FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, January 29, 2015

AMMA THILIYALU.

ಹಿಂದುಳಿದ ವಿಭಾಗದವರ ವಿದ್ಯಾಭ್ಯಾಸದ ಭಾಗವಾಗಿ ಅಮ್ಮ  ತಿಳಿಯಲು   ಎಂಬ ಕಾರ್ಯಕ್ರಮವು ದಿನಾಂಕ 29.1.2015 ರಂದು ನಮ್ಮ ಶಾಲೆಯಲ್ಲಿ ನಡೆಯಿತು.
 ಈ ಕಾರ್ಯಕ್ರಮವನ್ನು ಪುತ್ತಿಗೆ ಪಂಚಾಯತು ವಾರ್ಡು ಸದಸ್ಯೆ ಕುಮಾರಿ ವಸಂತಿ ಅವರು ಉದ್ಘಾಟಿಸಿದರು. ಶಾಲಾ ಪಿ.ಟಿ. ಎ. ಅಧ್ಯಕ್ಷ ಶ್ರೀ ವೆಂಕಟರಾಜ ನೀರಮೂಲೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಪ್ರಬಂಧಕ ಶ್ರೀ ಎನ್. ಸುಬ್ಬಣ್ಣ ಭಟ್ ಶುಭಾಶಂಸನೆ ಗೈದರು. ಶಾಲಾ ಮಕ್ಕಳು ಪ್ರಾರ್ಥನೆ ಹಾಡಿದರು. ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಅಧ್ಯಾಪಕ ಮಹಾಲಿಂಗ  ಭಟ್ ವಂದಿಸಿದರು. ಶ್ರೀನಿವಾಸ ಕೆ.ಎಚ್. ಕಾರ್ಯಕ್ರಮ ನಿರೂಪಿಸಿದರು. 
 ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾತೆಯರಿಗೆ ಎರಡು ಸೆಶನ್ ಗಳಲ್ಲಿ ತರಗತಿ ನಡೆಯಿತು. ಶಾಲಾ ಅಧ್ಯಾಪಕರಾದ ಶ್ರೀ ರಾಮಮೋಹನ್ ಸಿ.ಎಚ್. ಮತ್ತು ಶ್ರೀನಿವಾಸ ಕೆ.ಎಚ್. ತರಗತಿ ನಡೆಸಿಕೊಟ್ಟರು. ಕೆಲವು ವೀಡಿಯೋ ಕ್ಲಿಪ್ಪಿಂಗ್ ಗಳನ್ನು ತೋರಿಸಿ ಚರ್ಚಾ ಸೂಚಕಗಳನ್ನಿಟ್ಟು ಯಶಸ್ವಿಯಾಗಿ ತರಗತಿ ನಡೆಸಿದರು. 
ಐವತ್ತಕ್ಕಿಂತಲೂ ಹೆಚ್ಚು ಮಾತೆಯರು ತರಗತಿಗೆ ಹಾಜರಾದರು. ಎಲ್ಲಾ ಮಾತೆಯರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತರಗತಿಯ ಯಶಸ್ಸಿಗೆ ಸಹಕರಿಸಿದರು.

SANSKRIT SCHOLARSHIP EXAM 2014-15 RESULT



ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕ್ರತ ಸ್ಕಾಲರ್ಷಿಪ್ ಪರೀಕ್ಷೆಯು ಇಂದು ನಡೆಯಿತು. ಅದರಲ್ಲಿ ನಮ್ಮ ಶಾಲೆಯ ನಾಲ್ಕು ಮಕ್ಕಳು ಸ್ಕಾಲರ್ಷಿಪ್ ಗೆ ಅರ್ಹರಾಗಿದ್ದಾರೆ. ಅವರಿಗೆ ಅಭಿನಂದನೆಗಳು

Monday, January 26, 2015

REPUBLIC DAY

ನಮ್ಮ ದೇಶವು ಇಂದು 66 ನೆ ಗಣರಾಜ್ಯ ದಿನವನ್ನು ಆಚರಿಸುತ್ತಿದೆ ,. ಈ ಸಂದರ್ಭದಲ್ಲಿ  ಬ್ಲಾಗಿನ ಎಲ್ಲ ವೀಕ್ಷಕರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

Friday, January 23, 2015

SUGAMA HINDI PAREEKSHA

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ದವರು ಶಾಲಾ ಮಕ್ಕಳಿಗಾಗಿ ನಡೆಸುವ ಸುಗಮ ಹಿಂದಿ ಪರೀಕ್ಷೆ ಇಂದು ನಮ್ಮ ಶಾಲೆಯಲ್ಲಿ ನಡೆಯಿತು. 5 , 6 , 7 ನೆ ತರಗತಿಯ ಮೂವತ್ತು ಮಕ್ಕಳು ಈ ಪರೀಕ್ಷೆಯಲ್ಲಿ ಭಾಗವಹಿಸಿದರು.

ROAD SAFTY

  
ಮೂರನೆ ತರಗತಿಯ ಪರಿಸರ ಅಧ್ಯಯನದ ಸುರಕ್ಷಿತ ಪ್ರಯಾಣಕಾಗಿ ಎಂಬ ಪಾಠಕ್ಕೆ ಸಂಬಂಧಿಸಿ ಮಕ್ಕಳು ತರಗತಿಯಲ್ಲಿ Zebra crossing ನ್ನು ನಿರ್ಮಿಸಿ  ಸಂಚಾರಿ ನಿಯಮಗಳನ್ನು ತಿಳಿದುಕೊಂಡರು

Tuesday, January 20, 2015

USS EXAM 2014-15

ಯು.ಯಸ್.ಯಸ್.ಪರೀಕ್ಷೆ2014-15

ಯು.ಯಸ್.ಯಸ್.ಪರೀಕ್ಷೆಯು21-02-15ರಂದು ವಿವಿಧ ಕೇಂದ್ರಗಳಲ್ಲಿ ನಡೆಯಲಿರುವುದು.ಪರೀಕ್ಷೆಗೆ 2ಪತ್ರಿಕೆಗಳಿರುತ್ತವೆ.ಪ್ರತಿಯೊಂದರಲ್ಲೂ ಮೂರು ವಿಭಾಗಗಳಿವೆ.ಬೆಳಗ್ಗೆ 10-15 ರಿಂದ12 ಗಂಟೆಯ ಅವಧಿಯಲ್ಲಿ ಪತ್ರಿಕೆ1ರ ಪರೀ
ಕ್ಷೆ ನಡೆಯುತ್ತದೆ.ಪತ್ರಿಕೆ ರ ಪರೀಕ್ಷೆ ಮಧ್ಯಾಹ್ನ ನಂತರ 1-15 ರಿಂದ ಗಂಟೆಯವರೆಗೆ ನಡೆಯಲಿರುವುದು.

ಪತ್ರಿಕೆ 1
ವಿಭಾಗ-ಪ್ರಥಮ ಭಾಷೆ A.T [ಕನ್ನಡ /ಸಂ ಉರ್ದು]
ವಿಭಾಗ-ಬಿಪ್ರಥಮ ಭಾಷೆ B.T.
ವಿಭಾಗ-ಸಿಗಣಿತ.

ಪತ್ರಿಕೆ 2
ವಿಭಾಗ-ಇಂಗ್ಲಿಷ್
ವಿಭಾಗ-ಬಿವಿಜ್ಞಾನ
ವಿಭಾಗ-ಸಿಸಮಾಜ ವಿಜ್ಞಾನ


ಪ್ರತಿಯೊಂದು ಪತ್ರಿಕೆಯಲ್ಲಿ ಬರುವ ಪ್ರಶ್ನೆಗಳು ಹಾಗೂ ಅಂಕಗಳು.
ಪತ್ರಿಕೆ 1ರಲ್ಲಿ ಒಟ್ಟು 50 ಪ್ರಶ್ನೆಗಳಿರುತ್ತವೆ.[ಒಟ್ಟು 45 ಅಂಕಗಳು.]


A) A.T 15 ಪ್ರಶ್ನೆಗಳು.

B) B.T 15 ಪ್ರಶ್ನೆಗಳು ಇವೆ.10 ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು.

C) ಗಣಿತದಲ್ಲಿ 20 ಪ್ರಶ್ನೆಗಳಿರುತ್ತವೆ.

ಪತ್ರಿಕೆ ರಲ್ಲಿ ಒಟ್ಟು 55 ಪ್ರಶ್ನೆಗಳಿರುತ್ತವೆ.[ಒಟ್ಟು 45 ಅಂಕಗಳು.]

A . ಇಂಗ್ಲಿಷ್ 15 ಪ್ರಶ್ನೆಗಳು.

B.ಮೂಲ ವಿಜ್ಞಾನ 20ಪ್ರಶ್ನೆಗಳು.15 ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು.

C.ಸಮಾಜ ವಿಜ್ಞಾನ.20ಪ್ರಶ್ನೆಗಳು.15ಪ್ರಶ್ನೆಗಳಿಗೆ ಉತ್ತರಿಸಿದರೆ ಸಾಕು.

Class PTA

ಇಂದು ನಮ್ಮ ಶಾಲೆಯ ಎಲ್ಲಾ ತರಗತಿಗಳಲ್ಲಿ ಕ್ಲಾಸ್ ಪಿ. ಟಿ. ಎ. ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಕರು ಭಾಗವಹಿಸಿದರು. ಮಕ್ಕಳ ಕಲಿಕಾ ಅಭಿವ್ರದ್ಧಿಯ ಕುರಿತು ಚರ್ಚಿಸಲಾಯಿತು. ಕಲಿಕಾ ಅಭಿವ್ರದ್ಧಿ ಪತ್ರಗಳನ್ನು ವಿತರಿಸಲಾಯಿತು.

BIRTHDAY

ನಮ್ಮ ಶಾಲೆಯ ಒಂದನೇ ತರಗತಿಯ ತನುಶ್ ಕುಮಾರ್ ಯನ್ ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿದನು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಎರಡು ಕತೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದನು. ಅವನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕಗಳನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು.

Monday, January 19, 2015

SCIENCE SEMINAR

Science Talent Enrichment Programme 2014 - 15 ನ ಭಾಗವಾಗಿ  ನಮ್ಮ ಶಾಲೆಯಲ್ಲಿ ಒಂದು ಸೆಮಿನಾರನ್ನು ನಡೆಸಲಾಯಿತು. ಇದರಲ್ಲಿ ನಾಲ್ಕು ಮಂದಿಯ ಮೂರು ಗುಂಪುಗಳು ಭಾಗವಹಿಸಿದವು. ಕ್ರಷಿಯೂ ಆಹಾರ ಸ್ವಾವಲಂಬನೆಯೂ ಎಂಬ ವಿಷಯದಲ್ಲಿ ಮಕ್ಕಳು ಸೆಮಿನಾರ್ ಮಂಡಿಸಿದರು. ಇದರಲ್ಲಿ ವಿಜೇತರಾದವರಿಗೆ ಮುಖ್ಯೋಪಾಧ್ಯಾಯರು ಶಾಲಾ ಅಸೆಂಬ್ಲಿಯಲ್ಲಿ ಪ್ರಮಾಣಪತ್ರ ವಿತರಿಸಿದರು.

Friday, January 16, 2015

Aided School Appointment


7% DA

ಕೇರಳ ರಾಜ್ಯ ಸರಕಾರೀ ನೌಕರರು ಹಾಗೂ ಅಧ್ಯಾಪಕರಿಗೆ 2014 ಜುಲಾಯಿ ತಿ೦ಗಳಿಗೆ ಅನ್ವಯವಾಗುವ೦ತೆ 7% ಕ್ಷಾಮಭತ್ತೆಯನ್ನು ರಾಜ್ಯ ಸರಕಾರ ಘೋಷಿಸಿದೆ. ಮಾರ್ಚಿ ತಿ೦ಗಳಿನಿ೦ದ ಹೊಸ ದರದಲ್ಲಿ ಸ೦ಬಳ ಲಭಿಸಲಿದೆ.

Wednesday, January 14, 2015

MAKARA SANKRANTHI

ಬ್ಲಾಗಿನ ಎಲ್ಲಾ ವೀಕ್ಷಕರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
KERALA SCHOOL KALOTSAVAM 2014 RESULT CLICK HERE

Tuesday, January 13, 2015

NUMATHS STATE LEVEL TEST ON 31.1.2015

LIST OF EXAM CENTERS FOR NUMATHS CLICK HERE

State School Kalotsavam 2014

Programme Schedule CLICK HERE

POEM

ಶಾಲಾ ಮಟ್ಟದ ಗಣಿತೋತ್ಸವದಲ್ಲಿ ಮೂಡಿಬಂದ ಕವನಗಳು 
          ೧. ಗಣಿತದ ಸೊಬಗು 
ಪ್ರಕ್ರತಿಯ ಸೊಬಗ ನೋಡಣ್ಣ 
ಅದರಲು ಗಣಿತವ ಕಾಣಣ್ಣ 
ಸೊಬಗಿನ ಮರದ ಕೊಂಬೆಯಲಿ 
ಕೋನವ ನೀನು ನೋಡಣ್ಣ  । ೧।
             ಆಟದ ಚೆಂಡು ಗೋಲವು 
            ಮನೆಯ ಬಾಗಿಲು ಆಯತವು 
            ಮನುಜಗೆ ಬೇಕು ಗಣಿತವು 
            ಗಣಿತದಿ ಸಿಗುವುದು ಜ್ಞಾನವು ।೨।
ಪಡೆಯುವ ಗಣಿತದ ಲಾಭವ 
ಪಡೆಯುವ ಗಣಿತದ ಸಂತಸವ 
ನಾವು ಪ್ರೀತಿಸುವ ಗಣಿತವ 
ಸಂತಸದಿ  ಸವಿಯೋಣ ಗಣಿತವ ।೩।
                                                    ಸಂಧ್ಯಾ ಕೆ .
                                                   ಏಳು  ಎ  ತರಗತಿ . 

            ೨. ಗಣಿತಕೆ ಸಹಮತ 
ದನದ ಕೊಂಬು ಕೋನ 
ಏನೋ ರೋಮಾಂಚನ 
ಅಹ ಒಂದು ಕ್ಷಣ 
ತುಂಬಿಕೊಳ್ಳೊ ತನುಮನ 
ಆವರಿಸಿತು ಮೌನ 
ಗಣಿತವೆ ಪ್ರಾಣ 
ಆಗು ನೀ ಜಾಣ 
                        ನೋಡುವೆನು ಸುತ್ತ 
                        ಸೂರ್ಯ ಚಂದ್ರ ವ್ರತ್ತ 
                        ವಿಧವಿಧದ ಆಕ್ರತಿಯತ್ತ 
                        ಕೈವಾರವು ಜಾಗ್ರತ 
                        ಬುದ್ಧಿವಂತ ಚಿತ್ತ 
                        ನಾವೆಲ್ಲರೂ ಒಂದುಗೂಡುತ್ತ 
                        ತಲುಪುವೆವು ನಮ್ಮ ಗುರಿಯತ್ತ 
                                                           ಹರ್ಷಿಣಿ ಕೆ . 
                                                           ಏಳು ಎ ತರಗತಿ .

Saturday, January 10, 2015

Ganithotsava and Metric Mela 2014-15

ನಮ್ಮ ಶಾಲೆಯಲ್ಲಿ Learning Enhancement Programme (LEP) ಯೋಜನೆಯಂತೆ 2014 -15 ನೇ ವರ್ಷದ ಯು.ಪಿ.ವಿಭಾಗದ ಗಣಿತೋತ್ಸವ ಮತ್ತು ಎಲ್.  ಪಿ. ವಿಭಾಗದ ಮೆಟ್ರಿಕ್ ಮೇಳವನ್ನು ದಿನಾಂಕ 8.1.2015 ರಂದು ನಡೆಸಲಾಯಿತು.
ಮಕ್ಕಳ ಪ್ರಾರ್ಥನೆಯೊಂದಿಗೆ  ಕಾರ್ಯಕ್ರಮ ಆರಂಭವಾಯಿತು . ಶಾಲಾ ಮುಖ್ಯೋಪಾಧ್ಯಾಯರು ಶಿಬಿರವನ್ನು ಉದ್ಘಾಟಿಸಿ ನಿತ್ಯಜೀವನದಲ್ಲಿ ಯಶಸ್ಸು ಗಳಿಸಲು ಗಣಿತ ನೈಪುಣ್ಯಗಳನ್ನು ಕರಗತ ಮಾಡಿಕೊಳ್ಳುವುದು ಅನಿವಾರ್ಯವೆಂದು ಈ ಸಂದರ್ಭದಲ್ಲಿ ಹೇಳಿದರು.
ಹಿರಿಯ ಗಣಿತ ಶಿಕ್ಷಕ ಶ್ರೀನಿವಾಸ ಕೆ. ಹೆಚ್ ಅವರು ಜೀವನದ ಎಲ್ಲಾ ಪ್ರಶ್ನೆಗಳಿಗೂ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಗಣಿತದೊಂದಿಗೆ  ಸಂಬಂಧವಿದೆ . ಇಂತಹ ಶಿಬಿರವು ಮಕ್ಕಳ ಪ್ರತಿಭೆಗಳ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ನೀಡುವುದು ಎಂದು ನುಡಿದರು.

ಶಾಲಾ ಅಧ್ಯಾಪಕ ಯನ್. ಮಹಾಲಿಂಗ ಭಟ್ ಅವರು ಶಿಬಿರ ಗೀತೆಯನ್ನು ಮಕ್ಕಳಿಂದ ಹಾಡಿಸಿದರು. ಪ್ರೇಮಲತಾ ಟೀಚರ್ , ಸೌಮ್ಯಶಂಕರಿ ಟೀಚರ್ , ಶ್ರೀನಿವಾಸ ಮಾಸ್ಟರ್ ,ರಾಮಮೋಹನ ಮಾಸ್ಟರ್, ಗಾಯತ್ರಿ ಟೀಚರ್ ಈ ಶಿಬಿರಕ್ಕೆ ನೇತ್ರತ್ವ ನೀಡಿದರು. 

ಮಕ್ಕಳು ಪ್ರಕ್ರತಿ ವೀಕ್ಷಣೆ ಮಾಡಿ ಗಣಿತವನ್ನು ಆಸ್ವಾದಿಸುತ್ತಾ ಹಾಡು,ಒಗಟು ಮೊದಲಾದವುಗಳನ್ನು ರಚಿಸಿದರು.




ಗಣಿತಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಲು ಶಾಲೆಯ ಸಮೀಪವಿರುವ  ಶ್ರೀಮತಿ ಜಯಲಕ್ಷ್ಮಿ ಮೇಪೋಡಡ್ಕ ಅವರ ಮನೆಗೆ ಭೇಟಿ ನೀಡಿದರು . ಅವರು  ಹೈನುಗಾರಿಕೆಗೆ ಸಂಬಂಧಪಟ್ಟ ಮಾಹಿತಿ ನೀಡಿದರು.  ಇದಕ್ಕೆ ತಗಲುವ ಖರ್ಚು ವೆಚ್ಚ ಲಾಭ ನಷ್ಟದ ಬಗ್ಗೆ ಅವರು  ವಿವರವಾಗಿ ತಿಳಿಸಿದರು. ಅದಕ್ಕೆ ಅಗತ್ಯವಿರುವ ಪ್ರಶ್ನಾವಳಿಗಳನ್ನು ಮಕ್ಕಳು ಗುಂಪಿನಲ್ಲಿ ಕುಳಿತು ಮೊದಲೇ  ತಯಾರಿಸಿದ್ದರು.

ಅನಂತರ ವಿವಿಧ ಪ್ಯಾಟರ್ನ್, ಪೇಪರ್ ಬ್ಯಾಗ್ ಮತ್ತು ಟ್ಯಾನ್ ಗ್ರಾಂ ಮೊದಲಾದ ನಿರ್ಮಾಣ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡರು. 



ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳಿಗೆ ಮೆಟ್ರಿಕ್ ಅಳತೆಗಳಿಗೆ (ಉದ್ದ, ಅಗಲ, ಭಾರ, ಸಮಯ ಇತ್ಯಾದಿ) ಸಂಬಂಧಿಸಿದ ಆಶಯಗಳು ಕಲಿಕಾ ಸಾಧನೆಗಳು ಲಭಿಸುವಂತೆ ಮಾಡುವ ಪ್ರಧಾನ ಉದ್ದೇಶದಿಂದ ಈ ಮೇಳವನ್ನು ಸಂಘಟಿಸಲಾಯಿತು . ಶಿಬಿರದ ಪೂರ್ವ ಭಾವಿಯಾಗಿ ದಿನಾಂಕ 7.1.2015ರಂದು ನಡೆದ ಕಾರ್ಯಾಗಾರದಲ್ಲಿ ಮೆಟ್ರಿಕ್ ಅಳತೆಗಳಿಗೆ ಸಂಬಂಧಿಸಿದ ಉಪಕರಣಗಳ ಮಾದರಿಗಳನ್ನು ಅಧ್ಯಾಪಕರು, ರಕ್ಷಕರು ಮತ್ತು ಮಕ್ಕಳು  ಒಟ್ಟಾಗಿ ಸೇರಿ ತಯಾರಿಸಿದರು.


ಮಕ್ಕಳು ನಿರ್ದಿಷ್ಟ ಅಳತೆಯಲ್ಲಿ ಬ್ಯಾಡ್ಜ್ ಗಳನ್ನು  ತಯಾರಿಸಿದರು. ಬ್ಯಾಡ್ಜ್ ತಯಾರಿಸಲು ಬೇಕಾದ ಸೂಚನೆಗಳನ್ನೊಳಗೊಂಡ ಕಾಗದವನ್ನು ಎಲ್ಲ ಮಕ್ಕಳಿಗೂ ನೀಡಲಾಯಿತು. ಅದರ ಆಧಾರದಲ್ಲಿ ಬ್ಯಾಡ್ಜ್ ತಯಾರಿಸಿದ ಬಳಿಕ ನಾಲ್ಕು ಬಣ್ಣದ  ಸ್ಕೆಚ್ ಪೆನ್ ಬಳಸಿ ಬ್ಯಾಡ್ಜ್ ನಲ್ಲಿ Star ಗುರುತು ಮಾಡಿ ಮಕ್ಕಳನ್ನು ನಾಲ್ಕು ಗುಂಪುಗಳಾಗಿ ಮಾಡಲಾಯಿತು.  ಅನಂತರ ಆಟದ ನೋಟುಗಳನ್ನು ಬಳಸಿಕೊಂಡು ನಿರ್ದಿಷ್ಟ ಸಂಖ್ಯೆಯ ರೂಪಾಯಿಗಳನ್ನು ಹೆಕ್ಕಿ ತೆಗೆದರು. 

ಅನಂತರ  ಮೆಟ್ರಿಕ್ ಅಳತೆಗಳಾದ ಲೀಟರ್, ಮಿಲ್ಲಿಲೀಟರ್ ,ಕಿಲೋಗ್ರಾಂ, ಗ್ರಾಂ  ಇವುಗಳನ್ನು ಪ್ರಾಯೋಗಿಕವಾಗಿ ಉಪಯೋಗಿಸಲು ಅಂಗಡಿ ಆಟವನ್ನು ನಡೆಸಲಾಯಿತು. ಲೀಟರ್ ಮತ್ತು ಮಿಲ್ಲಿ ಲೀಟರ್ ಪಾತ್ರೆಗಳು , ತಕ್ಕಡಿ (ಸಾಮಾನ್ಯ ತ್ರಾಸು  ಮತ್ತು ಡಿಜಿಟಲ್ ತ್ರಾಸು )ಮತ್ತು ತೂಕದ ಕಲ್ಲುಗಳನ್ನು ಉಪಯೋಗಿಸಿ ಅಂಗಡಿ ಆಟ ಆಡಿದರು. ಮಕ್ಕಳು ಬಹಳ ಉತ್ಸಾಹದಿಂದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿ ಗೊಳಿಸಿದರು.


Friday, January 9, 2015

Birthday

ನಮ್ಮ ಶಾಲೆಯ ಒಂದನೇ ತರಗತಿಯ ವಿನೀತ್ ಕುಮಾರ್ ತನ್ನ ಹುಟ್ಟು ಹಬ್ಬವನ್ನು ಆಚರಿಸಿದನು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ಅವನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವನ ರಕ್ಷಕರಿಗೆ ಅಭಿನಂದನೆಗಳು

Wednesday, January 7, 2015

POEM

ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಯು.ಪಿ. ವಿಭಾಗದ ಕನ್ನಡ ಕವಿತಾ ರಚನೆಯಲ್ಲಿ ನಮ್ಮ ಶಾಲೆಯ ಅಪೂರ್ವ ಎಡಕಾನ ರಚಿಸಿದ ಕವನ. ಇದಕ್ಕೆ ಪ್ರಥಮ ಬಹುಮಾನ ಬಂದಿರುತ್ತದೆ .

      ಆಟ ಪಾಠ 
ಗಂಟೆಯ ಸದ್ದನು ಕೇಳಿದ ಮಕ್ಕಳ 
ಕೇಕೆಯು ನೋಡಿ ಮುಗಿಲುದ್ದ 
ತರಗತಿಯಿಂದ ಹೊರಗಡೆಗೋಡಲು 
ಹೇಳಲು ತೀರದು ಖುಷಿಯುದ್ದ 
      ಆಟದ ಬಯಲಿನ ಎಲ್ಲಕಡೆ   
           ವಿವಿಧ ಆಟಗಳು ತುಂಬಿರಲು  
           ಎದುರಾಳಿಯ ಗುಂಪೌಟಾಗುವುದನು 
           ಮೈಕಣ್ಣಾಗಿಸಿ ಕಾದಿರಲು

 
ಆಟಗಳಿಂದ ನಮ್ಮಯ ಮನವು 
ಬಹಳ ಮುದವನು ಪಡೆಯುವುದು 
ವ್ಯಾಯಾಮವು ಸಹ ಲಭಿಸುವುದರಿಂದ 
ರೋಗಗಳನು ಅದು ಹೊಡೆಯುವುದು 
   ಮಕ್ಕಳ ಪ್ರೀತಿಯ ಸಬ್ಜೆಕ್ಟ್ ಎಂದರೆ 
   ದೊರೆಯುವ ಉತ್ತರ ಆಟವೆಂದು 
   ಆಟವ ಪ್ರೀತಿಸುವ ಮಕ್ಕಳ ಉತ್ತರ 
   ಅಷ್ಟಕ್ಕಷ್ಟೆ ಪಾಠವೆಂದು
ಕೇಳಿರಿ ಮಕ್ಕಳೆ ಆಟ ಮಾತ್ರವಲ್ಲ 
ಜೀವನಕೆ ಪಾಠವು ಬಹಳಗತ್ಯ 
ಪಾಠದ ಗಮನವ ಬಿಟ್ಟು ಆಟಕೆ 
ಗಮನ ಕೊಟ್ಟರೆ ಜೀವನವೋ ನಮ್ಮದುವ್ಯರ್ಥ 
       ನ್ಯಾಯ ನೀತಿ ಸತ್ಯ ನಿಷ್ಠೆ 
       ಮುಂತಾದವುಗಳ ಗುರು ಕಲಿಸುವರು 
       ಆ ವಿಷಯಕೆ ಪೂರಕವಾದ 
       ಕಥೆಗಳನೂ ಸಹ ತಿಳಿಸುವರು
ಅಂದಿನ ಪಾಠವ ಅಂದೇ ಕಲಿತರೆ 
ಮುಂದಿನ ಕ್ಲಾಸಿಗೆ ಹೋಗಲು ಸಾಧ್ಯ 
ಗಣಿತದ ಲೆಕ್ಕ ಸಮಾಜ ಶಾಸ್ತ್ರ 
ಕನ್ನಡಲ್ಲಿ ಗದ್ಯ ಪದ್ಯ 
         ಕಲಿತು ಬಾಳಿದರೆ ಮಾತ್ರವೆ  ನಾವು
        ಉದ್ಯೋಗಗಳಿಗೆ ಹೋಗುವೆವು 
        ಕಲಿಯದೆ ಸುಮ್ಮನೆ ತಿರುಗಾಡಿದರೆ 
        ನಂತರ ಬೀದಿಯಲಲೆದಾಡುವುದು 

ಆಟವು ಪಾಠವು ಎರಡೂ ಮುಖ್ಯ 
ನಮ್ಮಯ ಈ ಜೀವನಕೆ 
ಎರಡಕು ಸಮಾನ ಒತ್ತು ದೊರೆಯದಿರೆ 
ಬದಲಾಗುದು ಜೀವಾಕ್ಷಣಕೆ
              

LSS USS Exam Notification

2014 - 15 ನೇ ವರ್ಷದ LSS ಮತ್ತು USS ಪರೀಕ್ಷೆಗಳ ವಿಜ್ಞಾಪನೆ ಬಿಡುಗಡೆಯಾಗಿದೆ.online ಹೆಸರು ಕಳುಹಿಸಲು ಕೊನೆಯ ದಿನ ಜನವರಿ 17.ಪರೀಕ್ಷೆ ಪೆಬ್ರುವರಿ 21ಕ್ಕೆ     CLICK HERE  for more details.

Medal Ceremony

GFHSS Cheruvathur ನಲ್ಲಿ ನಡೆಯುತ್ತಿರುವ ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಯು.ಪಿ. ವಿಭಾಗದ ಕನ್ನಡ ಕವಿತಾ ರಚನೆಯಲ್ಲಿ ಪ್ರಥಮ ಸ್ಥಾನ ಪಡೆದ ಅಪೂರ್ವ ಎಡಕಾನ ಟ್ರೋಫಿ ಮತ್ತು ಪ್ರಶಸ್ತಿಪತ್ರವನ್ನು ಸ್ವೀಕರಿಸುತ್ತಿರುವುದು.

Monday, January 5, 2015

TEXT BOOK INDENT 2015-16

Requirement of Text books and to submit indent - a guidelines to the schools :

  1. Text book indent website is active through www.itschool.gov.in link of Text book Supply and monitoring system from 06-01-2015 to 14-01-2015.
  2. To login click on this link http://103.251.43.155/textbook/ and give the sampoorna username and password.
  3. Select the society of the school.
  4. Click on Entry Form
  5. You can select the standard therefor displays various titles.
  6. Click on to the No. books required in every title field.
  7. In the Field of Total Students of Sampoorna students are carried to 2015-16.
  8. You can increase 5% in No.of books required field.
  9. Any stock existed in 1,3,5,7,9,10 standard books give No. of books in stock. Then lessen the books requirement.
  10. 2,4,6,8 standard books are new additions, therefore also give 5% increase in indent.
  11. Before submission of indent Headmasters must make verification and then submit.

CONGRATULATIONS

 GFHSS Cheruvathur (Kadamkode) ನಲ್ಲಿ ನಡೆಯುತ್ತಿರುವ ಕಾಸರಗೋಡು ರೆವೆನ್ಯೂ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಯು.ಪಿ. ವಿಭಾಗದ ಕನ್ನಡ ಕವಿತಾರಚನೆಯಲ್ಲಿ  ಪ್ರಥಮ ಸ್ಥಾನ ಪಡೆದ ಅಪೂರ್ವ ಎಡಕಾನ ಇವಳಿಗೆ ಹಾರ್ದಿಕ ಅಭಿನಂದನೆಗಳು .
GFHSS Cheruvathur (Kadamkode) ನಲ್ಲಿ ನಡೆಯುತ್ತಿರುವ ಕಾಸರಗೋಡು ರೆವೆನ್ಯೂ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಯು.ಪಿ. ವಿಭಾಗದ ಸಂಸ್ಕ್ರತ ಪ್ರಶ್ನೋತ್ತರಿಯಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರಣವ ಕುಮಾರ್ ಯನ್ ಇವನಿಗೆ  ಹಾರ್ದಿಕ  ಅಭಿನಂದನೆಗಳು