ಶಾಲಾ ವಾರ್ಷಿಕೋತ್ಸವ ಆಚರಣೆ
ನಮ್ಮ ಶಾಲಾ ವಾರ್ಷಿಕೋತ್ಸವವು ಗಣರಾಜ್ಯೋತ್ಸವದ ಆಚರಣೆಯೊಂದಿಗೆ ಜನವರಿ 26 ರಂದು ಬಹಳ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ 9.30 ಕ್ಕೆ ಶಾಲಾ ಮುಖ್ಯೋಪಾಧ್ಯಾಯರು ರಾಷ್ಟ್ರ ಧ್ವಜವನ್ನು ಹಾರಿಸಿದರು. ಮಕ್ಕಳು ಝಂಡಾ ಊಂಛಾ ರಹೇ ಹಮಾರಾ ಧ್ವಜಗೀತೆಯನ್ನು ಹಾಡಿದರು. ಬಳಿಕ ಗಣರಾಜ್ಯೋತ್ಸವದ ಮಹತ್ವದ ಕುರಿತು ಮುಖ್ಯೋಪಾಧ್ಯಾಯರು ಮಾತನಾಡಿದರು. ಅನಂತರ ನಮ್ಮ ಶಾಲಾ ಸಂಚಾಲಕಿ ಶ್ರೀಮತಿ ಶಾರದಾ ಅಮ್ಮ ಅವರು ಶಾಲಾ ಧ್ವಜವನ್ನು ಹಾರಿಸುವ ಮೂಲಕ ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ಕವಾಯತು ನಡೆಯಿತು.ಇದನ್ನು ಶಾಲಾ ಮೆನೇಜರ್ ಉದ್ಘಾಟಿಸಿದರು. ಮಕ್ಕಳು ದೇಶಭಕ್ತಿ ಗೀತೆ ಹಾಡಿದರು . ಅನಂತರ ದಿ. ನೇರೋಳು ನಿಡುವಜೆ ಸುಬ್ಬಣ್ಣ ಭಟ್ಟ ವೇದಿಕೆಯಲ್ಲಿ ಸರಿಯಾಗಿ 10 ಗಂಟೆಗೆ ವಾರ್ಷಿಕೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಆರಂಭವಾದವು . ಮಕ್ಕಳಿಂದ ಅಭಿನಯ ಗೀತೆ , ಜಾನಪದ ನ್ರತ್ಯ , ಸಿನಿಮಾಟಿಕ್ ಡ್ಯಾನ್ಸ್ , ನಾಟಕ, ನಗೆ ಟಾನಿಕ್ , ಮಹಿಷ ಮರ್ದಿನಿ ಎಂಬ ತಾಳಮದ್ದಳೆ ಇತ್ಯಾದಿ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನ ಎಲ್ಲ ಮಕ್ಕಳಿಗೂ, ರಕ್ಷಕರಿಗೂ , ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು. ಅಪರಾಹ್ನ 4 ಕ್ಕೆ ಸರಿಯಾಗಿ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಅರುಣಾ ಜೆ ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಶಾಲಾ ಪಿ.ಟಿ.ಎ. ಅಧ್ಯಕ್ಷ ಜೋನ್ ಡಿ ಸೋಜ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಅವರು ಆಗಮಿಸಿದ್ದರು. ಪುತ್ತಿಗೆ ಪಂಚಾಯತು ಸದಸ್ಯ ಶ್ರೀ ಚನಿಯ ಪಾಡಿ , ಮಂಜೇಶ್ವರ ಬಿ.ಆರ್.ಸಿ.ಯ ಬಿ.ಪಿ.ಓ ಶ್ರೀ ವಿಜಯ ಕುಮಾರ್. ಪಿ , ಶ್ರೀ ದುರ್ಗಾ ಪರಮೇಶ್ವರಿ ಹಾಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀ ಯನ್. ರಾಮಚಂದ್ರ ಭಟ್ , ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ.ಬಿ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. 1992 ರ ಬಳಿಕ ನಮ್ಮ ಶಾಲೆಯಿಂದ ನಿವ್ರತ್ತಿ ಹೊಂದಿದ ಅಧ್ಯಾಪಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು . ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೂ ಪ್ರತಿಭಾವಂತ ಮಕ್ಕಳಿಗೂ ಇರುವ ಬಹುಮಾನಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು. ಶಾಲಾ ಅಧ್ಯಾಪಕ ಶಂಕರನಾರಾಯಣ ಭಟ್ ಶಾಲೆಯ ಚರಿತ್ರೆ ಮತ್ತು ಸಾಧನೆಗಳನ್ನು ಮಂಡಿಸಿದರು . ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ವ್ಯವಸ್ಥಾಪಕರಾಗಿದ್ದ ದಿ. ನೇರೋಳು ನಿಡುವಜೆ ಸುಬ್ಬಣ್ಣ ಭಟ್ಟರ ಸಂಸ್ಮರಣೆ ನಡೆಸಲಾಯಿತು. ಮುಖ್ಯೋಪಾಧ್ಯಾಯರಾದ ಶ್ರೀ ಯನ್. ಮಹಾಲಿಂಗ ಭಟ್ ಎಲ್ಲರನ್ನು ಸ್ವಾಗತಿಸಿದರು . ಕೊನೆಯಲ್ಲಿ ಸಹಾಯಕ ಅಧ್ಯಾಪಕ ಶ್ರೀ ರಾಮ ಮೋಹನ್ ಸಿ.ಯಚ್ ವಂದನಾರ್ಪಣೆ ಗೈದರು. ಸಹಾಯಕ ಅಧ್ಯಾಪಕ ಶ್ರೀನಿವಾಸ ಕೆ.ಯಚ್. ಕಾರ್ಯಕ್ರಮ ನಿರೂಪಿಸಿದರು . ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ ಮುಂದುವರಿಯಿತು . ರಾತ್ರಿ 10 ಗಂಟೆಗೆ ನಮ್ಮ ಶಾಲಾ ವಾರ್ಷಿಕೋತ್ಸವವು ಸಮಾಪನ ಗೊಂಡಿತು .
ಶಾಲಾ ವಾರ್ಷಿಕೋತ್ಸವಕ್ಕೆ ಮುಖ್ಯ ದ್ವಾರದಲ್ಲಿ ಅಳವಡಿಸಲಾದ ಸ್ವಾಗತ ಕಮಾನು
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಸರ್ ಅವರಿಂದ ಮುಖ್ಯ ಅತಿಥಿಗಳ ಭಾಷಣ
ನಿವ್ರತ್ತ ಮುಖ್ಯೋಪಾದ್ಯಾಯ ಶ್ರೀ ಕೆ.ಕೇಶವ ಭಟ್ ಇವರಿಗೆ ಸನ್ಮಾನ
ನಿವ್ರತ್ತ ಮುಖ್ಯೋಪಾಧ್ಯಾಯ ಶ್ರೀ ಯನ್. ಯಚ್. ಲಕ್ಷ್ಮೀನಾರಾಯಣ ಭಟ್ ಇವರಿಗೆ ಸನ್ಮಾನ
ಶಾಲಾ ಮಕ್ಕಳಿಂದ ತಾಳಮದ್ದಳೆ - ಮಹಿಷ ಮರ್ದಿನೀ
ಕಿಕ್ಕಿರಿದು ತುಂಬಿದ ಸಭಾಂಗಣ
ಭಲ್ಲೆ ಭಲ್ಲೆ ನ್ರತ್ಯ ತಂಡ
ಪದ್ಯಕ್ಕೆ ಹೆಜ್ಜೆ ಹಾಕಿ ಕುಣಿಯುತ್ತಿರುವ ಪುಟಾಣಿ ಮಕ್ಕಳು
ಗಣರಾಜ್ಯೋತ್ಸವದ ಭಾಗವಾಗಿ ಮಕ್ಕಳಿಂದ ಮಾಸ್ ಡ್ರಿಲ್
ಲಿಂಬೆ ಚಮಚ ಓಟ
ಗೋಣಿ ಚೀಲ ಓಟ
ಮೈದಾ ದಿಂದ ನಾಣ್ಯ ಹೆಕ್ಕುವುದು
ಮೀನನ್ನು ಕೆರೆಗೆ ಹಾಕುವುದು
ಸಂಗೀತ ಕುರ್ಚಿ ಆಟ

No comments:
Post a Comment