ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಯು. ಪಿ. ವಿಭಾಗದ ಕನ್ನಡ ಕವಿತಾ ರಚನೆಯಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆ. ಇದನ್ನು ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಅಪೂರ್ವ ಎಡಕಾನ ರಚಿಸಿದ್ದಾಳೆ. ಅವಳಿಗೆ ಅಭಿನಂದನೆಗಳು.
ತಾಯಿಯ ಮಮತೆ
ಜಗವನು ತೋರಿಸಿಕೊಟ್ಟ
ದಿವ್ಯ ರೂಪವೇ ತಾಯಿ
ಸಾಕಿ ಸಲಹಿದ ಮಾತೆಯನ್ನು
ಮರಣದವರೆಗೂ ಕಾಯಿ ।।
ಬಾಲ್ಯದಿಂದಲೇ ಒಳ್ಳೆಯ ನಡತೆಯ
ಕಲಿಸಿಕೊಟ್ಟ ಮಾತೆ
ಹೊಲದಿ ಕೆಲಸ ಮಾಡಿಕೊಂಡೆ
ಹೊಟ್ಟೆ ತುಂಬಿಸಿದ ದಾತೆ ।।
ಮಗುವು ಮಲಗುವ ತನಕವೂ
ಜೋಗುಳ ಹಾಡಿಹಾಡಿ
ನಿದ್ದೆಯು ಬಾರದೆ ಇದ್ದರೆ ಪಾಪುಗೆ
ಸೋಲನು ಹಾಲನು ನೀಡಿ ।।
ಮಗುವು ಒಮ್ಮೆ ಬಿದ್ದರೆ
ಹರಿಯುವುದು ದುಃಖದ ಕೋಡಿ
ಅಳುವು ನಿಲ್ಲುವುದು ಕೊಟ್ಟರೆ
ಒಂದು ಪರಿಮಳ ಹೂವಿನ ಜೋಡಿ ।।
ಸಿಹಿಮುತ್ತನು ಗಲ್ಲಕೆ ನೀಡುತ
ವಾತ್ಸಲ್ಯಮಯಿ ಕರುಣೆ
ಮಕ್ಕಳ ಬಗ್ಗೆ ಗಮನವ ಇಟ್ಟು
ದೇವರಿಗೆಂದೂ ಶರಣೆ ।।
ತಾಯಿಯೆ ಮೊದಲ ಗುರುವೆಂದು
ಸಾಧಿಸಿ ತೋರಿಸಿದಳೀಕೆ
ಒಂದು ಅಂಕವೂ ಕಡಿಮೆಯಾದರೆ
ತಾಯಿಯ ಪ್ರಶ್ನೆ ಯಾಕೆ ? ।।
ಇಂತಹ ಪ್ರೀತಿಯ ತಾಯಿಯು
ಲಭಿಸುವುದು ಬಹು ದೊಡ್ಡ ಅದ್ರಷ್ಟ
ವಾತ್ಸಲ್ಯಮಯಿ ತಾಯಿಯು ಇಲ್ಲದಿರೆ
ಅವನೊಬ್ಬ ಬಲು ನತದ್ರಷ್ಟ ।।
very nice apoorva. keep it up
ReplyDelete