FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, July 5, 2017

ವಾಚನಾ ಪಕ್ಷಾಚಾರಣೆ 
ಪಿ. ಎನ್ . ಪಣಿಕ್ಕರ್ ಅವರ ನೆನಪಿಗೋಸ್ಕರ ನಮ್ಮ ಶಾಲೆಯಲ್ಲಿ ಜೂನ್ ೧೯ ರಿಂದ ವಾಚನಾ ಪಕ್ಷಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು. ಜೂನ್ ೧೯ ರಂದು ಶಾಲಾ ಅಸೆಮ್ಬಲಿಯಲ್ಲಿ ಪಿ. ಎನ್ .ಪಣಿಕ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ಶಾಲಾ ಲೈಬ್ರರಿಯನ್ನು ಸಜ್ಜುಗೊಳಿಸಿ ಎಲ್ಲ ತರಗತಿಗೆ ಅಗತ್ಯವಿರುವ ಪುಸ್ತಕಗಳನ್ನು ತರಗತಿ ಟೀಚರ್ ಗಳಿಗೆ ನೀಡಲಾಯಿತು. ಬಳಿಕ ಎಲ್ಲ ತರಗತಿಯ ಮಕ್ಕಳಿಗೆ ಪುಸ್ತಕವನ್ನು ನೀಡಿ ಆ ಪುಸ್ತಕವನ್ನು ಓದಿ ಟಿಪ್ಪಣಿ ಬರೆದು ತರಲು ತಿಳಿಸಲಾಯಿತು .  ಎಲ್ಲ ತರಗತಿಯ ಓದುವ ಮೂಲೆಗಾಗಿ ಮಕ್ಕಳಿಂದ ಪುಸ್ತಕ ಸಂಗ್ರಹಿಸಿ ತರಲು ಹೇಳಿದೆವು . ಪ್ರತಿ ದಿನ ಒಂದೊಂದು ಪುಸ್ತಕವನ್ನು ಆಯ್ದ ಮಕ್ಕಳಿಗೆ ನೀಡಿ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ನಡೆಸಲಾಯಿತು. ವಾರ್ತಾ ಪತ್ರಿಕೆಗಳ ಹೆಸರನ್ನೊಳಗೊಂಡ ಮರವನ್ನು ಪ್ರದರ್ಶಿಸಲಾಯಿತು . 
ಈ ಮರದಲ್ಲಿ ಅಡಗಿರುವ ಪತ್ರಿಕೆಗಳ ಹೆಸರು ಹುಡುಕುವ ಚಟುವಟಿಕೆಯನ್ನು ನಡೆಸಿ ಅತಿ ಹೆಚ್ಚು ಹೆಸರು ಬರೆದ ಮಗುವಿಗೆ ಬಹುಮಾನ ನೀಡಲಾಯಿತು ಮರುದಿನ ಗಾದೆಮಾತುಗಳಿಗೆ ಸಂಬಂಧಿಸಿದ ಚಟುವಟಿಕೆ ನಡೆಸಲಾಯಿತು . 
ನಮ್ಮ ಶಾಲೆಯಸಮೀಪವಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಗ್ರಂಥಾಲಯದ ಅಧ್ಯಕ್ಷರು ಕೇರಳ ಸಾಹಿತ್ಯಪರಿಷತ್ತಿನ  ಘಟಕದ ಗೌರವ ಕಾರ್ಯದರ್ಶಿಯೂ  ಆಗಿರುವ ರಾಮಚಂದ್ರ ಭಟ್ಟರು ಗ್ರಂಥಾಲಯದ ಕುರಿತು ಮಾಹಿತಿ ನೀಡಿದರು . ಈ ಸಂದರ್ಭದಲ್ಲಿ ಗ್ರಂಥಾಲಯದವರು ಶಾಲಾ ಮಕ್ಕಳಿಗೆ ಒಂದು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಿದರು . ಪದಬಂಧ ತುಂಬಿಸುವ ಚಟುವಟಿಕೆಯನ್ನು ನಡೆಸಿದೆವು. 
ಕನ್ನಡ ಸಾಹಿತ್ಯದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪಡೆದ ಕವಿಗಳನ್ನು ಪರಿಚಯಿಸುವ ಕಾರ್ಯಕ್ರಮವನ್ನು ನಡೆಸಲಾಯಿತು. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ರಸಪ್ರಶ್ನೆ ಸ್ಪರ್ಧೆಯನ್ನು ಶ್ರೀನಿವಾಸ ಮಾಸ್ಟರ್ ಐ.ಟಿ. ಬಳಸಿ ನಡೆಸಿಕೊಟ್ಟರು . 
ಶಾಲಾ ಸಂಸ್ಕ್ರತ ಅಧ್ಯಾಪಕ ಕೃಷ್ಣ ಪ್ರಸಾದ್ ಪಾಸ್ಟರ್ ಐ.ಟಿ. ಆಧಾರಿತ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಕ್ಕಳಿಗೆ ಮನದಟ್ಟಾಗುವ ರೀತಿಯಲ್ಲಿ ಇದನ್ನು ಮಂಡಿಸಿದರು. ವಾಚನಾ ಪಕ್ಷಾಚಾರಣೆಯ ಸಮಾರೋಪ ಸಮಾರಂಭವನ್ನು ಮತ್ತು ವಿವಿಧ ಕ್ಲಬ್ ಗಳ  ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರು ನೆರವೇರಿಸಿದರು . 
ಶಾಲಾ ಹಿರಿಯ ಶಿಕ್ಷಕಿ ರೇವತಿ ಟೀಚರ್ ಅಧ್ಯಕ್ಷತೆ ವಹಿಸಿದರು . ರಾಮಮೋಹನ್ ಮಾಸ್ಟರ್ ಸ್ವಾಗತಿಸಿದರು . ವಿವಿಧ  ಕ್ಲಬ್ ಗಳ ಸಂಚಾಲಕರು ಕ್ಲಬ್ ಚಟುವಟಿಕೆಗಳ ಬಗ್ಗೆ  ಸಂಕ್ಷಿಪ್ತ ಮಾಹಿತಿ ನೀಡಿದರು ಪ್ರತಿಯೊಂದು ಕ್ಲಬ್ ನ ಸದಸ್ಯರು ವಿಜ್ಞಾನ ಪ್ರಯೋಗ , ಜಾಣ್ಮೆ ಲೆಕ್ಕ , ರಸಪ್ರಶ್ನೆ , ಸಂಘಗಾನ , ದೇಶಭಕ್ತಿ ಗೀತೆ , ಇಂಗ್ಲಿಷ್ ಪಝಲ್ , ಹೀಗೆ ಒಂದೊಂದು ಕಾರ್ಯಕ್ರಮವನ್ನು ನಡೆಸಿಕೊಟ್ಟರು . ಓದುವ ಪಕ್ಷಾಚಾರಣೆಯ ಭಾಗವಾಗಿ ಮಕ್ಕಳು ತಯಾರಿಸಿದ ಹಸ್ತ ಪತ್ರಿಕೆಗಳನ್ನು ಮುಖ್ಯೋಪಾಧ್ಯಾಯರು ಬಿಡುಗಡೆ ಮಾಡಿದರು . ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು . ಶ್ರೀನಿವಾಸ ಮಾಸ್ಟರ್ ಧನ್ಯವಾದ ಸಮರ್ಪಿಸಿದರು

No comments:

Post a Comment