FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Tuesday, June 14, 2016

BLOOD DONATION DAY

ಜಾಗತಿಕ ರಕ್ತದಾನ ದಿನ 
ಪ್ರತಿವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವಾಗಿ ಆಚರಿಸಲಾಗುತ್ತದೆ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕೊಡುವುದಕ್ಕೆ ರಕ್ತದಾನ ಎನ್ನುವರು . ರಕ್ತಕ್ಕೆ  ವರ್ಷ ಇಡೀ ಬೇಡಿಕೆ ಇರುತ್ತದೆ. ಯಾಕೆಂದರೆ ಅಪಘಾತಗಳು ತುರ್ತು ಶಸ್ತ್ರ ಚಿಕಿತ್ಸೆ ಇತ್ಯಾದಿ ಸಂದರ್ಭಗಳಲ್ಲಿ ರಕ್ತದ ಅಗತ್ಯ ಇರುತ್ತದೆ . ಅಲ್ಲದೆ ಅರ್ಬುದ , ಹಿಮೋಫೀಲಿಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35  ರಿಂದ 40 ದಿನಗಳ ವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ .  ಆ ಬಳಿಕ  ಉಪಯೋಗಕ್ಕೆ ಬರುವುದಿಲ್ಲ. ಆದುದರಿಂದ ಜನರು ಆಗಾಗ  ರಕ್ತದಾನ ಮಾಡಿದಲ್ಲಿ ಮಾತ್ರ ನಿರಂತರವಾಗಿ ಆವಶ್ಯಕತೆ ಇರುವವರಿಗೆ ರಕ್ತ ನೀಡಿ ಜೀವ ಉಳಿಸಲು ಸಾಧ್ಯವಾಗುತ್ತದೆ. 18 ರಿಂದ 60 ವರ್ಷದ ಒಳಗಿರುವ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು . ಗಂಡಸರು ಮೂರು ತಿಂಗಳಿಗೆ ಒಮ್ಮೆ ಮತ್ತು ಹೆಂಗಸರು ಆರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು . 
   ರಕ್ತದಾನ ಮಾಡುವುದರಿಂದ ದಾನಿಯ ರಕ್ತದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಸಿಗುತ್ತದೆ . ದೇಹದಲ್ಲಿ ಹೊಸ ರಕ್ತ ಚಾಲನೆಯಿಂದ ಕಾರ್ಯ ತತ್ಪರತೆ , ಜ್ಞಾಪಕ ಶಕ್ತಿ ವ್ರದ್ಧಿಯಾಗುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡಲು ಸಹಾಯವಾಗುತ್ತದೆ. 
ರಕ್ತದಾನ ಮಹಾದಾನ. ರಕ್ತದಾನ ಮಾಡಿ ಜೀವ ದಾನ ನೀಡಿ.
ನಮ್ಮ ಶಾಲೆಯಲ್ಲಿ ರಕ್ತದಾನ ದಿನವಾದ ಇಂದು ಶಾಲಾ ಅಸೆಂಬ್ಲಿಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿ  ಸಿಂಜಿತಾ  ರಕ್ತದಾನದ ಮಹತ್ವದ ಬಗ್ಗೆ ಭಾಷಣ ಮಾಡಿದಳು. ಮಧುರಾ ಪಿ. ರಕ್ತದ ಆರೋಗ್ಯದಲ್ಲಿ  ದ್ವಿದಳ ಧಾನ್ಯಗಳ ಪಾತ್ರ ಎಂಬ ವಿಷಯದ  ಬಗ್ಗೆ  ಸೆಮಿನಾರ್ ಮಂಡಿಸಿದಳು. ಶಾಲಾ ವಿಜ್ಞಾನ ಸಂಘ ಇದಕ್ಕೆ ನೇತ್ರತ್ವ ನೀಡಿತು. 

Wednesday, June 8, 2016

KASEPF ACCOUNT CLOSURE

ಸೇವೆಯಿಂದ ನಿವ್ರತ್ತಿ ಹೊಂದಿದ ಅಧ್ಯಾಪಕರ KASEPF A/C Final Settlement Bill ನ್ನು ಮಾನ್ಯುವಲ್ ಆಗಿ ಕಳುಹಿಸುವ ದಿನಾಂಕವನ್ನು ಜೂನ್  ತಿಂಗಳ 30 ನೆ ತಾರೀಕಿನ ತನಕ ವಿಸ್ತರಿಸಲಾಗಿದೆ.

TEXT BOOK INDENT

TEXT BOOK VOL.II  ನ್ನು EDIT ಮಾಡಲು ಇನ್ನೊಂದು ಅವಕಾಶ ಇದೆ.  ಜೂನ್ 13ರ ಮೊದಲು  It@School website ನಲ್ಲಿ Text Book Monitoring system 2016-17 ಎಂಬ ಲಿಂಕ್ ನಲ್ಲಿ ಕ್ಲಿಕ್ ಮಾಡಿ sampoorna ದ User Name and Password ಹಾಕಿ ಪ್ರತಿಯೊಂದು ತರಗತಿಯ Text Book Vol II  ನ್ನು ಎಡಿಟ್ ಮಾಡಬಹುದು

ENVIRONMENT DAY PLEDGE

ವಿಶ್ವ ಪರಿಸರ ದಿನದ ಭಾಗವಾಗಿ ಅಮ್ಮ ಶಾಲಾ ಅಸೆಂಬ್ಲಿಯಲ್ಲಿ ಮಕ್ಕಳು ಹಾಗೂ ಅಧ್ಯಾಪಕರು ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಜ್ಞೆ ಗೈದೆವು . ಶಾಲಾ ಮುಖ್ಯೋಪಾಧ್ಯಾಯರು ಪ್ರತಿಜ್ಞೆ ಬೋಧಿಸಿದರು. " ಪರಿಸರ, ವನ,ವನ್ಯಜೀವಿಗಳು, ಹೊಳೆ , ನದಿಗಳು, ತಣ್ಣೀರು ತಟಾಕಗಳುಇತ್ಯಾದಿಗಳನ್ನು ಸಂರಕ್ಷಿಸುವುದು ನನ್ನ ಮೂಲಭೂತ ಕರ್ತವ್ಯವಾಗಿದೆ . ಎಲ್ಲಾ ಜೀವ ಜಾಲಗಳ ಬಗ್ಗೆ ನನಗೆ ಸಹಾನುಭೂತಿಯಿದೆ .ಕಾಡು, ವನ್ಯಜೀವಿಗಳ ಮೇಲೆ ಉಂಟಾಗುವ ದುಷ್ಕ್ರತ್ಯಗಳಾಗಲೀ  ಅನಧಿಕ್ರತ ವ್ಯಾಪಾರವಾಗಲೀ ನನ್ನ ಗಮನಕ್ಕೆ ಬಂದರೆ ಕೂಡಲೆ ಅರಣ್ಯಾಧಿಕಾರಿಗಳಿಗೆ ತಿಳಿಸುತ್ತೇನೆ .ಪರಿಸರ, ಕಾಡು ,ವನ್ಯಜೀವಿಗಳು , ನೀರಿನ ತಟಾಕಗಳು ಇತ್ಯಾದಿಗಳನ್ನು ಸಂರಕ್ಷಿಸುತ್ತೇನೆಂದೂ   ವನ್ಯಜೀವಿಗಳ ಯಾವುದೇ ರೀತಿಯ ಅನಧಿಕ್ರತ ಉತ್ಪನ್ನಗಳನ್ನು ಎಂದಿಗೂ ನಾನು ಉಪಯೋಗಿಸುವುದಿಲ್ಲ ಎಂದೂ  ಈ ಮೂಲಕ ಪ್ರತಿಜ್ಞೆ  ಗೈಯುತ್ತೇನೆ ". ಬಳಿಕ ಎಲ್ಲಾ ತರಗತಿಗಳಲ್ಲಿ ಪರಿಸರ ದಿನದ ಕುರಿತು ಘೋಷಣಾ ವಾಕ್ಯಗಳು, ಪೋಸ್ಟರ್ , ಚಿತ್ರರಚನೆ ಮೊದಲಾದ ಚಟುವಟಿಕೆಗಳನ್ನು ನಡೆಸಲಾಯಿತು. 

Thursday, June 2, 2016

HEALTH PLEDGE

ಕೇರಳ ರಾಜ್ಯದ ಆರೋಗ್ಯ ಇಲಾಖೆ ಜ್ಯಾರಿಗೊಳಿಸಿದ ಸಾಂಕ್ರಾಮಿಕ ರೋಗ ನಿಯಂತ್ರಣ ಯಜ್ಞದ ಭಾಗವಾಗಿ ಶಾಲಾ ಆರೋಗ್ಯ ಸಂಘದ ನೇತ್ರತ್ವದಲ್ಲಿ ಪರಿಸರ ಶುಚೀಕರಣದ ಕುರಿತು  ಪ್ರತಿಜ್ಞೆ ಗೈಯಲಾಯಿತು .

SCHOOL PRAVESHOTSAVAM 2016

ಶಾಲಾ ಪ್ರವೇಶೋತ್ಸವ 
ನಮ್ಮ ಶಾಲಾ ಪ್ರವೇಶೋತ್ಸವವು ಬಹಳ ಸಂಭ್ರಮದಿಂದ  ನಡೆಯಿತು. ಹೊಸತಾಗಿ ಶಾಲೆಗೆ  ದಾಖಲಾದ ಮಕ್ಕಳನ್ನು ಹಳೆ ವಿದ್ಯಾರ್ಥಿಗಳು , ರಕ್ಷಕರು  ಹಾಗೂ ಅಧ್ಯಾಪಕರು ಸೇರಿ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.  ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಪುತ್ತಿಗೆ ಪಂಚಾಯತು ಕ್ಷೇಮ ಸಮಿತಿ ಚೆಯರ್ ಮ್ಯಾನ್  ಶ್ರೀ ಚನಿಯ ಪಾಡಿ ಅವರು ಉದ್ಘಾಟಿಸಿದರು. ಶಾಲಾ ಪಿ.ಟಿ.ಎ.ಅಧ್ಯಕ್ಷ ಶ್ರೀ ಜೋನ್ ಡಿ.ಸೋಜ ಅವರು ಸಮಾರಂಭದ  ವಹಿಸಿದರು. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಅವರು ಹೊಸ ಶಿಕ್ಷಣಿಕ ವರ್ಷಕ್ಕೆ ಶುಭವನ್ನು   ಕೋರಿದರು. ನವಾಗತ  ಮಕ್ಕಳಿಗೆ ಕಲಿಕಾ ಕಿಟ್ ನ್ನು ಶಾಲಾ ಮೆನೇಜರ್ ವಿತರಿಸಿದರು.  ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನೂ  ಗಾಯತ್ರಿ ಟೀಚರ್ ವಂದನಾರ್ಪಣೆ ಗೈದರು . ರಾಮ ಮೋಹನ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಈ ವರ್ಷ ಹೊಸತಾಗಿ  ಪ್ರಾರಂಭ ಗೊಂಡ ಪ್ರೀ  ಪ್ರೈಮರಿ ವಿಭಾಗವನ್ನು ವಾರ್ಡು ಸದಸ್ಯ ಚನಿಯ ಪಾಡಿ ಅವರು ಉದ್ಘಾಟಿಸಿದರು. ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಪ್ರವೇಶೋತ್ಸವ ಗೀತೆಯನ್ನು  ಮಕ್ಕಳಿಂದ ಹಾಡಿಸಿದರು. ಬಳಿಕ  ನವಾಗತ ಮಕ್ಕಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು. 
 ಶಾಲಾ ಪ್ರವೇಶೋತ್ಸವಕ್ಕೆ ವಿಜ್ಞಾನ ಸಂಘದ ವತಿಯಿಂದ ದ್ವಿದಳ ಧಾನ್ಯಗಳನ್ನು ಬಳಸಿ ತಯಾರಿಸಲಾದ  ಆಕರ್ಷಕ ಪೋಸ್ಟರ್. 
                            ಪುಟಾಣಿಗಳಿಂದ  ಪ್ರಾರ್ಥನೆ
                ಶಾಲಾ ಮೆನೇಜರ್  ಅವರಿಂದ ಕಲಿಕಾ ಕಿಟ್ ವಿತರಣೆ

ಪಂಚಾಯತು ಸದಸ್ಯ ಚನಿಯ ಪಾಡಿ ಅವರಿಂದ ಶಾಲಾ ಪ್ರವೇಶೋತ್ಸವ ಉದ್ಘಾಟನೆ

              ಪಿ.ಟಿ.ಎ. ಅಧ್ಯಕ್ಷ ಜೋನ್ ಡಿ.ಸೋಜ ಅವರಿಂದ ಅಧ್ಯಕ್ಷ ಭಾಷಣ
                      ನವಾಗತ ಮಕ್ಕಳನ್ನು ಸ್ವಾಗತಿಸುವ ಮೆರವಣಿಗೆ

WELCOME TO NEW ACADEMIC YEAR

ಹೊಸ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ  ಸ್ವಾಗತ.