FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, October 21, 2016

SCHOOL KALOTHSAVAM 2016

ಶಾಲಾ ಕಲೋತ್ಸವ 
ಈ ವರ್ಷದ ನಮ್ಮ ಶಾಲಾ ಮಟ್ಟದ ಕಲೋತ್ಸವವು ಅಕ್ಟೊಬರ್ 18 ಮತ್ತು 19 ರಂದು ಜರಗಿತು. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಅವರು ದೀಪ ಬೆಳಗಿಸಿ ಉತ್ಸವವನ್ನು ಉದ್ಘಾಟಿಸಿದರು. ಶಾಲಾ ಪಿ. ಟಿ. ಎ. ಅಧ್ಯಕ್ಷ ಜಾನ್ ಡಿ ಸೋಜ ಅಧ್ಯಕ್ಷತೆ ವಹಿಸಿದರು. ಮಕ್ಕಳಿಗೆ ಶಾಸ್ತ್ರೀಯ ಸಂಗೀತ, ಲಘು ಸಂಗೀತ , ಕಂಠಪಾಠ , ಏಕಪಾತ್ರಾಭಿನಯ , ಭಾಷಣ , ಕಥಾಪ್ರಸಂಗ , ಮಾಪಿಳ್ಳಾಪಾಟ್ಟು , ಒಪ್ಪನ , ಜಾನಪದ ನ್ರತ್ಯ , ಸಮೂಹ ನ್ರತ್ಯ, ದೇಶಭಕ್ತಿಗೀತೆ, ಸಮೂಹಗೀತೆ, ನಾಟಕ  ಮೊದಲಾದ ವಿಷಯಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. 












 

BASIC SCIENCE QUIZ

SSBAUPS AILA ದಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ LP ವಿಭಾಗದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ  ನಮ್ಮ ಶಾಲೆಯ ತನುಷ್ ಕುಮಾರ್ ಯನ್  ಮೂರನೇ ಸ್ಥಾನವನ್ನು ಪಡೆದಿರುತ್ತಾನೆ. ಅವನಿಗೆ ಶಾಲಾ ಪರವಾಗಿ ಅಭಿನಂದನೆಗಳು

Monday, October 17, 2016

SOCIAL SCIENCE QUIZ

 ಪೈವಳಿಕೆ ಸರಕಾರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಿರಿಯ ಪ್ರಾಥಮಿಕ ವಿಭಾಗದ ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ  ನಮ್ಮ ಶಾಲೆಯ  ಮೂರನೇ ತರಗತಿ ಮಕ್ಕಳಾದ ತನುಷ್ ಕುಮಾರ್ ಯನ್  ಮತ್ತು ಮನೋಜ್ಞಾ ಸಿ. ಯಚ್. ಅವರ ತಂಡವು ತೃತೀಯ  ಸ್ಥಾನವನ್ನು ಪಡೆದಿರುತ್ತಾರೆ. ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು 

MATHS QUIZ WINNER


ಜಿ. ಬಿ. ಎಲ್. ಪಿ. ಶಾಲೆ ಮಂಗಲ್ಪಾಡಿಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಯು.ಪಿ. ವಿಭಾಗದ ಗಣಿತ ರಸಪ್ರಶ್ನೆ ಹಾಗೂ  ಗಣಿತ ಸೆಮಿನಾರಿನಲ್ಲಿ ನಮ್ಮ ಶಾಲೆಯ ಏಳನೇ ತರಗತಿಯ ಸಿಂಜಿತಾ ನೆಕ್ಕಿಗುಳಿ ದ್ವಿತೀಯ ಬಹುಮಾನವನ್ನು ಗಳಿಸಿರುತ್ತಾಳೆ. ಅವಳಿಗೆ ಶಾಲಾ ಪರವಾಗಿ ಅಭಿನಂದನೆಗಳು. ಮಂಗಲ್ಪಾಡಿ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಶೇಖರ್ ಮಾಸ್ಟರ್ ಅವಳಿಗೆ ಬಹುಮಾನವನ್ನು ನೀಡಿದರು. ಅದನ್ನು ಶಾಲಾ  ಅಸೆ೦ಬಿಲಿ ಯಲ್ಲಿ ನಮ್ಮ ಶಾಲಾ ಮುಖ್ಯೋಪಾಧ್ಯಾಯರು  ವಿತರಿಸಿದರು.

Birthday

ಜನ್ಮ ದಿನಾಚರಣೆ

ನಮ್ಮ ಶಾಲೆಯ ಐದನೇ ತರಗತಿಯ ಆಯಿಷತ್ ಮುನ್ಸಿನ ತನ್ನ ಹುಟ್ಟುಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು  ಅವಳಿಗೆ ಹುಟ್ಟು ಹಬ್ಬದ ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು

Tuesday, October 11, 2016

NAVARATHRI FESTIVAL

ಶಾರದಾ ಪೂಜೆ 
ನವರಾತ್ರಿ ಹಬ್ಬದ ಭಾಗವಾಗಿ ನಮ್ಮ ಶಾಲೆಯಲ್ಲಿ ಪುಸ್ತಕ ಪೂಜೆ ಹಾಗು ವಿದ್ಯಾರಂಭ ಕಾರ್ಯಕ್ರಮವನ್ನು ನಡೆಸಲಾಯಿತು. ಎಲ್ಲಾ ತರಗತಿಯ ಮಾಕಾಳ ಪುಸ್ತಕಗಳನ್ನು ಶಾರದಾ ದೇವಿಯ ಭಾವಚಿತ್ರದ ಮುಂಭಾಗದಲ್ಲಿಟ್ಟು ಪೂಜಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ  ಶ್ರೀ ಶಿವಪ್ರಸಾದ್ ನೆರಿಯ ಅವರು ಪೂಜೆಯನ್ನು ನೆರವೇರಿಸಿಕೊಟ್ಟರು. ಪೂಜೆಯ ಮೊದಲು ಅಧ್ಯಾಪಕರೂ ಮಕ್ಕಳೂ  ಸೇರಿ ದೇವಿಯ ಭಜನೆ ಹಾಡಿದರು . ಪೂಜೆಯ ಬಳಿಕ ಶಾಲಾ ಮುಖ್ಯೋಪಾಧ್ಯಾಯರು ಅಕ್ಷರಾಭ್ಯಾಸ ಮಾಡಿಸಿದರು. ಬಳಿಕ ಎಲ್ಲಾ ಮಕ್ಕಳು ಪುಸ್ತಕ ಓದಿದರು . ಶಾಲಾ ಅಧ್ಯಾಪಕ ಶ್ರೀ ರಾಮಮೋಹನ ಮಾಸ್ಟರ್ ನವರಾತ್ರಿ ಹಬ್ಬದ ಮಹತ್ವದ  ಕುರಿತು ಮಕ್ಕಳಿಗೆ ತಿಳಿಸಿದರು. ಎಲ್ಲ ಮಕ್ಕಳಿಗೂ ಪ್ರಸಾದವನ್ನು ವಿತರಿಸಲಾಯಿತು . 





                                  ಹುಲಿವೇಷ ಕುಣಿತ 

Wednesday, October 5, 2016

Organising Committee Formation


2016-17 ನೇ ಶೈಕ್ಷಣಿಕ ವರ್ಷದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸಂಸ್ಕ್ರತೋತ್ಸವ ಹಾಗು ಅರೇಬಿಕ್ ಸಾಹಿತ್ಯೋತ್ಸವದ  ಓರ್ಗನೈಸಿಂಗ್  ಸಮಿತಿ ಹಾಗು ವಿವಿಧ ಉಪ ಸಮಿತಿಗಳ ರೂಪಿಕರಣದ ಸಭೆಯು ದಿನಾಂಕ 05-10-2016 ನೇ ಬುಧವಾರ ಅಪರಾಹ್ನ 2.30 ಕ್ಕೆ ಸರಿಯಾಗಿ ಆರಂಭವಾಯಿತು. ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಅರುಣಾ ಜೆ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುತ್ತಿಗೆ ಪಂಚಾಯತ್ ವೆಲ್ಫೇರ್ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಚನಿಯ ಪಾಡಿ ಸಭೆಯ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಪಿ. ಟಿ. ಎ . ಅಧ್ಯಕ್ಷ  ಸುಂದರ ಶೆಟ್ಟಿ , ಎ. ಯು.ಪಿ.ಶಾಲೆ ಧರ್ಮತ್ತಡ್ಕದ ಪಿ.ಟಿ. ಎ.  ಅಧ್ಯಕ್ಷ ಶ್ರೀ ಜಾನ್ ಡಿ ಸೋಜ , ಮಂಜೇಶ್ವರ ಉಪಜಿಲ್ಲಾ ಮುಖ್ಯೋಪಾಧ್ಯಾಯ ಫೋರಮ್  ಕಾರ್ಯದರ್ಶಿ ಶ್ರೀ ಟಿ.ಡಿ. ಸದಾಶಿವ ರಾವ್ , ದುರ್ಗಾಪರಮೇಶ್ವರಿ ಹೈಸ್ಕೂಲಿನ ಮೆನೇಜರ್ ಶಂಕರನಾರಾಯಣ ಭಟ್ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಪುತ್ತಿಗೆ ಪಂಚಾಯತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಶಾಂತಿ , ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ವಸಂತಿ ,  ಧರ್ಮತ್ತಡ್ಕ ಯು.ಪಿ. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ. ಚಳ್ಳಂಗಾಯಮ್ ಶಾಲಾ ಮೆನೇಜರ್ ಶ್ರೀ ಸಿ. ಎ .ಅಬ್ದುಲ್ಲಾ ಉಪಸ್ಥಿತರಿದ್ದರು. ಸಭೆಯಲ್ಲಿ  ಕಲೋತ್ಸವದ ಜನರಲ್ ಕನ್ವಿನರ್ ಆಗಿ SDPHSS Dharmathadka ದ  Pricipal  ಶ್ರೀ ರಾಮಚಂದ್ರ ಭಟ್ ಹಾಗು  ಧರ್ಮತ್ತಡ್ಕ ಯು.ಪಿ. ಶಾಲಾ ಮುಖ್ಯೋಪಾಧ್ಯಾಯ ಶ್ರೀ  ಯನ್ .ಮಹಾಲಿಂಗ ಭಟ್  ಅವರನ್ನು ಜಾಯಿಂಟ್ ಕನ್ವಿನರ್ ಆಗಿ ಆರಿಸಲಾಯಿತು. ನವೆಂಬರ್ ತಿಂಗಳಿನ 26,28,29  ಮತ್ತು 30 ರಂದು ಉಪಜಿಲ್ಲಾ ಕಲೋತ್ಸವವನ್ನು ನಡೆಸುವುದೆಂದು ನಿಶ್ಚಯಿಸಲಾಯಿತು. ಕಲೋತ್ಸವದ ಯಶಸ್ಸಿಗಾಗಿ  ಸಂಘಾಟಕ ಸಮಿತಿ ಹಾಗು ವಿವಿಧ ಉಪ ಸಮಿತಿಗಳನ್ನು ರೂಪೀಕರಿಸಲಾಯಿತು. ಕಲೋತ್ಸವದ ಜನರಲ್ ಕನ್ವಿನರ್ ಶ್ರೀ ರಾಮಚಂದ್ರ ಭಟ್ ಸ್ವಾಗತಿಸಿದರು. ಜಾಯಿಂಟ್ ಕನ್ವಿನರ್ ಯನ್ . ಮಹಾಲಿಂಗ ಭಟ್ ವಂದಿಸಿದರು. ಧರ್ಮತ್ತಡ್ಕ ಹೈಸ್ಕೂಲಿನ ಅಧ್ಯಾಪಕ ಸತೀಶ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

Sunday, October 2, 2016

ORGANISING COMMITTE FORMATION MEETING

ಈ ವರ್ಷದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ, ಸಂಸ್ಕ್ರತೋತ್ಸವ ಹಾಗೂ ಅರೇಬಿಕ್ ಸಾಹಿತ್ಯೋತ್ಸವವು  ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ ಎ. ಯು.ಪಿ. ಶಾಲೆ ಧರ್ಮತ್ತಡ್ಕದಲ್ಲಿ ಜರಗಲಿರುವುದು. ಇದರ ಓರ್ಗನೈಸಿಂಗ್ ಕಮಿಟಿ ರೂಪೀಕರಣ  ಸಭೆಯು ದಿನಾಂಕ 05-10-2016 ನೇ ಬುಧವಾರ ಅಪರಾಹ್ನ 2 ಗಂಟೆಗೆ ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರಿ ಹೈಸ್ಕೂಲಿನ ಸಭಾಂಗಣದಲ್ಲಿ ಜರಗಲಿರುವುದು . ಎಲ್ಲರಿಗೂ  ಆದರದ ಸ್ವಾಗತ

MATHS SCIENCE QUIZ

ಶಾಲಾ ಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆಯು ದಿನಾಂಕ 05-10-2016 ನೇ ಬುಧವಾರ ಅಪರಾಹ್ನ 2 ಗಂಟೆಗೆ ಹಾಗು  ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯು ದಿನಾಂಕ 06-10-2016 ನೇ ಗುರುವಾರ ಅಪರಾಹ್ನ 2 ಗಂಟೆಗೆ ನಡೆಯಲಿರುವುದು. 
 

SCOUTS AND GUIDES CAMP

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ  ಮಂಜೇಶ್ವರ ಲೋಕಲ್ ಅಸೋಸಿಯೇಶನ್ ನೇತೃತ್ವದಲ್ಲಿ ಮಂಜೇಶ್ವರ ಎಸ್ .ಎ .ಟಿ. ಶಾಲೆಯಲ್ಲಿ ಜರಗಿದ ಮೂರು  ದಿನಗಳ ಶಿಬಿರದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ಗೈಡ್ಸ್ 



CPTA

ತರಗತಿ ಪಿ.ಟಿ. ಎ 
ನಮ್ಮ ಶಾಲೆಯ ಎಲ್ಲಾ ತರಗತಿಗಳ ಕ್ಲಾಸ್ ಪಿ. ಟಿ. ಎ. ದಿನಾಂಕ 29.09.2016 ನೇ ಗುರುವಾರ ಜರಗಿತು. ಹೆಚ್ಚಿನ ರಕ್ಷಕರು ಈ ಸಭೆಯಲ್ಲಿ ಭಾಗವಹಿಸಿದರು. ಮಕ್ಕಳ ಕಲಿಕಾ ಅಭಿವೃದ್ಧಿಯ ಕುರಿತು ರಕ್ಷಕರಿಗೆ ಮಾಹಿತಿ ನೀಡಲಾಯಿತು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆತ್ತವರು ಯಾವರೀತಿಯಲ್ಲಿ ಸಹಾಯ ನೀಡಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು. 








BIRTHDAY

 ನಮ್ಮ ಶಾಲೆಯ ಮೂರನೇ ತರಗತಿಯ ಪ್ರಣವ್  ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ  ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ಅವನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು 
ನಮ್ಮ ಶಾಲೆಯ ನಾಲ್ಕನೇ  ತರಗತಿಯ ವಿವೇಕರಾಮ   ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ  ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದನು. ಅವನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವನ ಹೆತ್ತವರಿಗೆ ಅಭಿನಂದನೆಗಳು