FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, July 19, 2014


ಬ್ಲೆಂಡ್ ತರಬೇತಿಯ  2ನೇದಿನದ ವರದಿ
ಬ್ಲೆಂಡ್ ತರಬೇತಿಯ 2 ನೇ ದಿನವಾದ ತಾ.19.7.2014 ರಂದು ಬೆಳಗ್ಗೆ 9.30 ಕ್ಕೆ ಸರಿಯಾಗಿ ಧರ್ಮತ್ತಡ್ಕ A.U.P ಶಾಲೆಯ ಶಂಕರ ನಾರಾಯಣ ಭಟ್ ಅವರು ವರದಿ ವಾಚಿಸುವುದರೊಂದಿಗೆ ಆರಂಭವಾಯಿತು . R.P ಶ್ರೀ ಪೂರ್ಣಯ್ಯ ಪುರಾಣಿಕ್ ಸರ್ ಅವರು ಬೆಳಗ್ಗಿನ ಸೆಶನ್ ಆರಂಭಿಸಿದರು . ಶಾಲೆಗೆ ಬೇಕಾದ ಬ್ಲೋಗ್ ನಿರ್ಮಾಣಕ್ಕೆ ಬೇಕಾದ ಹಂತಗಳನ್ನು ಸವಿವರವಾಗಿ ವಿವರಿಸಿದರು . R.P ಸಿದ್ದಿಕ್ ಸರ್ ಅವರು ಸಂಪೂರ್ಣ ಬೆಂಬಲ ನೀಡಿದರು. ತಮ್ಮ ತಮ್ಮ ಶಾಲಾ E-MAIL ID, ಪಾಸ್ವರ್ಡ್ ಗಳನ್ನಿಟ್ಟುಕೊಂಡು ಪ್ರತಿ ಶಾಲೆಯವರು ಬ್ಲಾಗ್ ಮಾಡಿದರು . ಬ್ಲಾಗ್ ಹೇಗಿರಬೇಕು ? ಬ್ಲಾಗಿನಲ್ಲಿರುವ ಫೋಲ್ಡರ್ ಗಳು ದಾಖಲಾತಿ ಹಂತಗಳನ್ನು ವಿವರಿಸಿದರು . ಮದ್ಯಾಹ್ನದ ಸೆಶನ್ ಮುಕ್ತಾಯವಾದಾಗ ಎಲ್ಲ ಶಾಲೆಯವರಿಗೂ ಬ್ಲಾಗಿನ ಪ್ರಾಥಮಿಕ ಹಂತಗಳು ಮತ್ತು ಪ್ರತಿ ಶಾಲೆಗೆ ಬ್ಲಾಗ್ ಮಾಡಲು ಸಾಧ್ಯವಾಯಿತು .
ಮಧ್ಯಾಹ್ನದ ನಂತರದ ಸೆಶನ್ 2 ಗಂಟೆಗೆ ಸರಿಯಾಗಿ ಪ್ರಾರಂಭವಾಯಿತು . ತಮ್ಮ ಬ್ಲಾಗುಗಳಲ್ಲಿ ಫೋಟೋ ಅಪ್ಲೋಡ್ ಮಾಡಲು ಶಾಲಾ ಕಾರ್ಯಕ್ರಮಗಳ ವರದಿಯನ್ನು ಟೈಪ್ ಮಾಡಲು ಕೋಪಿ ಮಾಡಲು ತಿಳಿಸಿಕೊಟ್ಟರು . ಜಂಪ್ ಬ್ರೇಕ್, ಲಿಂಕ್ ನೀಡುವುದು ನಮಗೆ ತಿಳಿಯಿತು . ಬ್ಲಾಗಿನಲ್ಲಿ ಒಂದೇ ಸಮಯದಲ್ಲಿ ಇನ್ನೊಂದು ವೆಬ್ ಸೈಟನ್ನು ಯಾವ ರೀತಿ ಲಿಂಕ್ ಮಾಡಬಹುದೆಂದು ತಿಳಿಯಿತು . 3.30 ಕ್ಕೆ ಸರಿಯಾಗಿ ಭಾಗವಹಿಸಿದ ಎಲ್ಲ ಶಾಲೆಯವರು ಶಾಲೆಗೊಂದು ಬ್ಲಾಗ್ ಮಾಡಿ ಅದರಲ್ಲಿ ಚಿತ್ರಗಳು ಮತ್ತು ವರದಿಗಳನ್ನು ಹಾಕಲು ಯಶಸ್ವಿಯಾಗಿದ್ದರು .
R.P ಶ್ರೀ ಪೂರ್ಣಯ್ಯ ಪುರಾಣಿಕ್ ಸರ್ ಅವರು ಬ್ಲಾಗ್ ಮತ್ತು ವೆಬ್ ಸೈಟುಗಳ ವ್ಯತ್ಯಾಸಗಳು ಯಾವ ರೀತಿಯಲ್ಲಿ ಬ್ಲಾಗ್ ನಮಗೆ ಸಹಕಾರಿಯಾಗಿದೆಯೆಂದು ವಿವರಿಸಿದರು. ಪ್ರೋಜೆಕ್ಟೆರಿನಲ್ಲಿ ಮಾತ್ಸ್ ಬ್ಲಾಗಿನ ವಿಶೇಷತೆಗಳನ್ನು ತೋರಿಸಿದರು. ಕೆಲವೊಂದು ಶಾಲೆಗಳ ಬ್ಲಾಗುಗಳನ್ನು ವೀಕ್ಷಿಸಿದೆವು . ನಮ್ಮ ಶಾಲೆಯ ಬ್ಲಾಗನ್ನು ಉತ್ತಮಪಡಿಸಲು ಇದು ಸಹಕಾರಿಯಾಗುವುದು . 2 ದಿನದ ಬ್ಲೆಂಡ್ ತರಗತಿಯಿಂದ ನಮಗೆ ಕಂಪ್ಯೂಟರ್ ತಂತ್ರಜ್ಞಾನದ ಬಗ್ಗೆ ಇನ್ನಷ್ಟು ತಿಳಿಯುವ ಹಾಗಾಯಿತು . ಇಂತಹ ತರಬೇತಿಗಳು ನಮ್ಮನ್ನು ಉತ್ತಮ ಅಂತರ್ಜಾಲ ತಂತ್ರಜ್ನರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ .

No comments:

Post a Comment