಗ್ರಂಥಾಲಯ ಭೇಟಿ
ವಾಚನಾ ವಾರಾಚರಣೆಯ ಭಾಗವಾಗಿ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಲಾಯಿತು. ಗ್ರಂಥಾಲಯದ ಕಾರ್ಯವೈಖರಿಯನ್ನು ಗ್ರಂಥ ಪಾಲಕಿ ವಿವರಿಸಿದರು. ಸಾವಿರಾರು ಪುಸ್ತಕಗಳನ್ನು ಮಕ್ಕಳು ವೀಕ್ಷಿಸಿದರು. 


LSS and USS Winners

LSS WINNER
೨೦೧೮-೧೯ ನೇ ಶೈಕ್ಷಣಿಕ ವರ್ಷದಲ್ಲಿ LSS ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಸ್ಕಾಲರ್ಶಿಪ್ ಗೆ ಆಯ್ಕೆಯಾದ ಪವನ್ ರಾಮ್ ಯನ್ . ಈತನಿಗೆ ಶಾಲಾ ಪರವಾಗಿ ಅಭಿನಂದನೆಗಳು
USS WINNER
2018-19 ಸಾಲಿನಲ್ಲಿ ನಡೆದ ಯು ಯಸ್  ಯಸ್  ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಸ್ಕಾಲರ್ಶಿಪ್ ಗೆ ಅರ್ಹತೆ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿ ಮನೀಶ್ ಯಸ್  ಡಿ  ಈತನಿಗೆ ಶಾಲಾ ಪರವಾಗಿ ಅಭಿನಂದನೆಗಳು

SCHOOL PRAVESHOTHSAVA

SCHOOL PRAVESHOTHSAVA 2019-20 ON 06.06.2019





Thursday, June 21, 2018

INTERNATIONAL YOGA DAY

ಅಂತಾರಾಷ್ಟ್ರೀಯ ಯೋಗ ದಿನಾಚರಣೆ 
ನಮ್ಮ ಶಾಲೆಯಲ್ಲಿ ಜೂನ್ ೨೧ ರಂದು ವಿಶ್ವ ಯೋಗ ದಿನವನ್ನು ಆಚರಿಸಲಾಯಿತು . ಎಲ್ಲ ತರಗತಿಗಳಲ್ಲಿ ಯೋಗದ ಪ್ರಾಧಾನ್ಯತೆಯ ಕುರಿತು ಅಧ್ಯಾಪಕರು ಮಾಹಿತಿ ನೀಡಿದರು . ಬಳಿಕ ಆಯಾ ತರಗತಿ ಅಧ್ಯಾಪಕರು ಮಕ್ಕಳಿಗೆ ಕೆಲವು ಶಾರೀರಿಕ ವ್ಯಾಯಾಮಗಳನ್ನು ಹೇಳಿಕೊಟ್ಟರು . 


Tuesday, June 5, 2018

WORLD ENVIRONMENT DAY


ವಿಶ್ವ ಪರಿಸರ ದಿನಾಚರಣೆ 
     ಜೂನ್ 5 ರಂದು  ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲಾ ಅಸೆಮ್ಬಲಿಯಲ್ಲಿ ಮುಖ್ಯೋಪಾಧ್ಯಾಯರು ವಿಶ್ವ ಪರಿಸರ ದಿನದ  ಮಹತ್ವ,  ಈ ವರ್ಷ ವಿಶ್ವ ಪರಿಸರ ದಿನದ ಧ್ಯೇಯ ದ  ಬಗ್ಗೆ ಮಕ್ಕಳಿಗೆ ತಿಳಿಸಿದರು . ಮುಖ್ಯೋಪಾಧ್ಯಾಯರು ಒಂದು ಪರಿಸರ ಗೀತೆಯನ್ನು ಎಲ್ಲ ಮಕ್ಕಳಿಂದಲೂ  ಹಾಡಿಸಿದರು.  ಬಳಿಕ ಅರಣ್ಯ ಇಲಾಖೆಯವರು ಒದಗಿಸಿದ ಗಿಡಗಳನ್ನು ಮಕ್ಕಳಿಗೆ ವಿತರಿಸಿದರು . ಶಾಲಾ ಪರಿಸರದಲ್ಲಿ ಗಿಡ ನೆಡಲಾಯಿತು. ಅದಕ್ಕೆ ರಕ್ಷಣಾ ಬೇಲಿಯನ್ನು ಹಾಕಲಾಯಿತು . 






Sunday, June 3, 2018

LCD PROJECTOR and CEILING FAN Donation
 ನಮ್ಮ ಶಾಲೆಯ ಹಳೆ ವಿದ್ಯಾರ್ಥಿನಿಯೂ ನಮ್ಮ ಶಾಲಾ ಅಧ್ಯಾಪಕಿಯೂ ಆಗಿರುವ ಶ್ರೀಮತಿ ರೇವತಿ ಟೀಚರ್ ಅವರು ಸುಮಾರು ರೂ. 35000/ ಬೆಲೆಯ ಒಂದು ಎಲ್ ಸಿ ಡಿ ಪ್ರಾಜೆಕ್ಟರ್ ನ್ನು ಶಾಲಾ ಪ್ರವೇಶೋತ್ಸವದ ಸಂದರ್ಭದಲ್ಲಿ ಶಾಲೆಗೇ ಕೊಡುಗೆಯಾಗಿ ನೀಡಿದರು . ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು . ಅವರು ಕಳೆದ ವರ್ಷ ನಮ್ಮ ಶಾಲೆಗೆ ನಾಲ್ಕು ಫ್ಯಾನ್  ಗಳನ್ನೂ ಕೊಡುಗೆಯಾಗಿ ನೀಡಿದ್ದರು. 
 ನಮ್ಮ ಶಾಲೆಯ ಹಳೆ ವಿದ್ಯಾರ್ಥಿನಿಯೂ ನಮ್ಮ ಶಾಲಾ ಅಧ್ಯಾಪಕಿಯೂ ಆಗಿರುವ ಶ್ರೀಮತಿಪರಮೇಶ್ವರಿ ಟೀಚರ್ ಅವರು ಶಾಲಾ ಪ್ರವೇಶೋತ್ಸವದ ಸಂದರ್ಭದಲ್ಲಿ ಶಾಲೆಗೆ  ನಾಲ್ಕು ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಿದರು . ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು