ಸಾಕ್ಷರ ನವೋಲ್ಲಾಸ ಶಿಬಿರ 2014:
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಇರುವ ಸಾಕ್ಷರ ನವೋಲ್ಲಾಸ -2014 ಶಿಬಿರವು ಇಂದು ನಮ್ಮ ಶಾಲೆಯಲ್ಲಿ ನಡೆಯಿತು. ಪುತ್ತಿಗೆ ಪಂಚಾಯತು ಸದಸ್ಯೆ ಕುಮಾರಿ ವಸಂತಿ ಅವರು ಶಿಬಿರವನ್ನು ಉದ್ಘಾಟಿಸಿದರು . ಶಾಲಾ ಪ್ರಬಂಧಕ ಶ್ರೀ ಎನ್.ಸುಬ್ಬಣ್ಣ ಭಟ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಎನ್. ಎಚ್. ಲಕ್ಷ್ಮೀನಾರಾಯಣ ಭಟ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶ್ರೀ ಎನ್. ಶಂಕರನಾರಾಯಣ ಭಟ್ ಸ್ವಾಗತಿಸಿದರು . ಶ್ರೀಮತಿ ರೇವತಿ ಟೀಚರ್ ವಂದಿಸಿದರು . ಶ್ರೀನಿವಾಸ ಕೆ. ಎಚ್. ಕಾರ್ಯಕ್ರಮ ನಿರೂಪಿಸಿದರು. ಅನಂತರ ಶಾಲಾ ಅಧ್ಯಾಪಕ ಶ್ರೀ ರಾಮಮೋಹನ್ ಸಿ. ಎಚ್. ಅವರ ನೇತ್ರತ್ವದಲ್ಲಿ ಶಾಲೆಯ ಎಲ್ಲಾ ಅಧ್ಯಾಪಕ ಅಧ್ಯಾಪಿಕೆಯರ ಸಹಕಾರದೊಂದಿಗೆ ಬಾಯಿತಾಳ ಹೇಳುವುದು, ಪದ ನಿರ್ಮಾಣ, ಸ್ಮರಣ ಶಕ್ತಿ ಪರೀಕ್ಷೆ , ವಾರ್ತೆ ರವಾನಿಸುವ ಆಟ , ಕತೆ ಕ್ರಮೀಕರಣ , ಒಗಟು ಬಿಡಿಸುವ , ಮನೋರಂಜನಾ ಆಟಗಳು ಮೊದಲಾದ ಚಟುವಟಿಕೆಗಳು ನಡೆದವು. ಎಲ್ಲಾ ಮಕ್ಕಳೂ ಬಹಳ ಉತ್ಸಾಹದಿಂದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಇನ್ನೂ ಇಂತಹ ಶಿಬಿರಗಳು ನಮಗೆ ಬೇಕು ಎಂದು ಮಕ್ಕಳು ಅಭಿಪ್ರಾಯ ಪಟ್ಟರು.
ಹೆಚ್ಚಿನ ಪೋಟೋಗಳನ್ನು ಗ್ಯಾಲರಿಯಲ್ಲಿ ನೋಡಿರಿ .

No comments:
Post a Comment