FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Monday, March 30, 2015

FAREWELL PARTY TO OUR HEADMASTER

ಈ ವರ್ಷ ಸೇವೆಯಿಂದ ನಿವ್ರತ್ತಿ ಹೊಂದಲಿರುವ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎನ್. ಎಚ್. ಲಕ್ಷ್ಮೀನಾರಾಯಣ ಭಟ್ಟರಿಗೆ  ಧರ್ಮತ್ತಡ್ಕ ಎ.ಯು.ಪಿ.ಶಾಲೆ ಮತ್ತು ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ಇದರ ಮೆನೇಜರ್ ಅಧ್ಯಾಪಕರು ಮತ್ತು ಸಿಬಂದಿ ವರ್ಗದಿಂದ ಜಂಟಿಯಾಗಿ ದಿನಾಂಕ 30.3.2015 ರಂದು ವಿದಾಯ ಸಮಾರಂಭವನ್ನು ಏರ್ಪಡಿಸಲಾಯಿತು. ಗಾಯತ್ರಿ ಟೀಚರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು . ಹಿರಿಯ ಅಧ್ಯಾಪಕಿ ರೇವತಿ ಟೀಚರ್ ಬಂದ  ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಅಧ್ಯಾಪಕ ಶ್ರೀ ಎನ್. ಮಹಾಲಿಂಗ ಭಟ್ ಸನ್ಮಾನಿತರ ಕಿರು ಪರಿಚಯ ಮಾಡಿದರು . ಶಾಲಾ ಪ್ರಬಂಧಕರಾದ ಶ್ರೀ ಯನ್. ಸುಬ್ಬಣ್ಣ ಭಟ್  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶಿಕ್ಷಕರು ವ್ರತ್ತಿಯಿಂದ ನಿವ್ರತ್ತಿ ಹೊಂದಿದರೂ  ಪ್ರವ್ರತ್ತಿಯಲ್ಲಿ ಮುನ್ನಡೆಯಬೇಕೆಂದು  ಕರೆಯಿತ್ತರು.
ಸೇವೆಯಿಂದ ನಿವ್ರತ್ತಿ ಹೊಂದುತ್ತಿರುವ ಶ್ರೀಯುತರಿಗೆ  ಶಾಲಾ ಪ್ರಬಂಧಕರು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಗೌರವಿಸಿದರು. ಪಿಟಿಎ ಅಧ್ಯಕ್ಷ ವೆಂಕಟರಾಜ ನೀರಮೂಲೆ ಪುಷ್ಪಗುಚ್ಚವನ್ನು ನೀಡಿ ಅಭಿನಂದಿಸಿದರು . ಶಾಲಾ ಮೆನೇಜರ್  ಶ್ರೀಮತಿ ವಿಜಯಶ್ರೀ ಬಿ. ಸ್ಮರಣಿಕೆಯನ್ನು ನೀಡಿದರು. 


ಹೈಸ್ಕೂಲಿನ ವತಿಯಿಂದ ಹೈಸ್ಕೂಲ್ ಮೇನೇಜರ್ ಮುಖ್ಯೋಪಾಧ್ಯಾಯರು ಮತ್ತು ಸಹ ಅಧ್ಯಾಪಕರು ಸೇರಿ ಶಾಲು ಫಲಪುಷ್ಪ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಬಳಿಕ ಯು.ಪಿ. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ, ಹೈಸ್ಕೂಲ್ ಮೇನೇಜರ್ ಶ್ರೀ ಶಂಕರನಾರಾಯಣ ಭಟ್, ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಯನ್. ರಾಮಚಂದ್ರ ಭಟ್  ಪಿ.ಟಿ.ಎ. ಅಧ್ಯಕ್ಷ ವೆಂಕಟರಾಜ ನೀರಮೂಲೆ ನಿವ್ರತ್ತರಾಗುವವರಿಗೆ ಶುಭ ಹಾರೈಸಿದರು. ಅಧ್ಯಾಪಕರ ವತಿಯಿಂದ ಶ್ರೀ ರಾಮಮೋಹನ್ ಮಾಸ್ಟರ್, ಶ್ರೀನಿವಾಸ ಮಾಸ್ಟರ್, ಗೋವಿಂದ ಭಟ್ ಇ.ಎಚ್. ಸತ್ಯವತಿ ಟೀಚರ್, ಸತೀಶ್ ಕುಮಾರ್ ಮಾಸ್ಟರ್, ಶ್ರೀನಿವಾಸ ಮಾಸ್ಟರ್ ಮೊದಲಾದವರು ಶುಭಹಾರೈಸಿದರು. ನಿವ್ರತ್ತರಾಗುವ ಶ್ರೀ ಎನ್. ಎಚ್.ಲಕ್ಷ್ಮೀನಾರಾಯಣ ಭಟ್ಟರು ತಮ್ಮ 32 ವರ್ಷಗಳ ಅಧ್ಯಾಪನದ ಅನುಭವಗಳನ್ನು ಹಂಚಿಕೊಂಡರು. ಹೈಸ್ಕೂಲ್ ಅಧ್ಯಾಪಕ ಶ್ರೀ ಇ.ಎಚ್. ಗೋವಿಂದ ಭಟ್  ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಗೈದರು. ಶ್ರೀನಿವಾಸ ಕೆ.ಎಚ್. ಕಾರ್ಯಕ್ರಮವನ್ನು ನಿರೂಪಿಸಿದರು. 

BIRTHDAY

ಮಾರ್ಚ್ 30 ರಂದು ನಮ್ಮ ಶಾಲೆಯ ವಿದ್ಯಾರ್ಥಿ ನಾಯಕಿ ಅಪೂರ್ವ ಎಡಕಾನ ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಅವಳು ಶಾಲಾ ಗ್ರಂಥಾಲಯಕ್ಕೆ ಒಂದು ನಿಘಂಟು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು .
ಮಾರ್ಚ್ 31 ರಂದು ನಮ್ಮ ಶಾಲೆಯ  ಒಂದನೇ ತರಗತಿಯ ಅಪರ್ಣ ಯನ್. ತನ್ನ ಹುಟ್ಟು ಹಬ್ಬವನ್ನು ಆಚರಿಸಲಿದ್ದಾಳೆ. ಅದರ ಸವಿ ನೆನಪಿಗಾಗಿ ಅವಳು  ಶಾಲಾ ಗ್ರಂಥಾಲಯಕ್ಕೆ ಒಂದು ಕತೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದಾಳೆ. ಅವಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು. 

Friday, March 27, 2015

VII STD Sanskrit Students

ಏಳನೇ ತರಗತಿಯ ಸಂಸ್ಕ್ರತ ಮಕ್ಕಳು ಮತ್ತು ಸಂಸ್ಕ್ರತ ಅಧ್ಯಾಪಕ  ಶ್ರೀ ಕ್ರಷ್ಣ ಪ್ರಸಾದ್ ಕೆ.

SEND OFF VII STUDENTS

ಏಳನೇ ತರಗತಿ ಮಕ್ಕಳ ಬೀಳ್ಕೊಡುವ ಸಮಾರಂಭ ಇಂದು ಶಾಲಾ ಸಭಾಂಗಣದಲ್ಲಿ ಶಾಲಾ ಪ್ರಬಂಧಕ ಶ್ರೀ ಯನ್  ಸುಬ್ಬಣ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಶಾಲಾ ಮೇನೇಜರ್ ಶ್ರೀಮತಿ ವಿಜಯಶ್ರೀ ಬಿ ಮುಖ್ಯ ಅತಿಥಿಯಾಗಿ ಆಗಮಿಸಿದರು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭವಾಯಿತು . ಪ್ರಣವ ಕುಮಾರ್ ಯನ್ ಸ್ವಾಗತ ಭಾಷಣ ಮಾಡಿದನು. ಹೆಚ್ಚಿನ ಮಕ್ಕಳು ತಮ್ಮ ಅನಿಸಿಕೆಗಳನ್ನು ಹೇಳಿದರು. ಅಧ್ಯಾಪಕರು ಮಕ್ಕಳ ಮುಂದಿನ ಶಿಕ್ಷಣಕ್ಕೆ  ಅಶೀರ್ವದಿಸಿ ಹರಸಿದರು. ಕಾರ್ಯಕ್ರಮದ ಕೊನೆಯಲ್ಲಿ ಆದಿತ್ಯ ಇ.ಯಚ್ ವಂದನಾರ್ಪನೆಗೈದನು. ಶಾಲಾ ವಿದ್ಯಾರ್ಥಿ ನಾಯಕಿ ಅಪೂರ್ವ ಎಡಕಾನ ಕಾರ್ಯಕ್ರಮ ನಿರೂಪಿಸಿದಳು.

Retiring Teachers from Manjeshwar Sub District

ಈ ವರ್ಷ ಮಂಜೇಶ್ವರ ಉಪಜಿಲ್ಲೆಯಿಂದ ನಿವ್ರತ್ತರಾಗುವ ಅಧ್ಯಾಪಕರು ಮತ್ತು ಉಪಜಿಲ್ಲೆಯ ಇತರ ಮುಖ್ಯೋಪಾಧ್ಯಾಯರೊಂದಿಗೆ ಐಲ ಶಾಲೆಯಲ್ಲಿ ನಡೆದ ವಿದಾಯ ಸಮಾರಂಭದ ಬಳಿಕ ತೆಗೆದ ಗ್ರೂಪ್ ಪೋಟೋ .

Tuesday, March 24, 2015

BIRTHDAY

ಮಾರ್ಚ್ 23 ರಂದು ನಮ್ಮ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಪಾತಿಮತ್ ಅಲ್ಫಿಯಾ ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿನೆನಪಿಗಾಗಿ ಅವಳು ಶಾಲಾ ಗ್ರಂಥಾಲಯಕ್ಕೆ ಎರಡು ಕತೆಪುಸ್ತಕಗಳನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವಳ ರಕ್ಷಕರಿಗೆ ಅಭಿನಂದನೆಗಳು

Monday, March 23, 2015

ಕೃಪೆ :SSHSS SHENI BLOG
ಎಲ್.ಎಸ್.ಎಸ್ / ಯು.ಎಸ್.ಎಸ್ ಪರೀಕ್ಷೆಗಳ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬ್ಲೋಗಿನಲ್ಲಿ ಒದಗಿಸಬೇಕೆಂದು  ಕೆಲವು ಅಧ್ಯಾಕರು ಮತ್ತು ವಿದ್ಯಾರ್ಥಿಗಳು ವಿನಂತಿಸಿದ ಕಾರಣ ನಾವು ಕನ್ನಡದ ಕೆಲವು ಸಹೃದಯಿ ಅಧ್ಯಾಪಕ ಬಂಧುಗಳಲ್ಲಿ ಅವರಲ್ಲಿರುವ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿಕೊಡಬೇಕೆಂದು ಕೇಳಿಕೊಡಿದ್ದೆವು.ಅದಕ್ಕೆ ಸ್ಪಂದಿಸಿ ಕೆಲವು ಅಧ್ಯಾಪಕರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿಕೊಟ್ಟಿರುತ್ತಾರೆ. ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.

Friday, March 20, 2015

FAREWELL PARTY


ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ಅಧ್ಯಾಪಕರ ವತಿಯಿಂದ ಈ ವರ್ಷ ಸೇವೆಯಿಂದ ನಿವ್ರತ್ತಿ ಹೊಂದುವ ಅಧ್ಯಾಪಕರಿಗೆ ಶ್ರೀ ಶಾರದಾ ಬೋವಿ ಎ.ಯು.ಪಿ.ಶಾಲೆ ಐಲ ದಲ್ಲಿ ಇಂದು ವಿದಾಯ ಸಮಾರಂಭ ನಡೆಯಿತು. ನಮ್ಮ  ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎನ್.ಎಚ್.ಲಕ್ಷ್ಮೀನಾರಾಯಣ ಭಟ್ ಇವರು ಈ ವರ್ಷ ನಿವ್ರತ್ತರಾಗಲಿದ್ದಾರೆ. ಅವರಿಗೆ ಮಂಗಲ್ಪಾಡಿ ಗ್ರಾಮ ಪಂಚಾಯತು ಸದಸ್ಯ ಯಮ್ .ಕೆ. ಆಲಿ ಮಾಸ್ಟರ್  ಶಾಲು ಹೊದಿಸಿ ಸನ್ಮಾನಿಸಿದರು.

Wednesday, March 18, 2015

IEDC INSTRUCTOR



IEDC INSTRUCTOR ಸಂಜು ಟೀಚರ್ ದಿನಾಂಕ 17.3.2015 ರಂದು ನಮ್ಮ ಶಾಲೆಗೇ ಭೇಟಿ ನೀಡಿದರು. ಮೂರನೆ ತರಗತಿಯನ್ನು ಸಂದರ್ಶಿಸಿ  CWSN ಮಗುವಿನೊಂದಿಗೆ ಸ್ವಲ್ಪ ಹೊತ್ತು ಕಳೆದರು. ಅಧ್ಯಾಪಕರು ಕ್ಲಾಸು ತೆಗೆಯುವುದನ್ನು ನಿರೀಕ್ಷಿಸಿದರು. ಅನಂತರ ಶಾಲೆಯ ಅಧ್ಯಾಪಕರೊಂದಿಗೆ ಚರ್ಚಿಸಿದರು.