FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, April 14, 2017

SDP SEMINAR

ಶಾಲಾ ಅಭಿವೃದ್ಧಿ ಯೋಜನೆ ವಿಚಾರ ಸಂಕಿರಣ 


ನಮ್ಮ ಶಾಲೆಯ ಅಭಿವೃದ್ಧಿ ಯೋಜನೆಯ ವಿಚಾರ ಸಂಕಿರಣವು 13.04.2017 ನೇ ಗುರುವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಅಧ್ಯಾಪಿಕೆ ಗಾಯತ್ರಿ ಕಡಂಬಾರ್ ಪ್ರಾರ್ಥನೆ ಹಾಡಿದರು . ಶಾಲಾ ಪಿ.ಟಿ. ಎ  ಅಧ್ಯಕ್ಷ ಜಾನ್ ಡಿ ಸೋಜ ಸಭೆಯ ಅಧ್ಯಕ್ಷತೆ ವಹಿಸಿದರು. ಪುತ್ತಿಗೆ ಪಂಚಾಯತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಚೇಯರ್ ಪರ್ಸನ್ ಶ್ರೀಮತಿ ಶಾಂತಿ ವೈ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಕೇರಳ ಸರಕಾರದ ಶಿಕ್ಷಣ ಸಚಿವ ಪ್ರೊ. ರವೀಂದ್ರನಾಥ್ ಅವರ  ಸಂದೇಶವನ್ನು ಕೇಳಿಸಲಾಯಿತು. ಶಾಲಾ ಅಧ್ಯಾಪಕ ಶಂಕರನಾರಾಯಣ ಭಟ್ ಶಾಲಾ ಅಭಿವೃದ್ಧಿ ಯೋಜನೆಯನ್ನು ಮಂಡಿಸಿದರು. ಬಳಿಕ ಚರ್ಚೆ ನಡೆಯಿತು. ಶ್ರಮ ದಾನದ ಮೂಲಕ ಜೈವತೋಟವನ್ನು ನಿರ್ಮಿಸುವುದು , ಶಾಲೆಗೆ  ಒಂದು ಕೊಳವೆ  ಬಾವಿ ನಿರ್ಮಿಸುವುದು, ಪಾಠಕ್ಕೆ ಸಂಬಂಧಿಸಿದ ವಿವಿಧ ಚಿತ್ರಗಳನ್ನು ಪ್ಲೆಕ್ಸ್ ಗಳಲ್ಲಿ ಮಾಡಿ ತರಗತಿ ಕೋಣೆಯ ಗೋಡೆಗಳಿಗೆ ಅಳವಡಿಸುವುದು , ಅಡುಗೆ ಕೋಣೆಯನ್ನು ನಿರ್ಮಿಸುವುದು ಮೊದಲಾದ ಯೋಜನೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಶಾಲೆಯ ಹಳೆ ವಿದ್ಯಾರ್ಥಿ ಕಕ್ವೆ ಶಂಕರ್ ರಾವ್ ಮತ್ತು ಕುಟುಂಬದವರು ಶಾಲಾ ಅಭಿವೃದ್ಧಿಗೆ ಉತ್ತಮ ಮೊತ್ತದ ಹಣಕಾಸಿನ ಸಹಾಯ ನೀಡುವುದಾಗಿ ಭರವಸೆಯಿತ್ತರು . ಶಾಲಾ ಮೆನೇಜರ್ ವಿಜಯಶ್ರೀ ಬಿ, ಮಾತೃ ಸಂಘದ ಅಧ್ಯಕ್ಷೆ ಭಾರತಿ ಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಪೊನ್ನೆತ್ತೋಡು , ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಪ್ರಾಂಶುಪಾಲ ಯನ್ ರಾಮಚಂದ್ರ ಭಟ್  ಮೊದಲಾದವರು ಶುಭಾಶಂಸನೆ ಗೈದರು. ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನು ಆಡಿ  ಎಲ್ಲರನ್ನು ಸ್ವಾಗತಿಸಿದರು. ಅಧ್ಯಾಪಕ ರಾಮಮೋಹನ ಸಿ.ಎಚ್. ವಂದನಾರ್ಪಣೆಗೈದರು. ಶ್ರೀನಿವಾಸ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು . ಎಲ್ಲರಿಗು ಉಪಾಹಾರದ ವ್ಯವಸ್ಥೆ ಮಾಡಲಾಯಿತು.

Saturday, April 8, 2017