FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, June 21, 2017

AEO VISIT

Manjeshwar AEO Sri Dinesh Sir, visited our school in connection with International Yoga Day celeberation on June 21 . Conducted  staff meeting and gave valuable suggestions and requested whole hearted co operation for the smooth conducting of academic activities.

INTERNATIONAL YOGA DAY CELEBRATION

ವಿಶ್ವ ಯೋಗ ದಿನಾಚರಣೆ 
ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಂದು ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮವು  ಧರ್ಮತ್ತಡ್ಕ  ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯಲ್ಲಿ ಜರಗಿತು. 
ಕಾಸರಗೋಡು ಜಿಲ್ಲಾ ಶಿಕ್ಷಣ ಸಹಾಯಕ ನಿರ್ದೇಶಕರಾದ ಶ್ರೀ ಈ. ಕೆ. ಸುರೇಶ ಕುಮಾರ್  ವಿಶ್ವ ಯೋಗದಿನವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಶಾಲಾ ಪ್ರಬಂಧಕ ಶ್ರೀ ಯನ್. ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು .
 ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ದಿನೇಶ್ ವಿ , ಧರ್ಮತ್ತಡ್ಕ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್  ಸೀತಾರತ್ನ , ಧರ್ಮತ್ತಡ್ಕ ಯು.ಪಿ.ಶಾಲಾ ಪಿ.ಟಿ. ಎ  ಅಧ್ಯಕ್ಷ ಶ್ರೀ ಜೋನ್ ಡಿ ಸೋಜ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.
ಮೊಗ್ರಾಲ್ ಪುತ್ತೂರು ಸರಕಾರೀ ಹೈಯರ್ ಸೆಕೆಂಡರಿ ಶಾಲೆಯ ಕ್ರೀಡಾ ಅಧ್ಯಾಪಕ ಹಾಗು ಯೋಗಾಚಾರ್ಯ ಶ್ರೀ ಗೋಪಾಲಕೃಷ್ಣ ಭಟ್ ಅವರು ಯೋಗದ ಮಹತ್ವದ ಬಗ್ಗೆ ತಿಳಿಸಿ ಯೋಗ ಪ್ರದರ್ಶನ ಹಾಗು ಮಕ್ಕಳಿಂದ ಯೋಗಾಭ್ಯಾಸವನ್ನು ಮಾಡಿಸಿದರು. SDPHSS DHARMATTADKA ದ  ಪ್ರಾಂಶುಪಾಲ  ಶ್ರೀ ಯನ್  ರಾಮಚಂದ್ರ ಭಟ್  ಸ್ವಾಗತಿಸಿದರು. ಯು.ಪಿ.ಶಾಲಾ ಮುಖ್ಯೋಪಾಧ್ಯಾಯ  ಶ್ರೀ ಯನ್ ಮಹಾಲಿಂಗ ಭಟ್ ವಂದಿಸಿದರು . ಧರ್ಮತ್ತಡ್ಕ ಹೈಸ್ಕೂಲಿನ ಸಹಾಯಕ ಅಧ್ಯಾಪಕ ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು . 


ಧರ್ಮತ್ತಡ್ಕ ಯು.ಪಿ.ಶಾಲೆಯ 75 ಮಕ್ಕಳು ಹೈಸ್ಕೂಲಿನ 50 ಮಕ್ಕಳು ಹಾಗು ಹೈಯರ್ ಸೆಕೆಂಡರಿಯ 30  ಮಕ್ಕಳು ಯೋಗಾಭ್ಯಾಸದಲ್ಲಿ ಭಾಗವಹಿಸಿದರು.

MEDICAL CHECKUP

ಆರೋಗ್ಯ ತಪಾಸಣೆ 
ನಮ್ಮ ಶಾಲೆಗೆ ಈ ವರ್ಷ ದಾಖಲಾದ ಮಕ್ಕಳ ಆರೋಗ್ಯ ತಪಾಸಣೆಯನ್ನು ಶಾಲೆಯ ಹೆಲ್ತ್ ಚಾರ್ಜ್ ಇರುವ ಸಿಸ್ಟರ್ ರಂಜನಿ ಮತ್ತು ಸಿಸ್ಟರ್ ರೇಖಾ ಇವರು ನಡೆಸಿಕೊಟ್ಟರು.

Wednesday, June 7, 2017

OSS VISIT

ಮಂಜೇಶ್ವರ ಬಿ. ಆರ್ .ಸಿ. ಯಿಂದ OSS ತಂಡವು ಇಂದು ನಮ್ಮ ಶಾಲೆಗೆ ಭೇಟಿ ನೀಡಿದರು. ಬಿ. ಆರ್ .ಸಿ. ತರಬೇತುದಾರರಾದ ಗುರುಪ್ರಸಾದ ರೈ , ಇಸ್ಮಾಯಿಲ್ , ಸಂಜು ಮತ್ತು  ಸಜಿತ ಇವರನ್ನೊಳಗೊಂಡ ತಂಡವು ಎಲ್ಲಾ ತರಗತಿಗಳಿಗೂ  ಸಂದರ್ಶಿಸಿ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ವೀಕ್ಷಿಸಿದರು. ಅನಂತರ ವಿಶೇಷ SRG ಸಭೆ ಕರೆದು ಶಾಲೆಯ ಹಿರಿಮೆ ಹಾಗು ಉತ್ತಮ ಪಡಿಸಬೇಕಾದ ವಲಯಗಳ ಬಗ್ಗೆ ಸೂಕ್ತ ಸಲಹೆಗಳನ್ನಿತ್ತರು

Tuesday, June 6, 2017

ENVIRONMENT DAY 2017-18

ಪರಿಸರ ದಿನಾಚರಣೆ 
ಜೂನ್ ೫ ನೇ ತಾರೀಕಿನಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲಾ ಅಸೇಂಬ್ಳಿಯಲ್ಲಿ ಪರಿಸರ ದಿನದ ಮಹತ್ವವನ್ನು ತಿಳಿಸಲಾಯಿತು. ಪರಿಸರ ಸಂರಕ್ಷಣೆಯ ಕುರಿತು ಪ್ರತಿಜ್ಞೆ ಕೈಗೊಳ್ಳಲಾಯಿತು. ಬಳಿಕ ಶಾಲೆಯ ಪರಿಸರದಲ್ಲಿ ಒಂದು ಜೈವ ಉದ್ಯಾನವನ್ನು ನಿರ್ಮಿಸಿ ಜೈವ ಬೇಲಿಯನ್ನು ಹಾಕಲಾಯಿತು. ಆಸಕ್ತ ಮಕ್ಕಳಿಗೆ  ಗಿಡಗಳನ್ನು ತರಿಸಿ ವಿತರಿಸಲಾಯಿತು. ಪುತ್ತಿಗೆ ಕೃಷಿ ಭವನದಿಂದ ಒದಗಿಸಿದ ಗೇರು ಗಿಡವನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು.

Sunday, June 4, 2017

SCHOOL PRAVESHANOTHSAVA 2017-18

ಶಾಲಾ ಪ್ರವೇಶೋತ್ಸವ 






           2017-18 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಜೂನ್ ಒಂದರಂದು ಬಹಳ ಸಂಭ್ರಮದಿಂದ ಜರಗಿತು. ನವಾಗತ ಮಕ್ಕಳನ್ನು ಶಾಲೆಯ ಹಿರಿಯ ಮಕ್ಕಳು, ರಕ್ಷಕರು ಹಾಗು ಅಧ್ಯಾಪಕರು ಸೇರಿ ಮೆರವಣಿಗೆಯಲ್ಲಿ  ಶಾಲೆಗೆ  ಸ್ವಾಗತಿಸಲಾಯಿತು . ಶಾಲಾ ಸಭಾಂಗಣದಲ್ಲಿ ಜರಗಿದ ಪ್ರವೇಶೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಪುತ್ತಿಗೆ ಪಂಚಾಯತು ಸ್ಥಾಯಿ ಸಮಿತಿ ಚೇಯರ್ ಮೆನ್ ಶ್ರೀ ಚನಿಯ ಪಾಡಿ ನೆರವೇರಿಸಿದರು . ಶಾಲಾ ಪಿ.ಟಿ. ಎ  ಅಧ್ಯಕ್ಷ ಜಾನ್ ಡಿ ಸೋಜ ಸಮಾರಂಭದ ಅಧ್ಯಕ್ಷತೆ ವಹಿಸಿದರು . ಶಾಲಾ ವ್ಯವಸ್ಥಾಪಕಿ ಶಾರದಾ ಅಮ್ಮ ನವಾಗತ ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಿ ಮಕ್ಕಳಿಗೆ ಶುಭಕೋರಿದರು. ಶಾಲಾ ಮೆನೇಜರ್ ವಿಜಯಶ್ರೀ ಬಿ. ಮಾತ್ರ ಮಂಡಳಿ ಅಧ್ಯಕ್ಷೆ ಭಾರತಿ ಕೊಯಂಗಾನ ಶುಭಕೋರಿದರು. ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ಹಿರಿಯ ಅಧ್ಯಾಪಿಕೆ ರೇವತಿ ಟೀಚರ್ ವಂದಿಸಿದರು. ಸಹಾಯಕ ಅಧ್ಯಾಪಕ ರಾಮಮೋಹನ್ ಕಾರ್ಯಕ್ರಮ ನಿರೂಪಿಸಿದರು . ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮಧ್ಯಾಹ್ನದ ತನಕ ಮುಂದುವರಿಯಿತು . ಎಲ್ಲಾ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು .