FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, November 20, 2015

Birthday

ನಮ್ಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಅರುಣ ಕುಮಾರಿ ನವೆಂಬರ್ 19 ರಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಗಾದೆಗಳು ಎಂಬ ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು .

Tuesday, November 17, 2015

OBITUARY

ಕಂಬನಿ 
ವಾಮಂಜೂರು ಚೆಕ್ ಪೋಸ್ಟ್ ಬಳಿ ಸಂಭವಿಸದ ಅಪಘಾತದಲ್ಲಿ ಮ್ರತಪಟ್ಟ ಕಯ್ಯರು ಡಾನ್ ಬೋಸ್ಕೋ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿ ಸಂಗೀತ ಟಿ. ಮಯ್ಯಇವಳ ಆತ್ಮಕ್ಕೆ ಆ ಪರಮಾತ್ಮನು  ಚಿರ ಶಾಂತಿಯನ್ನು ಕರುಣಿಸಲಿ ಎಂದು ನಾವು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ . 

BIRTHDAY

ನಮ್ಮ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ ಮನೀಶ್ ಯಸ್. ಡಿ ನವೆಂಬರ್ 15 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿದನು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು . ಅವನಿಗೆ ಶಾಲಾ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು .

Monday, November 9, 2015

DEEPAVALI

ಅಸತೋಮಾ ಸದ್ಗಮಯ 
ತಮಸೋಮಾ ಜ್ಯೋತಿರ್ಗಮಯ 
ಮ್ರತ್ಯೋರ್ಮಾ ಅಮ್ರತಂಗಮಯ 
ಓಂ  ಶಾಂತಿ : ಶಾಂತಿ : ಶಾಂತಿ : ।।
                   ಅಜ್ನಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ನಾನವೆಂಬ  ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು . ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ . ದೀಪ + ಆವಳಿ ಎಂದರೆ, ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ . ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ . ದೀಪಾವಳಿಗೆ ಕೌಮುದಿ ಉತ್ಸವ ಎಂದೂ  ಕರೆಯುವುದುಂಟು . 
          ಇದು ಕಾರ್ತಿಕ ಮಾಸದ ಹಬ್ಬವೇ ಆದರೂ ಆಶ್ವೀಜ ಕ್ರಷ್ಣ ತ್ರಯೋದಶಿ ಸಂಜೆಯಿಂದಲೇ ದೀಪಾವಳಿಯ ಸಂಭ್ರಮ . ದೀಪಾವಳಿ ಮೂರು ದಿನಗಳ ಹಬ್ಬವಾದರೂ ಸತತ ಐದು ದಿನಗಳ ಸಡಗರ. ತ್ರಯೋದಶಿಯ ಸಂಜೆ ಸ್ನಾನದ ಮನೆಯನ್ನು ಚೆನ್ನಾಗಿ ಶುದ್ಧ ಮಾಡಿ ಹಂಡೆಗೆ ಸುಣ್ಣ ಹಾಗೂ ಕೆಮ್ಮಣ್ಣು ಬಳಿದು , ರಂಗವಲ್ಲಿ ಹಾಕಿ ಶುಚಿಯಾದ ನೀರು ತುಂಬುತ್ತಾರೆ . ಇದಕ್ಕೇ ಈ ಹಬ್ಬಕ್ಕೆ ನೀರು ತುಂಬುವ ಹಬ್ಬ ಎಂದೇ ಹೆಸರು ಬಂದಿದೆ . ಮಾರನೇ ದಿನ ನರಕ ಚತುರ್ದಶಿ ಅಂದು ಎಲ್ಲರೂ  ನಸುಕಿನಲ್ಲಿ ಎದ್ದು ತೈಲಾಭ್ಯಂಜನ ಮಾಡಿ ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ . ಅಂದು ಸೂರ್ಯೋದಯದ ಕಾಲದಲ್ಲಿ ಮಾಡುವ ಅಂಗಾಂಗ ಸ್ನಾನ ಗಂಗಾ ಸ್ನಾನಕ್ಕೆ ಸಮ ಎಂಬುದು ಹಿರಿಯರ ನಂಬಿಕೆ . 
       ಪುರಾಣಗಳ ಪ್ರಕಾರ ನರಕಾಸುರನೆಂಬ ರಾಕ್ಷಸನು ಲೋಕಕಂಟಕನಾದಾಗ ಭೂಮಾತೆ ಕ್ರಷ್ಣನನ್ನು ಪ್ರಾರ್ಥಿಸಿ ನರಕಾಸುರನ ಸಂಹಾರಕ್ಕೆ ಕಾರಣಳಾಗುತ್ತಾಳೆ . ಕ್ರಷ್ಣ ಕೂಡ ನರಕಾಸುರನ ಸಂಹಾರಕ್ಕೆ ಮುನ್ನ ಆಶ್ವಯುಜ ಕ್ರಷ್ಣ ಚತುರ್ದಶಿಯ ದಿನ ತೈಲಾಭ್ಯಂಜನ ಮಾಡಿ , ನರಕಾಸುರನ ವಧಿಸಿ , ಆ ರಾಕ್ಷಸ  ಬಂಧಿಸಿ ಇಟ್ಟಿದ್ದ ಹದಿನಾರು ಸಾವಿರ ಕನ್ಯೆಯರನ್ನು ಬಿಡುಗಡೆಗೊಳಿಸುತ್ತಾನೆ. ಆ ನೆನಪಿಗಾಗಿ ದೀಪಾವಳಿಯ ಆಚರಣೆ. 
        ಈ ವಿಜಯೋತ್ಸವದ ಸಂಕೇತವಾಗಿ ಆಚರಿಸಲಾಗುವ ಹಬ್ಬವೇ ದೀಪಾವಳಿ . ಹೀಗಾಗಿಯೇ ಅಂದು ಹಬ್ಬದ ಊಟ ಮಾಡಿ , ಬಾಣ ಬಿರುಸು ಹಚ್ಚಿ ನಲಿಯುವುದು ವಾಡಿಕೆ. ತಮ್ಮ ಬಿಡುಗಡೆಯ ಬಳಿಕ ಕ್ರಷ್ಣನಿಗೆ ಕ್ರತಜ್ನತೆ ಅರ್ಪಿಸಲು ಹದಿನಾರು ಸಾವಿರ ಕನ್ಯೆಯರು ಭಕ್ತಿಯಿಂದ ಸಾಲು ಸಾಲು ಆರತಿ ಬೆಳಗಿದರೆಂದು ಪುರಾಣಗಳು ಹೇಳುತ್ತವೆ. ಹೀಗಾಗಿ ಅಂದಿನಿಂದ ಮಹಿಳೆಯರು  ಆರತಿ ಬೆಳಗುವ , ಸಾಲು ದೀಪ ಹಚ್ಚುವ , ತೈಲಾಭ್ಯಂಜನ ಮಾಡುವ ಪದ್ಧತಿ ರೂಢಿಗೆ ಬಂತು . ಮಾರನೆಯ ದಿನ ಅಮಾವಾಸ್ಯೆ. ಅಂದು ಸಂಜೆ ಎಲ್ಲರೂ ಧನದೇವತೆಯಾದ ಲಕ್ಷ್ಮಿ ಯನ್ನು ಪೂಜಿಸುತ್ತಾರೆ. ಅಂದು ಮನೆಯಲ್ಲಿರುವ ಹಣವನ್ನೂ, ಸುವರ್ಣವನ್ನೂ ಕಳಶದ ಜೊತೆ ಇಟ್ಟು ಧನದೇವತೆಯಾದ ಲಕ್ಷ್ಮಿಯನ್ನು ಪೂಜಿಸಿ , ಉತ್ತರೋತ್ತರ ಅಭಿವ್ರದ್ಧಿ ಮಾಡುವಂತೆ  ಪ್ರಾರ್ಥಿಸುತ್ತಾರೆ. ಅಂಗಡಿಗಳಲ್ಲೂ ಲಕ್ಷ್ಮೀ ಪೂಜೆ ವಿಜೃಂಭಣೆ ಯಿಂದ  ನಡೆಯುತ್ತದೆ. 
      ಕಾರ್ತಿಕ ಮಾಸದ ಮೊದಲ ದಿನವೇ ಪಾಡ್ಯ. ಅಂದು ಬಲಿ ಪಾಡ್ಯಮಿ . ಬಲಿ ಚಕ್ರವರ್ತಿಯು ತನ್ನ ತಪೋಬಲ ಹಾಗೂ ಭುಜಬಲದಿಂದ ದೇವೇಂದ್ರನನ್ನು ಸೋಲಿಸಿ ಸುರಲೋಕವನ್ನು ವಶಪಡಿಸಿಕೊಂಡು ಗರ್ವಿಷ್ಟನಾಗಿ ಮೆರೆಯುತ್ತಿದ್ದಾಗ  ಶ್ರೀಮನ್ನಾರಾಯಣನು ವಾಮನನಾಗಿ ಅವತರಿಸಿ , ಮೂರಡಿ ಜಾಗವನ್ನು  ಬಲಿಯ ಬಳಿಯಿಂದ ದಾನವಾಗಿ ಪಡೆದು, ತ್ರಿವಿಕ್ರಮನಾಗಿ ಬೆಳೆದು ಆಕಾಶ ಭೂಮಿಗಳನ್ನು ಎರಡಡಿಯಲ್ಲಿ ಅಳೆದು ಮತ್ತೊಂದಡಿಯನ್ನು ಬಲಿಯ ತಲೆಯಮೇಲಿಟ್ಟು ಪಾತಾಳಕ್ಕೆ ತುಳಿಯುತ್ತಾನೆ. ಆದರೆ ಕೇಳಿದೊಡನೆಯೇ ಅಸುರಗುರು ಶುಕ್ರಾಚಾರ್ಯರ ಮಾತನ್ನೂ ಮೀರಿ ದಾನ ಮಾಡುವ ದಾನಶೂರನಾದ ಬಲಿ , ಶ್ರೀಮನ್ನಾರಾಯಣನ ಕ್ರಪೆಗೂ ಪಾತ್ರನಾಗುತ್ತಾನೆ. ಪ್ರತಿವರ್ಷ ಕಾರ್ತಿಕ ಮಾಸದ ಮೊದಲ ದಿನ ಸಂಜೆ ಬಲಿಂದ್ರ ಭೂಲೋಕಕ್ಕೆ ಬಂದು ಮೂರು ಮುಕ್ಕಾಲು ಗಳಿಗೆ ಇರುತ್ತಾನೆ ಎಂಬುದು ಪ್ರತೀತಿ. ಹೀಗಾಗಿ ಅಂದು ಸಂಧ್ಯಾ ಕಾಲದಲ್ಲಿ ಬಲಿಂದ್ರ ಪೂಜೆ ಮಾಡಲಾಗುತ್ತದೆ. ಕಾರ್ತಿಕ ಪಾಡ್ಯದಿಂದ ಹಿಂದೂಗಳು ಮನೆಯ ಬಾಗಿಲಲ್ಲಿ ಹಾಗೂ ತುಳಸಿಯ ಮುಂದೆ ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಿಡುತ್ತಾರೆ. 
      ಕಾರ್ತಿಕದಲ್ಲಿ ಈ ರೀತಿ ದೀಪ ಹಚ್ಚಿಡುವುದರಿಂದ, ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಕಾರ್ತಿಕದಲ್ಲಿ ಹಚ್ಚಿಟ್ಟ ಜ್ಯೋತಿ ಬೆಳಕು ತೋರುತ್ತದೆ ಎಂಬುದು ಜನಪದರ ನಂಬಿಕೆ . ಕಾರ್ತಿಕ ಪಾಡ್ಯದಂದು ಶ್ರೀಕ್ರಷ್ಣನು  ಕುಂಭ ದ್ರೋಣದಿಂದ ಗೋಕುಲವನ್ನು ಗೋಪಾಲಕರನ್ನೂ ರಕ್ಷಿಸಲು ಗೋವರ್ಧನಗಿರಿಯನ್ನು ಎತ್ತಿದ್ದು. ಹೀಗಾಗಿ ಅಂದು ಗೋಪಾಲನಿಗೆ ಕ್ರತಜ್ನತೆ ಸಲ್ಲಿಸಲು ಗೋವುಗಳ ಪೂಜೆ ನಡೆಯುತ್ತದೆ. 
         ತಾನೇ ಉರಿದರೂ ಊರಿಗೆ ಬೆಳಕು ನೀಡುವ ಪರಂಜ್ಯೋತಿಯನ್ನು ನೋಡುತ್ತಾ ಮನುಷ್ಯ ಸ್ವಾರ್ಥವನ್ನು ಮರೆತು ತಾನೂ ಜ್ಯೋತಿಯಂತೆ ಇತರರಿಗೆ ನೆರವಾಗಲಿ ಎಂಬುದು ಕಾರ್ತಿಕದ ಮಹತ್ವದ ಉದ್ದೇಶ . ಇದುವೇ ಈ ಹಬ್ಬದ ಅಂತರಾರ್ಥ . ಎಲ್ಲರಿಗೂ ಈ ಬೆಳಕಿನ ಹಬ್ಬವು ಸುಖ ಶಾಂತಿ ಸಮ್ರದ್ಧಿಯನ್ನು  ನೀಡಲಿ ಎಂದು ಹಾರೈಸುತ್ತೇವೆ.

Sunday, November 8, 2015

POEM

ಕವನ
ಮುಂಜಾನೆಯ ಸೊಬಗು          
ಮುಂಜಾನೆಯ ಸೊಬಗು
ಎಷ್ಟೊಂದು ಅಂದವು ನೋಡು 
ಬಾ ಇಲ್ಲಿ ತಂಗಿ ನೋಡವ್ವಾ 
             
               ಬಾನಲ್ಲಿ ಕೆಂಪಿನ 
                ಗೆರೆಗಳು ಎಳೆದಾಡಿವೆ
               ಚಂದದ ಗೆರೆಗಳ ನೋಡವ್ವಾ 
ಹಕ್ಕಿ ಚಿಲಿಪಿಲಿ ನಾದ 
ಕೋಗಿಲೆಯ ಸಂಗೀತ 
ಅಂದದ ಗಾನವ ಕೇಳವ್ವಾ 
                ಮರಗಳ ತಂಪು 
                ಗಾಳಿ ಎಷ್ಟು ಮಧುರ 
                ಬಾ ಬೇಗ ಇಲ್ಲಿ ತಂಗ್ಯವ್ವಾ 


ಭಾಸ್ಕರನ ಸೊಬಗು 
ಕಿರಣದ ಬೆಳಕು 
ಬಂದಿಲ್ಲಿ ನೀನು ನೋಡವ್ವಾ 
          ನೀಲಾಕಾಶದಲಿ 
          ಕೇಸರಿಯ ಗೆರೆಗಳು 
          ಎಷ್ಟು ಸೊಬಗಿದು ನೋಡವ್ವಾ 
ಮುಂಜಾನೆಯ ಕೇಸರಿ 
ಮೋಡವು ಇಲ್ಲಿದೆ 
ಬಂದು ನೀನು ನೋಡವ್ವಾ 
                                                           ಮಧುರದ ಸಂಗೀತ 

          ನಾದವು ಇಲ್ಲಿದೆ 
          ಬೇಗ ಬಂದು ನೀನು ಕೇಳವ್ವಾ 
ಬೆಳಗಿನ ಅಂದದ 
ಸೌಂದರ್ಯ ಇಲ್ಲಿದೆ 
ಮುಂಜಾನೆಯ ಸೊಬಗಿದು ತಂಗ್ಯವ್ವಾ

      ರಚನೆ :
  ಸಿಂಜಿತಾ .ಕೆ.    VI A  ತರಗತಿ   
   

Friday, October 30, 2015

CLEAN SCHOOL PROGRAMME

ಕ್ಲೀನ್ ಸ್ಕೂಲ್ ಕಾರ್ಯಕ್ರಮದ ಭಾಗವಾಗಿ ನಮ್ಮ ಶಾಲೆಯಲ್ಲಿ   ಅಕ್ಟೋಬರ್ 2 ರಿಂದ ಒಂದು ತಿಂಗಳ ಕಾಲ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಶಾಲಾ ಪರಿಸರ , ತರಗತಿ, ಮೂತ್ರದೊಡ್ಡಿ, ಟಾಯ್ಲೆಟ್ ,ಅಡುಗೆ ಕೋಣೆ , ಆಪೀಸ್ ಕೋಣೆಗಳನ್ನು ಶುಚಿಗೊಳಿಸಲಾಯಿತು. ಪ್ರತಿದಿನ ಶಾಲಾ ಅಸೆಂಬ್ಲಿಯಲ್ಲಿ  ಒಂದೊಂದು ವಿಷಯದ ಕುರಿತು ಒಬ್ಬೊಬ್ಬ ವಿದ್ಯಾರ್ಥಿಯು ಮಾಹಿತಿ ನೀಡಿದರು. 
08.10.2015 -  ಶ್ರೀ ವೆಂಕಟರಮಣ ಮಾಸ್ಟರ್ ಆರೋಗ್ಯವೇ ಭಾಗ್ಯ ಎಂಬ ವಿಷಯದ ಕುರಿತು ಮಾತನಾಡಿದರು. 
09.10.2015 -  ಶಾಲಾ ನಾಯಕ ಸಾತ್ವಿಕ್ ಕ್ರಷ್ಣ ವ್ಯಕ್ತಿ ಶುಚಿತ್ವದ ಕುರಿತು ಮಾತನಾಡಿದನು. 
12.10.2015 - ಏಳನೇ ತರಗತಿಯ ಮಕ್ಕಳು ಬೇಸ್ತು ಬಿದ್ದ ಈಡು ಎಂಬ ಸ್ಕಿಟ್ ನ್ನು ಪ್ರಸ್ತುತಪಡಿಸಿದರು. 
13.10.2015 - ಶಾಲಾ ಆರೋಗ್ಯ ಕ್ಲಬ್ ನ ಚಟುವಟಿಕೆಗಳ ಬಗ್ಗೆ ದೀಪಕ್ ಮಾತನಾಡಿದನು. 
14.10. 2015- ಡ್ರೈ ಡೇ ಆಚರಿಸುವುದು ಹೇಗೆ ಎಂಬ ವಿಷಯದ ಕುರಿತು ವಿಶ್ವದೀಪ್ ಮಾತನಾಡಿದನು. 
15.10.2015 - Global Handwashing Day ಆಚರಿಸಲಾಯಿತು. ಧರ್ಮತ್ತಡ್ಕ ಕುಟುಂಬ ಕಲ್ಯಾಣ ಕೇಂದ್ರದ ನರ್ಸ್ ಶ್ರೀಮತಿ ಲಕ್ಷ್ಮೀದೇವಿ ಕೈ ತೊಳೆಯುವ ವಿಧಾನವನ್ನು ಹೇಳಿಕೊಟ್ಟರು. 
16.10.2015 - ಜೀವಿಗಳಿನ್ದ ಹರಡುವ ರೋಗಗಳ ಕುರಿತು ಆಶಾಲತಾ ಮಾತನಾಡಿದಳು. 
19.10.2015- ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಎಂಬ ವಿಷಯದ ಕುರಿತು ಅಭಿಷೇಕ್ ಪಿ. ಮಾತನಾಡಿದನು. 
20.10.2015 - ಏಳನೇ ತರಗತಿಯ ಕ್ರತಿಕಾ ವ್ಯಕ್ತಿ ಶುಚಿತ್ವದಲ್ಲಿ ಹಾಸಿಗೆ ಹೊದಿಕೆ ಉಡುಪು ಚಪ್ಪಲಿಗಳ ಬಳಕೆಯ ಕುರಿತು ಮಾತನಾಡಿದಳು. 
26.10.2015 -  ಸೊಳ್ಳೆಗಳಿಂದ ರಕ್ಷಣೆ ನಿರ್ಮೂಲನೆ ಮುಂಜಾಗ್ರತಾ ಕ್ರಮಗಳ ಕುರಿತು ಮೊನಿಷಾ ಮಾತನಾಡಿದಳು 
27.10.2015 - ಪರಿಸರ ಸಂರಕ್ಷಣೆಗಾಗಿ ದಿನಾಚರಣೆಗಳು , ಚಳವಳಿಗಳು , ಯೋಜನೆಗಳು ಎಂಬ ವಿಷಯದ ಕುರಿತು ಚೈತ್ರಾ ಮಾತನಾಡಿದಳು. 
28.10.2015 - ಉತ್ತಮ ಆರೋಗ್ಯಕರ ಅಭ್ಯಾಸಗಳ ಕುರಿತು ರೇಶ್ಮಾ ಮಾತನಾಡಿದಳು. 
29.10.2015- ಮನೆ ,ಸ್ನಾನ ಗ್ರಹ ,ಶೌಚಾಲಯಗಳ ಶುಚೀಕರಣ ದ ಬಗ್ಗೆ ಮುರಲೀಧರ ಮಾತನಾಡಿದನು. 
30.10.2015 - ಆರೋಗ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದ  ಗೀತೆಗಳನ್ನು ಮಕ್ಕಳು ಹಾಡಿದರು. 





SCHOOL KALOTHSAVAM

ಇಂದು ಶಾಲಾ ಕಲೋತ್ಸವದಲ್ಲಿ ಯು ಪಿ ವಿಭಾಗದ ದೇಶಭಕ್ತಿಗೀತೆ, ಸಮೂಹ ಗೀತೆ, ಉರ್ದು ಸಮೂಹ ಗೀತೆ, ಒಪ್ಪನ, ಜಾನಪದನ್ರತ್ಯ , ನಾಟಕ ಮತ್ತು ಸಮೂಹ ನ್ರತ್ಯ ಸ್ಪರ್ಧೆಗಳು ನಡೆದುವು. ಕಲೋತ್ಸವದಲ್ಲಿ ವಿಜಯಿಯಾದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. 
                                                ಐದನೇ ತರಗತಿ ಮಕ್ಕಳಿಂದ ಒಪ್ಪನ 
                                  ವೆಂಕಟರಮಣ ಮಾಸ್ಟರ್  ಸರ್ಟಿಫಿಕೆಟ್ ವಿತರಿಸುತ್ತಿರುವುದು 
                                 ಕಮಲಾಕ್ಷಿ ಟೀಚರ್ ಅವರಿಂದ ಬಹುಮಾನ ವಿತರಣೆ 
                                  ಅರ್ಪಿತಾ ಮತ್ತು ಬಳಗದವರಿಂದ ಸಮೂಹ ನ್ರತ್ಯ
                                          ನಾಟಕದ ವಿವಿಧ  ದ್ರಶ್ಯಗಳು 




                                      ಏಳನೇ ತರಗತಿಯ ಮಕ್ಕಳಿಂದ ಒಪ್ಪನ 

                                                 ಜಾನಪದ ನ್ರತ್ಯ - ಪೂರ್ಣಿಮಾ 
                                                        ಅರುಣ ಕುಮಾರಿ
                                                                  ಕುಮಾರಿ ಸಂಧ್ಯಾ ಪಿ.
                                                   ಕುಮಾರಿ ಮಧುರಾ 
                                                                ಕು. ಮೊನಿಷಾ