FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, January 13, 2017

Kasaragod Revenue Dist School Kalothsavam

ತ್ರಿಕರಿಪುರದಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಯು.ಪಿ. ಸಂಸ್ಕ್ರತೋತ್ಸವದಲ್ಲಿ ಸಮಗ್ರ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ  ಮಂಜೇಶ್ವರ ಉಪಜಿಲ್ಲೆಯು ತನ್ನದಾಗಿಸಿಗೊಂಡಿದೆ . ಒಟ್ಟು ೮೮ ಅಂಕಗಳನ್ನು ಗಳಿಸಿದ ಮಂಜೇಶ್ವರ ಉಪಜಿಲ್ಲೆಯು ಚೆರುವತ್ತೂರು ಉಪಜಿಲ್ಲೆಯೊಂದಿಗೆ ಸಮಗ್ರ ಪ್ರಶಸ್ತಿಯನ್ನು ಹಂಚಿಕೊಂಡಿದೆ . ಇದರಲ್ಲಿ ನಮ್ಮ ಶಾಲೆಯ ಮಕ್ಕಳು ಉಪನ್ಯಾಸರಚನೆ , ಅಕ್ಷರಶ್ಲೋಕ , ಗಾನಾಲಾಪನ(ಹುಡುಗಿಯರು), ಪ್ರಭಾಷಣ ಮತ್ತು ಸಂಘಗಾನ  ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲಾ ಸ್ಪರ್ಧೆಗಳಲ್ಲಿ ಎ  ಗ್ರೇಡ್ ಪಡೆದು ೨೫ ಅಂಕಗಳನ್ನು ಪಡೆದು ಜಿಲ್ಲೆಯಲ್ಲಿ ಮೂರನೇ ಸ್ಥಾನವನ್ನು ಸಂಪಾದಿಸಿದ್ದಾರೆ. ಸಾಧನೆ ಮಾಡಿದ ಮಕ್ಕಳಿಗೆ ಅಭಿನಂದನೆಗಳು

Sunday, January 8, 2017

MATHS SEMINAR

ಹೊಸದುರ್ಗ ಬಿ. ಆರ್. ಸಿ. ಯಲ್ಲಿ 7.1.2017 ನೇ ಶನಿವಾರ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಗಣಿತ ಸೆಮಿನಾರಿನಲ್ಲಿ ನಮ್ಮ ಶಾಲೆಯ ಸಿಂಜಿತಾ ಕೆ. ಎ ಗ್ರೇಡ್ ಪಡೆದಿರುತ್ತಾಳೆ. ಅವಳಿಗೆ ಶಾಲಾ ಪರವಾಗಿ ಅಭಿನಂದನೆಗಳು

BIRTHDAY

 ನಮ್ಮ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಮಧುರ ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು . 
 ನಮ್ಮ ಶಾಲೆಯಲ್ಲಿ ಐದನೇ  ತರಗತಿಯಲ್ಲಿ ಕಲಿಯುತ್ತಿರುವ ಮಧುಶ್ರೀ  ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ ಅಭಿನಂದನೆಗಳು .

Wednesday, January 4, 2017

STUDY TOUR

ಶೈಕ್ಷಣಿಕ ಪ್ರವಾಸ 
ನಮ್ಮ ಶಾಲೆಯಿಂದ ಈ  ವರ್ಷ  ವಯನಾಡು ಜಿಲ್ಲೆಯ ವಿವಿಧ ಸ್ಥಳಗಳಿಗೆ ಪ್ರವಾಸ ಕೈಗೊಂಡೆವು . ದಶಂಬರ ತಿಂಗಳಿನ 30 ಮತ್ತು 31 ರಂದು 38 ಮಕ್ಕಳು , 14 ಅಧ್ಯಾಪಕರು ಹಾಗೂ 5 ರಕ್ಷಕರು ಪ್ರವಾಸ ಹೋದೆವು . 30 ರಂದು ಬೆಳಗ್ಗೆ7.20 ಕ್ಕೆ ಧರ್ಮತ್ತಡ್ಕ ದಿಂದ ಹೊರಟು ನೀಲೇಶ್ವರ ,ಪಯ್ಯನ್ನೂರು , ತಳಿಪರಂಬ , ಇರಿಟ್ಟಿ ದಾರಿಯಾಗಿ ಪ್ರಯಾಣಿಸಿದ ನಾವು ಚಹಾ ತೋಟ ಕಾಪಿ ತೋಟ ಬಾಳೆ ತೋಟ ಗಳನ್ನೂ ವೀಕ್ಷಿಸುತ್ತಾ ಸಂಜೆ 4.30 ಕ್ಕೆ ವಯನಾಡಿನ ಮಾನಂತವಾದಿಗೆ  ತಲುಪಿದೆವು. ಅಲ್ಲಿ ಪಳಸ್ಸಿ ರಾಜನ ಸ್ಮಾರಕ ಹಾಗು ಮ್ಯೂಸಿಯಂ ನೋಡಿದೆವು . ಅಲ್ಲಿಂದ ಸುಲ್ತಾನ್ ಬತ್ತೇರಿಯ  ಕಡೆಗೆ ಪ್ರಯಾಣಿಸಿದೆವು. ರಾತ್ರಿ 8 ಕ್ಕೆ ಅಲ್ಲಿಗೆ ತಲುಪಿದೆವು. ವಯನಾಡು ಡಯೆಟ್ ನಲ್ಲಿ ವಸತಿಯ ವ್ಯವಸ್ಥೆ ಮಾಡಿದೆವು . 31 ರಂದು ಬೆಳಿಗ್ಗೆ ಎಡಕಲ್ಲು ಗುಡ್ಡವನ್ನು ಹತ್ತಿದೆವು. ಅಲ್ಲಿಯ ವಿಚಾರಗಳನ್ನು ಗೈಡ್ ಒಬ್ಬರು ವಿವರವಾಗಿ ತಿಳಿಸಿದರು . ಅಲ್ಲಿಂದ ಮಧ್ಯಾಹ್ನ ಭೋಜನ ಮುಗಿಸಿ ಕಲ್ಪೆಟ್ಟ ದಾರಿಯಾಗಿ ಬಾಣಾಸುರ ಸಾಗರ ಆಣೆಕಟ್ಟು ನೋಡಲು ಹೋದೆವು . ಬಳಿಕ ಪುನಃ ಮಾನಂತವಾಡಿ ದಾರಿಯಾಗಿ ನಮ್ಮ ಊರಿನ ಕಡೆಗೆ ಪ್ರಯಾಣ ಬೆಳೆಸಿ ಜನವರಿ 1 ರಂದು ಮುಂಜಾನೆ 4 ಗಂಟೆಗೆ ಶಾಲೆಗೆ ತಲುಪಿದೆವು .