FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, April 25, 2015

VACATION TRAINING

             ಪ್ರಾಥಮಿಕ ಶಾಲಾ ಅಧ್ಯಾಪಕರ ರಜಾ ಕಾಲದ ತರಬೇತಿ ಶಿಬಿರವು ಮೇ 12 ರಿಂದ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲನೇ ಹಂತವು ಮೇ 12 ರಿಂದ 16 ರ ವರೆಗೂ  ಎರಡನೇ ಹಂತವು ಮೇ 18 ರಿಂದ 22 ರ ವರೆಗೂ ನಡೆಯಲಿದೆ. ಮಂಜೇಶ್ವರ ಉಪಜಿಲ್ಲೆಯಲ್ಲಿ L.P. ಅಧ್ಯಾಪಕರಿಗೆ ಬಿ. ಅರ್.ಸಿ. ಉಪ್ಪಳದಲ್ಲೂ  U.P. ಅಧ್ಯಾಪಕರಿಗೆ ಮತ್ತು L.P Arabic ಅಧ್ಯಾಪಕರಿಗೆ GHUPS Kurchipalla ದಲ್ಲೂ ನಡೆಯಲಿದೆ. ಒಂದನೇ ಹಂತದಲ್ಲಿ Vorkady, Meenja and Manjeshwara ಪಂಚಾಯತಿನ I and III ತರಗತಿಯವರಿಗೆ  ಮತ್ತು Mangalpady, Paivalike and Non PEC ಯ II and IV  ತರಗತಿಯವರಿಗೂ , U.P.ಯಲ್ಲಿ Kannada, Hindi. S.Science and Sanskrit ಅಧ್ಯಾಪಕರಿಗೆ ತರಬೇತಿ ನಡೆಯಲಿದೆ. ಎರಡನೆ ಹಂತದಲ್ಲಿ Vorkady, Meenja and Manjeshwara ಪಂಚಾಯತಿನ II and IV ತರಗತಿಯವರಿಗೆ  ಮತ್ತು Mangalpady, Paivalike and Non PEC ಯ I and III ತರಗತಿಯವರಿಗೂ , U.P.ಯಲ್ಲಿ Maths and B.Science ಅಧ್ಯಾಪಕರಿಗೂ ತರಬೇತಿ ನಡೆಯಲಿದೆ. ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು ಒಂದನೇ ಹಂತದ ತರಬೇತಿ ಶಿಬಿರದಲ್ಲಿ ಭಾಗವಹಿಸಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

OBC Pre matric Benificiry List published

OBC Pre Matric Scholarship for 2014 -15 benificiary list has been published. The amount of scholarship will be credited to school account within May 30.

Monday, April 20, 2015

SSLC Result 2014-15

S D P H S S Dharmathadka ದ ಈ ವರ್ಷದ SSLC Result ಗಾಗಿ ಇಲ್ಲಿ ಕ್ಲಿಕ್ ಮಾಡಿರಿ
School Code: 11051
ಕಾಸರಗೋಡು ಜಿಲ್ಲೆಯ ವಿವಿಧ ಶಾಲೆಗಳ School code ಇಲ್ಲಿದೆ.
SI. NO. SCHOOL NAME SCHOOL CODE
1) B.A.R.H.S.S, Bovikan 11026
2) B.E.M.H.S Kasaragod 11005
3) Chattanchal Higher Secondary School 11053
4) Chemnad Jama-ath H.S.S 11047
5) Dhakeerath English Medium H S S Thalangara 11061
6) G.H.S.S Edneer 11041
7) G.H.S.S Kumbla 11020
8) GHS Kadambar 11067
9) GHS Kodiamme 11070
10) GHS Moodambil 11068
11) GHS Perdala 11069
12) GHS Udyawar 11071
13) GHSS Kolathur 11072
14) GHSS Munnad 11073
15) Govt H.S. Mangalpady 11013
16) Govt H.S.S Shiriya 11014
17) Govt H.S.S Uppala 11015
18) Govt. H.S Bekur 11019
19) Govt. H S S Beturpara 11055
20) GOVT. H S S Kasaragod 11002
21) Govt. H. S. S. Paivalike 11017
22) Govt. H.S Alampady 11022
23) Govt. H.S Heroor Meepry 11052
24) Govt. H.S Paivalike Nagar 11018
25) Govt. H.S. Delampady 11032
26) Govt. H.S.S Chemnad 11046
27) Govt. H.S.S Adhur 11042
28) Govt. H.S.S Adoor 11030
29) Govt. H.S.S Angadimogar 11033
30) Govt. H.S.S Bandadka 11027
31) Govt. H.S.S Belluru 11045
32) Govt. H.S.S Chandragiri 11050
33) Govt. H.S.S Cherkala Central 11024
34) Govt. H.S.S Kundamkuzhy 11054
35) Govt. H.S.S Mogral Puthur 11028
36) Govt. H.S.S Patla 11049
37) Govt. High School, Pandy 11031
38) Govt. Higher Secondary School, Padre 11034
39) Govt. MRHSS for Girls, Udma, Kasaragod 11056
40) Govt. V.H.S.S for Girls Kasaragod 11006
41) Govt. V.H.S.S. Iriyanni 11025
42) Govt. Vocational H.S S.Mogral 11029
43) Govt. Vocational H.S.S Karadka 11044
44) Govt. Vocational H.S.S Mulleria 11043
45) Govt.H.S. Bangara Manjeshwar 11016
46) Govt.Muslim V.H.S.S Kasaragod 11003
47) Govt.V.H.S.S. Kunjathur 11009
48) H.H.S.I.B Swamiji's H.S.S Edneer. P.O., Kasaragod 11040
49) Hydros Jama-Ath H.S.S Kalanad, 11063
50) K.V.S.M. H.S Kurudapadavu 11012
51) Kunjar High School, Kunjar 11064
52) M.S.College H.S. Perdala, Nirchal 11039
53) Malabar Islamic Complex H.S.,Chattanchal 11065
54) MUHIMMATH H S ,MUHIMMATH NAGAR 11066
55) N A Model H S S Naimarmoola 11058
56) N.A. Girls H.S.S,Eruthumkadav 11057
57) Navajivana H.S. Perdala 11038
58) P. Beeran Moideen English Medium H S S Nellikatta 11060
59) S.A.T.H.S Manjeshwar 11007
60) S.N.H.S Perla 11035
61) S.S.H.S.S Kattukukke 11036
62) Shree Durga Parameshwari H.S. Dharmathadka 11051
63) Sirajul Huda EMHS, Manjeshwar 11059
64) Sri Gopala Krishna H.S. Kudlu 11048
65) Sri Sharadamba H.S Sheni 11037
66) Sri Vani Vijaya H.S. Kodalamogaru 11011
67) Sri Vidya Vardhaka H.S, Miyapadavu 11010
68) Sri. Annapurneshwari H.S. Agalpady 11001
69) T.I.H.S.S Naimarmoola 11021

Tuesday, April 14, 2015

ವಿಷು ಕಣಿ
           ಬ್ಲಾಗಿನ ಸಮಸ್ತ ವೀಕ್ಷಕರಿಗೂ ವಿಷುವ ಹಬ್ಬದ ಹಾರ್ದಿಕ ಶುಭಾಶಯಗಳು. ಹಿಂದೂ ಹಬ್ಬಗಳಲ್ಲಿ ಯುಗಾದಿ ಮತ್ತು ವಿಷುವಿಗೆ ವಿಶೇಷ ಪ್ರಾಧಾನ್ಯವಿದೆ. ಇವುಗಳೆರಡೂ ಹೊಸವರ್ಷಾಚರಣೆಯ ಹಬ್ಬಗಳಾಗಿವೆ. ಚೈತ್ರ ಮಾಸದಿಂದ ಫಾಲ್ಗುಣ ಮಾಸದವರೆಗಿನ ಚಾಂದ್ರಮಾನ ವರ್ಷದಲ್ಲಿ ಚೈತ್ರ ಶುದ್ಧ ಪಾಡ್ಯವು ಹೊಸವರ್ಷಾರಂಭ ದಿನ - ಚಾಂದ್ರಮಾನ ಯುಗಾದಿ. ಸೂರ್ಯನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುವ ಸಂಕ್ರಮಣ ದಿನ ವಿಷು ಸಂಕ್ರಮಣ ಅಥವಾ ಸೌರಮಾನ ಯುಗಾದಿ. ಮೇಷ ಸಂಕ್ರಮಣದ ಮರುದಿನ ಹೊಸ ವರ್ಷಾರಂಭ. ಇದು ಸೌರ ಯುಗಾದಿ. ಸೌರ ಯುಗಾದಿಯಾದ ವಿಷು ದಿನವನ್ನು  ಕೇರಳದಾದ್ಯಂತ ಹಬ್ಬವಾಗಿ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸೌರ ಯುಗಾದಿಯನ್ನು ಹೊಸವರ್ಷದ ಆದಿ ದಿನವೆಂದು ಆಚರಿಸಲಾಗುತ್ತದೆ. ದಕ್ಷಿಣ ಕೇರಳದಲ್ಲಿ ವಿಷು ಹಬ್ಬವನ್ನು ಕಣಿ ಕಾಣುವ ಹಬ್ಬವಾಗಿ ಆಚರಿಸುತ್ತಾರೆ . ವಿಷು ಕಣಿ ಕಾಣುವುದು ಎಂದರೆ ಹೊಸ ವರ್ಷದಲ್ಲಿ ನಮಗೆ ಶ್ರೇಯಸ್ಸಾಗಲೆಂದು ದೇವರಲ್ಲಿ ಪ್ರಾರ್ಥಿಸುವುದು ಎಂದಾಗಿದೆ. 
         ಮೇಷ ಮಾಸದ ಮೊದಲ ದಿನವೇ ವಿಷುಕಣಿ . ಇದರ ಮೊದಲಿನ ದಿನ ರಾತ್ರಿ ದೇವರ ಕೋಣೆಯಲ್ಲಿ ಕಣಿ ಕಾಣಲು ಇಡಬೇಕಾದ ವಸ್ತುಗಳನ್ನು ಸಿದ್ಧಗೊಳಿಸುತ್ತಾರೆ. ಕಣಿ ಕಾಣುವ ವಸ್ತುಗಳಾಗಿ ಫಲವಸ್ತುಗಳು. ನವ ಧಾನ್ಯಗಳು, ನೂತನ ವಸ್ತ್ರಗಳು , ಧನ ಕನಕಗಳು ಇತ್ಯಾದಿಗಳನ್ನು ಓರಣಗೊಳಿಸಿಟ್ಟು ಉರುಳಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ , ತೆಂಗಿನ ಕಾಯಿ ಮತ್ತು ಕನ್ನಡಿಯನ್ನಿರಿಸುತ್ತಾರೆ. ಕಣಿ ಕಾಣುವ ದಿನ ಪ್ರಾತಃ ಕಾಲ ಬೇಗನೆ ಎದ್ದು ಸ್ನಾನ ಮಾಡಿ ನೂತನ ವಸ್ತ್ರ ಧರಿಸಿ ಗುರು ಹಿರಿಯರಿಗೆ ವಂದಿಸಿ ಕಣಿ ಕಾಣುವುದಾಗಿದೆ. ಕಣಿ ಕಂಡ  ಬಳಿಕ ಕನ್ನಡಿಯಲ್ಲಿ ಮುಖ ನೋಡಬೇಕು. ಕನ್ನಡಿಯಲ್ಲಿ ಮುಖ ನೋಡುವುದರಿಂದ ಆಯುಷ್ಯವು ಹೆಚ್ಚುತ್ತದೆ. ಸಂಪತ್ತು ಉಂಟಾಗುತ್ತದೆ. ಪಾಪವನ್ನು ಹೋಗಲಾಡಿಸುತ್ತದೆ. ನಮ್ಮನ್ನು ಇಡೀ ವರ್ಷ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಎದುರಾಗುವ ತೊಡಕುಗಳನ್ನೆಲ್ಲಾ ನಿವಾರಣೆ ಮಾಡಬೇಕೆಂದು ದೇವರಲ್ಲಿ ಪ್ರಾರ್ಥಿಸುವುದೇ ವಿಷು ಕಣಿ ಕಾಣುವ ಉದ್ದೇಶವಾಗಿದೆ. 
                                                               - ಸಂಗ್ರಹ 

Birthday of Dr. B.R.Ambedkar

ಇಂದು ಭಾರತದ ಸಂವಿಧಾನ ಶಿಲ್ಪಿ  ಡಾ. ಬಿ. ಆರ್. ಅಂಬೇಡ್ಕರ್ ಅವರ  ಜನ್ಮದಿನ. ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಬಹುಮಖ ವ್ಯಕ್ತಿತ್ವವನ್ನು ಹೊಂದಿದ್ದವರು. ಅವರ ಅಧ್ಯಯನಶೀಲತೆ ಅಪಾರವಾದುದು. ತಮ್ಮ ವಿದ್ವತ್, ಪಾಂಡಿತ್ಯದಿಂದ ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು 'ಸಂವಿಧಾನ ಶಿಲ್ಪಿ' ಎಂದು ಕರೆಯುತ್ತಾರೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರಾದ ಅಂಬೇಡ್ಕರರ ತಂದೆ ರಾಮ್ ಜೀ ಸಕ್ಪಾಲ್ ಅವರು ಮರಾಠಿ ಹಾಗೂ ಇಂಗ್ಲೀಷಿನಲ್ಲಿ ಕಲಿತಿದ್ದರು, ಅವರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರ್ ರಾಗಿ ಸೇವೆ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅವರು ತಮ್ಮ ಮಕ್ಕಳಿಗೆ, ಅದರಲ್ಲಿಯೂ ಮುಖ್ಯವಾಗಿ ಭೀಮರಾಯರಿಗೆ, ಸ್ವತಃ ಕಲಿಸಿ ಅವರ ಜ್ಞಾನಾರ್ಜನೆಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಾಯಿತು.೧೯೦೮ರಲ್ಲಿ ಅಂಬೇಡ್ಕರ್ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ, ಆಗಿನ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಎಂದು ಕರೆಯಲ್ಪಡುತ್ತಿದ್ದ ತಮ್ಮ ಸಮಾಜಕ್ಕೆ ಮೊದಲನೆಯವರಾದರು. ನಾಲ್ಕು ವರ್ಷಗಳ ನಂತರ, ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು. ವಾಪಸು ಬಂದ ಮೇಲೆ ಬರೋಡ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವರಿಗೆ ಪರದೇಶದಲ್ಲಿ ಓದು ಮುಂದುವರಿಸಲು ವಿದ್ಯಾರ್ಥಿವೇತನ ದೊರಕಿತು.೧೯೧೩ರಿಂದ ೧೯೧೬ರವರೆಗೆ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವ ಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜನೀತಿ/ರಾಜ್ಯಶಾಸ್ತೃ ಅಭ್ಯಾಸ ಮಾಡಿದರು. ೧೯೧೫ರಲ್ಲಿ ಅರ್ಥ ಶಾಸ್ತ್ರದಲ್ಲಿ ಎಂ.ಎ, ಪದವಿ ಗಳಿಸಿದರು. ೧೯೧೬ರಲ್ಲಿ, ಅವರು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಿದ ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ಎಂಬ ಮಹಾಪ್ರಬಂಧವನ್ನು ಮಂಡಿಸಿ, ಪಿ.ಹೆಚ್.ಡಿ. ಪದವಿಯನ್ನು ಪಡೆದು ಕೊಂಡರು.ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ ಎಂಬ ಪ್ರಬಂಧ ಅವರ ಮೊಟ್ಟ ಮೊದಲ ಪ್ರಕಾಶಿತ ಕೃತಿ. ೧೯೧೬ ಜೂನ್ ನಲ್ಲಿ ಅಮೇರಿಕದಲ್ಲಿ ಓದು ಮುಗಿಸಿದ ಅಂಬೇಡ್ಕರ್ ಮುಂದೆ ಲಂಡನ್ನಿನ “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಡ್ ಪೊಲಟಿಕಲ್ ಸೈನ್ಸ್” ಸೇರಿ ನಂತರ ಗ್ರೇ'ಸ್ ಇನ್ ಸಂಸ್ಥೆಯನ್ನು ಸೇರಿದರು. ಮತ್ತೊಂದು ವರ್ಷ ಕಳೆಯುವ ವೇಳೆಗೆ ಅವರ ವಿದ್ಯಾರ್ಥಿವೇತನ ಕೊನೆಗೊಂಡಿತು.೧೯೨೦ರವರೆಗೆ ಮುಂಬೈಯ ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಕಲಿಸಿ, “ಮೂಕನಾಯಕ” ಎಂಬ ಮರಾಠಿ ಸಾಪ್ತಾಹಿಕವನ್ನು ಹೊರಡಿಸುತ್ತಿದ್ದ ಅಂಬೇಡ್ಕರ್ , ಮತ್ತೆ ಲಂಡನ್ನಿಗೆ ಮರಳಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಅವರು “ ರೂಪಾಯಿಯ ಬಿಕ್ಕಟ್ಟು” (ದಿ ಪ್ರಾಬ್ಲಮ್ ಆಫ್ ರುಪಿ) ಎಂಬ ಮಹಾಪ್ರಬಂಧ ಬರೆದು, ಲಂಡನ್ ವಿಶ್ವವಿದ್ಯಾನಿಲಯದಿಂದ ಡಿ.ಎಸ್.ಸಿ. ಗೌರವವನ್ನು ಸಂಪಾದಿಸಿದರು.ಇದರೊಂದಿಗೇ, ಬಾರ್-ಎಟ್-ಲಾ ಪದವಿ ಓದಿ ಬ್ಯಾರಿಸ್ಟರ್ ಆಗಿ, ಬ್ರಿಟಿಷ್ ಬಾರಿಗೆ ಸದಸ್ಯತ್ವ ಪಡೆದರು. ಇಂಗ್ಲೆಂಡಿನಿಂದ ಶಾಶ್ವತವಾಗಿ ವಾಪಸು ಬರುವ ಮುನ್ನ, ಅಂಬೇಡ್ಕರ್ ಮೂರು ತಿಂಗಳು ಜರ್ಮನಿಯಲ್ಲಿ ಬಾನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು. ೧೯೫೨ ಜೂನ್ ೧೫ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್‌ಎಲ್‍.ಡಿ) ಗೌರವ ಪದವಿ ಪ್ರದಾನ ಮಾಡಿತು. ೧೯೫೩, ಜನವರಿ ೧೨ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್‍.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು.