FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, August 23, 2017

INDEPENDANCE DAY CELEBRATION

ಸ್ವಾತಂತ್ರ್ಯ ದಿನಾಚಣೆ 
ನಮ್ಮ ದೇಶದ ೭೧ ನೇ ಸ್ವಾತಂತ್ರ್ಯ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು . ಬೆಳಿಗ್ಗೆ ಮಕ್ಕಳು ಅಧ್ಯಾಪಕರು ಹಾಗೂ ರಕ್ಷಕರು ಸೇರಿಕೊಂಡು ಪ್ರಭಾತ ಫೇರಿ ನಡೆಸಿದೆವು . ಬಳಿಕ ಶಾಲಾ ಮುಖ್ಯೋಪಾಧ್ಯಾಯರು ರಾಷ್ಟ್ರಧ್ವಜವನ್ನು ಹಾರಿಸಿದರು . ಮಕ್ಕಳು ಧ್ವಜ ವಂದನೆ ಮಾಡಿ ಧ್ವಜಗೀತೆ ಹಾಡಿದರು . ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ ಉದ್ಘಾಟಿಸಿದರು . ಶಾಲಾ ಪಿ. ಟಿ . ಎ. ಅಧ್ಯಕ್ಷ ಜೋನ್ ಡಿ ಸೋಜ ಅಧ್ಯಕ್ಷತೆ ವಹಿಸಿದರು . ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಭಾರತಿ ಕೆ ಅವರು ಶುಭಾಶಯ ಕೋರಿದರು . ಶಾಲಾ ಅಧ್ಯಾಪಕ ರಾಮ ಮೋಹನ್ ಮಾಸ್ಟರ್ ಸ್ವಾತಂತ್ರ್ಯ ಹೋರಾಟದ ಕುರಿತು ವಿಸ್ತಾರವಾಗಿ ತಿಳಿಸಿದರು .ಶಾಲಾ ಮುಖ್ಯೋಪಾಶ್ಯಾಯರು ಸ್ವಾಗತಿಸಿದರು . ರೇವತಿ ಟೀಚರ್ ವಂದಿಸಿದರು . ಬಳಿಕ ಮಕ್ಕಳಿಂದ ಭಾಷಣ ದೇಶ ಭಕ್ತಿ ಗೀತೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಕಿಟ್ ಮೊದಲಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು . ಮೊಗೇರ ಸಂಘ ಕಕ್ವೆ ಇವರು ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು . ಎಲ್ಲ ಮಕ್ಕಳಿಗೂ ಪಾಯಸವನ್ನು ವಿತರಿಸಲಾಯಿತು . ಜನ ಗಣ ಮನ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. 







ANTI WAR RALLY

ಯುದ್ಧ ವಿರುದ್ಧ ರಾಲಿ 
ಕ್ವಿಟ್  ಇಂಡಿಯಾ ದಿನ, ಹಿರೋಷಿಮಾ ಮತ್ತು ನಾಗಸಾಕಿ ದಿನದ ಭಾಗವಾಗಿ ನಮ್ಮ ಶಾಲೆಯಲ್ಲಿ ಚಿತ್ರ ಪ್ರದರ್ಶನ ಮತ್ತು ಯುದ್ಧ ವಿರುದ್ಧ ರಾಲಿಯನ್ನು ನಡೆಸಲಾಯಿತು. ಯುದ್ಧದಿಂದ ಆಗುವ ಅನಾಹುತಗಳನ್ನು ತೋರಿಸುವ ವಿವಿಧ ಚಿತ್ರಗಳನ್ನು ಪ್ರದರ್ಶಿಸಲಾಯಿತು . ಯುದ್ಧ ವಿರುದ್ಧ ಘೋಷಣೆಗಳನ್ನು ಪ್ರತಿಯೊಂದು ತರಗತಿಯಲ್ಲಿ ತಯಾರಿಸಲಾಯಿತು . ಬಳಿಕ  ವಿಜ್ಞಾನ ಸಂಘದ ನೇತೃತ್ವದಲ್ಲಿ ಯುದ್ಧ ವಿರುದ್ಧ ರಾಲಿಯನ್ನು ನಡೆಸಲಾಯಿತು.  ಪರಿಸರದಲ್ಲಿ ಮೆರವಣಿಗೆಯನ್ನು ನಡೆಸಿ ಯುದ್ಧ ವಿರುದ್ಧ ಘೋಷಣೆಗಳನ್ನು ಕೂಗಿ ಜನ ಜಾಗ್ರತಿ ಮೂಡಿಸಲಾಯಿತು . 


FREEDOM QUIZ

ಸ್ವಾತಂತ್ರ್ಯ ಕ್ವಿಜ್ 
ಮಂಜೇಶ್ವರ ಉಪಜಿಲ್ಲೆಯ ಸಮಾಜ ವಿಜ್ಞಾನ ಸಂಘದ ನೇತೃತ್ವದಲ್ಲಿ ಉಪ್ಪಳ  ಹೈಸ್ಕೂಲಿನಲ್ಲಿ ದಿನಾಂಕ 10.08.2017 ರಂದು ನಡೆದ ಸ್ವಾತಂತ್ರ್ಯ ಕ್ವಿಜ್ ನಲ್ಲಿ ನಮ್ಮ ಶಾಲೆಯ ತನುಷ್ ಕುಮಾರ್ ಮತ್ತು ಮನೋಜ್ಞ ಇವರ ತಂಡವು LP  ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದರು . 

SANSKRIT CAMP

ಬಾಲ ರಂಜಿನಿ - ಸಂಸ್ಕ್ರತ ಶಿಬಿರ 
ಮಂಜೇಶ್ವರ ಉಪಜಿಲ್ಲಾ ಸಂಸ್ಕ್ರತ ಅಕಾಡೆಮಿಕ್ ಕೌನ್ಸಿಲ್  ನೇತೃತ್ವದಲ್ಲಿ ಎಲ್ .ಪಿ. ವಿಭಾಗದ ಸಂಸ್ಕ್ರತ ಮಕ್ಕಳಿಗಾಗಿ ಉಪಜಿಲ್ಲಾ ಮಟ್ಟದ  ಒಂದು ದಿನದ ಬಾಲ ರಂಜಿನಿ ಸಂಸ್ಕ್ರತ ಶಿಬಿರವು ದಿನಾಂಕ 4.8.2017 ನೇ ಶುಕ್ರವಾರ ನಮ್ಮ  ನಡೆಯಿತು . ಕಾರ್ಯಕ್ರಮದ ಆರಂಭದಲ್ಲಿ ನಮ್ಮ ಶಾಲೆಯ ಮಕ್ಕಳು ಸ್ವಾಗತ ಗೀತೆ ಮತ್ತು ಸ್ವಾಗತ ನ್ರತ್ಯ ಮಾಡಿದರು . ಉಪಜಿಲ್ಲೆಯ  ಸುಮಾರು ಇನ್ನೂರು ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದರು . ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಅರುಣಾ ಜೆ ಇವರು  ಶಿಬಿರವನ್ನು ಉದ್ಘಾಟಿಸಿದರು . ಪುತ್ತಿಗೆ ಪಂಚಾಯತು ಕ್ಷೇಮ ಸ್ಥಾಯಿ ಸಮಿತಿ ಚೆಯರ್ಮೆನ್ ಚನಿಯ ಪಾಡಿ ಅಧ್ಯಕ್ಷತೆ ವಹಿಸಿದರು. ವಹಿಸಿದರು . ಕಲ್ಲಕಟ್ಟ ಶಾಲೆಯ ನಿವೃತ್ತ ಸಂಸ್ಕ್ರತ ಅಧ್ಯಾಪಕ ಶ್ರೀ ಗಣಪತಿ ಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದರು . ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ದಿನೇಶ್ ವಿ, ಶಾಲಾ ಮೆನೇಜರ್ ವಿಜಯಶ್ರೀ ಬಿ , ಧರ್ಮತ್ತಡ್ಕ ಹೈಸ್ಕೂಲಿನ ಮೆನೇಜರ್ ಶಂಕರ ನಾರಾಯಣ ಭಟ್ , ಶಾಲಾ ಪಿ.  ಟಿ. ಎ . ಅಧ್ಯಕ್ಷ ಜಾನ್ ಡಿ ಸೋಜ , ಮಾತೃ ಮಂಡಳಿ ಅಧ್ಯಕ್ಷೆ ಭಾರತಿ ಕೆ. ಶಿಬಿರಕ್ಕೆ ಶುಭ ಹಾರೈಸಿದರು . ಶಾಲಾ ಮುಖ್ಯೋಪಾಧ್ಯಾಯ ಶ್ರೀ ಯನ್ . ಮಹಾಲಿಂಗ ಭಟ್ ಸ್ವಾಗತಿಸಿದರು . ಉಪಜಿಲ್ಲಾ ಸಂಸ್ಕ್ರತ ಕೌನ್ಸಿಲ್  ಕಾರ್ಯದರ್ಶಿ ಶ್ರೀಮತಿ ಸೌಮ್ಯ ಟೀಚರ್ ವಂದಿಸಿದರು. ಸಂಸ್ಕ್ರತ ಅಧ್ಯಾಪಕ  ಮಧುಸೂಧನ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು . ಬಳಿಕ ಮಕ್ಕಳನ್ನು ಹತ್ತು ಗುಂಪುಗಳಾಗಿ ಮಾಡಿ ಶಿಬಿರದ ತರಗತಿಗಳನ್ನು ನಡೆಸಲಾಯಿತು . ಸಂಜೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು .