FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, December 2, 2016

SCHOOL KALOTHSAVA 2016-17

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ 
               ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ನವೆಂಬರ್ 26 ರಿಂದ ದಶಂಬರ್ 1 ರ ತನಕ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ  ಶಾಲೆ ಮತ್ತು ಎ . ಯು. ಪಿ. ಶಾಲೆ ಧರ್ಮತ್ತಡ್ಕದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು. ನವೆಂಬರ್ 26 ರಂದು ವೇದಿಕೆಯೇತರ ಸ್ಪರ್ಧೆಗಳು ಜರಗಿದವು. ನವೆಂಬರ್ 28 ರಂದು ಹರತಾಳದ ನಿಮಿತ್ತ ಅಂದಿನ ಸ್ಪರ್ಧೆಗಳು ದಶಂಬರ್ 1 ಕ್ಕೆ ಮುಂದೂಡಲ್ಪಟ್ಟವು.
ನವೆಂಬರ್ 29 ರಂದು ಬೆಳಗ್ಗೆ 9.30 ಕ್ಕೆ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆಗಳ ಸಂಚಾಲಕಿ ಶ್ರೀಮತಿ ಯಂ. ಶಾರದಾ ಅಮ್ಮ ಧ್ವಜಾರೋಹಣ ಮಾಡುವ ಮೂಲಕ ಕಲೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಅತಿಥಿಗಳನ್ನು ವಾದ್ಯ ಘೋಷದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.

ಅನಂತರ ಮಂಜೇಶ್ವರ ಶಾಸಕ ಶ್ರೀ ಪಿ. ಬಿ. ಅಬ್ದುಲ್ ರಸಾಕ್  ತೆಂಗಿನ ತಿರಿಯನ್ನು ಅರಳಿಸುವ ಮೂಲಕ ಕಲೋತ್ಸವವನ್ನು ಉದ್ಘಾಟಿಸಿದರು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್.ಯನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖ್ಯಾತ ಸಾಹಿತಿ ಹಾಗು ಮಂಗಳೂರು ಆಕಾಶವಾಣಿಯ ನಿರ್ದೇಶಕರೂ ಆಗಿರುವ ಡಾ.ವಸಂತ ಕುಮಾರ್ ಪೆರ್ಲ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅರುಣಾ ಜೆ. ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಪಂಚಾಯತು ಉಪಾಧ್ಯಕ್ಷ ಶ್ರೀ. ಪಿ.ಬಿ. ಮೊಹಮ್ಮದ್ , ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಸಂಚಾಲಕಿ ಶಾಂತಿ ವೈ , ಕ್ಷೇಮ ಸ್ಥಾಯಿ ಸಮಿತಿ ಸಂಚಾಲಕ ಚನಿಯ ಪಾಡಿ,CAMPCO ನಿರ್ದೇಶಕರಲ್ಲಿ ಒಬ್ಬರಾದ ಕೋಳಾರು  ಸತೀಶ್ಚಂದ್ರ ಭಂಡಾರಿ, ಶಾಲಾ ಮೆನೇಜರ್ ಶಂಕರನಾರಾಯಣ ಭಟ್, ಹೈಸ್ಕೂಲಿನ ಪಿ. ಟಿ.ಎ . ಅಧ್ಯಕ್ಷ  ಶ್ರೀ ಸುಂದರ ಶೆಟ್ಟಿ ಬಿ.ಜಿ. ಮೊದಲಾದವರು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಕಲೋತ್ಸವದ ಪ್ರಧಾನ ಸಂಚಾಲಕರಾದ ಶ್ರೀ ಯನ್  ರಾಮಚಂದ್ರ ಭಟ್ ಸ್ವಾಗತಿಸಿದರು. ಸಹ ಸಂಚಾಲಕ ಯನ್ . ಮಹಾಲಿಂಗ ಭಟ್ ವಂದಿಸಿದರು. ಹೈಸ್ಕೂಲಿನ ಅಧ್ಯಾಪಕರಾದ ಶ್ರೀ ಗೋವಿಂದ ಭಟ್ ಹಾಗು ಉಮಾದೇವಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ 11 ವೇದಿಕೆಗಳಲ್ಲಿ ವಿವಿಧ ಸ್ಪರ್ಧೆಗಳು ಆರಂಭಗೊಂಡವು. ಈ ವರ್ಷ ಏಳು ಯಕ್ಷಗಾನ ತಂಡಗಳು ಸ್ಪರ್ಧಿಸಿ  ದಾಖಲೆ ನಿರ್ಮಿಸಿದವು.
ಮಧ್ಯಾಹ್ನ ಎಲ್ಲರಿಗು ಶುಚಿ ರುಚಿಯಾದ ಭೋಜನವನ್ನು ಉಣಬಡಿಸಲಾಯಿತು. ಸಂಜೆ 6 ಗಂಟೆಗೆ ಅಂದಿನ ಸ್ಪರ್ಧೆಗಳು ಮುಕ್ತಾಯಗೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು. 
              
ಮರುದಿನ (ನವೆಂಬರ್ 30) ಕಲೋತ್ಸವ ನಗರಿ ಜನರಿಂದ ತುಂಬಿ ತುಳುಕುತ್ತಿತ್ತು. ಏಳು ವೇದಿಕೆಗಳಲ್ಲಿ  ವಿವಿಧ ಕಲಾ ಪ್ರಕಾರಗಳಾದ ಭರತನಾಟ್ಯ , ಕೂಚುಪುಡಿ, ಮೊಹಾನಿಯಾಟ್ಟಂ , ತಿರುವಾದಿರಕ್ಕಳಿ, ಒಪ್ಪನ, ಕೋಲ್ಕಳಿ , ದಫ್ ಮುಟ್ , ಓಟ್ಟಂ ತುಳ್ಳಲ್  , ಅರಬಣಮುಟ್ಟು , ಪೂರಕ್ಕಳಿ, ಜಾನಪದ ನ್ರತ್ಯ, ಸಮೂಹನ್ರತ್ಯ ಸ್ಪರ್ಧೆಗಳು ನಡೆದವು.
ಸುಮಾರು 7000 ಜನರು ಅಂದಿನ ಕಾರ್ಯಕ್ರಮಗಳನ್ನು ಕಣ್ತುಂಬ ವೀಕ್ಷಿಸಿ ಮಕ್ಕಳನ್ನು ಪ್ರೋತ್ಸಾಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.



ಅಂದು ಸ್ಪರ್ಧೆಗಳು ಮುಗಿಯುವಾಗ ಗಂಟೆ ಸಂಜೆ ಏಳೂವರೆಯಾಗಿತ್ತು!

         ದಶಂಬರ  1 ರಂದು 23 ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆದುವು . ಸಂಜೆ 5.30 ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಶ್ರೀ ಎ . ಕೆ. ಯಂ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೈವಳಿಕೆ ಪಂಚಾಯತು ಅಧ್ಯಕ್ಷೆ ಶ್ರೀಮತಿ ಭಾರತಿ ಜೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಪೈವಳಿಕೆ ಪಂಚಾಯತಿ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷ ಅಮಿರ್ ಯಂ. ಕೆ. ,ಜಿಲ್ಲಾ ಪಂಚಾಯತು ಮಾಜಿ ಸದಸ್ಯ ಶ್ರೀ ಶಂಕರ ರೈ ಮಾಸ್ಟರ್, ಮಂಜೇಶ್ವರ ಬಿ.ಪಿ.ಓ. ಶ್ರೀ ವಿಜಯ ಕುಮಾರ್ ಪಿ. ಮೊದಲಾದವರು ಶುಭಾಶಂಸನೆ ಗೈದರು. ಪ್ರೋಗ್ರಾಮ್ ಕಮಿಟಿ ಸಂಚಾಲಕ ಶ್ರೀ ಸತೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಸಂಚಾಲಕ ರಾಮಚಂದ್ರ ಭಟ್ ವಂದಿಸಿದರು. ರಾಮ ಮೋಹನ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ವಿವಿಧ ವಿಭಾಗಗಳಲ್ಲಿ ವಿಜೇತರಾದ ಶಾಲೆಗಳಿಗೆ ಟ್ರೋಫಿ ಗಳನ್ನು  ವಿತರಿಸಲಾಯಿತು. 
LP.GENERAL - I. VAUPS MIYAPADAVU - 49 Points
                         II. GLPS VAMAJOOR       - 45 Points
UP GENERAL- I. SSBAUPS AILA            - 72 Points
                         II. AUPS DHARMATHADKA  - 63 Points
HS GENERAL- I GHSS MANGALPADY        - 143 Points
                         II. SDPHS DHARMATHADKA- 136 Points
HSS GENERAL- I SATHSS MANJESHWAR    - 132 Points
                            II. GHSS PAIVALIKE NAGAR - 118 Points
UP SANSKRIT - I DBAUPS KAYYAR               - 88 Points
                            II . AUPS DHARMATHADKA - 84 Points
HS SANSKRIT - I. SDPHS DHARMATHADKA - 90 Points
                            II. SVVHS MIYAPADAVU        - 71 Points
LP ARABIC    - I . AJIAUPS UPPALA &
                          I.  VALPS PAVOOR                   - 41 Points
                         II. GHSS BANGRAMANJESHWAR - 37 Points
UP ARABIC   - I. AJIAUPS UPPALA                        - 57 Points
                         II. GHSS MANGALPADY                - 53 Points
HS ARABIC -  I. GHSS MANGALPADY                 - 84 Points
                        II. GHSS HEROOR MEEPRY            - 72 Points
LP KANNADA- I. BPPALPS PERMUDE  &             
                            I. SATLPS MANJESHWAR           - 20 Points
                           II. HEDDARI AUPS BAYAR &
                           II. VAUPS MIYAPADAVU             - 16 Points
UP KANNADA- I. AUPS ANEKAL &
                            I. VAUPS MIYAPADAVU              - 16 Points
                           II. AUPS DHARMATHADKA        - 15 Points
HS KANNADA- I.  SVVHS MIYAPADAVU,
                            I. KVSMHS KURUDAPADAVU &
                            I. GHSS MANGALPADY                - 16 Points
                           II. SDPHS DHARMATHADKA ,
                           II. SATHS MANJESHWAR &
                           II. GHSS PAIVALIKE NAGAR         - 14 Points
HSS KANNADA - I . GHSS PAIVALIKE NAGAR &
                               I. SATHSS MANJESHWAR          - 18 Points
                               II. UDAYA EMS MANJESHWAR - 16 Points       

No comments:

Post a Comment