FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, December 8, 2016

HARITHA KERALA MISSION

ಹಸಿರು ಕೇರಳ ಯೋಜನೆ - ಒಂದು ವರದಿ 
ಹಸಿರು ಕೇರಳ ಯೋಜನೆಯ ಭಾಗವಾಗಿ ನಮ್ಮ ಶಾಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಯಿತು . ಶಾಲಾ ಅಸೇಂಬ್ಳಿಯಲ್ಲಿ  ಮಕ್ಕಳು ತಮ್ಮ ಮನೆಯಲ್ಲಿ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಬಾಟ್ಲಿ ಹಾಗು ಉಪಯೋಗ ಶೂನ್ಯವಾದ ಪ್ಲಾಸ್ಟಿಕ್ ಪೆನ್ನುಗಳನ್ನು ದಶಂಬರ 8 ನೇ ತಾರೀಕಿನಂದು ಶಾಲೆಗೆ  ತರಲು ಸೂಚಿಸಲಾಯಿತು. 

ದಶಂಬರ 8 ರಂದು ಶಾಲಾ ಅಸೆ೦ಬಿಲಿ ಯಲ್ಲಿ ಹಸಿರು  ಕೇರಳ ಪ್ರತಿಜ್ಞೆಯನ್ನು ಶಾಲಾ ಮುಖ್ಯೋಪಾಧ್ಯಾಯರು ಬೋಧಿಸಿದರು.



ಬಳಿಕ ಮಕ್ಕಳು ಸಂಗ್ರಹಿಸಿ ತಂದ  ಪ್ಲಾಸ್ಟಿಕ್ ಬಾಟ್ಲಿ ಹಾಗೂ  ಪೆನ್ನುಗಳನ್ನು ಚೀಲದಲ್ಲಿ ಸಂಗ್ರಹಿಸಲಾಯಿತು. 


ಅನಂತರ ನಮ್ಮ ಊರಿನ ಪ್ರಗತಿಪರ ಕೃಷಿಕರಾದ ಶ್ರೀಯುತ ಕಕ್ವೆ  ಶಂಕರ ರಾವ್ ನೀಡಿದ ಗೆಂದಾಳಿ ತೆಂಗಿನ ಗಿಡವನ್ನು ಶಾಲಾ ಪರಿಸರದಲ್ಲಿ ನೆಟ್ಟು ಬೇಲಿ ಹಾಕಲಾಯಿತು. ಅನಂತರ ಎಲ್ಲ ತರಗತಿಗಳಲ್ಲಿ ಸೂಚನಾ ಫಲಕ ಹಾಗು ಪೋಸ್ಟರ್  ತಯಾರಿಸಲಾಯಿತು .


ಅನಂತರ ಮಕ್ಕಳು ತಯಾರಿಸಿದ ಸೂಚನಾ ಫಲಕ ಹಾಗು ಘೋಷಣಾ ವಾಕ್ಯಗಳನ್ನು ಕೂಗುತ್ತಾ ಜನಜಾಗ್ರತಿ ಮೂಡಿಸಲು ಶಾಲಾ ಪರಿಸರದಲ್ಲಿ ಮೆರವಣಿಗೆ ನಡೆಸಲಾಯಿತು.


ಶಾಲಾ ಅಧ್ಯಾಪಕರಾದ ಶ್ರೀ ಯನ್  ಶಂಕರನಾರಾಯಣ ಭಟ್ ಅವರು ಧರ್ಮತ್ತಡ್ಕ ಬಸ್ ಸ್ಟಾಂಡ್ ಪರಿಸರದಲ್ಲಿ ಈ ಯೋಜನೆಯ ಮಹತ್ವದ ಬಗ್ಗೆ  ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು.







ಬಳಿಕ ಮಕ್ಕಳು ಅಧ್ಯಾಪಕರು ಸೇರಿ ಶಾಲಾ ಪರಿಸರ, ಅಂಗಡಿ , ಬಸ್ ಸ್ಟಾಂಡ್, ಅಂಗನವಾಡಿ ಪರಿಸರ ವನ್ನು ಸ್ವಚ್ಛ ಗೊಳಿಸಿದರು.


ಸಂಜೆ ಪುತ್ತಿಗೆ ಗ್ರಾಮ ಪಂಚಾಯತ್ ಅಧಿಕಾರಿಗಳು ಶಾಲೆಗೆ  ಆಗಮಿಸಿ ಮಕ್ಕಳು ಸಂಗ್ರಹಿಸಿ ತಂದ ಪ್ಲಾಸ್ಟಿಕ್ ಬಾಟ್ಲಿ ಹಾಗೂ ಪೆನ್ನುಗಳನ್ನು ತೆಗೆದುಕೊಂಡು ಹೋದರು. 
 

No comments:

Post a Comment