FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, June 21, 2018

INTERNATIONAL YOGA DAY

ಅಂತಾರಾಷ್ಟ್ರೀಯ ಯೋಗ ದಿನಾಚರಣೆ 
ನಮ್ಮ ಶಾಲೆಯಲ್ಲಿ ಜೂನ್ ೨೧ ರಂದು ವಿಶ್ವ ಯೋಗ ದಿನವನ್ನು ಆಚರಿಸಲಾಯಿತು . ಎಲ್ಲ ತರಗತಿಗಳಲ್ಲಿ ಯೋಗದ ಪ್ರಾಧಾನ್ಯತೆಯ ಕುರಿತು ಅಧ್ಯಾಪಕರು ಮಾಹಿತಿ ನೀಡಿದರು . ಬಳಿಕ ಆಯಾ ತರಗತಿ ಅಧ್ಯಾಪಕರು ಮಕ್ಕಳಿಗೆ ಕೆಲವು ಶಾರೀರಿಕ ವ್ಯಾಯಾಮಗಳನ್ನು ಹೇಳಿಕೊಟ್ಟರು . 


Tuesday, June 5, 2018

WORLD ENVIRONMENT DAY


ವಿಶ್ವ ಪರಿಸರ ದಿನಾಚರಣೆ 
     ಜೂನ್ 5 ರಂದು  ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲಾ ಅಸೆಮ್ಬಲಿಯಲ್ಲಿ ಮುಖ್ಯೋಪಾಧ್ಯಾಯರು ವಿಶ್ವ ಪರಿಸರ ದಿನದ  ಮಹತ್ವ,  ಈ ವರ್ಷ ವಿಶ್ವ ಪರಿಸರ ದಿನದ ಧ್ಯೇಯ ದ  ಬಗ್ಗೆ ಮಕ್ಕಳಿಗೆ ತಿಳಿಸಿದರು . ಮುಖ್ಯೋಪಾಧ್ಯಾಯರು ಒಂದು ಪರಿಸರ ಗೀತೆಯನ್ನು ಎಲ್ಲ ಮಕ್ಕಳಿಂದಲೂ  ಹಾಡಿಸಿದರು.  ಬಳಿಕ ಅರಣ್ಯ ಇಲಾಖೆಯವರು ಒದಗಿಸಿದ ಗಿಡಗಳನ್ನು ಮಕ್ಕಳಿಗೆ ವಿತರಿಸಿದರು . ಶಾಲಾ ಪರಿಸರದಲ್ಲಿ ಗಿಡ ನೆಡಲಾಯಿತು. ಅದಕ್ಕೆ ರಕ್ಷಣಾ ಬೇಲಿಯನ್ನು ಹಾಕಲಾಯಿತು . 






Sunday, June 3, 2018

LCD PROJECTOR and CEILING FAN Donation
 ನಮ್ಮ ಶಾಲೆಯ ಹಳೆ ವಿದ್ಯಾರ್ಥಿನಿಯೂ ನಮ್ಮ ಶಾಲಾ ಅಧ್ಯಾಪಕಿಯೂ ಆಗಿರುವ ಶ್ರೀಮತಿ ರೇವತಿ ಟೀಚರ್ ಅವರು ಸುಮಾರು ರೂ. 35000/ ಬೆಲೆಯ ಒಂದು ಎಲ್ ಸಿ ಡಿ ಪ್ರಾಜೆಕ್ಟರ್ ನ್ನು ಶಾಲಾ ಪ್ರವೇಶೋತ್ಸವದ ಸಂದರ್ಭದಲ್ಲಿ ಶಾಲೆಗೇ ಕೊಡುಗೆಯಾಗಿ ನೀಡಿದರು . ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು . ಅವರು ಕಳೆದ ವರ್ಷ ನಮ್ಮ ಶಾಲೆಗೆ ನಾಲ್ಕು ಫ್ಯಾನ್  ಗಳನ್ನೂ ಕೊಡುಗೆಯಾಗಿ ನೀಡಿದ್ದರು. 
 ನಮ್ಮ ಶಾಲೆಯ ಹಳೆ ವಿದ್ಯಾರ್ಥಿನಿಯೂ ನಮ್ಮ ಶಾಲಾ ಅಧ್ಯಾಪಕಿಯೂ ಆಗಿರುವ ಶ್ರೀಮತಿಪರಮೇಶ್ವರಿ ಟೀಚರ್ ಅವರು ಶಾಲಾ ಪ್ರವೇಶೋತ್ಸವದ ಸಂದರ್ಭದಲ್ಲಿ ಶಾಲೆಗೆ  ನಾಲ್ಕು ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಿದರು . ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು
 

SCHOOL PRAVESHOTSAVA 2018 19

ಶಾಲಾ ಪ್ರವೇಶೋತ್ಸವ 2018-19














2018-19ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವನ್ನು ಬಹಳ ಸಂಭಮದಿಂದ ಆಚರಿಸಲಾಯಿತು. ಶಾಲೆಯನ್ನು ಮಾವಿನ ಎಲೆ ಬಾಳೆಗಿಡ ತೆಂಗಿನ ಗರಿ ಹಾಗೂ ಬೆಲೂನುಗಳನ್ನು ಉಪಯೋಗಿಸಿ ಆಕರ್ಷಕವಾಗಿ ಅಲಂಕರಿಸಲಾಯಿತು . ಜೂನ್ ೧ ರಂದು ಬೆಳಿಗ್ಗೆ ವಿಶೇಷ ಅಸೆಮ್ಬಲಿ ನಡೆಸಿ ಎಲ್ಲಾ ಮಕ್ಕಳಿಗೆ ಹೊಸ ಶೈಕ್ಷಣಿಕ ವರ್ಷದ ಶುಭಾಶಯ ಕೋರಲಾಯಿತು . ಬಳಿಕ ಹೊಸತಾಗಿ ಶಾಲೆಗೇ ಸೇರಿದ ಮಕ್ಕಳಿಗೆ ಹಲಸಿನ ಎಲೆಯ ತುರಾಯಿ ತೊಡಿಸಿ ಪುಗ್ಗೆ ನೀಡಿ ರಕ್ಷಕರು ಅಧ್ಯಾಪಕರು ಹಾಗು ಮಕ್ಕಳು ಸೇರಿ ಮೆರವಣಿಗೆಯಲ್ಲಿ ಶಾಲಾ ಸಭಾಂಗಣಕ್ಕೆ ಕರೆತಂದೆವು . ಶಾಲಾ ವ್ಯವಸ್ಥಾಪಕಿ ಶ್ರೀಮತಿ ಶಾರದಾ ಅಮ್ಮ ಅವರು ದೀಪ ಬೆಳಗಿಸಿ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದರು . ಶಾಲಾ ಪಿ. ಟಿ  ಎ  ಅಧ್ಯಕ್ಷ ಶ್ರೀ ಜೋನ್  ಡಿ ಸೋಜ ಅವರು ಸಮಾರಂಭದ  ಅಧ್ಯಕ್ಷತೆ ವಹಿಸಿದರು . ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು . ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ ಅವರು ಹೊಸತಾಗಿ ದಾಖಲುಗೊಂಡ ಪ್ರಿ ಪ್ರೈಮರಿ ಮತ್ತು ಒಂದನೇ  ತರಗತಿಯ ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಿ ಶುಭವನ್ನು ಕೋರಿದರು . ಶಾಲಾ ಮಾತ್ರ ಮಂಡಳಿ ಅಧ್ಯಕ್ಷೆ ಶ್ರೀಮತಿ ಭಾರತಿ ಕೆ ಅವರು ಶುಭಕೋರಿದರು  ಕಾರ್ಯಕ್ರಮದ ಕೊನೆಯಲ್ಲಿ ಗಾಯತ್ರಿ ಟೀಚರ್ ಧನ್ಯವಾದ ವಿತ್ತರು ಕಾಸರಗೋಡು ಮಿಲ್ಮಾ ಕಂಪೆನಿಯವರು ಒದಗಿಸಿದ ಮಿಲ್ಕ್ ಪೇಡ ವನ್ನು ಎಲ್ಲರಿಗೂ  ವಿತರಿಸಲಾಯಿತು . ಮಧ್ಯಾಹ್ನ ಎಲ್ಲ ಮಕ್ಕಳಿಗೂ ಬಿಸಿಯೂಟ ನೀಡಲಾಯಿತು
ಎಲ್ ಎಸ್ ಎಸ್  ವಿಜೇತರಿಗೆ ಅಭಿನಂದನೆಗಳು 

೧. ಲಿಖಿತ್ ಕೃಷ್ಣ ಯನ್. s /o  ಅಶೋಕ  ಯನ್ ಬಾಯಾಡಿ ನೀರ್ ಪಂತಿ 
೨. ಮನೋಜ್ಞ ಸಿ ಯಚ್  D/O ರಾಮಮೋಹನ್ ಸಿ ಯಚ್  ಮೆಪೊಡಡ್ಕ 






೩. ತನುಶ್ ಕುಮಾರ್ ಯನ್  S/O ಮಹಾಲಿಂಗ ಭಟ್ ಯನ್  ನೇರೋಳು










2017 - 18 ನೇ ಶೈಕ್ಷಣಿಕ ವರ್ಷ ನಾಲ್ಕನೇ ತರಗತಿ ಮಕ್ಕಳಿಗಾಗಿ ಕೇರಳ ಸರಕಾರ ನಡೆಸಿದ ಎಲ್ ಎಸ್ ಎಸ್  ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ನಮ್ಮ ಶಾಲೆಯ  ಮೂರು  ಮಕ್ಕಳು ತೇರ್ಗಡೆಹೊಂದಿರುತ್ತಾರೆ . ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು