FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, October 30, 2015

CLEAN SCHOOL PROGRAMME

ಕ್ಲೀನ್ ಸ್ಕೂಲ್ ಕಾರ್ಯಕ್ರಮದ ಭಾಗವಾಗಿ ನಮ್ಮ ಶಾಲೆಯಲ್ಲಿ   ಅಕ್ಟೋಬರ್ 2 ರಿಂದ ಒಂದು ತಿಂಗಳ ಕಾಲ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಶಾಲಾ ಪರಿಸರ , ತರಗತಿ, ಮೂತ್ರದೊಡ್ಡಿ, ಟಾಯ್ಲೆಟ್ ,ಅಡುಗೆ ಕೋಣೆ , ಆಪೀಸ್ ಕೋಣೆಗಳನ್ನು ಶುಚಿಗೊಳಿಸಲಾಯಿತು. ಪ್ರತಿದಿನ ಶಾಲಾ ಅಸೆಂಬ್ಲಿಯಲ್ಲಿ  ಒಂದೊಂದು ವಿಷಯದ ಕುರಿತು ಒಬ್ಬೊಬ್ಬ ವಿದ್ಯಾರ್ಥಿಯು ಮಾಹಿತಿ ನೀಡಿದರು. 
08.10.2015 -  ಶ್ರೀ ವೆಂಕಟರಮಣ ಮಾಸ್ಟರ್ ಆರೋಗ್ಯವೇ ಭಾಗ್ಯ ಎಂಬ ವಿಷಯದ ಕುರಿತು ಮಾತನಾಡಿದರು. 
09.10.2015 -  ಶಾಲಾ ನಾಯಕ ಸಾತ್ವಿಕ್ ಕ್ರಷ್ಣ ವ್ಯಕ್ತಿ ಶುಚಿತ್ವದ ಕುರಿತು ಮಾತನಾಡಿದನು. 
12.10.2015 - ಏಳನೇ ತರಗತಿಯ ಮಕ್ಕಳು ಬೇಸ್ತು ಬಿದ್ದ ಈಡು ಎಂಬ ಸ್ಕಿಟ್ ನ್ನು ಪ್ರಸ್ತುತಪಡಿಸಿದರು. 
13.10.2015 - ಶಾಲಾ ಆರೋಗ್ಯ ಕ್ಲಬ್ ನ ಚಟುವಟಿಕೆಗಳ ಬಗ್ಗೆ ದೀಪಕ್ ಮಾತನಾಡಿದನು. 
14.10. 2015- ಡ್ರೈ ಡೇ ಆಚರಿಸುವುದು ಹೇಗೆ ಎಂಬ ವಿಷಯದ ಕುರಿತು ವಿಶ್ವದೀಪ್ ಮಾತನಾಡಿದನು. 
15.10.2015 - Global Handwashing Day ಆಚರಿಸಲಾಯಿತು. ಧರ್ಮತ್ತಡ್ಕ ಕುಟುಂಬ ಕಲ್ಯಾಣ ಕೇಂದ್ರದ ನರ್ಸ್ ಶ್ರೀಮತಿ ಲಕ್ಷ್ಮೀದೇವಿ ಕೈ ತೊಳೆಯುವ ವಿಧಾನವನ್ನು ಹೇಳಿಕೊಟ್ಟರು. 
16.10.2015 - ಜೀವಿಗಳಿನ್ದ ಹರಡುವ ರೋಗಗಳ ಕುರಿತು ಆಶಾಲತಾ ಮಾತನಾಡಿದಳು. 
19.10.2015- ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಎಂಬ ವಿಷಯದ ಕುರಿತು ಅಭಿಷೇಕ್ ಪಿ. ಮಾತನಾಡಿದನು. 
20.10.2015 - ಏಳನೇ ತರಗತಿಯ ಕ್ರತಿಕಾ ವ್ಯಕ್ತಿ ಶುಚಿತ್ವದಲ್ಲಿ ಹಾಸಿಗೆ ಹೊದಿಕೆ ಉಡುಪು ಚಪ್ಪಲಿಗಳ ಬಳಕೆಯ ಕುರಿತು ಮಾತನಾಡಿದಳು. 
26.10.2015 -  ಸೊಳ್ಳೆಗಳಿಂದ ರಕ್ಷಣೆ ನಿರ್ಮೂಲನೆ ಮುಂಜಾಗ್ರತಾ ಕ್ರಮಗಳ ಕುರಿತು ಮೊನಿಷಾ ಮಾತನಾಡಿದಳು 
27.10.2015 - ಪರಿಸರ ಸಂರಕ್ಷಣೆಗಾಗಿ ದಿನಾಚರಣೆಗಳು , ಚಳವಳಿಗಳು , ಯೋಜನೆಗಳು ಎಂಬ ವಿಷಯದ ಕುರಿತು ಚೈತ್ರಾ ಮಾತನಾಡಿದಳು. 
28.10.2015 - ಉತ್ತಮ ಆರೋಗ್ಯಕರ ಅಭ್ಯಾಸಗಳ ಕುರಿತು ರೇಶ್ಮಾ ಮಾತನಾಡಿದಳು. 
29.10.2015- ಮನೆ ,ಸ್ನಾನ ಗ್ರಹ ,ಶೌಚಾಲಯಗಳ ಶುಚೀಕರಣ ದ ಬಗ್ಗೆ ಮುರಲೀಧರ ಮಾತನಾಡಿದನು. 
30.10.2015 - ಆರೋಗ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದ  ಗೀತೆಗಳನ್ನು ಮಕ್ಕಳು ಹಾಡಿದರು. 





SCHOOL KALOTHSAVAM

ಇಂದು ಶಾಲಾ ಕಲೋತ್ಸವದಲ್ಲಿ ಯು ಪಿ ವಿಭಾಗದ ದೇಶಭಕ್ತಿಗೀತೆ, ಸಮೂಹ ಗೀತೆ, ಉರ್ದು ಸಮೂಹ ಗೀತೆ, ಒಪ್ಪನ, ಜಾನಪದನ್ರತ್ಯ , ನಾಟಕ ಮತ್ತು ಸಮೂಹ ನ್ರತ್ಯ ಸ್ಪರ್ಧೆಗಳು ನಡೆದುವು. ಕಲೋತ್ಸವದಲ್ಲಿ ವಿಜಯಿಯಾದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. 
                                                ಐದನೇ ತರಗತಿ ಮಕ್ಕಳಿಂದ ಒಪ್ಪನ 
                                  ವೆಂಕಟರಮಣ ಮಾಸ್ಟರ್  ಸರ್ಟಿಫಿಕೆಟ್ ವಿತರಿಸುತ್ತಿರುವುದು 
                                 ಕಮಲಾಕ್ಷಿ ಟೀಚರ್ ಅವರಿಂದ ಬಹುಮಾನ ವಿತರಣೆ 
                                  ಅರ್ಪಿತಾ ಮತ್ತು ಬಳಗದವರಿಂದ ಸಮೂಹ ನ್ರತ್ಯ
                                          ನಾಟಕದ ವಿವಿಧ  ದ್ರಶ್ಯಗಳು 




                                      ಏಳನೇ ತರಗತಿಯ ಮಕ್ಕಳಿಂದ ಒಪ್ಪನ 

                                                 ಜಾನಪದ ನ್ರತ್ಯ - ಪೂರ್ಣಿಮಾ 
                                                        ಅರುಣ ಕುಮಾರಿ
                                                                  ಕುಮಾರಿ ಸಂಧ್ಯಾ ಪಿ.
                                                   ಕುಮಾರಿ ಮಧುರಾ 
                                                                ಕು. ಮೊನಿಷಾ

Thursday, October 29, 2015

SCHOO KALOTHSAVA

ಇಂದು ಕಲೋತ್ಸವದ ವೇದಿಕೆ ಸ್ಪರ್ಧೆಗಳು ನಡೆದುವು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಯನ್. ಮಹಾಲಿಂಗ ಭಟ್ ಹಾಗೂ ಹಿರಿಯ ಅಧ್ಯಾಪಿಕೆ ಶ್ರೀಮತಿ ರೇವತಿ ಟೀಚರ್ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಶಾಸ್ತ್ರೀಯ ಸಂಗೀತ ಸ್ಪರ್ಧೆಯೊಂದಿಗೆ ಇಂದಿನ ಸ್ಪರ್ಧೆಗಳು ಆರಂಭಗೊಂಡವು. ಬಳಿಕ ಕನ್ನಡ ಕಂಠಪಾಠ,ಇಂಗ್ಲೀಷ್. ಹಿಂದಿ, ಉರ್ದು ಕಂಠಪಾಠಗಳು, ಕತೆಹೇಳುವ ಸ್ಪರ್ಧೆ, ಮಾಪಿಳ್ಳಾ ಪಾಟ್ಟು , ಲಘು ಸಂಗೀತ , ಕನ್ನಡ ಭಾಷಣ, ಏಕಪಾತ್ರಾಭಿನಯ, ದೇಶಭಕ್ತಿಗೀತೆ, ಎಲ್. ಪಿ. ವಿಭಾಗದ ಜಾನಪದ ನ್ರತ್ಯ , ಸಮೂಹ ನ್ರತ್ಯ ಮೊದಲಾದ ಸ್ಪರ್ಧೆಗಳು ನಡೆದುವು.
                                                   ಕು. ಸಿಂಜಿತಾ. ಕೆ 
                                             ಮಾ ಸಾತ್ವಿಕ್ ಕ್ರಷ್ಣ .ಯನ್
                                                        ಕು. ಕೀರ್ತನಾ ಯನ್ 
                      ಕತೆ ಹೇಳುವ ಸ್ಪರ್ಧೆ - ಲಿಖಿತ್ ಕ್ರಷ್ಣ. ಯನ್
                                                        ಮನೋಜ್ಞಾ ಸಿ. ಯಚ್
                                                         ಮನೀಶ್  ಜಿ.
                        ಮಾಪಿಳ್ಳಾ ಪಾಟ್ಟು ಹಾಡುತ್ತಿರುವ ಅಹಮದ್ ಶಾನಿಬ್
                           ಪರಿಸರ ಮಾಲಿನ್ಯದ ಕುರಿತು ಭಾಷಣ ಮಾಡುತ್ತಿರುವ ಕ್ರತಿಕಾ ಪಿ. 
                         ದೇಶಭಕ್ತಿ ಗೀತೆ ಹಾಡುತ್ತಿರುವ ಪುಟಾಣಿಗಳು

                                                   ಲಹರಿ - ಜಾನಪದ ನ್ರತ್ಯ 
                                                                        ಕು. ಹರ್ನಿತಾ 
                                        ಮನೀಶ ಯಸ್. ಡಿ. 
                                                         ಅಶ್ವಿನಿ ಡಿ.ಕೆ. 
                                           ಮನೀಶ ಮತ್ತು ತಂಡದವರಿಂದ ಸಮೂಹ  ನ್ರತ್ಯ 
                                                   ಕೀರ್ತನಾ ಮತ್ತು ಬಳಗದವರಿಂದ ದೇಶಭಕ್ತಿಗೀತೆ
ಏಕಪಾತ್ರಾಭಿನಯದಲ್ಲಿ ಭಾಗವಹಿಸಿದ ಶಾರದಾ ಸುರಭಿಯ ವಿವಿಧ ಮುಖ ಭಾವಗಳು







SCHOOL KALOTHSAVA

ನಮ್ಮ ಶಾಲಾ ಕಲೋತ್ಸವ ಅಕ್ಟೋಬರ್ 28 ರಂದು ಆರಂಭಗೊಂಡಿತು . ವೇದಿಕೆಯೇತರ ಸ್ಪರ್ಧೆಗಳಾದ ಚಿತ್ರ ರಚನೆ, ವಾಟರ್ ಕಲರ್, ಒಗಟು ಮೊದಲಾದ ಸ್ಪರ್ಧೆಗಳು ನಡೆದುವು. 
                 ಚಿತ್ರರಚನಾ ಸ್ಪರ್ಧೆಯಲ್ಲಿ ನಿರತರಾಗಿರುವ ಮಕ್ಕಳು 


ಒಂದು ಮತ್ತು ಎರಡನೆ ತರಗತಿಯ ಮಕ್ಕಳಿಗಾಗಿ ರೇವತಿ ಟೀಚರ್ ಮತ್ತು ಗಾಯತ್ರಿ ಟೀಚರ್ ಒಗಟು ಸ್ಪರ್ಧೆಯನ್ನು ನಡೆಸಿಕೊಟ್ಟರು.

Sharada Pooja

ನವರಾತ್ರಿ ಉತ್ಸವದ ಭಾಗವಾಗಿ ನಮ್ಮ ಶಾಲೆಯಲ್ಲಿ ದಿನಾಂಕ 21.10.2015 ರಂದು ಪುಸ್ತಕ ಪೂಜೆ ನಡೆಯಿತು. ಎಲ್ಲ ಮಕ್ಕಳ ಪುಸ್ತಕಗಳನ್ನಿಟ್ಟು ಮಕ್ಕಳು ಹಾಗೂ ಅಧ್ಯಾಪಕರು ಸೇರಿ ಭಜನೆ ಮಾಡಿದರು. ನೆರಿಯ ಶಿವಪ್ರಸಾದ್ ಭಟ್ ಅವರು ಪುಸ್ತಕ ಪೂಜೆಯನ್ನು ನೆರವೇರಿಸಿದರು. ಬಳಿಕ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ದಿನದ ಮಹತ್ವದ ಕುರಿತು ಸಂಸ್ಕ್ರತ ಅಧ್ಯಾಪಕರಾದ ಕ್ರಷ್ಣಪ್ರಸಾದ್ ಮಾಸ್ಟರ್ ಮಕ್ಕಳಿಗೆ ತಿಳಿಸಿದರು. ಎಲ್ಲ ಮಕ್ಕಳಿಗೂ ಸೇರಿದ ರಕ್ಷಕರಿಗೂ ಪ್ರಸಾದವನ್ನು ವಿತರಿಸಲಾಯಿತು. ರಕ್ಷಕರು ತೆಂಗಿನಕಾಯಿ, ಬಾಳೆ ಎಲೆ ಹೂ ಇತ್ಯಾದಿ ವಸ್ತುಗಳನ್ನು ನೀಡಿ ಸಹಕರಿಸಿದರು.

Tuesday, October 20, 2015

VOTERS LIST

TO SEE YOUR NAME IN VOTER LIST CLICK HERE

TO SEARCH VOTERS DETAILS CLICK HERE

KNOW YOUR POSTING AND TRINING VENUE AND DATE IN e DROP

e-DROP has Provided facility to know to your Posting and also to Know Your Training Venue and Date.Go to e_DROP Site .Click on the Link Know Your Posting.Type the Institution Id - Sl.No(Serial Number in the list that is submitted online by the Institution) and Captcha. Then Click Submit button.

DASARA NAADA HABBA




ದಸರಾ ನಾಡ ಹಬ್ಬದ ಅಂಗವಾಗಿ ನಮ್ಮ ಶಾಲೆಯಲ್ಲಿ ಹುಲಿವೇಷ ಮತ್ತು ಸಿಂಹ ವೇಷ ಕುಣಿತವನ್ನು ಪ್ರದರ್ಶಿಸಲಾಯಿತು. ಕನಿಯಾಲದ ಸತೀಶ ಮತ್ತು ತಂಡ ಹಾಗೂ ಕಿರಣ್ ಕುಮಾರ್ ಮತ್ತು ತಂಡದವರು ಇದನ್ನು ನಡೆಸಿಕೊಟ್ಟರು.