ವಿಜಯ ಗ್ರಾಮೀಣ ಅಭಿವ್ರದ್ಧಿ ಪ್ರತಿಷ್ಠಾನ (ರಿ ) ಮಂಗಳೂರು ಮತ್ತು ಗ್ರಾಮಾಭಿವ್ರದ್ಧಿ ಸಮಿತಿ ಇವರ ಸಹಯೋಗದೊಂದಿಗೆ ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಘಟಕದ ನೇತ್ರತ್ವದಲ್ಲಿ ನಮ್ಮ ಶಾಲೆಯಲ್ಲಿ ಆರೋಗ್ಯ ಅರಿವು ಕಾರ್ಯಕ್ರಮವು ದಿನಾಂಕ 19-02-2016 ನೇ ಶುಕ್ರವಾರ ಬೆಳಿಗ್ಗೆ ನಡೆಯಿತು. IMS ಮಂಗಳೂರು ಘಟಕದ ಸದಸ್ಯರಾದ ಯೆನೆಪೋಯ ಕಾಲೇಜಿನ ನಿವ್ರತ್ತ ಪ್ರೊಫೆಸರ್ ಡಾ. ಬಿ. ರಾಮಚಂದ್ರ ಭಟ್ ಅವರು ತರಗತಿಯನ್ನು ನಡೆಸಿಕೊಟ್ಟರು. ದೈನಂದಿನ ಜೀವನದಲ್ಲಿ ನಾವು ಅನುಸರಿಸಬೇಕಾದ ಆರೋಗ್ಯ ಅಭ್ಯಾಸಗಳು , ಆಹಾರಾಭ್ಯಾಸಗಳು , ಟಿ. ವಿ. ಮೊಬೈಲ್ ಗಳ ಮಿತಿಮೀರಿದ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮನದಟ್ಟಾಗುವಂತೆ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿ ವಂದಿಸಿದರು.
No comments:
Post a Comment