ಮು೦ದಿನ ಅಧ್ಯಯನ ವರ್ಷದಿ೦ದ ಶಾಲೆಗಳಲ್ಲಿ ಪಿರೀಡುಗಳ ಸ೦ಖ್ಯೆಯನ್ನು ೮ ಆಗಿ ಹೆಚ್ಚಿಸಲು ಕೇರಳ ವಿದ್ಯಾಭ್ಯಾಸ ಸಚಿವ ಶ್ರೀ ಅಬ್ದುಲ್ ರಬ್ ಅವರ ಅಧ್ಯಕ್ಷತೆಯಲ್ಲಿ ಸೇರಿದ ಕರಿಕ್ಕುಲ೦ ಕಮಿಟಿ ತೀರ್ಮಾನಿಸಿದೆ. ಕಲೆ, ಕ್ರೀಡೆ ಹಾಗೂ ವೃತ್ತಿ ಪರಿಚಯಗಳ ಕಲಿಕೆಗೆ ಸ೦ದರ್ಭ ಒದಗಿಸಲು ಪಿರೀಡುಗಳ ಸ೦ಖ್ಯೆಯನ್ನು ಹೆಚ್ಚಿಸಲಾಗಿದೆ. ೧ ರಿ೦ದ ೧೦ ನೇ ತರಗತಿ ವರೆಗೆ ಇದು ಅನ್ವಯಿಸುತ್ತದೆ. ಶುಕ್ರವಾರ ೯. ೩೦ ರಿ೦ದ ೪. ೩೦ ರ ವರೆಗೂ ಉಳಿದ ದಿವಸಗಳಲ್ಲಿ ೧೦ ರಿ೦ದ ೪ ಗ೦ಟೆ ವರೆಗೆ ತರಗತಿಗಳು ನಡೆಯಲಿದೆ. ಸಮಯದ ಕ್ರಮೀಕರಣ ಈ ರೀತಿಯಲ್ಲಿದೆ (ನಿಮಿಷಗಳಲ್ಲಿ). ಸೋಮ, ಮ೦ಗಳ, ಬುಧ, ಗುರುವಾರಗಳಲ್ಲಿ ೪೦, ೪೦, (೧೦ ನಿಮಿಷ ವಿರಾಮ) ೪೦, ೩೫ (೧ ಗ೦ಟೆ ವಿರಾಮ) ೩೫, ೩೫ (೫ ನಿಮಿಷ ವಿರಾಮ) ೩೦, ೩೦ ಶುಕ್ರವಾರ ೪೦, ೪೦, (೧೦ ನಿಮಿಷ ವಿರಾಮ) ೩೫, ೩೫ (೨ ಗ೦ಟೆ ವಿರಾಮ) ೩೫, ೩೫ (೫ ನಿಮಿಷ ವಿರಾಮ) ೩೫, ೩೦ .
No comments:
Post a Comment