FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Tuesday, June 21, 2016

INTERNATIONAL YOGA DAY

 ನಮ್ಮ ಶಾಲೆಯಲ್ಲಿ ದಿನಾಂಕ 21-06-2016ನೇ ಮಂಗಳವಾರ ಎರಡನೇ ಅಂತರ ರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕುರುಡಪದವು ಶಾಲೆಯ ನಿವೃತ್ತ ಅಧ್ಯಾಪಕ ಶ್ರೀ ಕುರಿಯ ಕೃಷ್ಣ ಭಟ್ ಅವರು ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ  ಉದ್ಘಾಟಿಸಿದರು. 



ಯೋಗದ ಮಹತ್ವದ ಬಗ್ಗೆ ಮಕ್ಕಳಿಗೆ ವಿವರವಾಗಿ ತಿಳಿಸಿದರು . ಮಕ್ಕಳಿಂದ ಕೆಲವು ಯೋಗಾಭ್ಯಾಸಗಳನ್ನು ಮಾಡಿಸಿದರು. ಇನ್ನು ಕೆಲವು ಆಸನ ಗಳನ್ನು  ಅವರು ಮಾಡಿ ತೋರಿಸಿದರು . 



                      Welcome speech by Shrinivasa Sir
                                     Prayer  by Students

                        Presidential Address by Headmaster
Vote of thanks by Krishna Prasad.K

READING WEEK

ದಿನಾಂಕ 20-06-2016 ನೇ ಸೋಮವಾರ  ಕೇರಳ ಗ್ರಂಥ ಶಾಲಾ ಸಂಘದ ಸ್ಥಾಪಕರಾದ ದಿ .ಪಿ.ಎಂ.ಪಣಿಕ್ಕರ್ ಅವರ ನೆನಪಿಗಾಗಿ ವಾಚನಾ ದಿನವನ್ನಾಗಿ ಆಚರಿಸಲಾಯಿತು. ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಅಧ್ಯಾಪಕರಾದ ಶ್ರೀ ಅಶೋಕ್ ಕುಮಾರ್ ಪಿ. ಅವರು ಕಾರ್ಯಕ್ರಮವನ್ನು ಔಪಚಾರಿಕವಾಗಿ  ಉದ್ಘಾಟಿಸಿದರು.
ಅದರ ಜೊತೆಗೆ ಶಾಲೆಯ ವಿವಿಧ ಕ್ಲಬ್ ಗಳನ್ನು ಅವರು ಉದ್ಘಾಟಿಸಿದರು. 
ಶಾಲಾ ಮುಖ್ಯೋಪಾಧಾಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ಆರ್.ಜಿ. ಸಂಚಾಲಕ ಶ್ರೀನಿವಾಸ ಮಾಸ್ಟರ್ ಸ್ವಾಗತಿಸಿದರು. 
                        ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು. 
 ಸಹಾಯಕ ಅಧ್ಯಾಪಕ ಶಂಕರನಾರಾಯಣ ಭಟ್ ವಿವಿಧ ಕ್ಲಬ್ ಗಳ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು. ವಿದ್ಯಾರಂಗದ ಸಂಚಾಲಕ ನರೇಶ್ ಮಾಸ್ಟರ್ ವಂದನಾರ್ಪಣೆಗೈದರು . ಶಾಲಾ ಅಧ್ಯಾಪಕ ರಾಮಮೋಹನ್ ಸಿ. ಯಚ್ ಕಾರ್ಯಕ್ರಮವನ್ನು ನಿರೂಪಿಸಿದರು. ಈ ವರ್ಷದ ವಾಚನಾ ಸಪ್ತಾಹದಲ್ಲಿ ಪುಸ್ತಕ ವಿತರಣೆ, ಸಾರ್ವಜನಿಕ ಗ್ರಂಥಾಲಯಕ್ಕೆ  ಭೇಟಿ , ಉತ್ತಮ ಓದುಗರ ಆಯ್ಕೆ, ಸಾಹಿತ್ಯ ರಸಪ್ರಶ್ನೆ ಮೊದಲಾದ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಇವಿಧ ಕ್ಲಬ್ ಗಳ ಪದಾಧಿಕಾರಿಗಳು ಈ ವರ್ಷ ಕ್ಲಬ್ ಗಳು ನಡೆಸುವ ವಿವಿಧ ಚಟುವಟಿಕೆಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. 

Monday, June 20, 2016

PAYAR LAB

ಅಂತರ ರಾಷ್ಟ್ರೀಯ ದ್ವಿದಳ ಧಾನ್ಯ   ವರ್ಷಾಚರಣೆಯ ಭಾಗವಾಗಿ ನಮ್ಮ ಶಾಲೆಯಲ್ಲಿ ತಯಾರಿಸಿದ PAYAR LAB. ಶಾಲಾ ವಿಜ್ಞಾನ ಸಂಘದ ಸಂಚಾಲಕಿ  ಸೌಮ್ಯ ಶಂಕರಿ ಟೀಚರ್ ಹಾಗೂ ವಿಜ್ಞಾನ ಅಧ್ಯಾಪಕಿ ಕಮಲಾಕ್ಷಿ ಟೀಚರ್ ಇದನ್ನು  ನಿರ್ಮಿಸಲು ಸಹಕರಿಸಿದರು. PAYAR LAB ನ್ನು ಶಾಲಾ ಮುಖ್ಯೋಪಾಧ್ಯಾಯರಾದ ಯನ್ . ಮಹಾಲಿಂಗ ಭಟ್ ಅವರು ಉದ್ಘಾಟಿಸಿದರು. 

ಮಕ್ಕಳು ವಿವಿಧ ದ್ವಿದಳ ಧಾನ್ಯಗಳನ್ನು ವೀಕ್ಷಿಸುತ್ತಿರುವುದು

Tuesday, June 14, 2016

ಬಯಲು ಪ್ರವಾಸ 
ಎರಡನೆ ತರಗತಿಯ ಮಕ್ಕಳು ಹಳ್ಳಿಯ ಸೊಬಗು ಎಂಬ ಪಾಠಕ್ಕೆ ಸಂಬಂಧಿಸಿ ಇಂದು ಬಯಲು ಪ್ರವಾಸ ಕೈಗೊಂಡರು . ಶಾಲಾ ಪರಿಸರದಲ್ಲಿ ಸುತ್ತಾಡಿ ಗುಡ್ಡ , ಬೆಟ್ಟ,  ಹಳ್ಳ ,  ಕೊಳ , ದೂರದಲ್ಲಿ ಕಾಣುವ ಸಮುದ್ರ , ತೆಂಗಿನ ತೋಟ , ಅಡಿಕೆ ತೋಟ ,ಹಕ್ಕಿಗಳ ಚಿಟ್ಟೆಗಳ  ಹಾರಾಟ   ಹಾಗೂ  ಇಂಚರ  ಇತ್ಯಾದಿ ಹಳ್ಳಿಯ ಸೊಬಗನ್ನು ಸವಿದರು.

 

BLOOD DONATION DAY

ಜಾಗತಿಕ ರಕ್ತದಾನ ದಿನ 
ಪ್ರತಿವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವಾಗಿ ಆಚರಿಸಲಾಗುತ್ತದೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕೊಡುವುದಕ್ಕೆ ರಕ್ತದಾನ ಎನ್ನುವರು . ರಕ್ತಕ್ಕೆ  ವರ್ಷ ಇಡೀ ಬೇಡಿಕೆ ಇರುತ್ತದೆ. ಯಾಕೆಂದರೆ ಅಪಘಾತಗಳು ತುರ್ತು ಶಸ್ತ್ರ ಚಿಕಿತ್ಸೆ ಇತ್ಯಾದಿ ಸಂದರ್ಭಗಳಲ್ಲಿ ರಕ್ತದ ಅಗತ್ಯ ಇರುತ್ತದೆ . ಅಲ್ಲದೆ ಅರ್ಬುದ , ಹಿಮೋಫೀಲಿಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35  ರಿಂದ 40 ದಿನಗಳ ವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ .  ಆ ಬಳಿಕ  ಉಪಯೋಗಕ್ಕೆ ಬರುವುದಿಲ್ಲ. ಆದುದರಿಂದ ಜನರು ಆಗಾಗ  ರಕ್ತದಾನ ಮಾಡಿದಲ್ಲಿ ಮಾತ್ರ ನಿರಂತರವಾಗಿ ಆವಶ್ಯಕತೆ ಇರುವವರಿಗೆ ರಕ್ತ ನೀಡಿ ಜೀವ ಉಳಿಸಲು ಸಾಧ್ಯವಾಗುತ್ತದೆ. 18 ರಿಂದ 60 ವರ್ಷದ ಒಳಗಿರುವ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು . ಗಂಡಸರು ಮೂರು ತಿಂಗಳಿಗೆ ಒಮ್ಮೆ ಮತ್ತು ಹೆಂಗಸರು ಆರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು . 
   ರಕ್ತದಾನ ಮಾಡುವುದರಿಂದ ದಾನಿಯ ರಕ್ತದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಸಿಗುತ್ತದೆ . ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಕಾರ್ಯ ತತ್ಪರತೆ , ಜ್ಞಾಪಕ ಶಕ್ತಿ ವ್ರದ್ಧಿಯಾಗುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡಲು ಸಹಾಯವಾಗುತ್ತದೆ. 
ರಕ್ತದಾನ ಮಹಾದಾನ. ರಕ್ತದಾನ ಮಾಡಿ ಜೀವ ದಾನ ನೀಡಿ.
ನಮ್ಮ ಶಾಲೆಯಲ್ಲಿ ರಕ್ತದಾನ ದಿನವಾದ ಇಂದು ಶಾಲಾ ಅಸೆಂಬ್ಲಿಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿ  ಸಿಂಜಿತಾ  ರಕ್ತದಾನದ ಮಹತ್ವದ ಬಗ್ಗೆ ಭಾಷಣ ಮಾಡಿದಳು. ಮಧುರಾ ಪಿ. ರಕ್ತದ ಆರೋಗ್ಯದಲ್ಲಿ  ದ್ವಿದಳ ಧಾನ್ಯಗಳ ಪಾತ್ರ ಎಂಬ ವಿಷಯದ  ಬಗ್ಗೆ  ಸೆಮಿನಾರ್ ಮಂಡಿಸಿದಳು. ಶಾಲಾ ವಿಜ್ಞಾನ ಸಂಘ ಇದಕ್ಕೆ ನೇತ್ರತ್ವ ನೀಡಿತು. 

Wednesday, June 8, 2016

KASEPF ACCOUNT CLOSURE

ಸೇವೆಯಿಂದ ನಿವ್ರತ್ತಿ ಹೊಂದಿದ ಅಧ್ಯಾಪಕರ KASEPF A/C Final Settlement Bill ನ್ನು ಮಾನ್ಯುವಲ್ ಆಗಿ ಕಳುಹಿಸುವ ದಿನಾಂಕವನ್ನು ಜೂನ್  ತಿಂಗಳ 30 ನೆ ತಾರೀಕಿನ ತನಕ ವಿಸ್ತರಿಸಲಾಗಿದೆ.

TEXT BOOK INDENT

TEXT BOOK VOL.II  ನ್ನು EDIT ಮಾಡಲು ಇನ್ನೊಂದು ಅವಕಾಶ ಇದೆ.  ಜೂನ್ 13ರ ಮೊದಲು  It@School website ನಲ್ಲಿ Text Book Monitoring system 2016-17 ಎಂಬ ಲಿಂಕ್ ನಲ್ಲಿ ಕ್ಲಿಕ್ ಮಾಡಿ sampoorna ದ User Name and Password ಹಾಕಿ ಪ್ರತಿಯೊಂದು ತರಗತಿಯ Text Book Vol II  ನ್ನು ಎಡಿಟ್ ಮಾಡಬಹುದು