FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, February 28, 2015

EDUCATIONAL TOUR

ನಮ್ಮ ಶಾಲೆಯಿಂದ ದಿನಾಂಕ 28.2.2015 ನೆ ಶನಿವಾರದಂದು ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ಏರ್ಪಡಿಸಿದೆವು. 112 ಮಕ್ಕಳು ,  15 ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬಂದಿಗಳು  ಮತ್ತು ಶಾಲಾ ಪಿ.ಟಿ. ಎ. ಅಧ್ಯಕ್ಷರು ಈ ಪ್ರವಾಸದಲ್ಲಿ ಭಾಗವಹಿಸಿದರು. ಬೆಳಿಗ್ಗೆ ಏಳು ಗಂಟೆಗೆ ಶಾಲೆಯಿಂದ ಪ್ರವಾಸ ಹೊರಟೆವು.
ಕಬಕದ ಸಮೀಪ ಪುಂಡಿಕಾಯಿ ಎಂಬಲ್ಲಿ ನಮ್ಮ ಶಾಲಾ ಹಳೆವಿದ್ಯಾರ್ಥಿಯ ಮನೆಯಲ್ಲಿ ಬೆಳಗಿನ ಉಪಾಹಾರವನ್ನು ಸೇವಿಸಿ 9.30ಕ್ಕೆ ಪುತ್ತೂರಿನಲ್ಲಿರುವ CAMPCO ಚಾಕೊಲೇಟ್ ಫ್ಯಾಕ್ಟರಿಗೆ ತಲುಪಿದೆವು.

ಅಲ್ಲಿ ನಮಗೆ  ರೀತಿಯ ಚಾಕ್ಲೇಟ್ ತಯಾರಿಸುವ ವಿಧಾನವನ್ನು ಸವಿವರವಾಗಿ ತೋರಿಸಿದರು. ಅಲ್ಲಿಂದ 11 ಗಂಟೆಗೆ ಗುರುವಾಯನಕೆರೆಯ ಸಮೀಪ ಮಾರುತಿಪುರ ಕಾಣಿಯೂರು ಎಂಬಲ್ಲಿರುವ ರೈತಬಂಧು ಅಕ್ಕಿಯ ಕಾರ್ಖಾನೆಗೆ ಹೊರಟೆವು.
ಮಧ್ಯಾಹ್ನ 12.15 ಕ್ಕೆ ಅಲ್ಲಿಗೆ ತಲುಪಿದೆವು. ಅಲ್ಲಿ ನಮಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದ್ದರು. ಊಟ ಮುಗಿಸಿದ ಬಳಿಕ  ಮಕ್ಕಳನ್ನು ಐದು ಗುಂಪುಗಳಾಗಿ ಮಾಡಿ ಪ್ರತಿಯೊಂದು ಗುಂಪಿಗೂ ಒಬ್ಬೊಬ್ಬ ಸಿಬಂದಿಯನ್ನು ಒದಗಿಸಿ ಕಾರ್ಖಾನೆಯ ಸಂಪೂರ್ಣ ಪರಿಚಯ ಮಾಡಿಸಿ ಕೊಟ್ಟರು.
ದೇಶದ  ವಿವಿಧ ಭಾಗಗಳಿಂದ ಸಂಗ್ರಹಿಸಿದ ಭತ್ತವನ್ನು ಬೇಯಿಸಿ ಒಣಗಿಸಿ ಅಕ್ಕಿ ಮಾಡುವ ವಿಧಾನವನ್ನು ಮಕ್ಕಳು ತಿಳಿದುಕೊಂಡರು. ಇಲ್ಲಿ ಎಲ್ಲಾ ಕೆಲಸಗಳನ್ನು ಯಂತ್ರಗಳೇ ನಿರ್ವಹಿಸುತ್ತವೆ. ಅಲ್ಲಿಂದ ನಮ್ಮ ಪ್ರಯಾಣವು ಕಾರಿಂಜ ಬೆಟ್ಟದ ಕಡೆಗೆ ಸಾಗಿತು.
3.30 ಕ್ಕೆ ಕಾರಿಂಜ ಬೆಟ್ಟದ ಬಳಿಗೆ ತಲುಪಿದೆವು. ಪ್ರಕ್ರತಿ ರಮಣೀಯವಾದ ಸುಂದರ ದ್ರಶ್ಯಗಳನ್ನು ನೋಡುತ್ತಾ ಕೊತಿಗಳೊಂದಿಗೆ ಕೀಟಲೆ ಮಾಡುತ್ತಾ ಬೆಟ್ಟದ ತುದಿಯನ್ನು ತಲುಪಿದೆವು. ಅಲ್ಲಿ ಸ್ವಲ್ಪ ಹೊತ್ತು ದಣಿವಾರಿಸಿದೆವು .
ಅಲ್ಲಿಂದ ಪುನಃ ಕೆಳಗಿಳಿದು ಶಾಲೆಯ ಕಡೆಗೆ ಹಿಂತಿರುಗಿದೆವು. ರಾತ್ರಿ 8.30 ಕ್ಕೆ ಶಾಲೆಗೇ ಬಂದು ತಲುಪಿದೆವು. ಎಲ್ಲ ಮಕ್ಕಳೂ ಸುರಕ್ಷಿತವಾಗಿ ತಮ್ಮ ರಕ್ಷಕರೊಂದಿಗೆ ಪ್ರವಾಸದ ಸಿಹಿ ಕಹಿ ಅನುಭವಗಳನ್ನು ಮೆಲುಕು ಹಾಕುತ್ತಾ ಮನೆಗೆ ತೆರಳಿದರು.



No comments:

Post a Comment