FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, July 8, 2016

RURAL GAME

ಹುಲಿ ದನ ಆಟ 

ಹಳ್ಳಿಯ ಸೊಬಗು ಪಾಠ ಕ್ಕೆ ಸಂಬಂಧಿಸಿ ಎರಡನೇ ತರಗತಿಯ ಮಕ್ಕಳು ಗ್ರಾಮೀಣ ಆಟ  ಹುಲಿ ದನ ಆಟವನ್ನು ಆಡಿ ಅನುಭವವನ್ನು ಪಡೆದರು.

Tuesday, July 5, 2016

EID UL FITRE

ಎಲ್ಲಾ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು

VEGETABLE GARDEN












ನಮ್ಮ ಶಾಲೆಯ ಇಕೋ ಕ್ಲಬ್ ನ ನೇತೃತ್ವದಲ್ಲಿ ಪುತ್ತಿಗೆ ಕೃಷಿ ಭವನದ ಸಹಾಯದೊಂದಿಗೆ ಶಾಲಾ ತರಕಾರಿ ತೋಟವನ್ನು ನಿರ್ಮಿಸಲಾಯಿತು. ಇಕೋ ಕ್ಲಬ್ ನ ಸಂಚಾಲಕ ಶ್ರೀ ರಾಮ ಮೋಹನ ಮಾಸ್ಟರ್ ಇವರ ನೇತೃತ್ವದಲ್ಲಿ ಇಕೋ ಕ್ಲಬ್ ನ ಸದಸ್ಯರು ತರಕಾರಿ ತೋಟವನ್ನು ನಿರ್ಮಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಬೆಂಡೆ ಗಿಡ ನೆಡುವ ಮೂಲಕ  ತರಕಾರಿ ಕೃಷಿಯನ್ನು ಉದ್ಘಾಟಿಸಿದರು. ಬೆಂಡೆ ಅಲ್ಲದೆ ಬಸಳೆ, ಅಲಸಂಡೆ, ಪಡುವಲ , ಚೀನಿಕಾಯಿ ,ಕುಂಬಳ ಕಾಯಿ , ತೊಂಡೆ ಇತ್ಯಾದಿ ತರಕಾರಿಗಳ ಗಿಡಗಳನ್ನೂ  ನೆಡಲಾಯಿತು .

Saturday, June 25, 2016

FAREWELL PARTY



ಮಂಜೇಶ್ವರ ಬಿ.ಆರ್.ಸಿ.ಯಲ್ಲಿ ತರಬೇತುದಾರರಾಗಿಯೂ  ಬಿ.ಪಿ.ಓ ಆಗಿಯೂ  ಐದು  ವರ್ಷಗಳನ್ನು ಪೂರೈಸಿ ಇದೀಗ ತಮ್ಮ ಮಾತೃ  ಶಾಲೆಯನ್ನು ಸೇರಿದ ಶ್ರೀ ವಿಜಯ ಕುಮಾರ್ ಸರ್ ಅವರಿಗೆ ಇಂದು ಮಂಜೇಶ್ವರ ಉಪಜಿಲ್ಲೆಯ ಮುಖ್ಯೋಪಾಧ್ಯಾಯರ ವತಿಯಿಂದ ಸನ್ಮಾನವನ್ನು ಏರ್ಪಡಿಸಲಾಯಿತು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಸರ್ ಅವ್ರು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಮಂಜೇಶ್ವರ ಬಿ.ಪಿ.ಓ ಶ್ರೀ ಮೊಹಮ್ಮದ್ ಸಾಲಿ ಮಾಸ್ಟರ್, ಮಾಯಿಪ್ಪಾಡಿ ಡಯೆಟ್ ಪ್ಯಾಕಲ್ಟಿ  ಡಾ.ರಘುರಾಮ್ ಭಟ್ ಶುಭಹಾರೈಸಿದರು.

Friday, June 24, 2016

SCHOOL PARLIAMENT ELECTION

ಶಾಲಾ ಪಾರ್ಲಿಮೆಂಟ್ ಚುನಾವಣೆ 
ಶಾಲಾ ಶಾಂತಿ ಸಮಾಜದ ಮಂತ್ರಿ ಮಂಡಲ ರೂಪೀಕರಣಕ್ಕಾಗಿ  ನಮ್ಮ ಶಾಲೆಯಲ್ಲಿ ಇಂದು ಚುನಾವಣೆ ನಡೆಯಿತು. ಸಾರತ್ರಿಕ ಮಹಾ ಚುನಾವಣೆಯ ಮಾದರಿಯಲ್ಲೇ ಇದು ನಡೆಯಿತು. ಚುನಾವಣೆಯ  ಅಧಿಸೂಚನೆ ಹೊರಡಿಸಲಾಯಿತು. ಅನಂತರ ನಾಯಕನ ಸ್ಥಾನಕ್ಕೆ ಅಭ್ಯರ್ಥಿಗಳು ನಾಮ ಪತ್ರ  ಸಲ್ಲಿಸಿದರು. ನಾಮಪತ್ರಗಳ ಸೂಕ್ಷ್ಮ ಪರಿಶೋಧನೆಯ ಬಳಿಕ ಅಂತಿಮವಾಗಿ ನಾಲ್ಕು ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದರು. ಇಂದು ಎಲ್ಲ ತರಗತಿಯ ಮಕ್ಕಳು ಮಹಾಚುನಾವಣೆಯ ಮಾದರಿಯಲ್ಲಿ ಮತಚಲಾಯಿಸಿದರು. ಎಲ್ಲ ಮಕ್ಕಳಿಗೂ ಬ್ಯಾಲೆಟ್ ಪೇಪರ್ ಕೊಟ್ಟು,  ಅದರಲ್ಲಿ ಗುರುತಿನ ಸೀಲ್ ಹಾಕಿ ಮತಚಲಾಯಿಸಿದರು . ಚುನಾವಣಾ ಕರ್ತವ್ಯಗಳನ್ನು (ಪ್ರಿಸೈಡಿಂಗ್ ಆಫೀಸರ್, ಪೋಲಿಂಗ್ ಆಫೀಸರ್ಸ್ ) ಮಕ್ಕಳೇ ನಿರ್ವಹಿಸಿದರು . ಅಂತಿಮವಾಗಿ ಏಳನೇ ತರಗತಿಯ ಪಾತಿಮಾತ್ ಜಸೀರಾ ಶಾಲಾ ನಾಯಕಿಯಾಗಿ ಆಯ್ಕೆ ಆಡಲು. ಉಪನಾಯಕನಾಗಿ ಜೆಲ್ಲೆಸ್ಪಿ ರಾಯ್ ಆರಿಸಲ್ಪಟ್ಟನು. 
                                                           ಪೋಲಿಂಗ್ ಆಫೀಸರ್ಸ್

                                                               ಪ್ರಿಸೈಡಿಂಗ್ ಆಫೀಸರ್
                                          ಗುರುತಿನ ಶಾಯಿ ಹಾಕುತ್ತಿರುವುದು

                                                  ಮತದಾರರ ಸಾಲು
                                                               ಅಭ್ಯರ್ಥಿಗಳ ಪಟ್ಟಿ         


                                      ಮತದಾನ
                                                           ಮತ ಎಣಿಕೆ

SAHITHYA QUIZ

ಸಾಹಿತ್ಯ ಕ್ವಿಜ್ 
ವಾಚನಾ ವಾರಾಚರಣೆಯ ಭಾಗವಾಗಿ ನಮ್ಮ ಶಾಲೆಯಲ್ಲಿ  ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ  ಮಲ್ಟಿ ಮೀಡಿಯಾ ಉಪಯೋಗಿಸಿ ಸಾಹಿತ ರಸಪ್ರಶ್ನೆ ಕಾರ್ಯಕ್ರಮ ಜರಗಿತು. ಹಿರಿಯ ಅಧ್ಯಾಪಕ ಶ್ರೀನಿವಾಸ ಮಾಸ್ಟರ್ ಈ  ರಸಪ್ರಶ್ನೆ ಕಾರಾಕ್ರಮವನ್ನು ನಡೆಸಿಕೊಟ್ಟರು. ಸುಮಾರು 75 ಕ್ಕೂ ಅಧಿಕ ಮಕ್ಕಳು ಇದರಲ್ಲಿ ಭಾಗವಹಿಸಿದರು. ಏಳನೇ ತರಗತಿಯ ಸಿಂಜಿತಾ ಪ್ರಥಮ, ಶಾರದಾ ಸುರಭಿ ದ್ವಿತೀಯ , ಮಧುರಾ ತೃತೀಯ ಸ್ಥಾನವನ್ನು ಪಡೆದರು. ವಿಜೇತರನ್ನು ಅಭಿನಂದಿಸಲಾಯಿತು