FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, December 5, 2014

SCIENCE EXPRESS IN KASARAGOD



           ಮಕ್ಕಳಲ್ಲಿ ಅಧ್ಯಾಪಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ವಿಜ್ಞಾನ ಪ್ರದರ್ಶನದೊಂದಿಗೆ ಭಾರತದಾದ್ಯಂತ ಸಂಚರಿಸುವ ಸೈನ್ಸ್  ಎಕ್ಸ್ ಪ್ರೆಸ್ ಬಯೋಡೈವರ್ಸಿಟಿ ಸ್ಪೆಶಲ್ ಟ್ರೈನ್ (SEBS) ಕಾಸರಗೋಡಿಗೆ ತಲುಪಿದೆ. 2007 ರಲ್ಲಿ ಆರಂಭಿಸಿದ ಈ ರೈಲುಗಾಡಿ ಹದಿನಾರು ಹವಾನಿಯಂತ್ರಿತ ಬೋಗಿಗಳೊಂದಿಗೆ ಭಾರತದ ನಾನಾ ಕಡೆ ಸಂಚರಿಸಿದೆ. ರೈಲುಗಾಡಿಯ ಹದಿನಾರು ಬೋಗಿಗಳ  ಪೈಕಿ ಎಂಟರಲ್ಲಿ ಭಾರತದ ಅತ್ಯಪೂರ್ವವಾದ ಜೀವ ವೈವಿಧ್ಯಗಳನ್ನು ಪರಿಚಯಿಸುತ್ತದೆ . ವಿವಿಧ ಸೂಕ್ಷ್ಮ ಜೀವಿಗಳು, ಹಿಮಾಲಯ ಸಾನುಗಳು , ಭಾರತದ ಅರಣ್ಯ ಮತ್ತು ಕ್ರಷಿ ಪ್ರದೇಶಗಳು, ಪಶ್ಚಿಮ ಘಟ್ಟ , ಡೆಕ್ಕನ್ ಪೀಠಭೂಮಿ , ಕರಾವಳಿ ಪ್ರದೇಶ, ಗಂಗಾ ನದೀತೀರ ಪ್ರದೇಶ, ಅತ್ಯಪೂರ್ವವಾದ ಅಪಾಯಕಾರಿ ಕ್ರಿಮ್ಸನ್ ಚಿಟ್ಟೆಗಳು,ಐದು ವಿಧದ ಕಡಲಾಮೆಗಳು ಮತ್ತು ಅವುಗಳ ಮಾದರಿಗಳು,ಈಶಾನ್ಯ ಭಾಗದ ಜನಜೀವನ ಇತ್ಯಾದಿಗಳನ್ನು ಅಳವಡಿಸಿದ್ದಾರೆ . ಕೇರಳ,ಲಕ್ಷದ್ವೀಪ ಅಂಡಮಾನ್ ನಿಕೋಬಾರ್, ತಮಿಳಿನಾಡು ಗುಜರಾತ್,ಪಶ್ಚಿಮ ಬಂಗಾಳ ಮುಂತಾದ ತೀರ ಪ್ರದೇಶಗಳಲ್ಲಿ ಕಂಡು ಬರುವ ವಿವಿಧ ಜೀವ ಜಂತುಗಳನ್ನು ಬಟನ್ ಒತ್ತುವ ಮೂಲಕ ಮಕ್ಕಳಿಗೆ ಸುಲಭದಲ್ಲಿ ತಿಳಿದುಕೊಳ್ಳಲು  ಸಾಧ್ಯವಾಗುವಂತೆ ವ್ಯವಸ್ಥೆಗೊಳಿಸಲಾಗಿದೆ . 
           ಭಾರತದ ನಾನಾ ರಾಜ್ಯಗಳ ಜಾನುವಾರುಗಳ ಚಿತ್ರಗಳು , ನಾಯಿ,ಕೋಳಿ ,ಆಡು ಸಾಕಣೆ,ಆದಿವಾಸಿ ಜೀವನಗಳನ್ನು ಪ್ರತಿಬಿಂಬಿಸುವ ಚಿತ್ರಗಳು ಆಕರ್ಷಣಿಯವಾಗಿದೆ. ಕರಾವಳಿ ದ್ವೀಪಗಳಲ್ಲಿ ಕಂಡುಬರುವ ವಿವಿಧ ತರದ ಚಿಪ್ಪುಗಳು,ಕೇರಳದಲ್ಲಿ ಮಾತ್ರ ಕಂಡುಬರುವ ಅಪರೂಪದ ಜೈಂಟ್ ರಾಬರ್ ಕ್ರ್ಯಾಬ್ ಗಳ ಚಿತ್ರ,ಮೀನು,ಏಡಿ,ಆಮೆಗಳನ್ನು ಹಿಡಿಯಲು ಉಪಯೋಗಿಸುವ ಬಲೆಗಳ ಚಿತ್ರಗಳು ಇವೆ. ವಿವಿಧ ಮಾದರಿಯಲ್ಲಿ ಮಳೆ ನೀರು ಸಂಗ್ರಹಿಸುವ ವಿಧಾನ,ಅದನ್ನು ಶುದ್ದೀಕರಿಸುವ ವಿಧಾನ , ಇಕೋ ಫ್ರೆಂಡ್ಲಿ ಮನೆ ನಿರ್ಮಾಣ ಮಾದರಿ, ಎನೆರ್ಜಿ ಎಫಿಸೆನ್ಸಿ ಮನೆ, ತ್ಯಾಜ್ಯ ವಿಲೇವಾರಿ ಘಟಕ , ಪೆಟ್ರೋಲಿಯಂ ಘಟಕ, ಇಂಧನ ಉಪಯೋಗ , ಮೊದಲಾದವುಗಳನ್ನು ಮನದಟ್ಟು ಮಾಡುವ ಮಾಡೆಲ್ ಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ . 2007 ರಲ್ಲಿ ಆರಂಭಗೊಂಡ ಈ ಪ್ರದರ್ಶನ ಮೇಳ ಈ ತನಕ ಭಾರತದ ಒಟ್ಟಾರೆ 11500 KM ದೂರ ಸಂಚರಿಸಿದೆ.

No comments:

Post a Comment