ದಿನಾಂಕ 20-06-2016 ನೇ ಸೋಮವಾರ ಕೇರಳ ಗ್ರಂಥ ಶಾಲಾ ಸಂಘದ ಸ್ಥಾಪಕರಾದ ದಿ .ಪಿ.ಎಂ.ಪಣಿಕ್ಕರ್ ಅವರ ನೆನಪಿಗಾಗಿ ವಾಚನಾ ದಿನವನ್ನಾಗಿ ಆಚರಿಸಲಾಯಿತು. ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಅಧ್ಯಾಪಕರಾದ ಶ್ರೀ ಅಶೋಕ್ ಕುಮಾರ್ ಪಿ. ಅವರು ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
ಅದರ ಜೊತೆಗೆ ಶಾಲೆಯ ವಿವಿಧ ಕ್ಲಬ್ ಗಳನ್ನು ಅವರು ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧಾಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ಆರ್.ಜಿ. ಸಂಚಾಲಕ ಶ್ರೀನಿವಾಸ ಮಾಸ್ಟರ್ ಸ್ವಾಗತಿಸಿದರು.
ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು.
ಸಹಾಯಕ ಅಧ್ಯಾಪಕ ಶಂಕರನಾರಾಯಣ ಭಟ್ ವಿವಿಧ ಕ್ಲಬ್ ಗಳ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು. ವಿದ್ಯಾರಂಗದ ಸಂಚಾಲಕ ನರೇಶ್ ಮಾಸ್ಟರ್ ವಂದನಾರ್ಪಣೆಗೈದರು . ಶಾಲಾ ಅಧ್ಯಾಪಕ ರಾಮಮೋಹನ್ ಸಿ. ಯಚ್ ಕಾರ್ಯಕ್ರಮವನ್ನು ನಿರೂಪಿಸಿದರು. ಈ ವರ್ಷದ ವಾಚನಾ ಸಪ್ತಾಹದಲ್ಲಿ ಪುಸ್ತಕ ವಿತರಣೆ, ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ , ಉತ್ತಮ ಓದುಗರ ಆಯ್ಕೆ, ಸಾಹಿತ್ಯ ರಸಪ್ರಶ್ನೆ ಮೊದಲಾದ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಇವಿಧ ಕ್ಲಬ್ ಗಳ ಪದಾಧಿಕಾರಿಗಳು ಈ ವರ್ಷ ಕ್ಲಬ್ ಗಳು ನಡೆಸುವ ವಿವಿಧ ಚಟುವಟಿಕೆಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.

No comments:
Post a Comment