ಗಣಿತೋತ್ಸವ ಮತ್ತು ವಿಜ್ಞಾನೋತ್ಸವ :
ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ್ ನ ಕಾರ್ಯಕ್ರಮ ಗಣಿತೋತ್ಸವ ಹಾಗೂ ವಿಜ್ಞಾನೋತ್ಸವವನ್ನು ನಮ್ಮ ಶಾಲೆಯಲ್ಲಿ ಮಾರ್ಚ್ 2 ಮತ್ತು 3 ರಂದು ನಡೆಸಲಾಯಿತು. ಇದಕ್ಕಾಗಿ ವಿಶೇಷ ತರಬೇತಿ ಪಡೆದ ನಮ್ಮ ಶಾಲೆಯ ಗಣಿತ ಅಧ್ಯಾಪಿಕೆ ಶ್ರೀಮತಿ ಪ್ರೇಮಲತಾ ಟೀಚರ್ ಹಾಗು ವಿಜ್ಞಾನ ಅಧ್ಯಾಪಿಕೆ ಶ್ರೀಮತಿ ಕಮಲಾಕ್ಷಿ ಟೀಚರ್ ನೇತೃತ್ವ ನೀಡಿದರು. ಅಲ್ಲದೆ ಉಳಿದ ಎಲ್ಲಾ ಅಧ್ಯಾಪಕರ ಸಹಕಾರದೊಂದಿಗೆ ಈ ಕಾರ್ಯಕ್ರಮಗಳನ್ನು ಬಹಳ ಯಶಸ್ವಿಯಾಗಿ ನಡೆಸಲಾಯಿತು. ಮಕ್ಕಳನ್ನು ಐದು ಗುಂಪುಗಳಾಗಿ ಮಾಡಲಾಯಿತು . ತ್ರಿಕೋನ, ಚೌಕ , ಆಯತ , ಪಂಚಭುಜ, ವೃತ್ತ ಎಂಬ ಐದು ಗುಂಪುಗಳಿಗೆ ಗಣಿತ ಪಝಲ್ , ಒರಿಗಾಮಿ, ಮೆಟ್ರಿಕ್ ಮೇಳ, ರಸಪ್ರಶ್ನೆ ಹಾಗೂ ವಿಜ್ಞಾನ ಪ್ರಯೋಗ ಎಂಬೀ ವಿಷಯಗಳಲ್ಲಿ ಸರದಿ ಪ್ರಕಾರ ಚಟುವಟಿಕೆಗಳನ್ನು ನೀಡಲಾಯಿತು. ಕೊನೆಗೆ ಮಕ್ಕಳ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಶಾಲಾ ಮೆನೇಜರ್ , ಪಿ.ಟಿ. ಎ . ಹಾಗು ಮಾತೃ ಮಂಡಳಿಯ ಅಧ್ಯಕ್ಷರು ಭಾಗವಹಿಸಿ ಮಕ್ಕಳ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಸಪ್ರಶ್ನೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು. ಮಕ್ಕಳಿಗೆ ಪಾಯಸದ ಊಟವನ್ನು ವಿತರಿಸಲಾಯಿತು.

No comments:
Post a Comment