ಇಂದು ಭಾರತದ ಪ್ರಸಿದ್ಧ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ. ಪ್ರತಿ ವರ್ಷವೂ ಅವರ ಜನ್ಮ ದಿನವನ್ನು ಗಣಿತ ಶಾಸ್ತ್ರ ದಿನವಾಗಿ ಆಚರಿಸಲಾಗುವುದು. ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅಯ್ಯಂಗಾರ್ ಅಥವಾ ಜನಪ್ರಿಯವಾಗಿ
ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು 1887ರ ಡಿಸೆಂಬರ್ 22 ರಂದು
ತಮಿಳುನಾಡಿನ ಈರೋಡಿನಲ್ಲಿದ್ದ ತಮ್ಮ ತಾತನ ಮನೆಯಲ್ಲಿ ಜನ್ಮ ತಳೆದರು. ರಾಮಾನುಜನ್ನರ
ತಂದೆ ಬಟ್ಟೆ ಅಂಗಡಿಯಲ್ಲಿ ಒಬ್ಬ ಗುಮಾಸ್ತರಾಗಿದ್ದರು. ತಾಯಿ ಅಪಾರ ದೈವ
ಶ್ರದ್ಧಾಭಕ್ತಿಗಳಿದ್ದ ಮಹಿಳೆ.ಬಾಲ್ಯದಲ್ಲಿ ರಾಮಾನುಜನ್ನರು ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು. ಐದನೆಯ ವಯಸ್ಸಿಗೆ ಶಾಲೆಗೆ ಸೇರಿದ ಅವರಿಗೆ ಪ್ರತಿಯೊಂದರಲ್ಲೂ ಕಲಿಕೆಯ ಕುತೂಹಲವಿತ್ತು. ರಾಮಾನುಜನ್ ಅವರಿಗೆ ಗಣಿತದ ಹೊರತಾಗಿ ಇನ್ನ್ಯಾವುದೇ ವಿಷಯಗಳ ಕುರಿತಾಗಿ ಕಿಂಚಿತ್ತೂ ಆಸಕ್ತಿ ಹುಟ್ಟಲಿಲ್ಲ. ಗಣಿತ ಕ್ಷೇತ್ರದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ. ಅದರಲ್ಲಿ ಮುಖ್ಯವಾದುದು :
- ಅವಿಭಾಜ್ಯ ಸಂಖ್ಯೆಗಳ ಬಗ್ಗೆ ಸಂಶೋಧನೆ
- ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ
- ರಾಮಾನುಜನ್ ಊಹೆ
- ರಾಮಾನುಜನ್-ಪೀಟರ್ಸನ್ ಊಹೆ 1729 ಎಂಬ ಸಂಖ್ಯೆಯನ್ನು ರಾಮಾನುಜನ್ ಸಂಖ್ಯೆ ಎಂದೇ ಕರೆಯಲಾಗುತ್ತದೆ . ಯಾಕೆಂದರೆ ಈ ಸಂಖ್ಯೆಯನ್ನು ಎರಡು ವ್ಯತ್ಯಸ್ತ ರೀತಿಯಲ್ಲಿ ಎರಡು ಬೇರೆ ಬೇರೆ ಸಂಖ್ಯೆಗಳ ಮೂರನೇ ಘಾತಗಳ ಮೊತ್ತವಾಗಿ ಬರೆಯಬಹುದಾದ ಏಕೈಕ ಸಂಖ್ಯೆಯಾಗಿದೆ ಎಂದು ಅವರು ಕಂಡುಹಿಡಿದರು.
No comments:
Post a Comment