ಸೆಪ್ಟಂಬರ್ 5 ಶಿಕ್ಷಕ ದಿನ :
।। ಗುರುಬ್ರಹ್ಮ ಗುರುವಿಷ್ಣುಃ ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ ನಮಃ ।।
ಎಲ್ಲಾ ಶಿಕ್ಷಕ ಬಂಧುಗಳಿಗೂ ಶಿಕ್ಷಕ ದಿನದ ಹಾರ್ದಿಕ ಶುಭಾಶಯಗಳು
ಸೆಪ್ಟಂಬರ್ 5 ರಂದು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ಸ್ವತಂತ್ರ ಭಾರತದ ದ್ವಿತೀಯ ರಾಷ್ಟಪತಿ ಡಾಕ್ಟರ್ ಸರ್ವಪಲ್ಲಿ ರಾಧಾಕ್ರಷ್ಣನ್ ಅವರ ಜನ್ಮದಿನ. ಡಾ। ರಾಧಾಕ್ರಷ್ಣನ್ ಅವರು 1888 ಸೆಪ್ಟಂಬರ್ 5 ರಂದು ತಮಿಳುನಾಡಿನ ಚಿತ್ತೂರು ಜಿಲ್ಲೆಯ ತಿರುತ್ತಣಿಯಲ್ಲಿ ಜನಿಸಿದರು. ಸರ್ವಪಲ್ಲಿ ಎಂಬುದು ಅವರ ಮನೆತನದ ಹೆಸರು. ರಾಧಾಕ್ರಷ್ಣನ್ ಎಂಬುದು ಅವರ ತಂದೆ ತಾಯಿ ಇಟ್ಟ ಮುದ್ದಿನ ಹೆಸರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ ಬಳಿಕ ತತ್ವಜ್ಞಾನ ವಿಷಯದ ಮೇಲೆ ಬಿ.ಎ. ಮತ್ತು ಎಮ್.ಎ. ಪದವಿಯನ್ನು ಪೂರೈಸಿದರು. ಬಳಿಕ ಅನೇಕ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆಗೈದರು. ಅನಂತರ ಕೆಲವು ವಿಶ್ವವಿದ್ಯಾಲಯಗಳ ಉಪಕುಲಪತಿಗಳಾಗಿಯೂ ಸೇವೆಗೈದರು. ಶಿಕ್ಷಣ ಕ್ಷೇತ್ರದಲ್ಲಿ ಡಾ।ರಾಧಾಕ್ರಷ್ಣನ್ ಅವರ ಸಾಧನೆಯನ್ನು ಮೆಚ್ಚಿ ಬ್ರಿಟನ್ ಆಕ್ಸ್ ಪೋರ್ಡ್ ವಿ.ವಿ ಮತ್ತು ಅಮೇರಿಕಾದ ಹಾರ್ವರ್ಡ್ ವಿ.ವಿ. ಅವರಿಗೆ ಗೌರವ ಡಾಕ್ಟರೇಟ್ ಬಿರುದು ನೀಡಿ ಗೌರವಿಸಿತು. 1952 ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ಡಾ। ರಾಧಾಕ್ರಷ್ಣನ್ ಆರಿಸಲ್ಪಟ್ಟರು. ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿರುವಾಗಲೇ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಡಾ. ರಾಜೇಂದ್ರ ಪ್ರಸಾದರ ನಂತರ ಡಾ. ರಾಧಾಕ್ರಷ್ಣನ್ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ತಮ್ಮ ಅಧಿಕಾರಾವಧಿಯಲ್ಲಿ ದೇಶದ ಏಳಿಗೆಗಾಗಿ ಅವಿರತ ದುಡಿದರು.
ಭಾರತೀಯ ಶಿಕ್ಷಣಕ್ಕೆ ಒಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರ ,ತತ್ವ ಜ್ಞಾನ , ದೇಶದ ಅಭಿವ್ರದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಡಾ। ರಾಧಾಕ್ರಷ್ಣನ್ ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ . ಓರ್ವ ಶ್ರೇಷ್ಟ ಶಿಕ್ಷಣ ತಜ್ಞ ರಾಗಿದ್ದ ಅವರ ಜನ್ಮದಿನವಾದ ಸೆಪ್ಟಂಬರ್ 5 ನ್ನು ಶಿಕ್ಷಕ ದಿನವಾಗಿ ಆಚರಿಸುತ್ತಾರೆ. ಶಿಕ್ಷಣದ ಬಗ್ಗೆ ಅಪಾರ ಚಿಂತನೆಹೊಂದಿದ್ದ ಅವರು ಶಿಕ್ಷಕರ ಬಗ್ಗೆ ಹೆಚ್ಚಿನ ಗೌರವಹೊಂದಿದ್ದರು . ಪ್ರತಿಯೊಬ್ಬ ಶಿಕ್ಷಕರೂ ಉದಾತ್ತ ಮೌಲ್ಯಗಳನ್ನಾಧರಿಸಿದ ಉನ್ನತ ವ್ಯಕ್ತಿತ್ವವನ್ನು ಪಡೆಯಬೇಕು ಎಂಬುದಾಗಿ ಹೇಳುತ್ತಿದ್ದರು.
ಗುರುವಿನ ಸ್ಥಾನ ಮತ್ತು ಪ್ರಭಾವ ಬಹಳ ಮಹತ್ವವಾದದ್ದು. ಹಾಗೂ ಮಹಾ ಪವಿತ್ರವಾದದ್ದು. ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸ, ಸುಪ್ತ ಪ್ರತಿಭೆ ಹೊರಹೊಮ್ಮುವಿಕೆಯ ಕ್ರಿಯೆ ಸಮರ್ಪಕವಾಗಿ ಆಗುವುದರಲ್ಲಿ ಶಿಕ್ಷಕರ ಪಾತ್ರ ಗಮನಾರ್ಹವಾದುದಾಗಿದೆ. ಜ್ಞಾನ ಮತ್ತು ಅದನ್ನು ವಿದ್ಯಾರ್ಥಿಗಳ ಹಿತಕ್ಕಾಗಿ ಹೇಳಿಕೊಡುವ ಆಸಕ್ತಿ ಹಾಗೂ ಶ್ರದ್ಧೆ ಇವುಗಳು ಶಿಕ್ಷಕರಲ್ಲಿ ಇರಬೇಕಾದ ಎರಡು ಪ್ರಮುಖ ಅಂಶಗಳಾಗಿವೆ. ಭಾರತೀಯ ಸಂಸ್ಕ್ರತಿಯ ಒಳ್ಳೆಯ ಅಂಶಗಳನ್ನು, ಜಾತ್ಯಾತೀತ ಭಾವನೆಯನ್ನು , ವೈಜ್ಞಾನಿಕ ಮನೋಭಾವ, ರಾಷ್ಟ್ರಪ್ರೇಮವನ್ನು ಬಿತ್ತಿ ಬೆಳೆಸಬೇಕು.ಕಾಯಾ ವಾಚಾ ಮನಸಾ ನಿಷ್ಠೆಯಿಂದ ಇದ್ದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಬೇಕು.

No comments:
Post a Comment