FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, August 28, 2014

Congratulations to State teachers awardees

ಕೇರಳ ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕನ್ನಡ ಅಧ್ಯಾಪಕರಾದ ಶ್ರೀ ಶಂಕರನಾರಾಯಣ ಭಟ್ ಯಸ್, (ಮುಖ್ಯೋಪಾಧ್ಯಾಯರು,ನವಜೀವನ ಹೈಸ್ಕೂಲ್ ಪೆರಡಾಲ )ಹಾಗೂ ಸೀತಾರಾಮ ಮಾಸ್ಟರ್ (ಮುಖ್ಯೋಪಾಧ್ಯಾಯರು, ಜಿ. ಜೆ. ಬಿ. ಎಸ್. ಮಧೂರು ) ಇವರಿಗೆ ಹಾರ್ದಿಕ ಅಭಿನಂದನೆಗಳು.

Vinayaka Chathurthi

ಬ್ಲಾಗಿನ ಎಲ್ಲಾ ವೀಕ್ಷಕರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು (In advance)

Wednesday, August 27, 2014

INAUGURATION OF PLUS TWO


INAUGURATION OF NEWLY UPGRADED
SHREE DURGAPARAMESHWARI AIDED HIGHERSECONDARYSCHOOL
DHARMATHADKA P.O.DHARMATHADKA.PUTHIGE PANCHAYATH
The Inauguration of newly upgraded ShreeDurgaparameshwari Higher secondary School, Dharmathadka was held on 27.8.2014.President of Puthige Grama Panchayath, Shri.Chaniya Padi Inaugurated the New Plus two school.


Vice President of Campco,Shri.Kolar Satheeshchandra Bhandari Presided over the function. Principal-in-charge Shri.N.Ramachandra Bhat did the welcome speech.The Administrative Manager Shri.N.Subbanna Bhat made the Introductory Speech.District Panchayath member Sri.Shankar Rai. M,Panchayath member Kum.Vasanthi.M,MPTA President Smt.Geetha Savithri, Honourable Secretary of Kannada Sahithya Parishath Kasaragod District Unit Sri.Ramachandra Bhat,Social Worker Sri.Kakve Shankar Rao,UP school Headmaster N.H.Lakshminarayana bhat,and UP School PTA President Sri.Venkatraja neeramoole felicitated the function.Manager Sri.N.Shankaranarayana Bhat delivered Vote of thanks.Sri.Sathish kumar Shetty O ,H.S.A Social science did the master of ceremony.Sweets were distributed to all the gatherings.

Tuesday, August 26, 2014

Bonus and Festival allowance to Government Employees and Aided school Teachers

ಬೋನಸ್ ಮತ್ತು ಉತ್ಸವ ಭತ್ತೆ:
ಕೇರಳದ ಸರಕಾರಿ ಉದ್ಯೋಗಸ್ಥರು ಹಾಗೂ ಐಡೆದ್ ಶಾಲಾ ಅಧ್ಯಾಪಕರು ಮತ್ತು ಸಿಬ್ಬಂದಿಗಳಿಗೆ ಈ ವರ್ಷದ ಬೋನಸ್ ಹಾಗೂ ಉತ್ಸವ ಭತ್ತೆಯನ್ನು ಸರಕಾರ ಘೋಷಿಸಿದೆ. ಪ್ರತಿ ತಿಂಗಳು  18150 ಕ್ಕಿಂತ ಕಡಿಮೆ ಸಂಬಳ ಪಡೆಯುವವರಿಗೆ  3500 ರೂಪಾಯಿ ಬೋನಸ್ ಹಾಗೂ ಬೋನಸ್ ಗೆ ಅರ್ಹರಲ್ಲದವರಿಗೆ 2200 ರೂಪಾಯಿ ಉತ್ಸವ ಭತ್ತೆ ಸಿಗಲಿದೆ. ಅಲ್ಲದೆ ಓಣಂ ಅಡ್ವಾನ್ಸ್ ಕಳೆದ ವರ್ಷದಂತೆ 10000 ರೂಪಾಯಿಯನ್ನೂ  ಪಡೆಯ ಬಹುದು . G.O.(P) No.367/14/Fin.dated 25.8.14 and G.O.(P)368/14/Fin.dated, Thiruvananthapuram 25.8.14 (Onam Advance)

Rastreeya Jan Dhan Yojana

ಬ್ಯಾಂಕ್  ಖಾತೆಯ ಬಗ್ಗೆ ಮಾಹಿತಿ:
ಕೇರಳಾ ಗ್ರಾಮೀಣ ಬ್ಯಾಂಕಿನ ರೀಜನಲ್ ಆಫೀಸ್ ಕಾಸರಗೋಡು ಇಲ್ಲಿನ ಸೀನಿಯರ್ ಮೆನೇಜರ್ ಶ್ರೀ ರಾಮಚಂದ್ರ ಹಾಗೂ ಕೇರಳ ಗ್ರಾಮೀಣ ಬ್ಯಾಂಕ್ ಪೆರ್ಮುದೆ ಶಾಖೆಯ ಮೆನೇಜರ್ ಶ್ರೀ ಸದಾಶಿವ ಇವರು ಶಾಲೆಗೆ  ಆಗಮಿಸಿ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನದಂದು ಘೋಷಿಸಿದ ರಾಷ್ಟ್ರೀಯ ಜನ್ ಧನ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.



Flower vase

ತ್ಯಾಜ್ಯ ವಸ್ತುಗಳಿಂದ ರಚಿಸಿದ ಹೂದಾನಿಯ ಚಿತ್ರ

Monday, August 25, 2014

Exam postponed

ಪರೀಕ್ಷೆ ಮುಂದೂಡಲಾಗಿದೆ 
ನಾಳೆ  26.8.2014 ರಂದು ನಡೆಯಬೇಕಿದ್ದ 1ರಿಂದ   10 ನೇ ತರಗತಿಯ ವರೆಗಿನ ಪರೀಕ್ಷೆಗಳನ್ನು   ABVP  ಬಂದ್  ಇದ್ದ  ಕಾರಣ ಮುನ್ದೂಡಲಾಗಿದೆ ಎಂದು DPI  ತಿಳಿಸಿದ್ದಾರೆ. ಬದಲಾದ ದಿನಾಂಕವನ್ನು ಮುಂದೆ ತಿಳಿಸಲಾಗುವುದು.

Report of Basic Facilities -DPI

ಶಾಲೆಗಳ ಮೂಲಭೂತ ಸೌಕರ್ಯಗಳ ವರದಿ ನೀಡುವಿಕೆ. 
ಕೇರಳದ ಎಲ್ಲಾ ಸರಕಾರೀ/ ಐಡೆದ್ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳ (ಕುಡಿಯುವ ನೀರು, urinals,Toilets) ರಿಪೋರ್ಟ್ ತಯಾರಿಸಿ ಅಗೋಸ್ತು 27 ರ ಸಂಜೆ 5 ಗಂಟೆಗೆ ಮೊದಲು ಸಂಬಂಧಪಟ್ಟ ಎ.ಇ.ಒ/ಡಿ.ಇ.ಒ ಅವರಿಗೆ ತಲುಪಿಸಬೇಕು. ಅವರು ಅದನ್ನು ಕ್ರೋಢೀಕರಿಸಿ  ಜಿಲ್ಲಾ ವಿದ್ಯಾಭ್ಯಾಸ ಉಪ ಡೈರೆಕ್ಟರ್ ಗೆ ಅಗೋಸ್ತು 28ರಂದು ತಲುಪಿಸಬೇಕು. ಎಲ್ಲಾ ಜಿಲ್ಲಾ ಡಿ. ಡಿ. ಇ,ಗಳು ಅಗೋಸ್ತು 29 ರಂದು ಸಂಜೆ 3 ಗಂಟೆಗೆ ಮೊದಲು ವಿವರಗಳನ್ನು  ಇ. ಮೇಲ್  ಮೂಲಕ  ಡಿ. ಪಿ. ಐ ಗೆ  ತಲುಪಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ  ನಿರ್ದೇಶಕರು ತಿಳಿಸಿದ್ದಾರೆ

Saturday, August 23, 2014

INDEPENDENCE DAY 2014


School level Maths Quiz

ಶಾಲಾ ಮಟ್ಟದ ಗಣಿತ ರಸಪ್ರಶ್ನೆ ಕಾರ್ಯಕ್ರಮ :
 ಶಾಲಾ ಮಟ್ಟದ ಗಣಿತ ರಸಪ್ರಶ್ನೆ ಕಾರ್ಯಕ್ರಮವು ದಿನಾಂಕ 21.8.2014 ನೇ ಗುರುವಾರ ಅಪರಾಹ್ನ 1.30 ಕ್ಕೆ ನಡೆಯಿತು. ಇದರಲ್ಲಿ ಕಿರಿಯ  ಪ್ರಾಥಮಿಕ ವಿಭಾಗದಲ್ಲಿ ಮೂರನೇ ತರಗತಿಯ ಜೋವಿನ್ ಡೆಲ್ರೋಯ್ ಪ್ರಥಮ ಸ್ಥಾನವನ್ನೂ ಮನೀಶ್.ಎಸ್. ಡಿ. ದ್ವಿತೀಯ ಸ್ಥಾನವನ್ನೂ,  ನಾಲ್ಕನೇ ತರಗತಿಯ ರಾಹುಲ್ ತ್ರತೀಯ ಸ್ಥಾನವನ್ನು ಪಡೆದರು. ಯು.ಪಿ. ವಿಭಾಗದಲ್ಲಿ ಆರನೇ ತರಗತಿಯ ಸಾತ್ವಿಕ್ ಕ್ರಷ್ಣ  ಯನ್ ಪ್ರಥಮ ಸ್ಥಾನವನ್ನೂ , ಏಳನೇ ತರಗತಿಯ ಅಪೂರ್ವ ಎಡಕಾನ ಮತ್ತು ಆದಿತ್ಯ ಇ.ಎಚ್. ದ್ವಿತೀಯ ಸ್ಥಾನವನ್ನೂ, ಪ್ರಣವ ಕುಮಾರ್.ಯನ್. ತ್ರತೀಯ ಸ್ಥಾನವನ್ನೂ ಪಡೆದರು.


Friday, August 15, 2014

Independance day celeberation

ನಮ್ಮ ದೇಶದ 68ನೆ ಸ್ವಾತಂತ್ರ್ಯ ದಿನವನ್ನು ನಮ್ಮ ಶಾಲೆಯಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು.  ಮಕ್ಕಳ ಆಕರ್ಷಕ ಪ್ರಭಾತ ಫೇರಿಯ ಬಳಿಕ ಶಾಲಾ ಮುಖ್ಯೋಪಾಧ್ಯಾಯರು ಧ್ವಜಾರೋಹಣ ಗೈದರು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಶಾಲಾ ಪಿ.ಟಿ.ಎ. ಅಧ್ಯಕ್ಷ ವೆಂಕಟರಾಜ ನೀರಮೂಲೆ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಪ್ರಬಂಧಕ ಶ್ರೀ ಎನ್.ಸುಬ್ಬಣ್ಣ ಭಟ್ ಶುಭಾಶಂಸನೆಗೈದು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಸಹಾಯಕ ಅಧ್ಯಾಪಕ ಶ್ರೀ ಎನ್.ಶಂಕರನಾರಾಯಣ  ಭಟ್  ದಿನದ ಮಹತ್ವದ ಕುರಿತು ಮಾತನಾಡಿದರು. ಅನಂತರ ಮಕ್ಕಳಿಂದ ದೇಶಭಕ್ತಿಗೀತೆ, ಭಾಷಣ, ಸ್ಕಿಟ್ ಮೊದಲಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು. ಕಾರ್ಯಕ್ರಮದ ಪ್ರಾರಂಭದಲ್ಲಿ ಹಿರಿಯ ಅಧ್ಯಾಪಿಕೆ ಶ್ರೀಮತಿ ರೇವತಿ ಟೀಚರ್ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಸಹಾಯಕ ಅಧ್ಯಾಪಕ ಮಹಾಲಿಂಗ ಭಟ್ಟರು ವಂದಿಸಿದರು . ಕ್ರಷ್ಣಪ್ರಸಾದ ಮಾಸ್ಟರು  ಕಾರ್ಯಕ್ರಮ ನಿರೂಪಿಸಿದರು. ಮೊಗೇರ ಸಂಘ ಕಕ್ವೆ ಘಟಕದವರು ಸಿಹಿತಿಂಡಿಯನ್ನು ಒದಗಿಸಿದರು. 
ಕ್ಕಳು  ಹಾಗೂ ಅಧ್ಯಾಪಕರಿಂದ ಪ್ರಭಾತ ಫೇರಿ

Thursday, August 14, 2014

Sanskrit Day celebration

ಧರ್ಮತ್ತಡ್ಕ ಎ.ಯು.ಪಿ.ಶಾಲೆ ಮತ್ತು ಶ್ರೀ ದುರ್ಗಾಗಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಜಂಟಿಯಾಗಿ ದಿನಾಂಕ 14.8.2014ನೇ ಗುರುವಾರ ಸಂಸ್ಕ್ರತ ದಿನವನ್ನು ಆಚರಿಸಲಾಯಿತು. ಶಾಲಾ ಪ್ರಬಂಧಕರಾದ ಶ್ರೀ ಎನ್ ಸುಬ್ಬಣ್ಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎರಡೂ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಹಿರಿಯ ಅಧ್ಯಾಪಕಿ ಶ್ರೀಮತಿ ಸತ್ಯವತಿ ಮೊದಲಾದವರು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಅನಂತರ ದಿನಾಚರಣೆಯ ಭಾಗವಾಗಿ ಆಯೋಜಿಸಿದ್ದ ಪ್ರದರ್ಷಿನಿಯನ್ನು ಶಾಲಾ ಪ್ರಬಂಧಕರು ಉದ್ಘಾಟಿಸಿದರು. ಎಲ್ಲಾ  ಮಕ್ಕಳು ಪ್ರದರ್ಷಿನಿಯನ್ನು ವೀಕ್ಷಿಸಿದರು.


Sanskrit Day competition winners

ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲದಲ್ಲಿ ಜರಗಿದ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಸಂಸ್ಕ್ರತ ದಿನಾಚರಣೆಯ ಅಂಗವಾಗಿ ನಡೆದ ಸಂಸ್ಕ್ರತ ಸಂಘಗಾನದಲ್ಲಿ ನಮ್ಮ ಶಾಲೆಯ ಮಕ್ಕಳು ದ್ವಿತೀಯ ಬಹುಮಾನವನ್ನು ಪಡೆದಿದ್ದಾರೆ. ಅಲ್ಲದೆ ಸಂಸ್ಕ್ರತ ರಸಪ್ರಶ್ನೆಯಲ್ಲಿ ತ್ರತೀಯ ಬಹುಮಾನವನ್ನು ಪಡೆದಿರುತ್ತಾರೆ.
 ಸಂಘ ಗಾನ ದಲ್ಲಿ ದ್ವಿತೀಯ ಸ್ಥಾನ ಪಡೆದ ಶ್ರೀಚರಣ ,ಸ್ವಾತಿ ,ಕ್ರತಿಕ ,ಸಿಂಜಿತಾ ,ಶಾರದಾ ಸುರಭಿ, ಅಪೂರ್ವ ಎಡಕಾನ ಮತ್ತು ಅಕ್ಷತಾ
ರಸಪ್ರಶ್ನೆಯಲ್ಲಿ ತ್ರತೀಯ  ಸ್ಥಾನ ಪಡೆದ ಪ್ರಣವ ಕುಮಾರ್ ಯನ್ ಮತ್ತು ಅಪೂರ್ವ ಎಡಕಾನ

Tuesday, August 12, 2014

Winners of Manjeshwar Sub.Dist.Level Independance Quiz


Sathwik Krishna N VI std and Pranava kumar N VII std(Team) of AUPS Dharmathadka won the second Place in Manjeshwar sub Dist.Level Independance Quiz held today @ SDPHSS Dharmathadka. 
               Congratulations winners

Thursday, August 7, 2014

ಸಾಕ್ಷರ-2014 ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಮಗುವಿನ Worksheet



ಬಯಲು ಪ್ರವಾಸ
ನಮ್ಮ ಶಾಲೆಯ ಎರಡನೆಯ ತರಗತಿಯ ಮಕ್ಕಳಿಂದ ನಮ್ಮ ಪರಿಸರದಲ್ಲಿರುವ ವಿವಿಧ ಸಸ್ಯಗಳ ಪರಿಚಯಕ್ಕಾಗಿ ನಡೆದ ಬಯಲು ಪ್ರವಾಸ . ಅಧ್ಯಾಪಕರಾದ ಯನ್ ಮಹಾಲಿಂಗ ಭಟ್ಟರು ಮಕ್ಕಳಿಗೆ ಹಲವು ಹೊಸ ಸಸ್ಯಗಳ ಪರಿಚಯ ಮಾಡಿಸಿದರು .

Wednesday, August 6, 2014


 ಸಾಕ್ಷರ 2014 -ವಿಶೇಷ ತರಬೇತಿ ಕಾರ್ಯಕ್ರಮ ದ ಉದ್ಘಾಟನೆಯ ವರದಿ
ಧರ್ಮತ್ತಡ್ಕ ಎ ಯು ಪಿ ಶಾಲೆಯಲ್ಲಿ  ಸಾಕ್ಷರ 2014 -ವಿಶೇಷ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ದಿ .06.08.2014 ರಂದು ಅಪರಾಹ್ನ 3.00ಗಂಟೆಗೆ ಸರಿಯಾಗಿ ಪಿ ಟಿ ಎ ಅಧ್ಯಕ್ಷರಾದ ವೆಂಕಟ್ರಾಜ ನೀರಮೂಲೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು . ಶಾಲಾ ವ್ಯವಸ್ಥಾಪಕರಾದ ಶ್ರೀ ಯನ್ ಸುಬ್ಬಣ್ಣ ಭಟ್ಟರು ಕಾರ್ಯಕ್ರಮವನ್ನು ಔ ಪಚಾರಿಕವಾಗಿ ಉದ್ಘಾಟಿಸಿದರು . ವಾರ್ಡ್ ಸದಸ್ಯೆ  ವಸಂತಿ ಮೇಪೋಡು ಅವರು ಶುಭಾಶಂಸನೆ ಮಾಡಿದರು . ಶಾಲಾ ಮುಖ್ಯೋಪಾಧ್ಯಾಯರಾದ ಯನ್ ಯಚ್ ಲಕ್ಸ್ಮಿನಾರಾಯಣ ಭಟ್ಟರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು . ಅಧ್ಯಾಪಕರಾದ ಯನ್ ಮಹಾಲಿಂಗ ಭಟ್ಟರು ಧನ್ಯವಾದ ಸಮರ್ಪಿಸಿದರು . SRG ಕನ್ವೀನರ್ ಯನ್ ಶಂಕರನಾರಾಯಣ ಭಟ್ಟರು ಕಾರ್ಯಕ್ರಮ ನಿರೂಪಿಸಿದರು . ಬಳಿಕ 5 ಬ್ಯಾಚ್ ಗಳಲ್ಲಾಗಿ ಒಂದನೇ ದಿನದ ತರಗತಿ ನಡೆಯಿತು .
   
ಸಾಕ್ಷರ 2014 -ವಿಶೇಷ   S.R.G ಸಭೆಯ ವರದಿ       
ನಮ್ಮ ಶಾಲೆಯಲ್ಲಿ ಸಾಕ್ಷರ 2014 -ವಿಶೇಷ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ  ಸಮಾಲೋಚಿಸಲು ದಿ. 05.08.2014ರಂದು ಅಪರಾಹ್ನ 3.50ಕ್ಕೆ S.R.G ಸಭೆ ನಡೆಸಲಾಯಿತು . ಶಾಲಾ ಮುಖ್ಯೋಪಾಧ್ಯಾಯರು ವಿಷಯ ಮಂಡಿಸಿದರು . S.R.G ಕನ್ವೀನರ್ ಶಂಕರನಾರಾಯಣ ಭಟ್ಟರು ವಿಶೇಷ ತರಬೇತಿ ಕಾರ್ಯಕ್ರಮದ ಸಂಕ್ಷಿಪ್ತ ವಿವರಣೆ ನೀಡಿದರು . ವಿಶೇಷ ತರಬೇತಿ ಕಾರ್ಯಕ್ರಮಕ್ಕೆ  ಆಯ್ಕೆ ಯಾದ  100 ಮಕ್ಕಳನ್ನು 5 ಬ್ಯಾಚ್ ಗಳಾಗಿ  ವಿಂಗಡಿಸಲಾಯಿತು .ಪ್ರತಿ ಬ್ಯಾಚ್ ಗೆ ಕ್ಲಾಸ್ ನಡೆಸುವ ಜವಾಬ್ದಾರಿಯನ್ನುಈಕೆಳಗಿನಂತೆನೀಡಲಾಯಿತು.
Batch 1. Ramamohan CH & Gayathri Kadambar
Batch 2.Krishna Prasad K & Parameshwari Amma N
Batch 3.Naresh Bhat & Premalatha M
Batch 4.Venkatramana N & Kamalakshi K
Batch 5.Shrinivasa K.H & Padmavathi N
ವಿಶೇಷ ತರಬೇತಿ ಕಾರ್ಯಕ್ರಮದ ಯಶಸ್ವಿಗಾಗಿ  ಈ ಕೆಳಗಿನ ಸದಸ್ಯರನ್ನೊಳಗೊಂಡ Organising/Monitoring Committee ಯನ್ನು ರೂಪಿಸಲಾಯಿತು .
1.N.Subbanna Bhat Manager
2.N.H.Laksminarayana Bhat Headmaster
3.Kum.Vasanthi.Grama Panchayath Member,Puthige
4.Venkatraja Neeramoole,PTA President
5.Mahalinga Bhat N.Teacher-in-charge of BLEND
6.Shankaranarayana Bhat.N.SRG Convener
ತರಗತಿಯನ್ನು PTA ಸದಸ್ಯರ ಅಪೇಕ್ಷೆಯಂತೆ ಮಧ್ಯಾಹ್ನ 1.30ರಿಂದ  2.30ರ ವರೆಗೆ ನಡೆಸುವುದೆಂದು ತೀರ್ಮಾನಿಸಲಾಯಿತು . ಮಧ್ಯಾಹ್ನ ದ ನಂತರದ ಪಿರೀಡುಗಳನ್ನು 2.30 ರಿಂದ 4.05ರ ವರೆಗೆ ನಡೆಸುವುದೆಂದೂ ತೀರ್ಮಾನಿಸಲಾಯಿತು .