FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, December 24, 2015

NABI DINAM AND CHRISTMAS GREETINGS

ಎಲ್ಲಾ ಮುಸ್ಲಿಂ ಬಾಂಧವರಿಗೆ ನಬಿ ದಿನದ ಶುಭಾಶಯಗಳು.
ಎಲ್ಲಾ ಕ್ರೈಸ್ತ ಬಂಧುಗಳಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು

KASARAGOD REVENUE DIST.KALOTSAVAM 2015

Programme Shedule of Kasaragod Revenue District School Kalothsavam 2015-16

Monday, December 21, 2015

Numats Result Published

ಆರನೆ ತರಗತಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತ ಮಕ್ಕಳಿಗೆ ಗಣಿತದಲ್ಲಿ ವಿಶೇಷ ತರಬೇತಿ ನೀಡುವುದಕ್ಕಾಗಿ ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆಸಿದ NuMats ಪರೀಕ್ಷೆಯ ಪಲಿತಾಂಶ ಪ್ರಕಟಗೊಂಡಿದೆ . ಈ ಪರೀಕ್ಷೆಯಲ್ಲಿ ನಮ್ಮ ಶಾಲೆಯಿಂದ ನಾಲ್ಕು ಮಕ್ಕಳು ಭಾಗವಹಿಸಿದ್ದರು. ಅವರಲ್ಲಿ ಮೂವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
Result published at AEO Office Manjeshwar
              ಜನರಲ್ ವಿಭಾಗದಿಂದ ಆಯ್ಕೆಯಾದ ಸಿಂಜಿತಾ ಕೆ. 

             ಜನರಲ್ ವಿಭಾಗದಿಂದ ಆಯ್ಕೆಯಾದ ಶಾರದಾ ಸುರಭಿ 
                ಪರಿಶಿಷ್ಟ ಪಂಗಡ ವಿಭಾಗದಿಂದ ಆಯ್ಕೆಯಾದ ಮಧುರಾ ಪಿ. 
ಎಲ್ಲಾ ಮಕ್ಕಳಿಗೂ ಅಭಿನಂದನೆಗಳು .

Saturday, December 12, 2015

SECOND TERM EVALUATION

2015-16  ನೆ ಸಾಲಿನ ಎರಡನೇ  ಹಂತದ ಮೌಲ್ಯಮಾಪನ ಚಟುವಟಿಕೆಗಳು ದಶಂಬರ 10 ನೇ ತಾರೀಕಿನಿಂದ  ಪ್ರಾರಂಭ ಆಗಿವೆ. ದಶಂಬರ 18 ರ ವರೆಗೆ ಮೌಲ್ಯಮಾಪನ ಚಟುವಟಿಕೆಗಳು ನಡೆಯಲಿರುವುದು. ದಶಂಬರ 19 ರಿಂದ ಕ್ರಿಸ್ಮಸ್ ರಜೆಯು ಪ್ರಾರಂಭವಾಗುವುದು. 

              ಮೌಲ್ಯಮಾಪನ ಚಟುವಟಿಕೆಯಲ್ಲಿ ನಿರತರಾಗಿರುವ ಮಕ್ಕಳು

Monday, December 7, 2015

ಎರಡನೆ ತರಗತಿ ಮಕ್ಕಳು ತಯಾರಿಸಿದ ಸೂಚನಾ ಫಲಕಗಳು
ಹಸಿರಿನ ಸಿರಿ ಎಂಬ ಪಾಠ ಕ್ಕೆ ಸಂಬಂಧಸಿ ಎರಡನೆ ತರಗತಿಯ ಮಕ್ಕಳು ತಾವು ತಯಾರಿಸಿದ ಸೂಚನಾ ಫಲಕಗಳೊಂದಿಗೆ

KALAPRATHIBHEGALU

ಇವರೂ ನಮ್ಮ ಶಾಲೆಯ ಕಲಾ ಪ್ರತಿಭೆಗಳು

 ತನುಶ್ ಕುಮಾರ್ ಯನ್. ಎರಡನೆ ತರಗತಿ - ಎಲ್. ಪಿ. ವಿಭಾಗದ ಕನ್ನಡ ಒಗಟು, ಕನ್ನಡ ಕಂಠಪಾಠ,  ಲಲಿತಗಾನ ಗಳಲ್ಲಿ ಎ ಗ್ರೇಡ್ , ಸಂಘಗಾನದಲ್ಲಿ ಪ್ರಥಮ ಸ್ಥಾನ, ದೇಶಭಕ್ತಿಗಾನದಲ್ಲಿ ಬಿ. ಗ್ರೇಡ್ 
 ಮನೋಜ್ಞಾ ಸಿ. ಯಚ್. ಎರಡನೆ ತರಗತಿ - ಎಲ್. ಪಿ. ವಿಭಾಗದ ಕನ್ನಡ ಭಾಷಣ ಮತ್ತು ಏಕಪಾತ್ರಾಭಿನಯದಲ್ಲಿ ಎ ಗ್ರೇಡ್ ನೊಂದಿಗೆ ಮೂರನೆ ಸ್ಥಾನ , ಕಥೆ ಹೇಳುವ ಸ್ಪರ್ಧೆಯಲ್ಲಿ ಎ ಗ್ರೇಡ್ ಸಂಘಗಾನದಲ್ಲಿ ಪ್ರಥಮ ಸ್ಥಾನ , ದೇಶಭಕ್ತಿಗಾನದಲ್ಲಿ ಬಿ. ಗ್ರೇಡ್ 
 ಕ್ರತಿಕಾ ಪಿ ಏಳನೇ ತರಗತಿ - ಯು. ಪಿ. ಸಂಸ್ಕ್ರತ ಕಥಾಕಥನಂ ಎ ಗ್ರೇಡ್ ನೊಂದಿಗೆ ದ್ವಿತೀಯ , ಪದ್ಯೋಚ್ಚಾರಣಮ್  ಎ ಗ್ರೇಡ್ , ಕನ್ನಡ ಭಾಷಣ ಸಿ ಗ್ರೇಡ್, ಸಂಸ್ಕ್ರತ ನಾಟಕ ದ್ವಿತೀಯ, ಯು. ಪಿ. ಜನರಲ್  ಸಂಘಗಾನ  ತ್ರತೀಯ , ದೇಶಭಕ್ತಿಗೀತೆಯಲ್ಲಿ ಬಿ. ಗ್ರೇಡ್ 
 ಇಬ್ರಾಹಿಮ್ ಖಲೀಲ್ ಏಳನೇ ತರಗತಿ - ಯು. ಪಿ. ಉರ್ದು ಕ್ವಿಝ್  ಎ ಗ್ರೇಡ್ , ಮಪಿಳ್ಳಾ ಪಾಟ್ಟು  ಸಿ ಗ್ರೇಡ್ 
ಹೈದರ್ ಆಲಿ ಸಿ.ಎ. ಆರನೆ ತರಗತಿ - ಯು.ಪಿ. ಉರ್ದು ಕಂಠಪಾಠ ಎ ಗ್ರೇಡ್ ನೊಂದಿಗೆ ಮೂರನೆ ಸ್ಥಾನ

 ಯು. ಪಿ. ಸಂಸ್ಕ್ರತ ನಾಟಕ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ - ಸಾತ್ವಿಕ್ ಕ್ರಷ್ಣ , ಶ್ರೇಯಸ್, ಅಬಿಷೇಕ್ , ಮುರಳೀಧರ , ಕೌಶಿಕ್ , ಚೈತ್ರ , ರೇಶ್ಮಾ, ಕ್ರತಿಕಾ, ಸ್ವಾತಿ ಮತ್ತು ಅರ್ಪಿತಾ 
ಅರ್ಪಿತಾ ಎ. ಏಳನೇ ತರಗತಿ - ಯು. ಪಿ. ಸಂಸ್ಕೃತ ಕವಿತಾ ರಚನೆ ಎ ಗ್ರೇಡ್ , ಸಂಸ್ಕ್ರತ ನಾಟಕ ದ್ವಿತೀಯ , ಯು. ಪಿ. ಕಥಾಪ್ರಸಂಗಂ ಮೂರನೆ ಸ್ಥಾನ
ಮೊನಿಷಾ ಕೆ. ಏಳನೇ ತರಗತಿ - ಯು. ಪಿ. ಜಾನಪದ ನ್ರತ್ಯ ಮೂರನೆ ಸ್ಥಾನ , ಕನ್ನಡ ಕಥಾ ರಚನೆ ಬಿ. ಗ್ರೇಡ್ 
 ಯು.ಪಿ. ಜನರಲ್ ಸಂಘಗಾನದಲ್ಲಿ ಎ ಗ್ರೇಡ್ ನೊಂದಿಗೆ ತ್ರತೀಯ ಸ್ಥಾನ ಪಡೆದ ತಂಡ - ಶಾರದಾ ಸುರಭಿ, ಸುಮೇಧಾ ಕೆ ಕ್ರತಿಕಾ ಪಿ, ಉಮ್ಮು ಹಬೀಬಾ, ಶಾಹಿದಾ, ಅವ್ವಮತುಲ್ ರಾಬಿಯಾ,ಪಾತಿಮತ್ ಇರ್ಫಾನಾ ವಿ. 

Friday, December 4, 2015

Sub District Kalotsava 2015

ಬೇಕೂರಿನಲ್ಲಿ ಜರಗಿದ  ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ವಿಜೇತರಾದ ಮಕ್ಕಳನ್ನು ಶಾಲಾ ಅಸೆಂಬ್ಲಿಯಲ್ಲಿ ಅಭಿಸಂದಿಸಲಾಯಿತು .
                 ಉಪಜಿಲ್ಲಾ ಕಲೋತ್ಸವದಲ್ಲಿ ಸಿಕ್ಕಿದ ಪ್ರಶಸ್ತಿಗಳು. 
            ಕಲೋತ್ಸವದಲ್ಲಿ ಭಾಗವಹಿಸಿದ ನಮ್ಮಶಾಲೆಯ ಮಕ್ಕಳ ತಂಡ 
           ಲ್. ಪಿ. ಸಂಘಗಾನದಲ್ಲಿ  ಪ್ರಥಮ ಸ್ಥಾನ ಪಡೆದ ತಂಡ - ಅಪರ್ಣ ಯನ್ , ಹರ್ನಿತಾ, ನಮ್ರತಾ , ದೀಕ್ಷಾ , ಕೀರ್ತನಾ , ತನುಶ್ ಕುಮಾರ್ ಯನ್, ಮನೋಜ್ಞಾ ಸಿ.ಯಚ್.
   ಎಲ್ ಪಿ. ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಸ್ಥಾನ, ಸಂಘಗಾನ ದಲ್ಲಿ ಪ್ರಥಮ ಸ್ಥಾನ ಪಡೆದ ಕೀರ್ತನಾ ಯನ್ 
 ಯು. ಪಿ. ಸಂಸ್ಕ್ರತೋತ್ಸವದ ಪದ್ಯೋಚ್ಚಾರಣದಲ್ಲಿ - ಪ್ರಥಮ, ಗದ್ಯಪಾರಾಯಣ, ಪ್ರಶ್ನೋತ್ತರಿ ,ಶಾಸ್ತ್ರೀಯ ಸಂಗೀತ, ಇಂಗ್ಲೀಷ್ ಕಂಠಪಾಠ, ಸಂಸ್ಕ್ರತ ನಾಟಕದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಸಾತ್ವಿಕ್ ಕ್ರಷ್ಣ ಯನ್. 
 ಯು.ಪಿ. ಸಂಸ್ಕ್ರತೋತ್ಸವದ ಅಕ್ಷರಶ್ಲೋಕದಲ್ಲಿ ಪ್ರಥಮ, ಗಾನಾಲಾಪನ, ಕನ್ನಡ ಅಕ್ಷರಶ್ಲೋಕ , ಲಘುಸಂಗೀತದಲ್ಲಿ  ದ್ವಿತೀಯ , ಏಕಪಾತ್ರಾಭಿನಯದಲ್ಲಿ ಎ ಗ್ರೇಡ್ ಪಡೆದ ಶಾರದಾ ಸುರಭಿ. 
ಯು. ಪಿ. ಸಂಸ್ಕ್ರತೋತ್ಸವದ ಸಮಸ್ಯಾಪೂರಣದಲ್ಲಿ ಪ್ರಥಮ , ಕನ್ನಡ ಕಂಠಪಾಠ, ಕನ್ನಡ ಕವಿತಾ ರಚನೆ ಯಲ್ಲಿ ಎ ಗ್ರೇಡ್ ಪಡೆದ ಸಿಂಜಿತಾ  ಕೆ 

Wednesday, December 2, 2015

Manjeshwar Sub Dist. Kalothsavam Result.

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಫಲಿತಾಂಶ ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

MANJESHWAR SUB DIST KALOTSAVAM 2015

ಸರಕಾರೀ ಹೈಯರ್ ಸೆಕೆಂಡರಿ ಶಾಲೆ ಬೇಕೂರಿನಲ್ಲಿ ನವೆಂಬರ್ 28  ರಿಂದ ಡಿಸೆಂಬರ್ 2 ನೆ ತಾರೀಕಿನ ತನಕ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು  ಯಶಸ್ವಿಯಾಗಿ ನಡೆಯಿತು. ಇದರಲ್ಲಿ ನಮ್ಮ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ . ಬಹುಮಾನ ಪಡೆದ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನೆಗಳು. ಯಲ್. ಪಿ. ವಿಭಾಗದ ಕನ್ನಡ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯು 20 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನೂ, ಎಲ್.ಪಿ. ಜನರಲ್ ವಿಭಾಗದಲ್ಲಿ 26 ಅಂಕಗಳೊಂದಿಗೆ ಹತ್ತನೇ ಸ್ಥಾನ , ಯು. ಪಿ. ವಿಭಾಗದ ಕನ್ನಡ ಸ್ಪರ್ಧೆಗಳಲ್ಲಿ 14 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನೂ , ಯು.ಪಿ. ಜನರಲ್ ವಿಭಾಗದಲ್ಲಿ 61 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನೂ, ಯು.ಪಿ. ಸಂಸ್ಕ್ರತೋತ್ಸವದಲ್ಲಿ  68  ಅಂಕಗಳೊಂದಿಗೆ ತ್ರತೀಯ ಸ್ಥಾನವನ್ನೂ ಪಡೆದುಕೊಂಡಿದೆ. 



 ಯಲ್.ಪಿ. ಕನ್ನಡ ಪ್ರಥಮ ಸ್ಥಾನದ ಟ್ರೋಫಿ ಪಡೆಯುತ್ತಿರುವುದು 
 ಯು. ಪಿ. ಕನ್ನಡ ದ್ವಿತೀಯ ಸ್ಥಾನದ ಟ್ರೋಫಿ ಪಡೆಯುತ್ತಿರುವುದು. 
ಯು. ಪಿ. ಜನರಲ್ ದ್ವಿತೀಯ ಸ್ಥಾನದ ಟ್ರೋಫಿ ಪಡೆಯುತ್ತಿರುವುದು