FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Monday, March 30, 2015

FAREWELL PARTY TO OUR HEADMASTER

ಈ ವರ್ಷ ಸೇವೆಯಿಂದ ನಿವ್ರತ್ತಿ ಹೊಂದಲಿರುವ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎನ್. ಎಚ್. ಲಕ್ಷ್ಮೀನಾರಾಯಣ ಭಟ್ಟರಿಗೆ  ಧರ್ಮತ್ತಡ್ಕ ಎ.ಯು.ಪಿ.ಶಾಲೆ ಮತ್ತು ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ಇದರ ಮೆನೇಜರ್ ಅಧ್ಯಾಪಕರು ಮತ್ತು ಸಿಬಂದಿ ವರ್ಗದಿಂದ ಜಂಟಿಯಾಗಿ ದಿನಾಂಕ 30.3.2015 ರಂದು ವಿದಾಯ ಸಮಾರಂಭವನ್ನು ಏರ್ಪಡಿಸಲಾಯಿತು. ಗಾಯತ್ರಿ ಟೀಚರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು . ಹಿರಿಯ ಅಧ್ಯಾಪಕಿ ರೇವತಿ ಟೀಚರ್ ಬಂದ  ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಅಧ್ಯಾಪಕ ಶ್ರೀ ಎನ್. ಮಹಾಲಿಂಗ ಭಟ್ ಸನ್ಮಾನಿತರ ಕಿರು ಪರಿಚಯ ಮಾಡಿದರು . ಶಾಲಾ ಪ್ರಬಂಧಕರಾದ ಶ್ರೀ ಯನ್. ಸುಬ್ಬಣ್ಣ ಭಟ್  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶಿಕ್ಷಕರು ವ್ರತ್ತಿಯಿಂದ ನಿವ್ರತ್ತಿ ಹೊಂದಿದರೂ  ಪ್ರವ್ರತ್ತಿಯಲ್ಲಿ ಮುನ್ನಡೆಯಬೇಕೆಂದು  ಕರೆಯಿತ್ತರು.
ಸೇವೆಯಿಂದ ನಿವ್ರತ್ತಿ ಹೊಂದುತ್ತಿರುವ ಶ್ರೀಯುತರಿಗೆ  ಶಾಲಾ ಪ್ರಬಂಧಕರು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಗೌರವಿಸಿದರು. ಪಿಟಿಎ ಅಧ್ಯಕ್ಷ ವೆಂಕಟರಾಜ ನೀರಮೂಲೆ ಪುಷ್ಪಗುಚ್ಚವನ್ನು ನೀಡಿ ಅಭಿನಂದಿಸಿದರು . ಶಾಲಾ ಮೆನೇಜರ್  ಶ್ರೀಮತಿ ವಿಜಯಶ್ರೀ ಬಿ. ಸ್ಮರಣಿಕೆಯನ್ನು ನೀಡಿದರು. 


ಹೈಸ್ಕೂಲಿನ ವತಿಯಿಂದ ಹೈಸ್ಕೂಲ್ ಮೇನೇಜರ್ ಮುಖ್ಯೋಪಾಧ್ಯಾಯರು ಮತ್ತು ಸಹ ಅಧ್ಯಾಪಕರು ಸೇರಿ ಶಾಲು ಫಲಪುಷ್ಪ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಬಳಿಕ ಯು.ಪಿ. ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ, ಹೈಸ್ಕೂಲ್ ಮೇನೇಜರ್ ಶ್ರೀ ಶಂಕರನಾರಾಯಣ ಭಟ್, ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಯನ್. ರಾಮಚಂದ್ರ ಭಟ್  ಪಿ.ಟಿ.ಎ. ಅಧ್ಯಕ್ಷ ವೆಂಕಟರಾಜ ನೀರಮೂಲೆ ನಿವ್ರತ್ತರಾಗುವವರಿಗೆ ಶುಭ ಹಾರೈಸಿದರು. ಅಧ್ಯಾಪಕರ ವತಿಯಿಂದ ಶ್ರೀ ರಾಮಮೋಹನ್ ಮಾಸ್ಟರ್, ಶ್ರೀನಿವಾಸ ಮಾಸ್ಟರ್, ಗೋವಿಂದ ಭಟ್ ಇ.ಎಚ್. ಸತ್ಯವತಿ ಟೀಚರ್, ಸತೀಶ್ ಕುಮಾರ್ ಮಾಸ್ಟರ್, ಶ್ರೀನಿವಾಸ ಮಾಸ್ಟರ್ ಮೊದಲಾದವರು ಶುಭಹಾರೈಸಿದರು. ನಿವ್ರತ್ತರಾಗುವ ಶ್ರೀ ಎನ್. ಎಚ್.ಲಕ್ಷ್ಮೀನಾರಾಯಣ ಭಟ್ಟರು ತಮ್ಮ 32 ವರ್ಷಗಳ ಅಧ್ಯಾಪನದ ಅನುಭವಗಳನ್ನು ಹಂಚಿಕೊಂಡರು. ಹೈಸ್ಕೂಲ್ ಅಧ್ಯಾಪಕ ಶ್ರೀ ಇ.ಎಚ್. ಗೋವಿಂದ ಭಟ್  ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಗೈದರು. ಶ್ರೀನಿವಾಸ ಕೆ.ಎಚ್. ಕಾರ್ಯಕ್ರಮವನ್ನು ನಿರೂಪಿಸಿದರು. 

No comments:

Post a Comment