ನೋಬೆಲ್ ಪ್ರಶಸ್ತಿ ಪುರಸ್ಕ್ರತರಿಗೆ ಅಭಿನಂದನೆಗಳು :
2014 ನೇ ಸಾಲಿನ ಶಾಂತಿಗಾಗಿರುವ ನೋಬೆಲ್ ಪ್ರಶಸ್ತಿ ಪಡೆದು ನಮ್ಮ ದೇಶಕ್ಕೆ ಕೀರ್ತಿಯನ್ನು ತಂದ ಶ್ರೀ ಕೈಲಾಸ್ ಸತ್ಯಾರ್ಥಿ ಇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ . ಇವರು ಶಾಂತಿಗಾಗಿರುವ ನೋಬೆಲ್ ಪ್ರಶಸ್ತಿ ಪಡೆದ ಕೇವಲ ಎರಡನೇ ಭಾರತೀಯ ಹಾಗೂ ಮೊದಲ ಭಾರತೀಯ ಸಂಜಾತ. ಇದಕ್ಕೂ ಮೊದಲು 1979 ರಲ್ಲಿ ಮದರ್ ತೆರೇಸಾ ಅವರಿಗೆ ಶಾಂತಿಗಾಗಿರುವ ನೋಬೆಲ್ ಪ್ರಶಸ್ತಿ ಬಂದಿತ್ತು . ಶ್ರೀ ಕೈಲಾಸ್ ಸತ್ಯಾರ್ಥಿ ಅವರು " ಬಚಪನ್ ಬಚಾವೋ ಆಂದೋಲನ್" (ಬಾಲ್ಯ ಉಳಿಸಿ ಆಂದೋಲನ) ಎಂಬ ಎನ್ ಜಿ ಓ ನಡೆಸುತ್ತಿದ್ದಾರೆ . ಈ ಮೂಲಕ ಜೀತದಾಳುಗಳಾಗಿ , ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 80000 ಮಕ್ಕಳನ್ನು ರಕ್ಷಿಸಿ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ನಡೆಸಿದ ಹೋರಾಟವು ಫಲಪ್ರದವಾಗಿದೆ . ಇವರ ಜೊತೆಗೆ ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೋರಾಡಿ ತಾಲಿಬಾನ್ ನವರಿಂದ ಶಿಕ್ಷೆಗೊಳಗಾದ ಮಲಾಲ ಯೂಸುಫ್ ಜೈದಿ ಎಂಬ 17 ವರ್ಷದ ಹುಡುಗಿಯೂ ಈ ಗೌರವವನ್ನು ಹಂಚಿಕೊಂಡಿದ್ದಾಳೆ . ಈಕೆ ನೋಬೆಲ್ ಪ್ರಶಸ್ತಿ ಪಡೆದ ಅತೀ ಕಿರಿಯ ವ್ಯಕ್ತಿಯಾಗಿದ್ದಾರೆ .

No comments:
Post a Comment