FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Tuesday, March 21, 2017

SEND OFF

ವಿದಾಯ ಕೂಟ 
                                  ಜೆಲ್ಲೆಸ್ಪಿ ರಾಯ್ ಇವನಿಂದ ಅನಿಸಿಕೆ
                                    ಮುಖ್ಯೋಪಾಧ್ಯಾಯರಿಂದ ಶುಭ ಹಾರೈಕೆ
                                    ಶಾರದಾ ಸುರಭಿಯಿಂದ ನಿರೂಪಣೆ  ಹಾಗೂ  ಅನಿಸಿಕೆಗಳು
                                 ರಾಮ ಮೋಹನ್ ಸಿ. ಯಚ್. ಶುಭ ಹಾರೈಕೆ


                          ವಿಜಯಶ್ರೀ ಬಿ .ಶಾಲಾ ಮೆನೇಜರ್ ಶುಭ ಹಾರೈಕೆ
                              ಶಾಲಾ ನಾಯಕಿ ಪಾತಿಮಾತ್ ಜಸೀರಾ ಅನಿಸಿಕೆಗಳು
                   ಶಾಲಾ ವ್ಯವಸ್ಥಾಪಕಿ ಶಾರದಾ ಅಮ್ಮ-  ಶುಭ ಹಾರೈಕೆಗಳು
                                   ಸಿಂಜಿತಾ ಕೆ  ಇವಳಿಂದ ಅನಿಸಿಕೆಗಳು  ಹಾಗು ಸ್ವಾಗತ
                                    ಶ್ರೀನಿವಾಸ ಕೆ.ಯಚ್. - ಶುಭ  ಹಾರೈಕೆಗಳು
                                ಶಂಕರನಾರಾಯಣ ಭಟ್ ಯನ್ - ಶುಭ ಹಾರೈಕೆಗಳು


                               ಮಧುರಾ ಪಿ. - ಅನಿಸಿಕೆಗಳು ಹಾಗು ಧನ್ಯವಾದ ಸಮರ್ಪಣೆ


PRATHIBHA PURASKAR AND BALOTHSAVA



PEC LEVEL MIGAVU


ಪಂಚಾಯತು ಮಟ್ಟದ ಹಿರಿಮೆ ಉತ್ಸವ 
ಪುತ್ತಿಗೆ ಪಂಚಾಯತು ಮಟ್ಟದ ಹಿರಿಮೆ ಉತ್ಸವವು  ಸರಕಾರೀ ಹೈಸ್ಕೂಲ್ ಸೂರಂಬೈಲಿನಲ್ಲಿ 18.03.2017 ನೇ ಶನಿವಾರ ನಡೆಯಿತು. ಅದರಲ್ಲಿ ನಮ್ಮ ಶಾಲೆಯ ಹಿರಿಮೆಯು ದ್ವಿತೀಯ ಬಹುಮಾನವನ್ನು ಪಡೆಯಿತು . 

Thursday, March 9, 2017

UNIFORM DISTRIBUTION

ಶಾಲಾ ಸಮವಸ್ತ್ರ ವಿತರಣೆ 
ಸರಕಾರದಿಂದ ಉಚಿತವಾಗಿ ಒದಗಿಸಿದ ಶಾಲಾ ಸಮವಸ್ತ್ರವನ್ನು ವಿತರಿಸುವ ಕಾರ್ಯಕ್ರಮ ನಡೆಸಲಾಯಿತು. ಶಾಲಾ ಮೆನೇಜರ್, ಪಿ.ಟಿ. ಎ  ಅಧ್ಯಕ್ಷರು ಹಾಗೂ ಮಾತೃ ಮಂಡಳಿ ಅಧ್ಯಕ್ಷೆ ಮಕ್ಕಳಿಗೆ ಸಮವಸ್ತ್ರವನ್ನು ನೀಡಿ ಸಮವಸ್ತ್ರ ಧರಿಸುವ ಔಚಿತ್ಯದ ಬಗ್ಗೆ ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು .

GANITHOTHSAVA & SHASTROTHSAVA

ಗಣಿತೋತ್ಸವ ಮತ್ತು ವಿಜ್ಞಾನೋತ್ಸವ :






ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ್ ನ ಕಾರ್ಯಕ್ರಮ ಗಣಿತೋತ್ಸವ ಹಾಗೂ  ವಿಜ್ಞಾನೋತ್ಸವವನ್ನು ನಮ್ಮ ಶಾಲೆಯಲ್ಲಿ ಮಾರ್ಚ್ 2 ಮತ್ತು 3 ರಂದು ನಡೆಸಲಾಯಿತು. ಇದಕ್ಕಾಗಿ ವಿಶೇಷ ತರಬೇತಿ ಪಡೆದ ನಮ್ಮ ಶಾಲೆಯ ಗಣಿತ ಅಧ್ಯಾಪಿಕೆ ಶ್ರೀಮತಿ ಪ್ರೇಮಲತಾ ಟೀಚರ್ ಹಾಗು ವಿಜ್ಞಾನ ಅಧ್ಯಾಪಿಕೆ ಶ್ರೀಮತಿ ಕಮಲಾಕ್ಷಿ ಟೀಚರ್ ನೇತೃತ್ವ ನೀಡಿದರು. ಅಲ್ಲದೆ ಉಳಿದ ಎಲ್ಲಾ ಅಧ್ಯಾಪಕರ ಸಹಕಾರದೊಂದಿಗೆ ಈ ಕಾರ್ಯಕ್ರಮಗಳನ್ನು ಬಹಳ ಯಶಸ್ವಿಯಾಗಿ ನಡೆಸಲಾಯಿತು. ಮಕ್ಕಳನ್ನು ಐದು ಗುಂಪುಗಳಾಗಿ ಮಾಡಲಾಯಿತು . ತ್ರಿಕೋನ, ಚೌಕ , ಆಯತ , ಪಂಚಭುಜ, ವೃತ್ತ ಎಂಬ ಐದು ಗುಂಪುಗಳಿಗೆ ಗಣಿತ ಪಝಲ್ , ಒರಿಗಾಮಿ, ಮೆಟ್ರಿಕ್ ಮೇಳ, ರಸಪ್ರಶ್ನೆ ಹಾಗೂ ವಿಜ್ಞಾನ ಪ್ರಯೋಗ ಎಂಬೀ ವಿಷಯಗಳಲ್ಲಿ ಸರದಿ ಪ್ರಕಾರ ಚಟುವಟಿಕೆಗಳನ್ನು ನೀಡಲಾಯಿತು. ಕೊನೆಗೆ ಮಕ್ಕಳ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಶಾಲಾ  ಮೆನೇಜರ್ , ಪಿ.ಟಿ. ಎ . ಹಾಗು ಮಾತೃ ಮಂಡಳಿಯ ಅಧ್ಯಕ್ಷರು ಭಾಗವಹಿಸಿ ಮಕ್ಕಳ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಸಪ್ರಶ್ನೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು. ಮಕ್ಕಳಿಗೆ ಪಾಯಸದ ಊಟವನ್ನು ವಿತರಿಸಲಾಯಿತು.