FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, July 22, 2017

CHAANDRA DIVAS

ಚಾಂದ್ರ ದಿನಾಚರಣೆ 

ಜುಲಾಯಿ 21 ಚಾಂದ್ರ ದಿನವನ್ನು ಬಹಳ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಬಾಹ್ಯಾಕಾಶ ಯಾತ್ರೆಯ ಚರಿತ್ರೆ , ಬಾಹ್ಯಾಕಾಶ ಸಂಚಾರಿಗಳು ಹಾಗು ಚಾಂದ್ರ ಯಾನಕ್ಕೆ ಸಂಬಂಧಿಸಿದ  ವಿವಿಧ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು. ಪ್ರತಿಯೊಂದು ತರಗತಿಯ ಮಕ್ಕಳು ಸಮಾಜ ವಿಜ್ಞಾನ ಪಾಠದ ಸಮಯದಲ್ಲಿ ಸಸಮಾಜ ಅಧ್ಯಾಪಕರ ಸಹಾಯದೊಂದಿಗೆ ಪ್ರತಿಯೊಂದು ಚಿತ್ರದ ವಿವರಣೆಯನ್ನು ಪಡೆದುಕೊಂಡರು . ಶಾಲಾ ಪಿ.ಟಿ. ಎ  ಸದಸ್ಯರು ಅಧ್ಯಕ್ಷರು ಉಪಸ್ಥಿತರಿದ್ದರು

Sunday, July 16, 2017

Birthday

ಹುಟ್ಟುಹಬ್ಬ 
ನಮ್ಮ ಶಾಲೆಯ ಐದನೇ ತರಗತಿಯ ವರ್ಷ ಕೆ ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನೂ ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು

Paper Report


Sunday, July 9, 2017

PTA GENERAL BODY MEETING

ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ 
  2017-18 ಶೈಕ್ಷಣಿಕ ವರ್ಷದ PTA ಮಹಾ ಸಭೆಯು ದಿನಾಂಕ 08.07.2017 ನೇ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಪಿ.ಟಿ. ಎ. ಅಧ್ಯಕ್ಷ ಜೋನ್ ಡಿ ಸೋಜ ಅಧ್ಯಕ್ಷತೆ ವಹಿಸಿದ ಸಭೆಯನ್ನು ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಲಾ ಅಧ್ಯಾಪಕ ವೆಂಕಟ್ರಮಣ ಯನ್. ಗತ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಮುಖ್ಯೋಪಾಧ್ಯಾಯರು  ಲೆಕ್ಕಪತ್ರ ಮಂಡಿಸಿದರು. ಈ ಸಾಲಿನ PTA ಅಧ್ಯಕ್ಷರಾಗಿ ಜೋನ್ ಡಿ ಸೋಜ ಅವರೂ MPTA ಅಧ್ಯಕ್ಷರಾಗಿ ಶ್ರೀಮತಿ ಭಾರತಿ ಕೊಯಂಗಾನ ಅವರೂ ಪುನರಾಯ್ಕೆಗೊಂಡರು. PTA ಉಪಾಧ್ಯಕ್ಷರಾಗಿ ಮೊಹಮ್ಮದ್ ಮರಕ್ಕಾಡ್, MPTA ಉಪಾಧ್ಯಕ್ಷರಾಗಿ ನಸೀಮಾ ಕನಿಯಾಲತ್ತಡ್ಕ ಆರಿಸಲ್ಪಟ್ಟರು. ಅಲ್ಲದೆ 17 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಈ ವರ್ಷ ಸರಕಾರದಿಂದ ಉಚಿತವಾಗಿ ಒದಗಿಸಿದ ಶಾಲಾ ಸಮವಸ್ತ್ರವನ್ನು ಶಾಲಾ ಮೆನೇಜರ್ ವಿತರಿಸಿದರು .ಶಾಲಾ ಅಧ್ಯಾಪಕ ರಾಮ ಮೋಹನ್ ಸಿ.ಯಚ್ ಶಿಸ್ತು ಮತ್ತು ಶಾಲಾ ನಿಯಮಾವಳಿಗಳ ಬಗ್ಗೆ ರಕ್ಷಕರಿಗೆ ಮಾಹಿತಿ ನೀಡಿದರು . ಶಿಕ್ಷಕಿ ಕಮಲಾಕ್ಷಿ ಟೀಚರ್ ಅವರು ವ್ಯಕ್ತಿ ಶುಚಿತ್ವ ಮತ್ತು ಆರೋಗ್ಯದ ಕುರಿತು ತರಗತಿ ನಡೆಸಿದರು. ಶಾಲಾ ಮುಖ್ಯೋಪಾಧ್ಯಾಯರು ವಿವಿಧ ಸ್ಕಾಲರ್ಶಿಪ್ ಗಳ  ಬಗ್ಗೆ ಹಾಗು ಶಾಲೆಯಲ್ಲಿರುವ ವಿವಿಧ ವ್ಯವಸ್ಥೆಗಳು ಮತ್ತು ಮುಂದಿನ ಯೋಜನೆಯ ಬಗ್ಗೆ ತಿಳಿಸಿದರು. ರಕ್ಷಕರಿಗೆ ಶಾಲೆಯ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಒಂದು ವಾಟ್ಸಾಪ್ ಗ್ರೂಪನ್ನು ರಚಿಸುವುದೆಂದು ತೀರ್ಮಾನಿಸಲಾಯಿತು. ಶಾಲೆಯಳ್ಳಿ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ತಮ್ಮ ಸಂಪೂರ್ಣ ಸಹಾಯ ಸಹಕಾರಗಳನ್ನು ನೀಡುತ್ತೇವೆಂದು ರಕ್ಷಕರು ಹೇಳಿದರು. ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀ ಯನ್ ರಾಮಚಂದ್ರ ಭಟ್ ಮತ್ತು MPTA ಅಧ್ಯಕ್ಷೆ ಭಾರತಿ ಕೊಯಂಗಾನ ಶುಭವನ್ನು ಕೋರಿದರು. SDPHS Dharmathadka ದ  ಪ್ರಬಂಧಕ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು .ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ಹಿರಿಯ್ ಅಧ್ಯಾಪಿಕೆ ರೇವತಿ ಟೀಚರ್ ವಂದಿಸಿದರು. ಗಾಯತ್ರಿ ಟೀಚರ್ ಪ್ರಾರ್ಥನೆ ಹಾಡಿದರು ಶ್ರೀ ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲರಿಗು ಉಪಹಾರವನ್ನು ನೀಡಲಾಯಿತು


SCHOOL PARLIAMENT ELECTION

ಶಾಲಾ ಪಾರ್ಲಿಮೆಂಟು ಚುನಾವಣೆ 
2017-18 ನೇ ಶೈಕ್ಷಣಿಕ ವರ್ಷದ ಶಾಲಾ ಪಾರ್ಲಿಮೆಂಟು ಚುನಾವಣೆಯು ತಾರೀಕು 07.07.2017 ನೇ ಶುಕ್ರವಾರ ಜರಗಿತು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಎಲ್ಲರು ತಮ್ಮ ಮತ ಚಲಾಯಿಸುವ ಮೂಲಕ  ಮತದಾನದ ಪ್ರಕ್ರಿಯೆಯ ಬಗ್ಗೆ ತಿಳಿದುಕೊಂಡರು. ಮೂರು ಮಕ್ಕಳು ನಾಮ ಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿದ್ದರು . ಅಭ್ಯರ್ಥಿಗಳಿಗೆ ಕಾರು, ಕೊಡೆ, ಮತ್ತು ಶಾಲಾ ಬ್ಯಾಗ್ ನ್ನು ಚುನಾವಣಾ ಚಿಹ್ನೆಯಾಗಿ ನೀಡಲಾಯಿತು . ಬ್ಯಾಲೆಟ್ ಪೇಪರನ್ನು ತಯಾರಿಸಿ ಮಕ್ಕಳಿಗೆ ಚುನಾವಣೆಯ ದಿನ ವಿತರಿಸಲಾಯಿತು. ಅದರಲ್ಲಿ ತಮಗಿಷ್ಟವಾದ ಅಭ್ಯರ್ಥಿಗೆ ಮತ ಚಲಾಯಿಸಿದರು. ಪ್ರಿಸೈಡಿಂಗ್ ಆಫೀಸರ್, ಪೋಲಿಂಗ್ ಆಫೀಸರ್ ಆಗಿ ಮಕ್ಕಳೇ ಕರ್ತವ್ಯ ನಿರ್ವಹಿಸಿದರು . ಅಂತಿಮವಾಗಿ ಏಳನೇ ತರಗತಿಯ ಫಾತಿಮತ್ ಅಲ್ಫಿಯಾ ಶಾಲಾ ನಾಯಕಿಯಾಗಿಯೂ , ಏಳು ಎ  ತರಗತಿಯ ಗುರುಕಿರಣ್ ಉಪನಾಯಕನಾಗಿಯೂ ಆಯ್ಕೆಯಾದರು. 


English Skit



Wednesday, July 5, 2017

ವಾಚನಾ ಪಕ್ಷಾಚಾರಣೆ 
ಪಿ. ಎನ್ . ಪಣಿಕ್ಕರ್ ಅವರ ನೆನಪಿಗೋಸ್ಕರ ನಮ್ಮ ಶಾಲೆಯಲ್ಲಿ ಜೂನ್ ೧೯ ರಿಂದ ವಾಚನಾ ಪಕ್ಷಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು. ಜೂನ್ ೧೯ ರಂದು ಶಾಲಾ ಅಸೆಮ್ಬಲಿಯಲ್ಲಿ ಪಿ. ಎನ್ .ಪಣಿಕ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ಶಾಲಾ ಲೈಬ್ರರಿಯನ್ನು ಸಜ್ಜುಗೊಳಿಸಿ ಎಲ್ಲ ತರಗತಿಗೆ ಅಗತ್ಯವಿರುವ ಪುಸ್ತಕಗಳನ್ನು ತರಗತಿ ಟೀಚರ್ ಗಳಿಗೆ ನೀಡಲಾಯಿತು. ಬಳಿಕ ಎಲ್ಲ ತರಗತಿಯ ಮಕ್ಕಳಿಗೆ ಪುಸ್ತಕವನ್ನು ನೀಡಿ ಆ ಪುಸ್ತಕವನ್ನು ಓದಿ ಟಿಪ್ಪಣಿ ಬರೆದು ತರಲು ತಿಳಿಸಲಾಯಿತು .  ಎಲ್ಲ ತರಗತಿಯ ಓದುವ ಮೂಲೆಗಾಗಿ ಮಕ್ಕಳಿಂದ ಪುಸ್ತಕ ಸಂಗ್ರಹಿಸಿ ತರಲು ಹೇಳಿದೆವು . ಪ್ರತಿ ದಿನ ಒಂದೊಂದು ಪುಸ್ತಕವನ್ನು ಆಯ್ದ ಮಕ್ಕಳಿಗೆ ನೀಡಿ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ನಡೆಸಲಾಯಿತು. ವಾರ್ತಾ ಪತ್ರಿಕೆಗಳ ಹೆಸರನ್ನೊಳಗೊಂಡ ಮರವನ್ನು ಪ್ರದರ್ಶಿಸಲಾಯಿತು . 
ಈ ಮರದಲ್ಲಿ ಅಡಗಿರುವ ಪತ್ರಿಕೆಗಳ ಹೆಸರು ಹುಡುಕುವ ಚಟುವಟಿಕೆಯನ್ನು ನಡೆಸಿ ಅತಿ ಹೆಚ್ಚು ಹೆಸರು ಬರೆದ ಮಗುವಿಗೆ ಬಹುಮಾನ ನೀಡಲಾಯಿತು ಮರುದಿನ ಗಾದೆಮಾತುಗಳಿಗೆ ಸಂಬಂಧಿಸಿದ ಚಟುವಟಿಕೆ ನಡೆಸಲಾಯಿತು . 
ನಮ್ಮ ಶಾಲೆಯಸಮೀಪವಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಗ್ರಂಥಾಲಯದ ಅಧ್ಯಕ್ಷರು ಕೇರಳ ಸಾಹಿತ್ಯಪರಿಷತ್ತಿನ  ಘಟಕದ ಗೌರವ ಕಾರ್ಯದರ್ಶಿಯೂ  ಆಗಿರುವ ರಾಮಚಂದ್ರ ಭಟ್ಟರು ಗ್ರಂಥಾಲಯದ ಕುರಿತು ಮಾಹಿತಿ ನೀಡಿದರು . ಈ ಸಂದರ್ಭದಲ್ಲಿ ಗ್ರಂಥಾಲಯದವರು ಶಾಲಾ ಮಕ್ಕಳಿಗೆ ಒಂದು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಿದರು . ಪದಬಂಧ ತುಂಬಿಸುವ ಚಟುವಟಿಕೆಯನ್ನು ನಡೆಸಿದೆವು. 
ಕನ್ನಡ ಸಾಹಿತ್ಯದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪಡೆದ ಕವಿಗಳನ್ನು ಪರಿಚಯಿಸುವ ಕಾರ್ಯಕ್ರಮವನ್ನು ನಡೆಸಲಾಯಿತು. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ರಸಪ್ರಶ್ನೆ ಸ್ಪರ್ಧೆಯನ್ನು ಶ್ರೀನಿವಾಸ ಮಾಸ್ಟರ್ ಐ.ಟಿ. ಬಳಸಿ ನಡೆಸಿಕೊಟ್ಟರು . 
ಶಾಲಾ ಸಂಸ್ಕ್ರತ ಅಧ್ಯಾಪಕ ಕೃಷ್ಣ ಪ್ರಸಾದ್ ಪಾಸ್ಟರ್ ಐ.ಟಿ. ಆಧಾರಿತ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಕ್ಕಳಿಗೆ ಮನದಟ್ಟಾಗುವ ರೀತಿಯಲ್ಲಿ ಇದನ್ನು ಮಂಡಿಸಿದರು. ವಾಚನಾ ಪಕ್ಷಾಚಾರಣೆಯ ಸಮಾರೋಪ ಸಮಾರಂಭವನ್ನು ಮತ್ತು ವಿವಿಧ ಕ್ಲಬ್ ಗಳ  ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರು ನೆರವೇರಿಸಿದರು . 
ಶಾಲಾ ಹಿರಿಯ ಶಿಕ್ಷಕಿ ರೇವತಿ ಟೀಚರ್ ಅಧ್ಯಕ್ಷತೆ ವಹಿಸಿದರು . ರಾಮಮೋಹನ್ ಮಾಸ್ಟರ್ ಸ್ವಾಗತಿಸಿದರು . ವಿವಿಧ  ಕ್ಲಬ್ ಗಳ ಸಂಚಾಲಕರು ಕ್ಲಬ್ ಚಟುವಟಿಕೆಗಳ ಬಗ್ಗೆ  ಸಂಕ್ಷಿಪ್ತ ಮಾಹಿತಿ ನೀಡಿದರು ಪ್ರತಿಯೊಂದು ಕ್ಲಬ್ ನ ಸದಸ್ಯರು ವಿಜ್ಞಾನ ಪ್ರಯೋಗ , ಜಾಣ್ಮೆ ಲೆಕ್ಕ , ರಸಪ್ರಶ್ನೆ , ಸಂಘಗಾನ , ದೇಶಭಕ್ತಿ ಗೀತೆ , ಇಂಗ್ಲಿಷ್ ಪಝಲ್ , ಹೀಗೆ ಒಂದೊಂದು ಕಾರ್ಯಕ್ರಮವನ್ನು ನಡೆಸಿಕೊಟ್ಟರು . ಓದುವ ಪಕ್ಷಾಚಾರಣೆಯ ಭಾಗವಾಗಿ ಮಕ್ಕಳು ತಯಾರಿಸಿದ ಹಸ್ತ ಪತ್ರಿಕೆಗಳನ್ನು ಮುಖ್ಯೋಪಾಧ್ಯಾಯರು ಬಿಡುಗಡೆ ಮಾಡಿದರು . ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು . ಶ್ರೀನಿವಾಸ ಮಾಸ್ಟರ್ ಧನ್ಯವಾದ ಸಮರ್ಪಿಸಿದರು

VEGETABLE GARDENING

ಶಾಲಾ ಅಡುಗೆ ಮನೆ ತರಕಾರಿ ತೋಟ 
ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಬೇಕಾದ ತರಕಾರಿಗಳನ್ನು ಬೆಳೆಸಲಿಕ್ಕಾಗಿ ಶಾಲಾ ಅಧುಗೆ ಮನೆ ತರಕಾರಿ ತೋಟವನ್ನು ಸಿದ್ಧಪಡಿಸಲಾಯಿತು. ಬೆಂಡೆ, ಅಲಸಂಡೆ , ತೊಂಡೆ , ಬಸಳೆ , ಹರಿವೆ ಮೊದಲಾದ ತರಕಾರಿ ಗಿಡಗಳನ್ನು ನೆಡಲಾಯಿತು .

POST OFFICE VISIT

ಅಂಚೆ ಕಚೇರಿ ಭೇಟಿ 
ಎರಡನೇ ತರಗತಿಯ ಮಕ್ಕಳು ಸಾರ್ವಜನಿಕ ಸಂಸ್ಥೆಯ ಪರಿಚಯ ಮಾಡುವ ಉದ್ದೇಶದಿಂದ ಶಾಲೆಯ ಸಮೀಪವಿರುವ ಅಂಚೆ ಕಚೇರಿಗೆ ಭೇಟಿ ನೀಡಿದರು . ಅಂಚೆ ಕಚೇರಿಯ ಕಾರ್ಯ ವೈಖರಿಯ ಬಗ್ಗೆ ಬ್ರಾಂಚ್ ಪೋಸ್ಟ್ ಮಾಸ್ಟರ್ ಸೀತಾರಾಮ ಭಟ್ ಹಾಗೂ ಅಂಚೆಯ ಅಣ್ಣ ಕರಿಯ ಮಾಹಿತಿ ನೀಡಿದರು.

BIRTHDAY

ಹುಟ್ಟುಹಬ್ಬ 
ನಮ್ಮ ಶಾಲೆಯ ಆರನೇ ತರಗತಿಯ ರಕ್ಷಿತಾ ಸಿ.ಯಚ್ ತನ್ನ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಗ್ರಂಥಾಲಯಕ್ಕೆ ಒಂದು ಇಂಗ್ಲಿಷ್ ಇಂಗ್ಲಿಷ್ ಕನ್ನಡ ನಿಘಂಟು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು