ವಿಶ್ವ ಪರಿಸರ ದಿನದ ಭಾಗವಾಗಿ ಅಮ್ಮ ಶಾಲಾ ಅಸೆಂಬ್ಲಿಯಲ್ಲಿ ಮಕ್ಕಳು ಹಾಗೂ ಅಧ್ಯಾಪಕರು ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಜ್ಞೆ ಗೈದೆವು . ಶಾಲಾ ಮುಖ್ಯೋಪಾಧ್ಯಾಯರು ಪ್ರತಿಜ್ಞೆ ಬೋಧಿಸಿದರು. " ಪರಿಸರ, ವನ,ವನ್ಯಜೀವಿಗಳು, ಹೊಳೆ , ನದಿಗಳು, ತಣ್ಣೀರು ತಟಾಕಗಳುಇತ್ಯಾದಿಗಳನ್ನು ಸಂರಕ್ಷಿಸುವುದು ನನ್ನ ಮೂಲಭೂತ ಕರ್ತವ್ಯವಾಗಿದೆ . ಎಲ್ಲಾ ಜೀವ ಜಾಲಗಳ ಬಗ್ಗೆ ನನಗೆ ಸಹಾನುಭೂತಿಯಿದೆ .ಕಾಡು, ವನ್ಯಜೀವಿಗಳ ಮೇಲೆ ಉಂಟಾಗುವ ದುಷ್ಕ್ರತ್ಯಗಳಾಗಲೀ ಅನಧಿಕ್ರತ ವ್ಯಾಪಾರವಾಗಲೀ ನನ್ನ ಗಮನಕ್ಕೆ ಬಂದರೆ ಕೂಡಲೆ ಅರಣ್ಯಾಧಿಕಾರಿಗಳಿಗೆ ತಿಳಿಸುತ್ತೇನೆ .ಪರಿಸರ, ಕಾಡು ,ವನ್ಯಜೀವಿಗಳು , ನೀರಿನ ತಟಾಕಗಳು ಇತ್ಯಾದಿಗಳನ್ನು ಸಂರಕ್ಷಿಸುತ್ತೇನೆಂದೂ ವನ್ಯಜೀವಿಗಳ ಯಾವುದೇ ರೀತಿಯ ಅನಧಿಕ್ರತ ಉತ್ಪನ್ನಗಳನ್ನು ಎಂದಿಗೂ ನಾನು ಉಪಯೋಗಿಸುವುದಿಲ್ಲ ಎಂದೂ ಈ ಮೂಲಕ ಪ್ರತಿಜ್ಞೆ ಗೈಯುತ್ತೇನೆ ". ಬಳಿಕ ಎಲ್ಲಾ ತರಗತಿಗಳಲ್ಲಿ ಪರಿಸರ ದಿನದ ಕುರಿತು ಘೋಷಣಾ ವಾಕ್ಯಗಳು, ಪೋಸ್ಟರ್ , ಚಿತ್ರರಚನೆ ಮೊದಲಾದ ಚಟುವಟಿಕೆಗಳನ್ನು ನಡೆಸಲಾಯಿತು.
No comments:
Post a Comment