FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, July 30, 2015

PTA General Body Meet

ಪಿ.ಟಿ.ಎ. ಮಹಾ ಸಭೆ 
ನಮ್ಮ ಶಾಲೆಯ ಪಿ.ಟಿ.ಎ. ಮಹಾ ಸಭೆಯು ದಿನಾಂಕ 30.07.2015 ನೆ ಗುರುವಾರ ಅಪರಾಹ್ನ 2.30 ಕ್ಕೆ ಆರಂಭವಾಯಿತು . ನಮ್ಮನ್ನು ಬಿಟ್ಟಗಲಿದ ಭಾರತದ ಮಾಜಿ ರಾಷ್ಟ್ರಪತಿ ಶ್ರೀ ಡಾ ಎ.ಪಿ. ಜೆ. ಅಬ್ದುಲ್ ಕಲಾಮ್ ಹಾಗೂ ಶಾಲಾ ಪ್ರಬಂಧಕ ಶ್ರೀ ನೇರೋಳು ನಿಡುವಜೆ ಸುಬ್ಬಣ್ಣ ಭಟ್ ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರಿ ಎರಡು ನಿಮಿಷ ಮೌನ ಪ್ರಾರ್ಥನೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲಾ ಹಿರಿಯ ಅಧ್ಯಾಪಿಕೆ ಶ್ರೀಮತಿ ರೇವತಿ ಟೀಚರ್ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಯುತ ವೆಂಕಟರಾಜ ನೀರಮೂಲೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಎನ್. ಮಹಾಲಿಂಗ ಭಟ್ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ಅಧ್ಯಾಪಕ ಶ್ರೀ ರಾಮಮೋಹನ ಮಾಸ್ಟರ್ ಗತವರ್ಷದ ವರದಿಯನ್ನು ವಾಚಿಸಿದರು . ಕಳೆದ ವರ್ಷ ಮಾರ್ಚಿ ತಿಂಗಳಿನಲ್ಲಿ ಜರಗಿದ ಯು. ಎಸ್. ಎಸ್. ಪರೀಕ್ಷೆಯಲ್ಲಿ ಮಂಜೇಶ್ವರ ಉಪಜಿಲ್ಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನದೊಂದಿಗೆ ತೇರ್ಗಡೆ ಹೊಂದಿ ಶಾಲೆಗೂ ಊರಿಗೂ ಕೀರ್ತಿ ತಂದು ಕೊಟ್ಟ  ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳಾದ ಪ್ರಣವ ಕುಮಾರ್  ನೇರೋಳು ಮತ್ತು ಆದಿತ್ಯ ಇ.ಎಚ್. ಇವರನ್ನು ಪಿ.ಟಿ. ಎ. ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು . ಕಾಸರಗೋಡು ಜೀವ ವಿಮಾ ನಿಗಮದ ಡೆವಲಪ್ ಮೆಂಟ್ ಆಫೀಸರ್ ಶ್ರೀ ಗಣೇಶ್ ಪ್ರಭು ಅವರು  ಸಭೆಗೆ ಆಗಮಿಸಿ ಭೀಮಾ ಸ್ಕೂಲ್ ನ ಬಗ್ಗೆ ರಕ್ಷಕರಿಗೆ ಮಾಹಿತಿ ನೀಡಿದರು. ಶ್ರೀ ಕ್ರಷ್ಣ ಪ್ರಸಾದ್ ಮಾಸ್ಟರ್ ಅವರು ಶಾಲಾ ನಿಯಮಾವಳಿಗಳ ಬಗ್ಗೆ ರಕ್ಷಕರೊಂದಿಗೆ ಮುಕ್ತ ಸಂವಾದ ನಡೆಸಿದರು. 2015 -16  ನೆ ಶೈಕ್ಷಣಿಕ ವರ್ಷಕ್ಕೆ ನೂತನ ಕಾರ್ಯಕಾರಿ ಸಮಿತಿಯನ್ನು ರೂಪೀಕರಿಸಲಾಯಿತು. ಶ್ರೀಯುತ ಜೋನ್ ಡಿ ಸೋಜ ಧರ್ಮತ್ತಡ್ಕ ಅವರು ನೂತನ ಪಿ.ಟಿ. ಎ. ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀ ಸತ್ಯನಾರಾಯಣ ಭಟ್ ಕನಿಯಾಲ ಅವರು ಎರಡನೆ ಅವಧಿಗೆ ಆರಿಸಲ್ಪಟ್ಟರು. ಇತರ 15 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರೂಪಿಸಲಾಯಿತು. ಇದೇ ಸಂದರ್ಭದಲ್ಲಿ ಮಾತ್ರ ಮಂಡಳಿಯ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷೆಯಾಗಿ ಶ್ರೀಮತಿ ಶ್ರೀದೇವಿ ಪೂಕಳ  ಸಭಿಕರ ಸಹಮತದೊಂದಿಗೆ ಪುನರಾಯ್ಕೆಗೊಂಡರು. ವಸಂತಿ  ಅವರು ಉಪಾಧ್ಯಕ್ಷೆಯಾಗಿಯೂ ಇತರ 15 ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಹಾಗೂ ಮಾತ್ರ ಮಂಡಳಿ ಅಧ್ಯಕ್ಷೆ ಶ್ರೀದೇವಿ ಪೂಕಳ ಅವರು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಸಹಾಯಕ ಅಧ್ಯಾಪಕ ಶ್ರೀ ಶಂಕರನಾರಾಯಣ ಭಟ್ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಶಾಲಾ ಅಧ್ಯಾಪಕ ಶ್ರೀನಿವಾಸ ಕೆ.ಎಚ್. ಕಾರ್ಯಕ್ರಮ ನಿರೂಪಿಸಿದರು. 
ಬಂದ ಅತಿಥಿಗಳನ್ನು ಸ್ವಾಗತಿಸುತ್ತಿರುವ ಶ್ರೀಮತಿ ರೇವತಿ ಟೀಚರ್
ಗತವರ್ಷದ ವರದಿಯನ್ನು ವಾಚಿಸುತ್ತಿರುವ ಶ್ರೀಯುತ ರಾಮಮೋಹನ ಮಾಸ್ಟರ್



                                ಮುಖ್ಯೋಪಾಧ್ಯಾಯರಿಂದ  ಪ್ರಾಸ್ತಾವಿಕ ನುಡಿಗಳು 
 USS ಪರೀಕ್ಷೆಯಲ್ಲಿ ಉಪಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪ್ರಣವ ಕುಮಾರ್ ಸ್ಮರಣಿಕೆ ಸ್ವೀಕರಿಸುತ್ತಿದ್ದಾನೆ

  USS ಪರೀಕ್ಷೆಯಲ್ಲಿ ಉಪಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಆದಿತ್ಯ ಇ. ಎಚ್. ಸ್ಮರಣಿಕೆ ಸ್ವೀಕರಿಸುತ್ತಿದ್ದಾನೆ
ಬೀಮಾ ಸ್ಕೂಲ್ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಿರುವ ಶ್ರೀ ಗಣೇಶ್ ಪ್ರಭು

  ಕಾರ್ಯಕ್ರಮಕ್ಕೆ ಶುಭವನ್ನು ಕೋರುತ್ತಿರುವ ಶಾಲಾ ಮೇನೇಜರ್ ವಿಜಯಶ್ರೀ ಬಿ. 
 ಮಾತ್ರ ಮಂಡಳಿ ಅಧ್ಯಕ್ಷೆಯಿಂದ ಶುಭ ಹಾರೈಕೆಗಳು 
ಶಂಕರನಾರಾಯಣ ಭಟ್ ಅವರಿಂದ ವಂದನಾರ್ಪಣೆ


Monday, July 27, 2015

Dr.APJ Abdul Kalam Passed Away

ಭಾರತದ ಮಾಜಿ ರಾಷ್ಟ್ರಪತಿ ಶ್ರೀ ಎ. ಪಿ. ಜೆ. ಅಬ್ದುಲ್ ಕಲಾಮ್ ಇಂದು ಮೇಘಾಲಯದ ಶಿಲ್ಲೊಂಗಿನಲ್ಲಿ ಒಂದು ಸಮಾರಂಭದಲ್ಲಿ ಭಾಷಣಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವುದರ ಮಧ್ಯೆ ಅಸುನೀಗಿದರು. ಅವರನ್ನು ಮಿಸೈಲ್ ಮ್ಯಾನ್ ಎಂದು ಕರೆಯುತ್ತಿದ್ದರು. ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿತ್ತು. ಅವರಿಗೆ ನಮ್ಮ ಶಾಲೆಯ ಪರವಾಗಿ ಶ್ರದ್ಧಾಂಜಲಿಗಳು .

PTA General Body Meeting

P..T.A.ಮಹಾ ಸಭೆಯ ಆಮಂತ್ರಣ ಪತ್ರಿಕೆ

BIRTHDAY CELEBERATION


ಒಂದನೆ ತರಗತಿಯ ಪವನ್ ರಾಮನು ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಇಂದು ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿರುತ್ತಾನೆ. ಅವನಿಗೆ ಶಾಲಾ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು .

Sunday, July 26, 2015

Chaandra Divas

ಚಾಂದ್ರ ದಿನ 
ಚಾಂದ್ರ  ದಿನವಾದ  ಜುಲಾಯಿ ೨೧ ರಂದು ಶಾಲಾ ಅಸೆಂಬ್ಲಿಯಲ್ಲಿ ದಿನದ ಮಹತ್ವದ ಬಗ್ಗೆ ಶಾಲಾ ವಿಜ್ಞಾನ ಅಧ್ಯಾಪಕಿ ಶ್ರೀಮತಿ ಕಮಲಾಕ್ಷಿ ಟೀಚರ್ ಮಕ್ಕಳಿಗೆ ಮಾಹಿತಿ ನೀಡಿದರು.

Friday, July 24, 2015

BIRTHDAY CELEBERATION



ನಮ್ಮ ಶಾಲೆಯ ಏಳನೇ ತರಗತಿಯ ಕವಿತ.ಕೆ.ಶೆಟ್ಟಿ  ಯು ತನ್ನ ಹುಟ್ಟು ಹಬ್ಬವನ್ನು ತಾ. 21.7.2015 ರಂದು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಶಾಲೆಯ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು

Wednesday, July 15, 2015

July 17 Holiday

ಈದುಲ್ ಫಿತರ್ - ಶಾಲೆಗಳಿಗೆ ರಜೆ 
       ಈದುಲ್ ಫಿತರ್ (ರಂಜಾನ್ ) ಹಬ್ಬದ ಪ್ರಯುಕ್ತ ಕೇರಳದ ಎಲ್ಲಾ ಶಾಲಾ ಕಾಲೇಜುಗಳಿಗೆ ಜುಲಾಯಿ 17 ಶುಕ್ರವಾರ ರಜೆಯಾಗಿರುವುದೆಂದು ಸರಕಾರ ಆದೇಶ ಹೊರಡಿಸಿರುತ್ತದೆ .
ಬ್ಲಾಗಿನ ಎಲ್ಲಾ ವೀಕ್ಷಕರಿಗೂ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು

Saturday, July 11, 2015

WORLD POPULATION DAY

ವಿಶ್ವ ಜನಸಂಖ್ಯಾ ದಿನ 
ಪ್ರತಿ ವರ್ಷ ಜುಲೈ 11 ರಂದು ಪ್ರಪಂಚದಾದ್ಯಂತ ವಿಶ್ವ ಜನ ಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. 
  ಏರುತ್ತಿರುವ ಜನಸಂಖ್ಯೆಯಿಂದಾಗಿ ಉಂಟಾಗುವ  ಜಾಗತಿಕ ತೊಂದರೆ , ಸಮಸ್ಯೆ ಮತ್ತು ಪರಿಣಾಮದ ಬಗ್ಗೆ ಜಾಗ್ರತಿ  ಮೂಡಿಸುವ ಸಲುವಾಗಿ ಈ ಆಚರಣೆಯನ್ನು 1989 ಜುಲೈ 11 ರಂದು ಜಾರಿಗೆ ತರಲಾಯಿತು. ಕ್ಷಣ ಕ್ಷಣಕ್ಕೂ ಏರುತ್ತಿರುವ ಜನಸಂಖ್ಯೆ ಜಾಗತಿಕವಾದ ಬಹು ದೊಡ್ಡ ಸಮಸ್ಯೆಯಾಗಿದೆ. ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ ಪ್ರತಿದಿನ 3,53,000 ಶಿಶುಗಳು ಜನಿಸುತ್ತವೆ.  ಕ್ಷಣ ಕ್ಷಣಕ್ಕೂ ಏರುತ್ತಿರುವ  ಈ ಜನಸಂಖ್ಯೆಯನ್ನು ನಿಯಂತ್ರಿಸುವ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಪ್ರಾಥಮಿಕ ಮೂಲಭೂತ ಅವಶ್ಯಕತೆಗಳಾದ ಅನ್ನ , ನೀರು, ವಸತಿ, ವಿದ್ಯಾಭ್ಯಾಸ, ಮೊದಲಾದ ಆವಶ್ಯಕತೆಗಳನ್ನು ಪೂರೈಸುವುದು ಕಷ್ಟವಾಗಿ ಈ ಭೂಮಿಯಲ್ಲಿ ಜೀವಿಸುವುದೇ ಅಸಾಧ್ಯವಾಗಬಹುದು. 1987 JULY 11 ರಂದು ವಿಶ್ವದ ಜನಸಂಖ್ಯೆ  ಅಧಿಕ್ರತವಾಗಿ 500 ಕೋಟಿ ತಲುಪಿತು. 2014 ಜನವರಿ 1 ರ ಅಂಕಿ ಅಂಶಗಳ ಪ್ರಕಾರ ವಿಶ್ವದ ಜನಸಂಖ್ಯೆ ಸುಮಾರು 713 ಕೋಟಿ . 2015 ಜನವರಿ 1 ರ ಜನಗಣತಿಯಂತೆ ಇದು 714 ಕೋಟಿ . ವಿಶ್ವ ಜನಸಂಖ್ಯೆಯಲ್ಲಿ ಚೀನಾ ಆಗ್ರಾ ಸ್ಥಾನದಲ್ಲಿದ್ದರೆ, ಭಾರತ ದ್ವಿತೀಯ ಸ್ಥಾನದಲ್ಲಿದೆ. ವಿಶ್ವ ಜನಸಂಖ್ಯೆಯಲ್ಲಿ ಶೇಕಡ 60 ರಷ್ಟು ಮಂದಿ ಏಶ್ಯಾ ಖಂಡದಲ್ಲಿ ವಾಸಿಸುವವರಾಗಿದ್ದಾರೆ. ಭಾರತದ ಜನಸಂಖ್ಯೆ 2015 ಜುಲೈ ತಿಂಗಳಿನ ಆಧಾರದಲ್ಲಿ 127 ಕೋಟಿ ತಲುಪಿದೆ. ಇದೇ ವೇಗದಲ್ಲಿ ಮುನ್ನಡೆದರೆ ಮುಂದೊಂದು ದಿನ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲಿ ಮೊದಲ ಸ್ಥಾನವನ್ನು ಪಡೆಯಬಹುದು. ಜನಸಂಖ್ಯೆಯ ಹೆಚ್ಚಳದಿಂದ ಉಂಟಾಗುವ ತೊಂದರೆಗಳ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸಬೇಕಾದುದು ಅತೀ ಅಗತ್ಯ. 

Free Uniform

ಉಚಿತ ಸಮವಸ್ತ್ರ 
ಸರಕಾರೀ ಶಾಲೆಯ ಮಕ್ಕಳಿಗೆ ನೀಡಿದಂತೆ ಐಡೆಡ್ ಶಾಲೆಯ ಮಕ್ಕಳಿಗೂ ಉಚಿತ ಸಮವಸ್ತ್ರವನ್ನು ವಿತರಿಸಲು DPI ಯವರು ಆದೇಶ ಹೊರಡಿಸಿದ್ದಾರೆ. (No.S.P.2/53617/2015/DPI dt: 07.07.2015).
ಈ ಆದೇಶದ ಪ್ರಕಾರ ಐಡೆಡ್ ಶಾಲೆಯಲ್ಲಿ ಕಲಿಯುತ್ತಿರುವ 1ರಿಂದ 8ನೆ ತರಗತಿ ವರೆಗಿನ ಎಲ್ಲ ಹೆಣ್ಣು ಮಕ್ಕಳಿಗೂ ಎಸ್. ಸಿ. , ಎಸ್. ಟಿ ಹಾಗೂ ಬಿ.ಪಿ.ಎಲ್ ಹುಡುಗರಿಗೂ ಎರಡು ಜತೆ ಸಮವಸ್ತ್ರವನ್ನು ವಿತರಿಸಲಾಗುವುದು .

CLUSTER TRAINING JULY 2015

Custer Training July 2015.
As per Circular No.QIP(2)/27740/2015/ DPI dt:09.07.2015 the cluster training for JULY 2015 will be held from July 21 to July 28.
July 21 - I Std and UP Mal. & Arabic
July 22 - II Std and UP Eng & Urdu
July 23 - III Std and UP Hindi & S.Sc.
July 24 - IV Std and UP B.Sc & Sanskrit
July 27 - LP Arabic & UP Maths

SCHOOL ELECTION

ಶಾಲಾ ನಾಯಕನ ಚುನಾವಣೆ 



                                      ಗುಪ್ತ ಮತದಾನ ನಡೆಸುತ್ತಿರುವ ಮಗು 
                                ಮತದಾನ ನಡೆಸಿ ಮತಪೆಟ್ಟಿಗೆಯೊಳಗೆ ಹಾಕುತ್ತಿರುವುದು 
                                                               ಮತದಾರರ ಸಾಲು 


                          ಮತಪೆಟ್ಟಿಗೆ ಹಾಗೂ ಪ್ರಿಸೈಡಿಂಗ್ ಆಫೀಸರ್ 

                                   ಪೋಲಿಂಗ್ ಆಫೀಸರ್ಸ್ 


                                  ಮಾದರಿ ಬ್ಯಾಲೆಟ್ ಪೇಪರ್ 

                                          ಗುಪ್ತ ಮತದಾನ ನಡೆಸುತ್ತಿರುವ ಮಕ್ಕಳು 

                        ಕೈಗೆ ಗುರುತು ಹಾಕುತ್ತಿರುವ ಅಧಿಕಾರಿಗಳು 


                                  (ಭದ್ರತಾ ಸಿಬಂದಿ) ಸ್ಟೂಡೆಂಟ್ ಪೋಲಿಸು 
                    ಮತದಾನ ನಡೆಸಲು   ಆಗಮಿಸುತ್ತಿರುವ ಮತದಾರರು 
ನಮ್ಮ ಶಾಲೆಯಲ್ಲಿ ಶಾಲಾ ನಾಯಕನ ಚುನಾವಣೆಯು ದಿನಾಂಕ 10.07.2015 ನೆ ಶುಕ್ರವಾರ ನಡೆಯಿತು. ಮಹಾ ಚುನಾವಣೆಯ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ನಾಯಕನ ಸ್ಥಾನಕ್ಕೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಒಂದು ನಾಮ ಪತ್ರವನ್ನು ತಿರಸ್ಕರಿಸಲಾಯಿತು. ಬಾಕಿ ಮೂವರು ಕಣದಲ್ಲಿ ಉಳಿದರು. ಬಿರುಸಿನ ಪ್ರಚಾರದ ಬಳಿಕ ಚುನಾವಣೆಯ ದಿನ ಎಲ್ಲ ಮಕ್ಕಳು ಮತ ಚಲಾಯಿಸಿದರು. ಪೋಲಿಂಗ್ ಆಫೀಸರ್ ಹಾಗೂ ಪ್ರಿಸೈಡಿಂಗ್ ಆಫೀಸರುಗಳ ಜವಾಬ್ದಾರಿಯನ್ನು ಮಕ್ಕಳೇ ನಿರ್ವಹಿಸಿದರು. ಈ ಚುನಾವಣೆಯಲ್ಲಿ ಏಳನೇ ತರಗತಿಯ ಸಾತ್ವಿಕ್ ಕೃಷ್ಣ 101  ಮತಗಳ ಅಂತರದಿಂದ ಶಾಲಾ ನಾಯಕನಾಗಿ ಆರಿಸಲ್ಪಟ್ಟನು.   
                           ಶಾಲಾ ನಾಯಕನಾಗಿ ಆರಿಸಲ್ಪಟ್ಟ ಸಾತ್ವಿಕ್ ಕೃಷ್ಣ  ಯನ್

Health Check Up

ಮಕ್ಕಳ ಆರೋಗ್ಯ ತಪಾಸಣೆ 





ಶಾಲೆಗೆ  ಹೊಸತಾಗಿ ನೇಮಕಗೊಂಡ ಸಿಸ್ಟರ್ ಲಿಸ್ಸಿ ಜೋನ್ ಅವರು ಶಾಲೆಗೆ  ಆಗಮಿಸಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು.

Sunday, July 5, 2015

MAIN DECISIONS TAKEN ON THE QIP MEETING HELD  AT DPI OFFICE ON 01/07/2015

  • QUARTERLY EXAM 2015 WILL COMMENCE FROM SEPTEMBER 9 (AFTER ONAM VACATION)
  • SRG TRAINING WILL BE HELD  ON 13 AND 14 TH OF JULY
  • DRG TRAINING WILL BE HELD ON 15 AND 16TH OF JULY

Thursday, July 2, 2015

VISIT TO POST OFFICE





ಅಂಚೆ ಕಚೇರಿಗೆ ಭೇಟಿ 
ನಮ್ಮ ಶಾಲೆಯ ಎರಡನೆ ತರಗತಿಯ ಮಕ್ಕಳು ಕಲಿಕೆಯ ಭಾಗವಾಗಿ ಶಾಲೆಯ ಸಮೀಪವಿರುವ ಸಾರ್ವಜನಿಕ ಸಂಸ್ಥೆಯಾದ ಅಂಚೆ ಕಚೇರಿಗೆ ಬೇಟಿ ನೀಡಿದರು. ಅಲ್ಲಿಯ ಅಂಚೆಯ ಅಣ್ಣ ಶ್ರೀಮಾನ್ ಕರಿಯನವರು ಅಂಚೆ ಕಚೇರಿಯಲ್ಲಿರುವ ಅಂಚೆ ಕಾರ್ಡು, ದೇಶೀಯ ಮತ್ತು ಅಂತರ್ದೆಶಿಯ ಪತ್ರಗಳು, ಅಂಚೆ ಪೆಟ್ಟಿಗೆ, ಅಂಚೆ ಚೀಟಿಗಳು, ವಿವಿಧ ತರದ  ಅರ್ಜಿ ನಮೂನೆಗಳು, ತೂಕ ಮಾಡುವ ಯಂತ್ರ ಇತ್ಯಾದಿಗಳ ಪರಿಚಯ ಮಾಡಿಸಿದರು. ಮಕ್ಕಳು ಅಂಚೆ ಕಚೇರಿಯ ಕೆಲಸ ಕಾರ್ಯಗಳನ್ನು ತಿಳಿದುಕೊಂಡರು.