FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, February 28, 2015

EDUCATIONAL TOUR

ನಮ್ಮ ಶಾಲೆಯಿಂದ ದಿನಾಂಕ 28.2.2015 ನೆ ಶನಿವಾರದಂದು ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಿದೆವು. 112 ಮಕ್ಕಳು ,  15 ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬಂದಿಗಳು  ಮತ್ತು ಶಾಲಾ ಪಿ.ಟಿ. ಎ. ಅಧ್ಯಕ್ಷರು ಈ ಪ್ರವಾಸದಲ್ಲಿ ಭಾಗವಹಿಸಿದರು. ಬೆಳಿಗ್ಗೆ ಏಳು ಗಂಟೆಗೆ ಶಾಲೆಯಿಂದ ಪ್ರವಾಸ ಹೊರಟೆವು.
ಕಬಕದ ಸಮೀಪ ಪುಂಡಿಕಾಯಿ ಎಂಬಲ್ಲಿ ನಮ್ಮ ಶಾಲಾ ಹಳೆವಿದ್ಯಾರ್ಥಿಯ ಮನೆಯಲ್ಲಿ ಬೆಳಗಿನ ಉಪಾಹಾರವನ್ನು ಸೇವಿಸಿ 9.30ಕ್ಕೆ ಪುತ್ತೂರಿನಲ್ಲಿರುವ CAMPCO ಚಾಕೊಲೇಟ್ ಫ್ಯಾಕ್ಟರಿಗೆ ತಲುಪಿದೆವು.

ಅಲ್ಲಿ ನಮಗೆ  ರೀತಿಯ ಚಾಕ್ಲೇಟ್ ತಯಾರಿಸುವ ವಿಧಾನವನ್ನು ಸವಿವರವಾಗಿ ತೋರಿಸಿದರು. ಅಲ್ಲಿಂದ 11 ಗಂಟೆಗೆ ಗುರುವಾಯನಕೆರೆಯ ಸಮೀಪ ಮಾರುತಿಪುರ ಕಾಣಿಯೂರು ಎಂಬಲ್ಲಿರುವ ರೈತಬಂಧು ಅಕ್ಕಿಯ ಕಾರ್ಖಾನೆಗೆ ಹೊರಟೆವು.
ಮಧ್ಯಾಹ್ನ 12.15 ಕ್ಕೆ ಅಲ್ಲಿಗೆ ತಲುಪಿದೆವು. ಅಲ್ಲಿ ನಮಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದ್ದರು. ಊಟ ಮುಗಿಸಿದ ಬಳಿಕ  ಮಕ್ಕಳನ್ನು ಐದು ಗುಂಪುಗಳಾಗಿ ಮಾಡಿ ಪ್ರತಿಯೊಂದು ಗುಂಪಿಗೂ ಒಬ್ಬೊಬ್ಬ ಸಿಬಂದಿಯನ್ನು ಒದಗಿಸಿ ಕಾರ್ಖಾನೆಯ ಸಂಪೂರ್ಣ ಪರಿಚಯ ಮಾಡಿಸಿ ಕೊಟ್ಟರು.
ದೇಶದ  ವಿವಿಧ ಭಾಗಗಳಿಂದ ಸಂಗ್ರಹಿಸಿದ ಭತ್ತವನ್ನು ಬೇಯಿಸಿ ಒಣಗಿಸಿ ಅಕ್ಕಿ ಮಾಡುವ ವಿಧಾನವನ್ನು ಮಕ್ಕಳು ತಿಳಿದುಕೊಂಡರು. ಇಲ್ಲಿ ಎಲ್ಲಾ ಕೆಲಸಗಳನ್ನು ಯಂತ್ರಗಳೇ ನಿರ್ವಹಿಸುತ್ತವೆ. ಅಲ್ಲಿಂದ ನಮ್ಮ ಪ್ರಯಾಣವು ಕಾರಿಂಜ ಬೆಟ್ಟದ ಕಡೆಗೆ ಸಾಗಿತು.
3.30 ಕ್ಕೆ ಕಾರಿಂಜ ಬೆಟ್ಟದ ಬಳಿಗೆ ತಲುಪಿದೆವು. ಪ್ರಕ್ರತಿ ರಮಣೀಯವಾದ ಸುಂದರ ದ್ರಶ್ಯಗಳನ್ನು ನೋಡುತ್ತಾ ಕೊತಿಗಳೊಂದಿಗೆ ಕೀಟಲೆ ಮಾಡುತ್ತಾ ಬೆಟ್ಟದ ತುದಿಯನ್ನು ತಲುಪಿದೆವು. ಅಲ್ಲಿ ಸ್ವಲ್ಪ ಹೊತ್ತು ದಣಿವಾರಿಸಿದೆವು .
ಅಲ್ಲಿಂದ ಪುನಃ ಕೆಳಗಿಳಿದು ಶಾಲೆಯ ಕಡೆಗೆ ಹಿಂತಿರುಗಿದೆವು. ರಾತ್ರಿ 8.30 ಕ್ಕೆ ಶಾಲೆಗೇ ಬಂದು ತಲುಪಿದೆವು. ಎಲ್ಲ ಮಕ್ಕಳೂ ಸುರಕ್ಷಿತವಾಗಿ ತಮ್ಮ ರಕ್ಷಕರೊಂದಿಗೆ ಪ್ರವಾಸದ ಸಿಹಿ ಕಹಿ ಅನುಭವಗಳನ್ನು ಮೆಲುಕು ಹಾಕುತ್ತಾ ಮನೆಗೆ ತೆರಳಿದರು.



Thursday, February 26, 2015

FOR USS-2015 MATHS MODEL QUESTIONS (mal) CLICK HERE
FOR USS-2015 ENGLISH MODEL QUESTIONS CLICK HERE

Sub Dist SHASTRA CONGRESS

ಜಿ. ಎಚ್. ಎಸ್.ಎಸ್. ಮಂಗಲ್ಪಾಡಿಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಕಾಂಗ್ರೆಸ್ಸ್ ನಲ್ಲಿ ನಮ್ಮ ಶಾಲೆಯ ಸಾತ್ವಿಕ್ ಎನ್ , ಆದಿತ್ಯ ಇ.ಎಚ್. ಶ್ರೀಚರಣ ಕೆ ಮತ್ತು ಹರ್ಷಿಣಿ ಕೆ ಇವರ ತಂಡವು ಮಂಡಿಸಿದ ಸೆಮಿನಾರಿಗೆ  ತ್ರತೀಯ ಬಹುಮಾನ ಬಂದಿರುತ್ತದೆ . ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು . 

Monday, February 23, 2015

IMMUNISATION AND HEALTH CHECK UP






ಪುತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ದಾದಿಯರು ನಮ್ಮ ಶಾಲೆಗೆ   ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಐದನೇ ತರಗತಿಯ ಮಕ್ಕಳಿಗೆ ಹತ್ತನೇ ವರ್ಷದ ಚುಚ್ಚುಮದ್ದನ್ನು ನೀಡಿದರು.

Wednesday, February 18, 2015

BIRTHDAY

 ನಮ್ಮ ಶಾಲೆಯ ಆರನೆ ತರಗತಿಯ ಪ್ರಕೃತಿ  ಕೆ  ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ  ಒಂದು ಕಥೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ರಕ್ಷಕರಿಗೆ ಅಭಿನಂದನೆಗಳು . 
ನಮ್ಮ ಶಾಲೆಯ ಏಳನೇ  ತರಗತಿಯ ವರ್ಷಿತಾ ಎಸ್.   ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಎರಡು  ಕಥೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ರಕ್ಷಕರಿಗೆ ಅಭಿನಂದನೆಗಳು .

MID DAY MEAL

ಮಕ್ಕಳಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡಿಸಲು ಮತ್ತು ಸ್ವಾವಲಂಬನೆಯನ್ನು ಬೆಳೆಸಲು ಕೃಷಿ ಇಲಾಖೆಯವರು ನೀಡಿದ ತರಕಾರಿ ಬೀಜದಿಂದ ಮನೆಯಲ್ಲಿ ಬೆಳೆಸಿದ ಪಡುವಲ ಕಾಯಿಯನ್ನು ನಮ್ಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಹರಿಪ್ರಸಾದ್ ರೈ ಮಧ್ಯಾಹ್ನದ ಬಿಸಿಯೂಟದ ಯೋಜನೆಗಾಗಿ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದನು. ಅವನಿಗೆ ಹಾಗೂ ಅವನ ಮನೆಯವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ.

Friday, February 13, 2015

PEC LEVEL SCIENCE SEMINAR






Science Talent Enrichment Programme (STEP) ನ ಭಾಗವಾಗಿ ದಿನಾಂಕ 10.2.2015 ರಂದು GHSS PaivalikeNagar ದಲ್ಲಿ ನಡೆದ ಪೈವಳಿಕೆ PEC ಮಟ್ಟದ ವಿಜ್ಞಾನ ಸೆಮಿನಾರಿನಲ್ಲಿ ನಮ್ಮ ಶಾಲೆಯ ಮಕ್ಕಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ. 5 ಮತ್ತು 6 ನೆ ತರಗತಿಯ ಮಕ್ಕಳು ಪ್ರಥಮ ಸ್ಥಾನವನ್ನೂ 7 ನೆ ತರಗತಿಯ ಮಕ್ಕಳು ದ್ವಿತೀಯ ಸ್ಥಾನವನ್ನೂ ಪಡೆದು ಉಪಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಗಳಿಸಿದ್ದಾರೆ. Paivalike PEC ಯಿಂದ ನೀಡಿದ ಟ್ರೋಫಿ ಮತ್ತು ಪ್ರಮಾಣ ಪತ್ರಗಳನ್ನು ಶಾಲಾ ಮುಖ್ಯೋಪಾಧ್ಯಾಯರು ಅಸೆಂಬ್ಲಿಯಲ್ಲಿ ಮಕ್ಕಳಿಗೆ ವಿತರಿಸಿ ಶುಭಹಾರೈಸಿದರು. 

Thursday, February 12, 2015

NO OF PERIODS ENHANCED

ಮು೦ದಿನ ಅಧ್ಯಯನ ವರ್ಷದಿ೦ದ ಶಾಲೆಗಳಲ್ಲಿ ಪಿರೀಡುಗಳ ಸ೦ಖ್ಯೆಯನ್ನು ೮ ಆಗಿ ಹೆಚ್ಚಿಸಲು ಕೇರಳ ವಿದ್ಯಾಭ್ಯಾಸ ಸಚಿವ ಶ್ರೀ ಅಬ್ದುಲ್ ರಬ್  ಅವರ ಅಧ್ಯಕ್ಷತೆಯಲ್ಲಿ ಸೇರಿದ ಕರಿಕ್ಕುಲ೦ ಕಮಿಟಿ ತೀರ್ಮಾನಿಸಿದೆ. ಕಲೆ, ಕ್ರೀಡೆ ಹಾಗೂ ವೃತ್ತಿ ಪರಿಚಯಗಳ ಕಲಿಕೆಗೆ ಸ೦ದರ್ಭ ಒದಗಿಸಲು ಪಿರೀಡುಗಳ ಸ೦ಖ್ಯೆಯನ್ನು  ಹೆಚ್ಚಿಸಲಾಗಿದೆ. ೧ ರಿ೦ದ ೧೦ ನೇ ತರಗತಿ ವರೆಗೆ ಇದು ಅನ್ವಯಿಸುತ್ತದೆ. ಶುಕ್ರವಾರ ೯. ೩೦ ರಿ೦ದ ೪. ೩೦ ರ ವರೆಗೂ ಉಳಿದ ದಿವಸಗಳಲ್ಲಿ ೧೦ ರಿ೦ದ ೪  ಗ೦ಟೆ ವರೆಗೆ  ತರಗತಿಗಳು ನಡೆಯಲಿದೆ. ಸಮಯದ ಕ್ರಮೀಕರಣ ಈ ರೀತಿಯಲ್ಲಿದೆ (ನಿಮಿಷಗಳಲ್ಲಿ). ಸೋಮ, ಮ೦ಗಳ, ಬುಧ, ಗುರುವಾರಗಳಲ್ಲಿ  ೪೦, ೪೦, (೧೦ ನಿಮಿಷ ವಿರಾಮ) ೪೦, ೩೫ (೧ ಗ೦ಟೆ ವಿರಾಮ) ೩೫, ೩೫ (೫ ನಿಮಿಷ ವಿರಾಮ) ೩೦, ೩೦  ಶುಕ್ರವಾರ ೪೦, ೪೦, (೧೦ ನಿಮಿಷ ವಿರಾಮ) ೩೫, ೩೫ (೨ ಗ೦ಟೆ ವಿರಾಮ) ೩೫, ೩೫ (೫ ನಿಮಿಷ ವಿರಾಮ) ೩೫, ೩೦ .

Friday, February 6, 2015

Mid Day Meal

ನಮ್ಮ ಶಾಲೆಯ ಆರನೇ ತರಗತಿಯ ಚೈತ್ರಾಳು ಕ್ರಷಿ ಭವನದವರು ಒದಗಿಸಿದ ತರಕಾರಿ ಬೀಜದಿಂದ ಅವಳ ಮನೆಯಲ್ಲಿ ಬೆಳೆಸಿದ  ಪಡುವಲ ಕಾಯಿಯನ್ನು ಶಾಲಾ ಮಧ್ಯಾಹ್ನದ ಊಟಕ್ಕೆ ಕೊಡುಗೆಯಾಗಿ ನೀಡಿದಳು . ಅವಳಿಗೂ ಅವಳ ಹೆತ್ತವರಿಗೂ ಅಭಿನಂದನೆಗಳು . 

BIRTHDAY


ಇಂದು ನಮ್ಮ ಶಾಲೆಯ ಏಳನೇ ತರಗತಿಯ ಅಕ್ಷತಾ ಕೆ. ಎ. ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಕನ್ನಡ ನಿಘಂಟು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು

Thursday, February 5, 2015

ANNUAL EVALUATION

ಈ ಶೈಕ್ಷಣಿಕ ವರ್ಷದ ವಾರ್ಷಿಕ ಮೌಲ್ಯಮಾಪನವು ಮಾರ್ಚಿ ತಿಂಗಳ 23 ನೇ ತಾರೀಕಿಗೆ ಪ್ರಾರಂಭಗೊಂಡು 30 ರಂದು ಕೊನೆಗೊಳ್ಳಲಿದೆ .

LSS USS EXAM POSTPONED

ಈ ತಿಂಗಳ 21 ರಂದು ನಡೆಯಬೇಕಾಗಿದ್ದ LSS / USS ಪರೀಕ್ಷೆಗಳು ಮಾರ್ಚ್ ತಿಂಗಳ 28 ನೇ ತಾರೀಕಿನಂದು ನಡೆಯಲಿದೆ.

OBITUARY

ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಧರ್ಮತ್ತಡ್ಕ ವಿದ್ಯಾ ಸಂಸ್ಥೆಯಲ್ಲಿ ಅನೇಕ ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಟಿ. ಕೆ. ಮಾಸ್ಟ್ರು ಎಂದೇ ಚಿರ ಪರಿಚಿತರಾಗಿದ್ದ ಟಿ. ಕೆ. ಸುಬ್ರಹ್ಮಣ್ಯ ಭಟ್ ದಿನಾಂಕ 5.2.2015 ನೇ ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು. ಅವರ ಆತ್ಮಕ್ಕೆ ಆ ಪರಮಾತ್ಮನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತನು ಕರುಣಿಸಲಿ ಎಂದು ನಾವು ಪರಮಾತ್ಮನಲ್ಲಿ ಬೇಡಿಕೊಳ್ಳುತ್ತೇವೆ.

Tuesday, February 3, 2015

USS EXAM OMR Sheet


ಈ ವರ್ಷದ ಯು. ಎಸ್. ಎಸ್. ಪರೀಕ್ಷೆಯಲ್ಲಿ ಉಪಯೋಗಿಸುವ O M R Sheet ನ ಮಾದರಿ.

IEDC Instuctor

ಇಂದು ನಮ್ಮ ಶಾಲೆಗೆ ಮಂಜೇಶ್ವರ ಬಿ. ಆರ್. ಸಿ. ಯಿಂದ IEDC INSTRUCTOR ಸಿಂಧು ಟೀಚರ್  ಆಗಮಿಸಿದರು. IEDC  ಮಕ್ಕಳನ್ನು ಕಂಡು ಮಾತನಾಡಿಸಿ ಅವರ ಕಲಿಕೆಗೆ ಬೇಕಾದ ಸಹಾಯವನ್ನೂ  ಸಲಹೆಗಳನ್ನು ನೀಡಿದರು.

BIRTHDAY

 ಇಂದು ನಮ್ಮ ಶಾಲೆಯ ಮೂರನೆ ತರಗತಿಯ ನಿಕಿತಾ ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ನಿಘಂಟು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ  ರಕ್ಷಕರಿಗೆ ಅಭಿನಂದನೆಗಳು