FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, August 20, 2016

KANNADA BOOKS DISTRIBUTION

 ಕನ್ನಡ ಪುಸ್ತಕಗಳ ವಿತರಣಾ ಸಮಾರಂಭ 

ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಮನವಿಯ  ಮೇರೆಗೆ ಗಡಿನಾಡಿನ ಕನ್ನಡ ಶಾಲೆಗಳ ವಾಚನಾಲಯಕ್ಕೆ ಒದಗಿಸಿದ ಸುಮಾರು 30,000/ ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವು ದಿನಾಂಕ 20.08.2016 ರಂದು ಕುಂಬಳೆಯ ಸಿಟಿ ಕಾಲಿನಲ್ಲಿ ಜರಗಿತು. ಕರ್ನಾಟಕ ಸರಕಾರದ ಸನ್ಮಾನ್ಯ ಜವುಳಿ ಮತ್ತು ಮುಜರಾಯಿ ಇಲಾಖಾ ಸಚಿವರಾದ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರು ಪುಸ್ತಕಗಳನ್ನು ವಿತರಿಸಿದರು .  ನಮ್ಮ ಶಾಲೆಗೂ ಈ ಪುಸ್ತಕಗಳು ಲಭಿಸಿವೆ. ಕನ್ನಡ ಪುಸ್ತಕ ಪ್ರಾಧಿಕಾರ ಹಾಗು ಜಾನಪದ ಪರಿಷತ್ತು ಕೇರಳ ಘಟಕಕ್ಕೆ ನಮ್ಮ  ಶಾಲಾ ಪರವಾಗಿ ಅಭಿನಂದನೆಗಳು .

OLYMPIC QUIZ

ಒಲಿಂಪಿಕ್ಸ್ ರಸಪ್ರಶ್ನೆ 


ಮಂಜೇಶ್ವರ ಉಪಜಿಲ್ಲೆಯ ಸ್ಪೋರ್ಟ್ಸ್ ಕೌನ್ಸಿಲ್ ನೇತೃತ್ವದಲ್ಲಿ ಉಪಜಿಲ್ಲಾ ಮಟ್ಟದ ಒಲಿಂಪಿಕ್ಸ್ ರಸಪ್ರಶ್ನೆ ಕಾರ್ಯಕ್ರಮ ದಿನಾಂಕ 19-08-2016 ನೇ ಶುಕ್ರವಾರ GHSS UPPALA ದಲ್ಲಿ ಜರಗಿತು. ಇದರಲ್ಲಿ ನಮ್ಮ ಶಾಲೆಯ ಯಲ್.ಪಿ. ವಿಭಾಗದ ತಂಡ (ತನುಷ್ ಕುಮಾರ್ ಮತ್ತು ಮನೋಜ್ಞಾ  ಸಿ.ಎಚ್. ) ಪ್ರಥಮ ಸ್ಥಾನವನ್ನು ಗಳಿಸಿತು. ಅವರಿಗೆ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ನಂದಿಕೇಶನ್ ಸರ್ ಟ್ರೋಫಿಗಳನ್ನು ವಿತರಿಸಿ ಅಭಿನಂದಿಸಿದರು .

Wednesday, August 17, 2016

OLYMPIC QUIZ

 ಒಲಿಂಪಿಕ್ ರಸಪ್ರಶ್ನೆ




ರಿಯೋ 2016 ಇದರ ಅಂಗವಾಗಿ ಮಕ್ಕಳಿಗೆ ಒಲಿಂಪಿಕ್ಸ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ಶಾಲಾ ಅಧ್ಯಾಪಕ ಶಂಕರನಾರಾಯಣ ಭಟ್ ಕ್ವಿಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು . ಇದರಲ್ಲಿ ಏಳನೇ ತರಗತಿಯ ಜಿಲ್ಲೆಸ್ಪಿ ರಾಯ್ ಪ್ರಥಮ, ಐದನೇ ತರಗತಿಯ ಜೊವಿನ್ ಡೆಲ್ ರಾಯ್ ದ್ವಿತೀಯ ಹಾಗೂ  ಏಳನೇ ತರಗತಿಯ ಅಹಮದ್ ಸೊಹೈಲ್ ಮೂರನೇ ಸ್ಥಾನವನ್ನು ಪಡೆದರು .

FARMERS DAY CELEBRATION

ಕೃಷಿಕರ ದಿನ- ವಿಚಾರ ಸಂಕಿರಣ 
ಸಿಂಹ ಮಾಸದ ಒಂದನೇ ದಿನವಾದ ಅಗೋಸ್ತು 17 ರಂದು ನಮ್ಮ ಶಾಲೆಯಲ್ಲಿ ಕೃಷಿಕರ ದಿನವಾಗಿ  ಆಚರಿಸಲಾಯಿತು. 
ಇದರ ಭಾಗವಾಗಿ ನಮ್ಮ ಊರಿನ ಸಾಮಾಜಿಕ ಮುಖಂಡ ಹಾಗೂ  ಪ್ರಗತಿಪರ ಕೃಷಿಕ ಶ್ರೀ ಕಕ್ವೆ ಶಂಕರ್ ರಾವ್  ಇವರು ಸಾವಯವ ತರಕಾರಿ ಕೃಷಿಯ ಕುರಿತು ನಮ್ಮ ಶಾಲಾ ಮಕ್ಕಳೊಂದಿಗೆ ವಿಚಾರ ವಿನಿಮಯ ನಡೆಸಿದರು. 
ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಪಿ.ಟಿ.ಎ . ಅಧ್ಯಕ್ಷ ಜಾನ್ ಡಿ ಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. 
ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ನರೇಶ್ ಮಾಸ್ಟರ್ ವಂದಿಸಿದರು. ರಾಮಮೋಹನ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. 
 ಕಾರ್ಯಕ್ರಮದ ಬಳಿಕ ಅವರು ಶಾಲಾ ತರಕಾರಿ ತೋಟಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದರು. 

 

BIRTHDAY

 ನಮ್ಮ ಶಾಲೆಯ ಆರನೇ ತರಗತಿಯ ರಮೀಜಾ ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಕಥೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಹಾರ್ದಿಕ  ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ  ಅಭಿನಂದನೆಗಳು . 
ನಮ್ಮ ಶಾಲೆಯ ಆರನೇ ತರಗತಿಯ ನಫೀಸತ್ ಮಿಸಿರಿಯ ತನ್ನ ಹುಟ್ಟು ಹಬ್ಬವನ್ನು ಆಚರಿಸಿದಳು. ಅದರ ಸವಿ ನೆನಪಿಗಾಗಿ ಶಾಲಾ ಗ್ರಂಥಾಲಯಕ್ಕೆ ಒಂದು ಕಥೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದಳು . ಅವಳಿಗೆ ಹುಟ್ಟುಹಬ್ಬದ ಹಾರ್ದಿಕ  ಶುಭಾಶಯಗಳು. ಪುಸ್ತಕವನ್ನು ಒದಗಿಸಿದ ಅವಳ ಹೆತ್ತವರಿಗೆ  ಅಭಿನಂದನೆಗಳು .

Monday, August 15, 2016

INDEPENDANCE DAY CELEBRATION

70ನೇ ಸ್ವಾತಂತ್ರ್ಯೋತ್ಸವ 
ನಮ್ಮ ಶಾಲೆಯಲ್ಲಿ ಭಾರತದ ೭೦ ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ತುಂತುರು ಮಳೆಯ ನಡುವೆ ಮಕ್ಕಳು , ಅಧ್ಯಾಪಕರು  ಹಾಗೂ  ರಕ್ಷಕರಿಂದ ಪ್ರಭಾತ ಫೇರಿ  ನಡೆಯಿತು. ಅನಂತರ   ಶಾಲಾ ಮುಖ್ಯೋಪಾಧ್ಯಾಯರು ಧ್ವಜಾರೋಹಣ ಗೈದರು. ಮಕ್ಕಳು ಝ೦ಡಾ ಉಂಛಾ ರಹೇ ಹಮಾರಾ ಧ್ವಜ ಗೀತೆ ಹಾಡಿದರು. ಬಳಿಕ ಸ್ವಾತಂತ್ರ್ಯೋತ್ಸವದ ಸಭಾ ಕಾರ್ಯಕ್ರಮವನ್ನು ಪುತ್ತಿಗೆ ಪಂಚಾಯತ್  ಸದಸ್ಯ ಚನಿಯ ಪಾಡಿ ಅವರು ಉದ್ಘಾಟಿಸಿದರು. ಶಾಲಾ ಪಿ. ಟಿ.ಎ. ಅಧ್ಯಕ್ಷ  ಜೋನ್ ಡಿ.ಸೋಜ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಾಲಾ ಮೆನೇಜರ್ ಶುಭಹಾರೈಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಬಹುಮಾನ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ರೇವತಿ ಟೀಚರ್ ವಂದನಾರ್ಪಣೆ ಗೈದರು. ಶ್ರೀನಿವಾಸ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ದೇಶಭಕ್ತಿ ಗೀತೆ , ಭಾಷಣ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಮೊಗೇರ ಸಂಘ ಕಕ್ವೆ ಘಟಕದವರು  ಮಕ್ಕಳಿಗೆ ಮಿಠಾಯಿ ವಿತರಿಸಿದರು. ಧರ್ಮತ್ತಡ್ಕ ಹೈಸ್ಕೂಲಿನ ರಕ್ಷಕರಾದ ಕೊರಗಪ್ಪ ಮೂಲ್ಯ ಕುಬಣೂರ್  ಅವರು ಮಕ್ಕಳಿಗೆ ಲಡ್ಡು ವಿತರಿಸಿದರು. ಎಲ್ಲ ಮಕ್ಕಳಿಗೂ ಪಾಯಸವನ್ನು ಉಣಬಡಿಸಲಾಯಿತು.
                                     ಪ್ರಭಾತ ಪೇರಿ 

 ವಾರ್ಡ್ ಸದಸ್ಯ ಚನಿಯ ಪಾಡಿ ಅವರಿಂದ ಉದ್ಘಾಟನಾ ಭಾಷಣ 
                 5 A ತರಗತಿ ಮಕ್ಕಳಿಂದ ದೇಶಭಕ್ತಿ ಗೀತೆ
                      ಮೂರನೇ ತರಗತಿಯ ತನುಷ್ ಕುಮಾರ್ - ದೇಶಭಕ್ತಿ ಗೀತೆ 
                   ಒಂದನೇ ತರಗತಿ ಪುಟಾಣಿಗಳಿಂದ ದೇಶ ಭಕ್ತಿ ಗೀತೆ 
                 5 A ತರಗತಿಯ ಮಹೇಶ್ ಕುಮಾರ್ - ಭಾಷಣ
              ಎರಡನೇ ತರಗತಿ ಮಕ್ಕಳಿಂದ ದೇಶ ಭಕ್ತಿ ಗೀತೆ 
               ಮೂರನೇ ತರಗತಿಯ ಲಿಖಿತ್ ಕೃಷ್ಣ - ದೇಶ ಭಕ್ತಿ ಗೀತೆ 
                   ಆರು ಎ ತರಗತಿ ಮಕ್ಕಳಿಂದ ದೇಶಭಕ್ತಿ ಗೀತೆ 
                 ಮೂರನೇ ತರಗತಿ ಮಕ್ಕಳಿಂದ ದೇಶ ಭಕ್ತಿ ಗೀತೆ 
               ಆರು ಬಿ ತರಗತಿ ಮಕ್ಕಳಿಂದ ದೇಶ ಭಕ್ತಿ ಗೀತೆ 
                      7 A  ಮಕ್ಕಳಿಂದ ದೇಶ ಭಕ್ತಿ ಗೀತೆ 
                           7 C  ಮಕ್ಕಳಿಂದ ದೇಶ ಭಕ್ತಿ ಗೀತೆ
               ಪಾಯಸವನ್ನು ಸವಿಯುತ್ತಿರುವುದು 
                      ಧ್ವಜಾರೋಹಣ - ಶಾಲಾ ಮುಖ್ಯೋಪಾಧ್ಯಾಯರು 
                                      ಸ್ವಾಗತ ಭಾಷಣ 

               ವಾರ್ಡ್ ಸದಸ್ಯ ಚನಿಯ ಪಾಡಿ ಇವರಿಂದ ಉದ್ಘಾಟನೆ 
                           ಶಾಲಾ ಮೆನೇಜರ್ - ಶುಭಾಶಂಸನೆ 
             ಉಪಜಿಲ್ಲಾ ಸ್ವಾತಂತ್ರ್ಯ ಕ್ವಿಜ್ ವಿಜೇತರಿಗೆ ಬಹುಮಾನ ವಿತರಣೆ
                               ಅಧ್ಯಕ್ಷರ ಭಾಷಣ - ಜಾನ್ ಡಿ  ಸೋಜ PTA President

Thursday, August 4, 2016

FIRST TERM EVALUATION

ಓಣಂ ಪರೀಕ್ಷೆ 
ಈ ವರ್ಷದ ಕಾಲು ವಾರ್ಷಿಕ ಪರೀಕ್ಷೆಯು ಅಗೋಸ್ತು ತಿಂಗಳಿನ 29 ರಂದು ಪ್ರಾರಂಭವಾಗಿ  ಸೆಪ್ಟೆಂಬರ್ 7 ಕ್ಕೆ ಕೊನೆಗೊಳ್ಳಲಿದೆ. ಎಲ್. ಪಿ. ಹಾಗು ಯು.ಪಿ. ತರಗತಿಗಳಿಗೆ ಅಗೋಸ್ತು 30 ರಿಂದ ಪ್ರಾರಂಭವಾಗಲಿದೆ . ಕಲೆ , ಕ್ರೀಡೆ  ಹಾಗು ವ್ರತ್ತಿಪರಿಚಯ ಪರೀಕ್ಷೆಗಳು ಅರ್ಧವಾರ್ಷಿಕ ಪರೀಕ್ಷೆಯೊಂದಿಗೆ ನಡೆಯಲಿದೆ. ಅಧ್ಯಾಪಕ ದಿನವಾದ ಸೆಪ್ಟೆಂಬರ್ 5 ರಂದು ಪರೀಕ್ಷೆ ಇರುವುದಿಲ್ಲ . ಅಗೋಸ್ತು 20 ರಂದು ಅಧ್ಯಾಪಕರ ಕ್ಲಸ್ಟರ್ ತರಬೇತಿ ಇರುತ್ತದೆ .

PATROL LEADERS TRAINING

 ಪೆಟ್ರೊಲ್ ಲೀಡರ್ ಶಿಬಿರದಲ್ಲಿ  ಭಾಗವಹಿಸಿದ ಗೈಡ್ ಗಳು ಗೈಡ್ ಟೀಚರೊಂದಿಗೆ 
ಕೇರಳ ಭಾರತ್ ಸ್ಕೌಟ್ ಮತ್ತು ಗೈಡ್ - ಮಂಜೇಶ್ವರ ಲೋಕಲ್ ಅಸೋಸಿಯೇಶನ್ ನೇತೃತ್ವದಲ್ಲಿ ಜಿ.ಬಿ.ಎಲ್.ಪಿ. ಶಾಲೆ ಮಂಗಲ್ಪಾಡಿ ಇಲ್ಲಿ ಪೆಟ್ರೊಲ್ ಲೀಡರ್  ಗಳ  ತರಬೇತಿ ಶಿಬಿರ ಜರಗಿತು. ಇದರಲ್ಲಿ ನಮ್ಮ ಶಾಲೆಯ ಗೈಡ್ ಗಳು ಭಾಗವಹಿಸಿದರು 

AYYANGALI SCHOLARSHIP WINNER

ನಮ್ಮ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿರುವ  ಸ್ವಾತಿ ಸಿ. ಎಚ್. ಕಳೆದ ವರ್ಷ ಜರಗಿದ ಅಯ್ಯಂಗಾಳಿ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಸ್ಕಾಲರ್ಶಿಪ್ ಗೆ ಅರ್ಹತೆ ಗಳಿಸಿದ್ದಾಳೆ . ಅವಳಿಗೆ ಶಾಲಾ ಪರವಾಗಿ ಅಭಿನಂದನೆಗಳು. ಈಕೆ ಶ್ರೀ ಪಂಚಲಿಂಗೇಶ್ವರ  ಎಲ್ ಪಿ ಶಾಲೆ ಬಾಯಾರು ಇಲ್ಲಿನ ಹಳೆ ವಿದ್ಯಾರ್ಥಿನಿಯಾಗಿದ್ದಾಳೆ . 

FELICITATION FOR SSLC A+ WINNERS IN KANNADA MEDIUM


FREEDOM QUIZ 2016

Manjeshwara Sub district Social Science Club has decided to conduct FREEDOM QUIZ-2016 COMPETITION on 10th August 2016 (Wednesday) at GHSS Shiriya at sharp 10 AM.

 1. Registration: 9:30 AM Sharp

 2.Each school may be sent a team consist of two students from representing LP,UP. HS and HSS section. (not medium wise)

 3.The competition of each section will start simultaneously in separate halls, so that you are requested to reach the venue with your participants at 9:30 itself

4. Delay of registration may cause the disqualified from the competition
.
                                                          For further details contact,

                                  Sanjeeva. M.  GHSS Paivalike    9497600377
                                  Santhosh kumar GHSS Shiriya   9497232153.
                                  Praveen kumar GHSS Paivalike Nagar  9447490651