FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, June 26, 2015

ANTI DRUGS DAY

ವಿಶ್ವ ಮಾದಕ ವಸ್ತು ವಿರುದ್ಧ ದಿನಾಚರಣೆ 
ಇಂದು ನಮ್ಮ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರುದ್ಧ  ದಿನವನ್ನು ಆಚರಿಸಲಾಯಿತು. ಬೆಳಿಗ್ಗೆ ಶಾಲಾ ಅಸೆಂಬ್ಲಿಯಲ್ಲಿ ಮಾದಕ ವಸ್ತು ಸೇವನೆಯ ವಿರುದ್ಧ ಎಲಾ ಮಕ್ಕಳೂ ಅಧ್ಯಾಪಕರೂ ಪ್ರತಿಜ್ಞೆ ಗೈದೆವು. ಬಳಿಕ ಜನ ಜಾಗ್ರತಿ ಮೂಡಿಸುವ ಸಲುವಾಗಿ ಶಾಲಾ ಪರಿಸರದಲ್ಲಿ ಮಾದಕ ವಸ್ತು ವಿರೋಧಿ ಮೆರವಣಿಗೆಯನ್ನು ಹಮ್ಮಿಕೊಂಡೆವು. ಶಾಲಾ ಮುಖ್ಯೋಪಾಧ್ಯಾಯರು ಧ್ವಜವನ್ನು ಎತ್ತುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. 

ಬಳಿಕ ಮಕ್ಕಳು ಮಾದಕ ವಸ್ತು  ಸೇವನೆ ವಿರುದ್ಧದ ಘೋಷಣೆಗಳನ್ನು ಕೂಗುತ್ತಾ ಧರ್ಮತ್ತಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಸಿದರು. ಶಾಲಾ ಸಹಾಯಕ ಅಧ್ಯಾಪಕ ಶ್ರೀ ರಾಮ ಮೋಹನ ಮಾಸ್ಟರ್  ಅವರು ಮೆರವಣಿಗೆಗೆ ನೇತ್ರತ್ವ ವಹಿಸಿದರು. 
ಧರ್ಮತ್ತಡ್ಕ ಬಸ್ ನಿಲ್ದಾಣದ ಬದಿಯಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳು ತಾವು ತಯಾರಿಸಿದ  ಸೂಚನಾ ಫಲಕಗಳನ್ನು  ಹಿಡಿದು ಘೋಷಣೆ ಕೂಗಿದರು. 

ತುಂತುರು ಮಳೆಯ ನಡುವೆಯೂ ಮಕ್ಕಳು ಬಹಳ ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸಿ  ಅದನ್ನು ಯಶಸ್ವಿಗೊಳಿಸಿದರು


TOBACCO FREE CAMPUS


ಶಾಲೆಯಲ್ಲಿ NO TOBACCO ZONE ಎಂಬ ಬ್ಯಾನರನ್ನು ಅಳವಡಿಸಲಾಗಿದೆ. ಶಾಲೆಯ ಸುತ್ತುಮುತ್ತಲಿರುವ ಅಂಗಡಿಗಳಿಗೆ ಭೇಟಿ ನೀಡಿ ಮಾದಕ ವಸ್ತುಗಳು ಹಾಗೂ ಹೊಗೆಸೊಪ್ಪಿನ ಉತ್ಪನ್ನಗಳ  ಮಾರಾಟ ನಿಷೇಧದ ಬಗ್ಗೆ ಮಾಹಿತಿ ನೀಡಲಾಗಿದೆ.

Vaachana Vaaracharanam

ವಾಚನಾ ಸಪ್ತಾಹ 
ವಾಚನಾ ಸಪ್ತಾಹದ ಭಾಗವಾಗಿ ನಮ್ಮ ಶಾಲೆಯಲ್ಲಿ ಸಾಹಿತ್ಯ ರಸಪ್ರಶ್ನೆಯನ್ನು ಏರ್ಪಡಿಸಲಾಯಿತು .  ಸುಮಾರು ಅರುವತ್ತು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು . ಶಾಲಾ ಮುಖ್ಯೋಪಾಧ್ಯಾಯರು  ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಇದರಲ್ಲಿ ಏಳನೇ ತರಗತಿಯ ಸಾತ್ವಿಕ ಕೃಷ್ಣ ಪ್ರಥಮ ಸ್ಥಾನವನ್ನೂ, ಆರನೆ ತರಗತಿಯ ಭವಾನಿ ದ್ವಿತೀಯ ಸ್ಥಾನವನ್ನೂ , ಸಿಂಜಿತಾ  ಮತ್ತು ಅರ್ಶಿತಾ ರೈ  ತ್ರತೀಯ ಸ್ಥಾನವನ್ನೂ ಪಡೆದರು.

































ವಾಚನಾ ಸಪ್ತಾಹದ ಭಾಗವಾಗಿ ಒಂದು ಕವಿತಾ ರಚನಾ ಕಮ್ಮಟವನ್ನು ಏರ್ಪಡಿಸಲಾಯಿತು. ನಮ್ಮ ಶಾಲೆಯ ನಿವ್ರತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎನ್.ಎಚ್. ಲಕ್ಷ್ಮೀನಾರಾಯಣ ಭಟ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. 
ಸುಮಾರು ನಲುವತ್ತು ಮಕ್ಕಳು ಈ ಕಮ್ಮಟದಲ್ಲಿ ಭಾಗವಹಿಸಿದ್ದರು. ಮಕ್ಕಳ ಸಾಹಿತ್ಯದ ಚರಿತ್ರೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ ಬಳಿಕ ತರಗತಿ ನಡೆಸಿದರು. ಮಕ್ಕಳಿಂದ ವಿವಿಧ ರೀತಿಯ ಕವಿತೆಗಳನ್ನು ಬರೆಯಿಸಿದರು. 
ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ 
ವಾಚನಾ ಸಪ್ತಾಹದ ಅಂಗವಾಗಿ ಶಾಲೆಯ ಸಮೀಪವಿರುವ  ಸಾರ್ವಜನಿಕ ಗ್ರಂಥಾಲಯ ಮತ್ತು ವಾಚನಾಲಯಕ್ಕೆ ಬೇಟಿ ನೀಡಿದೆವು. 

 ಗ್ರಂಥಾಲಯದ ಕಾರ್ಯ ವೈಖರಿಯನ್ನು ಗ್ರಂಥಪಾಲಕಿ ಯವರು ವಿವರವಾಗಿ ಮಕ್ಕಳಿಗೆ ತಿಳಿಸಿದರು. ಮಕ್ಕಳು ಹಲವು ಪ್ರಶ್ನೆಗಳನ್ನು ಕೇಳಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡರು 
 

Birthday Celeberaton

ಎರಡನೆ ತರಗತಿಯ ಲಿಖಿತ್ ಕ್ರಷ್ಣ ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿರುತ್ತಾನೆ. ಅವನಿಗೆ ಶಾಲಾ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು .

Saturday, June 20, 2015

INAUGURATION OF VAACHANAA SAPTHAHA & VARIOUS CLUBS

ವಾಚನಾ ಸಪ್ತಾಹದ ಉದ್ಘಾಟನೆ. 
                                                                ಮಕ್ಕಳಿಂದ ಪ್ರಾರ್ಥನೆ
                                 ಶಾಲಾ ಮುಖ್ಯೋಪಾಧ್ಯಾಯರಿಂದ ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತ
               ಉಪಜಿಲ್ಲಾ ಸಮಾಜ ವಿಜ್ಞಾನ ಸಂಘದ ಕಾರ್ಯದರ್ಶಿ ಯವರಿಂದ ಔಪಚಾರಿಕವಾಗಿ ಉದ್ಘಾಟನೆ
                                    ಅಧ್ಯಾಪಕ ಶ್ರೀನಿವಾಸ ಕೆ ಎಚ್ ಇವರಿಂದ ಕಾರ್ಯಕ್ರಮ ನಿರೂಪಣೆ
ಪಿ. ಎನ್. ಪಣಿಕ್ಕರ್ ಅವರ ಚರಮ ದಿನವಾದ ಜೂನ್ 19 ರಂದು ನಮ್ಮ ಶಾಲೆಯಲ್ಲಿ ವಾಚನಾ ಸಪ್ತಾಹ  ಮತ್ತು ಶಾಲೆಯ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ ಜರಗಿತು. ಮಂಜೇಶ್ವರ ಉಪಜಿಲ್ಲಾ ಸಮಾಜ ವಿಜ್ಞಾನ ಸಂಘದ ಸಂಚಾಲಕ ಶ್ರೀ ಸತೀಶ್ ಕುಮಾರ್ ಶೆಟ್ಟಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು. ಯುವ ಬರಹಗಾರ್ತಿ ಹಾಗೂ ಕವಯಿತ್ರಿ ಶ್ರೀಮತಿ ಪ್ರಸನ್ನ ವಿ. ಚೆಕ್ಕೆಮನೆ  ಮುಖ್ಯ ಅತಿಥಿಯಾಗಿ ಆಗಮಿಸಿ ಓದುವಿಕೆಯ ಮಹತ್ವ ದ ಕುರಿತು ಮಾತನಾಡಿದರು. ಶಾಲಾ ಪಿ.ಟಿ.ಎ. ಅಧ್ಯಕ್ಷ ಶ್ರೀ ವೆಂಕಟರಾಜ ನೀರಮೂಲೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಎನ್. ಮಹಾಲಿಂಗ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಅಧ್ಯಾಪಕ ಶ್ರೀ ರಾಮಮೋಹನ್ ಸಿ ಎಚ್. ವಂದನಾರ್ಪಣೆ ಗೈದರು. ಕ್ರಷ್ಣ ಪ್ರಸಾದ್ ಮಾಸ್ಟರು. ವಿವಿಧ ಕ್ಲಬ್ ಗಳನ್ನು ಹಾಗೂ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಶ್ರೀನಿವಾಸ ಕೆ.ಎಚ್. ಕಾರ್ಯಕ್ರಮ ನಿರೂಪಿಸಿದರು. ಅನಂತರ ಮಕ್ಕಳಿಗೆ ಶಾಲಾ ಗ್ರಂಥಾಲಯದಿಂದ ಪುಸ್ತಕಗಳನ್ನು ವಿತರಿಸಲಾಯಿತು. ವಾಚನಾ ಸಪ್ತಾಹದ ಭಾಗವಾಗಿ ಮಕ್ಕಳಿಗೆ ಸಾಹಿತ್ಯ ರಸಪ್ರಶ್ನೆ, ಕವಿತಾ ರಚನ ಕಮ್ಮಟ,  ಸಾರ್ವಜನಿಕ ಗ್ರಂಥಾಲಯ ಭೇಟಿ, ಪುಸ್ತಕ ಆಸ್ವಾದನಾ ಟಿಪ್ಪಣಿ ತಯಾರಿ  ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

BIOGAS UNIT

ಬಯೋ ಗ್ಯಾಸ್ ಸ್ಥಾಪನೆ 
ಶಾಲೆಯಲ್ಲಿ ಉಳಿಯುವ ತ್ಯಾಜ್ಯಗಳ ಮರುಬಳಕೆಗಾಗಿ ಕೇರಳ ಸರಕಾರದ ಕ್ರಷಿ ಇಲಾಖೆಯ ಆದೇಶದಂತೆ RAIDCO ಕಂಪೆನಿಯವರು ನಮ್ಮ ಶಾಲೆಗೆ  ಒಂದು ಬಯೋ ಗ್ಯಾಸ್ ಪ್ಲಾಂಟ್ ನ್ನು ನೀಡಿದರು . ಅದನ್ನು ಕಂಪೆನಿಯ ಅಧಿಕ್ರತರು ಬಂದು ಶಾಲೆಯ ಬಳಿಯಲ್ಲಿ ಸ್ಥಾಪಿಸಿದರು.

Wednesday, June 10, 2015

BIRTHDAY CELEBERATION



ಇಂದು ನಮ್ಮ ಶಾಲೆಯ ಆರನೇ ತರಗತಿಯ ಸುರಭಿಯು ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು. ಅವಳಿಗೆ ಶಾಲೆಯ ಪರವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು

Tuesday, June 9, 2015

BIRTHDAY CELEBERATION



ನಮ್ಮ ಶಾಲೆಯ 7 C   ತರಗತಿಯ ಸಾತ್ವಿಕ್ ಕೃಷ್ಣ ಯನ್  ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿದನು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಇಂಗ್ಲಿಷ್ - ಇಂಗ್ಲಿಷ್-ಕನ್ನಡ ನಿಘಂಟು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ಅವನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು.

Monday, June 8, 2015

100 ವರ್ಷ ಪೂರೈಸಿದ ಕವಿ ಕಯ್ಯಾರ ಕಿಞ್ಞಣ್ಣ ರೈ

        100 ವರ್ಷ ಪೂರೈಸಿದ ಕವಿ ಕಯ್ಯಾರ ಕಿಞ್ಞಣ್ಣ ರೈ

ಗಡಿನಾಡ ಕನ್ನಡದ ಖ್ಯಾತ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ 100 ವರ್ಷ ಪೂರೈಸಿದ ಸುಸಂದರ್ಭದಲ್ಲಿ ಹುಟ್ಟು ಹಬ್ಬದ ಶುಭಾಶಯಗಳು .ನಮ್ಮ ಶಾಲಾ ಅಸೆಂಬ್ಲಿಯಲ್ಲಿ ಕನ್ನಡ ಅಧ್ಯಾಪಕ ಶ್ರೀನಿವಾಸ ಕೆ. ಯಚ್ ಅವರು ಕವಿ ಕಯ್ಯಾರರ ಸಾಹಿತ್ಯ ಸಾಧನೆಯ ಬಗ್ಗೆ ತಿಳಿಸಿದರು . ಅವರು ಇನ್ನೂ ಹಲವು ವರ್ಷಗಳ ಕಾಲ ಬದುಕಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುವಂತಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.

Saturday, June 6, 2015

CLICK HERE FOR THE ACTIVITY BOOKS (MAL)FOR HEALTH & PHYSICAL EDUCATION OF U.P SECTION.

Friday, June 5, 2015

WORLD ENVIRONMENTAL DAY

  ವಿಶ್ವ ಪರಿಸರ ದಿನಾಚರಣೆ 
                                     

ಪ್ರತಿ ವರ್ಷದಂತೆ ಈ ವರ್ಷವೂ ಜೂನ್ 5 ರಂದು ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು . ಕೇರಳ ರಾಜ್ಯ ಅರಣ್ಯ ಇಲಾಖೆಯ ವತಿಯಿಂದ ನೀಡಿದ ಗಿಡಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಶಾಲಾ ಪರಿಸರದಲ್ಲಿ ಮಕ್ಕಳು ಪ್ರತಿ ತರಗತಿಗೊಂದರಂತೆ ಗಿಡಗಳನ್ನು ನೆಟ್ಟರು . ಕ್ಲಾಸ್ ಅಧ್ಯಾಪಕರು ನೇತೃತ್ವ ನೀಡಿದರು . ಶಾಲಾ ಅಸೆಂಬ್ಲಿಯಲ್ಲಿ ಇಕೋ ಕ್ಲಬ್ ಸಂಚಾಲಕರಾದ ಶ್ರೀ ರಾಮಮೋಹನ್ ಅವರು ದಿನದ ಮಹತ್ವದ ಬಗ್ಗೆ ತಿಳಿಸಿದರು . ಪ್ರತಿ ತರಗತಿಯಲ್ಲೂ ಘೋಷಣ ವಾಕ್ಯಗಳು,ಪ್ಲಕಾರ್ಡುಗಳು ,ಭಾಷಣ,ಪರಿಸರಗೀತೆ ಗಾಯನ ಇತ್ಯಾದಿ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಯಿತು .
                               ಶಾಲಾ ಪ್ರವೇಶೋತ್ಸವ 2015-16
 2015-16 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ನಮ್ಮ ಶಾಲೆಯಲ್ಲಿ ವೈಭವದಿಂದ ನಡೆಯಿತು . ಹೊಸದಾಗಿ ಸೇರಿದ ಮಕ್ಕಳನ್ನು ಪುಗ್ಗೆ ನೀಡಿ ಸ್ವಾಗತಿಸಲಾಯಿತು .  ಪಿ. ಟಿ . ಎ ಅಧ್ಯಕ್ಷ ವೆಂಕಟರಾಜ ನೀರಾಮೂಲೆ ಅವರ ಅಧ್ಯಕ್ಷತೆಯಲ್ಲಿ ವಾರ್ಡ್ ಸದಸ್ಯೆ  ಕುಮಾರಿ ವಸಂತಿ ಅವರು ಪ್ರವೇಶೋತ್ಸವವನ್ನು ಉದ್ಘಾಟಿಸಿದರು . ಶಾಲಾ ಮುಖ್ಯೋಪಾಧ್ಯಾಯ ಶ್ರೀ ಯನ್ ಮಹಾಲಿಂಗ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು . ಹೊಸದಾಗಿ ಸೇರಿದ ಮಕ್ಕಳಿಗೆ ಶಾಲಾ ಮೇನೇಜರ್ ಶ್ರೀಮತಿ ವಿಜಯಶ್ರೀ ಅವರು ಕಲಿಕೋಪಕರಣಗಳ ಕಿಟ್ ವಿತರಿಸಿದರು. ಅಧ್ಯಾಪಿಕೆ ಗಾಯತ್ರಿ ಕಡಂಬಾರ್ ಅವರು ಧನ್ಯವಾದ ಸಮರ್ಪಿಸಿದರು. ಅಧ್ಯಾಪಕ ಶ್ರೀನಿವಾಸ ಕೆ. ಯಚ್. ಕಾರ್ಯಕ್ರಮ ನಿರೂಪಿಸಿದರು.ಬಳಿಕ ಎಲ್ಲ ಮಕ್ಕಳಿಗೂ ಸಿಹಿತಿಂಡಿ ವಿತರಿಸಲಾಯಿತು. ಅನಂತರ ಮಕ್ಕಳಿಂದ ವಿವಿಧ ಚಟುವಟಿಕೆಗಳು ನಡೆಯಿತು .
   

ಶ್ರದ್ಧಾಂಜಲಿ ಸಭೆ

                                                           ಶ್ರದ್ಧಾಂಜಲಿ ಸಭೆ

ನಮ್ಮ ಶಾಲಾ ವ್ಯವಸ್ಥಾಪಕರಾಗಿದ್ದ ಶ್ರೀ ಯನ್ ಸುಬ್ಬಣ್ಣ ಭಟ್ ಅವರ ನಿಧಾನಕ್ಕೆ ಸಂತಾಪ ಸೂಚಕವಾಗಿ ಶಾಲೆಯಲ್ಲಿ 1.6.2015 ನೇ ಸೋಮವಾರದಂದು ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು . ಶಾಲಾ ಮುಖ್ಯೋಪಾಧ್ಯಾಯ ಶ್ರೀ ಯನ್ ಮಹಾಲಿಂಗ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು . ವಾರ್ಡ್ ಸದಸ್ಯೆ ಕುಮಾರಿ ವಸಂತಿ ,ಪಿ. ಟಿ . ಎ ಅಧ್ಯಕ್ಷ ವೆಂಕಟರಾಜ ನೀರಾಮೂಲೆ ,ಶಾಲಾ ಅಧ್ಯಾಪಕರಾದ ರಾಮಮೋಹನ್ ಸಿ. ಯಚ್ ,ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಮಾತನಾಡಿದರು . ಶಾಲಾ ಮೇನೇಜರ್ ಶ್ರೀಮತಿ ವಿಜಯಶ್ರೀ ಅವರು ಉಪಸ್ಥಿತರಿದ್ದರು  ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು . ಅಧ್ಯಾಪಕ ಶ್ರೀನಿವಾಸ ಕೆ. ಯಚ್. ಕಾರ್ಯಕ್ರಮ ನಿರೂಪಿಸಿದರು . ಮೃತರ ಗೌರವಾರ್ಥ ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು .