ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನಮ್ಮ ಶಾಲೆಯಲ್ಲಿ ದೇಶದ 69 ನೆ ಸ್ವಾತಂತ್ರ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಎಲ್ಲಾ ಮಕ್ಕಳೂ ಅಧ್ಯಾಪಕರು ಹಾಗೂ ರಕ್ಷಕರೂ ಸೇರಿ ಘೋಷಣೆಗಳನ್ನು ಕೂಗುತ್ತಾ ಶಾಲೆಯ ಪರಿಸರದಲ್ಲಿ ಪ್ರಭಾತ ಫೇರಿ ನಡೆಸಿದೆವು. ಬಳಿಕ ಅಸೆಂಬ್ಲಿ ಸೇರಿದೆವು. ಶಾಲಾ ಮುಖ್ಯೋಪಾಧ್ಯಾಯರು ಧ್ವಜಾರೋಹಣ ಗೈದರು. ಮಕ್ಕಳು ಧ್ವಜಗೀತೆ ಹಾಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಪುತ್ತಿಗೆ ಪಂಚಾಯತು ವಾರ್ಡು ಸದಸ್ಯೆ ಕುಮಾರಿ ವಸಂತಿ ಅವರು ಉದ್ಘಾಟಿಸಿದರು. ಪಿ.ಟಿ.ಎ. ಅಧ್ಯಕ್ಷರಾದ ಶ್ರೀ ಜೋನ್ ಡಿ ಸೋಜ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಮೇನೇಜರ್ ಶ್ರೀಮತಿ ವಿಜಯಶ್ರೀ ಸ್ವಾತಂತ್ರ್ಯೋತ್ಸವದ ಶುಭಾಶಯ ಹೇಳಿದರು. ಉಪಜಿಲ್ಲಾ ಮಟ್ಟದ ಸ್ವಾತಂತ್ರ್ಯ ರಸಪ್ರಶ್ನೆಯಲ್ಲಿ ಪ್ರಥಮ ಬಹುಮಾನ ಪಡೆದ ಮಕ್ಕಳಿಗೆ ವಾರ್ಡು ಸದಸ್ಯೆ ಟ್ರೋಫಿಯನ್ನು ವಿತರಿಸಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜಯಿಯಾದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಮಕ್ಕಳಿಂದ ಭಾಷಣ ದೇಶಭಕ್ತಿಗೀತೆ ಮೊದಲಾದ ಕಾರ್ಯಕ್ರಮಗಳು ನಡೆದುವು. ಶಾಲಾ ಅಧ್ಯಾಪಕ ಶ್ರೀ ರಾಮಮೋಹನ ಮಾಸ್ತರು ಸ್ವಾತಂತ್ರ್ಯ ಹೋರಾಟದ ಕತೆಯನ್ನು ಮಕ್ಕಳಿಗೆ ಮನಮುಟ್ಟುವಂತೆ ಹೇಳಿದರು. ಆರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಾಪಕ ಶಂಕರನಾರಾಯಣ ಭಟ್ ವಂದಿಸಿದರು . ಶ್ರೀನಿವಾಸ ಮಾಸ್ಟರು ಕಾರ್ಯಕ್ರಮ ನಿರೂಪಿಸಿದರು. ಜೈ ಬ್ರಹ್ಮ ಮೊಗೇರ ಸಂಘ ಕಕ್ವೆ ಕನಿಯಾಲತ್ತಡ್ಕ ಇವರು ಮಿಠಾಯಿಯನ್ನೂ ರಕ್ಷಕರಾದ ಅಬ್ದುಲ್ ರಹಿಮಾನ್ ಸುಬ್ಬಯಕಟ್ಟೆ ಲಾಡನ್ನೂ ವಿತರಿಸಿದರು. ಜನ ಗಣ ಮನ ದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು

ಮೂರನೆ ತರಗತಿ ಮಕ್ಕಳಿಂದ ದೇಶಭಕ್ತಿ ಗೀತೆ
ಏಳನೇ ತರಗತಿ ಮಕ್ಕಳಿಂದ ದೇಶಭಕ್ತಿ ಗೀತೆ
ಪ್ರಭಾತ ಫೇರಿ
ಶಾಲಾ ಮುಖ್ಯೋಪಾಧ್ಯಾಯರಿಂದ ಧ್ವಜಾರೋಹಣ
ವಾರ್ಡು ಸದಸ್ಯೆ ಕುಮಾರಿ ವಸಂತಿ ಅವರಿಂದ ಉದ್ಘಾಟನಾ ಭಾಷಣ
ಉಪಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಟ್ರೋಫಿ ವಿತರಣೆ
ಸ್ವಾತಂತ್ರ್ಯ ಕತೆಯನ್ನು ಹೇಳುತ್ತಿರುವ ರಾಮಮೋಹನ ಮಾಸ್ಟರ್
ಶಾಲಾ ವಿದ್ಯಾರ್ಥಿ ನಾಯಕನಿಂದ ಭಾಷಣ
ಎರಡನೆ ತರಗತಿ ಪುಟಾಣಿ ಮನೋಜ್ಞ ಳಿಂದ ಭಾಷಣ
ಶಾಲಾ ಮೆನೇಜರ್ ಅವರಿಂದ ಶುಭ ಹಾರೈಕೆ
ಪಿ.ಟಿ.ಎ. ಅಧ್ಯಕ್ಷರಿಂದ ಭಾಷಣ
ಧನ್ಯವಾದ ಸಮರ್ಪಣೆ
ಪ್ರಭಾತ ಫೇರಿಯ ರಸನಿಮಿಷಗಳು
ಶಾಲಾ ಅಸೆಂಬ್ಲಿಯಲ್ಲಿ ಧ್ವಜಗೀತೆಯ ಗಾಯನ
ಸಮಾರಂಭವನ್ನು ವೀಕ್ಷಿಸುತ್ತಿರುವ ಪುಟಾಣಿ ಮಕ್ಕಳು
No comments:
Post a Comment